ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಬೇಜವಾಬ್ದಾರಿತನ!

ನಾಗಪುರ – ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜೂನ್ 21 ರಂದು ನಡೆಸಲಿರುವ ‘ನೀಟ್’ (NEET) ಮರುಪರೀಕ್ಷೆಗೆ ಮುನ್ನ, ನಾಗಪುರದ ವಿದ್ಯಾರ್ಥಿಯೊಬ್ಬನ ಪ್ರವೇಶ ಪತ್ರದಲ್ಲಿ (Admit Card) ಸಂಯುಕ್ತ ಅರಬ್ ಎಮಿರೇಟ್ಸ್‌ನ (UAE) ಅಬುಧಾಬಿಯನ್ನು ಪರೀಕ್ಷಾ ಕೇಂದ್ರವಾಗಿ ನೀಡಿರುವುದು ಬೆಳಕಿಗೆ ಬಂದಿದೆ. ಅಬ್ದುಲ್ಲಾ ಎಂಬುದು ಈ ವಿದ್ಯಾರ್ಥಿಯ ಹೆಸರಾಗಿದ್ದು, ಆತ ಮರುಪರೀಕ್ಷೆಗಾಗಿ ಸಲ್ಲಿಸಿದ ಅರ್ಜಿಯಲ್ಲಿ ನಾಗಪುರ, ವರ್ಧಾ ಮತ್ತು ಭಂಡಾರಾ ನಗರಗಳನ್ನು ಆಯ್ಕೆ ಮಾಡಿದ್ದನು. ಕೇವಲ ಒಂದೇ ದಿನದಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಪ್ರಕ್ರಿಯೆ ಹೇಗೆ ಸಾಧ್ಯ?, ಎಂಬ ಪ್ರಶ್ನೆ ಎದುರಾಗಿರುವುದರಿಂದ ವಿದ್ಯಾರ್ಥಿ ಮತ್ತು ಆತನ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತನ್ನ ಶೈಕ್ಷಣಿಕ ವರ್ಷ ವ್ಯರ್ಥವಾಗಬಹುದು ಎಂಬ ಭೀತಿ ವಿದ್ಯಾರ್ಥಿ ವ್ಯಕ್ತಪಡಿಸಿದ್ದಾನೆ.
ಪೋಷಕರು ತಕ್ಷಣವೇ ಸಂಸ್ಥೆಯ ಸಹಾಯವಾಣಿಗೆ (Helpline) ದೂರು ದಾಖಲಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇದೊಂದು ತಾಂತ್ರಿಕ ದೋಷ ಎಂದು ಒಪ್ಪಿಕೊಂಡಿದ್ದು, ಪರಿಶೀಲನೆಯ ನಂತರ ತಿದ್ದುಪಡಿ ಮಾಡಿದ ಹೊಸ ಪ್ರವೇಶ ಪತ್ರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಶಿಕ್ಷಣ ಸಚಿವ ಡಾ. ಅನೀಸ್ ಅಹ್ಮದ್ ಅವರು ಈ ಘಟನೆಯ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ