
ನವದೆಹಲಿ – ಫುಟ್‌ಪಾತ್ ಮೇಲೆ ನಡೆಯುವುದು ಜನರ ಮೂಲಭೂತ ಹಕ್ಕು. ರಸ್ತೆ ಇದ್ದರೆ, ಅಲ್ಲಿ ಪಾದಚಾರಿಗಳಿಗಾಗಿ ನಿಶ್ಚಿತ ಮತ್ತು ಸುಸ್ಥಿತಿಯಲ್ಲಿರುವ ಫುಟ್‌ಪಾತ್‌ಗಳು ಇರಲೇಬೇಕು. ಪಾದಚಾರಿಗಳ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಸರಕಾರವು ಕಾನೂನಿನ ಬಗ್ಗೆ ಚಿಂತನೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಒಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ. ಈ ಪ್ರಕರಣದಲ್ಲಿ ಶಾಲೆಗೆ ಹೋಗುತ್ತಿದ್ದ 5 ವರ್ಷದ ಬಾಲಕನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದನು.
ಸಂವಿಧಾನವು ನೀಡಿದೆ ನಡೆಯುವ ಹಕ್ಕು!
ನ್ಯಾಯಾಲಯವು, ನಡೆಯುವ ಹಕ್ಕು ಸಂವಿಧಾನದ ಭಾಗ-3ರ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ಇದು ಸಂವಿಧಾನದ ಕಲಂ 19(1)(ಡಿ) ಅಡಿಯಲ್ಲಿ ಸಂಚರಿಸುವ ಸ್ವಾತಂತ್ರ್ಯದ ಜೊತೆಗೆ ಕಲಂ 19(1)(ಎ), 19(1)(ಬಿ), 19(1)(ಸಿ) ಮತ್ತು ಕಲಂ 21ರೊಂದಿಗೆ ಸೇರಿದೆ. ಫುಟ್‌ಪಾತ್‌ಗಳ ಮೇಲೆ ವಾಹನಗಳಿಗಿಂತ ಪಾದಚಾರಿಗಳೇ ಹಕ್ಕುಳ್ಳವರಾಗಿರುತ್ತಾರೆ. ಸಂಬಂಧಪಟ್ಟ ಸಂಸ್ಥೆಗಳು ಫುಟ್‌ಪಾತ್‌ಗಳನ್ನು ನಿರ್ಮಿಸಬೇಕು, ನಿರ್ವಹಿಸಬೇಕು ಮತ್ತು ಅವುಗಳನ್ನು ಸಂರಕ್ಷಿಸಬೇಕು.
ಅನೇಕ ಚಾಲಕರು ಪಾದಚಾರಿಗಳನ್ನು ಮತ್ತು ಅವರ ಫುಟ್‌ಪಾತ್‌ಗಳನ್ನು ಅಡಚಣೆ ಎಂದು ಭಾವಿಸಿ ಅವರನ್ನು ತುಳಿದುಬಿಡುತ್ತಾರೆ!
ನ್ಯಾಯಾಲಯವು, ಮನುಷ್ಯ ಚಕ್ರದ ಸಂಶೋಧನೆಯಾಗುವ ಬಹುಕಾಲದ ಹಿಂದಿನಿಂದಲೂ ನಡೆಯುತ್ತಿದ್ದಾನೆ. ಇಲ್ಲಿಯವರೆಗೆ ನಡೆಯುವ ಹಕ್ಕಿಗೆ ಮಹತ್ವ ನೀಡಲಾಗಿಲ್ಲ. ಇಂದು ಸಂಚಾರ ವ್ಯವಸ್ಥೆಯು ರಸ್ತೆಗಳನ್ನು ನಿಯಂತ್ರಿಸುತ್ತಿದೆ. ಪರಿಸ್ಥಿತಿ ಹೇಗಿದೆಯೆಂದರೆ, ಅನೇಕ ಚಾಲಕರು ಪಾದಚಾರಿಗಳನ್ನು ಮತ್ತು ಫುಟ್‌ಪಾತ್‌ಗಳನ್ನು ಅಡಚಣೆ ಎಂದು ಭಾವಿಸಿ ಅವರನ್ನು ಚಕ್ರದಡಿ ತುಳಿಯುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು. ‘ಮೋಟಾರು ವಾಹನ ಕಾಯ್ದೆ, 1988’ ಅನೇಕ ಅರ್ಥಗಳಲ್ಲಿ ಪಾದಚಾರಿಗಳ ಹಕ್ಕುಗಳನ್ನು ದುರ್ಬಲಗೊಳಿಸುವಂತಿದೆ.
ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಪ್ರತಿ ಐದನೇ ಸಾವು ಪಾದಚಾರಿಯದ್ದು!
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮತ್ತು ರಸ್ತೆ ಸಾರಿಗೆ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2019 ರಿಂದ 2023 ರ ಅವಧಿಯಲ್ಲಿ ರಸ್ತೆ ಅಪಘಾತಗಳಲ್ಲಿ ಅಂದಾಜು 1 ಲಕ್ಷದ 52 ಸಾವಿರ ಪಾದಚಾರಿಗಳು ಮೃತಪಟ್ಟಿದ್ದಾರೆ. ಸರಾಸರಿಯಾಗಿ ಪ್ರತಿವರ್ಷ 30 ಸಾವಿರ ಜನರು ರಸ್ತೆಯಲ್ಲಿ ನಡೆಯುತ್ತಿರುವಾಗ ಅಪಘಾತಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿನ ಸಾವುಗಳಲ್ಲಿ ಅವರ ಪ್ರಮಾಣ ಶೇಕಡಾ 20 ರಷ್ಟಿದೆ. ಅಂದರೆ, ಪ್ರತಿ ಐದನೇ ಸಾವು ಪಾದಚಾರಿಯದ್ದೇ ಆಗಿರುತ್ತದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”