ಶಾಲಾ ಆಡಳಿತ ಮಂಡಳಿಯಿಂದ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ!

ಪುಣೆ – ಇಲ್ಲಿನ ಫುರಸುಂಗಿ ಭಾಗದ ‘ವಿಬ್ಗಯಾರ್ ಸ್ಕೂಲ್’ನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಹಿಂದೂ ವಿದ್ಯಾರ್ಥಿನಿಯ ಮೇಲೆ ಧಾರ್ಮಿಕ ಪ್ರಭಾವ ಬೀರಿ, ಆಕೆಯನ್ನು ಮತಾಂತರಗೊಳಿಸಲು ಯತ್ನಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಎಂದಿನಂತೆ ಶಾಲಾ ಆಡಳಿತ ಮಂಡಳಿಯು ಈ ಸೂಕ್ಷ್ಮ ಪ್ರಕರಣವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿತು; ಆದರೆ ಪೀಡಿತ ಹುಡುಗಿಯ ಪೋಷಕರು ‘ಪೇರೆಂಟ್ಸ್ ಗ್ರೂಪ್’ನಲ್ಲಿ ಧ್ವನಿ ಎತ್ತಿದ್ದರಿಂದ ಕ್ರೈಸ್ತ ಮಿಷನರಿಗಳ ಸಂಚು ವಿಫಲಗೊಂಡಿತು. ‘ಡಿಸಿಎನ್ ನ್ಯೂಸ್’ ಈ ಸುದ್ದಿಯನ್ನು ಪ್ರಸಾರ ಮಾಡಿದೆ.
ಅನಾರೋಗ್ಯದ ನೆಪದಲ್ಲಿ ‘ಬೈಬಲ್’ ಬೋಧನೆ!
ದೂರುದಾರ ಪೋಷಕರು ನೀಡಿರುವ ಮಾಹಿತಿಯ ಪ್ರಕಾರ, ಮಗಳು ತರಗತಿಯಲ್ಲಿದ್ದಾಗ ಹಠಾತ್ತನೆ ಅಸ್ವಸ್ಥಳಾಗಿದ್ದರಿಂದ ಚಿಕಿತ್ಸೆಗಾಗಿ ಶಾಲೆಯ ‘ಸಿಕ್ ಬೇ’ಗೆ (ವೈದ್ಯಕೀಯ ಕೊಠಡಿ) ಹೋಗಿದ್ದಳು. ಆ ಸಮಯದಲ್ಲಿ ಅಲ್ಲಿದ್ದ ಕ್ರೈಸ್ತ ಸಿಬ್ಬಂದಿಯು ಆಕೆಗೆ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ನೆರವು ನೀಡುವ ಬದಲು, ನೇರವಾಗಿ ಕ್ರೈಸ್ತ ಧರ್ಮ, ಯೇಸುವಿನ ಮೇಲಿನ ನಂಬಿಕೆ ಮತ್ತು ಮತಾಂತರದ ಕುರಿತು ಮಾತನಾಡಲು ಪ್ರಾರಂಭಿಸಿದನು. ಆ ಸಿಬ್ಬಂದಿಯು ತಾನು ಹಿಂದೂ ಧರ್ಮವನ್ನು ತೊರೆದು ಕ್ರೈಸ್ತ ಧರ್ಮವನ್ನು ಹೇಗೆ ಸ್ವೀಕರಿಸಿದೆ ಮತ್ತು ಚರ್ಚ್‌ಗೆ ಹೋಗಿದ್ದರಿಂದ ತನ್ನ ಜೀವನದಲ್ಲಿ ಎಂತಹ ಬದಲಾವಣೆಗಳಾದವು ಎಂಬುದನ್ನು ವಿವರವಾಗಿ ಹೇಳಿದನು. ‘ಯೇಸುವನ್ನು ಪ್ರಾರ್ಥಿಸುವುದರಿಂದ ನಿನ್ನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ’ ಎಂದು ಹೇಳಿ ಎಳೆಯ ವಯಸ್ಸಿನ ಹಿಂದೂ ವಿದ್ಯಾರ್ಥಿನಿಯ ಮನಃಪರಿವರ್ತನೆ ಮಾಡಲು ಉದ್ದೇಶಪೂರ್ವಕವಾಗಿ ಯತ್ನಿಸಿದನು. ‘ಈ ಸಂಭಾಷಣೆಯ ಬಗ್ಗೆ ಮನೆಯಲ್ಲಿ ತಾಯಿಗೆ ಏನನ್ನೂ ಹೇಳಬೇಡ’ ಎಂದು ಹಿಂದೂ ವಿದ್ಯಾರ್ಥಿನಿಗೆ ಕಡಕ್ ಎಚ್ಚರಿಕೆ ನೀಡಿದನು ಹಾಗೂ ಕ್ರೈಸ್ತ ‘ಯೂಟ್ಯೂಬ್ ಇನ್ ಫ್ಲುಯೆನ್ಸರ್’ ಒಬ್ಬನ ವೀಡಿಯೊಗಳನ್ನು ವೀಕ್ಷಿಸುವಂತೆ ಸಲಹೆ ನೀಡಿ, ಆ ಚಾನೆಲ್ ಹೆಸರನ್ನು ಚೀಟಿಯೊಂದರಲ್ಲಿ ಬರೆದು ಹುಡುಗಿಯ ಕೈಗೆ ಕೊಟ್ಟನು.
ಶಾಲಾ ಆಡಳಿತ ಮಂಡಳಿಯ ಬೂಟಾಟಿಕೆ!
‘ವಿಬ್ಗಯಾರ್ ಸ್ಕೂಲ್’ ಆಡಳಿತ ಮಂಡಳಿಯು ದೂರು ಬಂದಿರುವುದನ್ನು ಖಚಿತಪಡಿಸಿದ್ದು, ‘ಸಂಬಂಧಪಟ್ಟ ಸಿಬ್ಬಂದಿಯ ಆಂತರಿಕ ವಿಚಾರಣೆ ನಡೆಯುತ್ತಿದೆ’ ಎಂದು ಅಸ್ಪಷ್ಟ ಉತ್ತರ ನೀಡಿದೆ; ಆದರೆ ಪೋಷಕರು ಈಗ ಶಾಲಾ ಆಡಳಿತ ಮಂಡಳಿಗೆ ಅಧಿಕೃತ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. (ಅಂತರರಾಷ್ಟ್ರೀಯ ಮತ್ತು ‘ಕಾನ್ವೆಂಟ್’ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಕ್ರೈಸ್ತ ಧರ್ಮಕ್ಕೆ ಸೆಳೆಯುವ ಮತ್ತು ಅವರ ಮನಸ್ಸಿನಲ್ಲಿ ಹಿಂದೂ ಧರ್ಮದ ಬಗ್ಗೆ ಕೀಳರಿಮೆ ಮೂಡಿಸುವ ಷಡ್ಯಂತ್ರ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಇಂತಹ ಶಾಲೆಗಳ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಷಣವೇ ಕಠಿಣ ಶಿಕ್ಷೆ ವಿಧಿಸಬೇಕು. – ಸಂಪಾದಕರು)
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”