ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧವಾಗಿರುವ ‘ಸನಾತನ ಪ್ರಭಾತದ ಆಧ್ಯಾತ್ಮಿಕ ವೈಶಿಷ್ಟ್ಯಗಳು !

‘ಆದಿಶಂಕರಾಚಾರ್ಯರು ಸಮಾಜವ್ಯವಸ್ಥೆ ಉತ್ತಮವಾಗಿರುವುದು, ಪ್ರತಿಯೊಬ್ಬ ಪ್ರಾಣಿಮಾತ್ರರ ಐಹಿಕ ಉನ್ನತಿಯೊಂದಿಗೆ ಪಾರಲೌಕಿಕ ಉನ್ನತಿಯೂ ಆಗುವುದು, ಈ ಮೂರು ವಿಷಯಗಳನ್ನು ಯಾವುದರಿಂದ ಸಾಧ್ಯವಾಗುವುದು ಅದಕ್ಕೆ ‘ಧರ್ಮ ಎಂದು ಹೇಳಿದ್ದಾರೆ. ಸದ್ಯ ಸಮಾಜವು ಗುಂಡಾಗಿರಿ, ಭ್ರಷ್ಟಾಚಾರ, ಅನೀತಿ ಮತ್ತು ಅಕಾರ್ಯಕ್ಷಮತೆ ಇವುಗಳಿಂದ ಜರ್ಜರಿತವಾಗಿದೆ. ರಾಜ್ಯಾಡಳಿತವಿದ್ದೂ ಇಲ್ಲದಂತಾಗಿದೆ ಹಾಗೂ ತೊಂದರೆದಾಯಕವಾಗಿದೆ. ಆದ್ದರಿಂದ ಇದಕ್ಕೆ ಪರಿಹಾರವನ್ನು ಕಂಡುಹಿಡಿಯುವುದು ಹಾಗೂ ಸಮಾಜಪುರುಷನನ್ನು ಪುನಃ ಸುಸ್ಥಿತಿಗೆ ತರುವುದು ಪ್ರತಿಯೊಬ್ಬ ಧರ್ಮನಿಷ್ಠನ ಕರ್ತವ್ಯವಾಗಿದೆ. ಪ್ರಸ್ತುತ ಪತ್ರಿಕೋದ್ಯಮದಲ್ಲಿ ಅನೇಕ ದುರ್ಗುಣಗಳು ಹರಡಿದೆ, ಎಂಬುದು ಅನೇಕ ಗಣ್ಯರ ಅಭಿಪ್ರಾಯವಾಗಿದೆ. ಅನೇಕ ಜನರು ಇದನ್ನು ಸಂಪೂರ್ಣ ಸಮಾಜದ ಕುಸಿದಿರುವ ನೈತಿಕ ಮೂಲ್ಯಗಳ ಪ್ರತಿಬಿಂಬವೆಂದು ತಿಳಿಯುತ್ತಾರೆ. ಸಮಾಜದ ಸ್ಥಿತಿಯನ್ನು ಸುಧಾರಿಸುವ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಸಾಧ್ಯವಿರುವ ಈ ಮಾಧ್ಯಮಗಳ ಕ್ಷಮತೆಯನ್ನು ಯೋಗ್ಯ ರೀತಿಯಲ್ಲಿ ಪುನರ್ಸ್ಥಾಪಿಸುವುದನ್ನು ಮತ್ತು ಸಮಾಜವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವುದನ್ನು, ಧರ್ಮವೆಂದು ನಂಬುವವರ ಮೊದಲ ಉದ್ದೇಶವಾಗಿದೆ. ಸಮಾಜದಲ್ಲಿನ ವಾಸ್ತವಿಕತೆಯ ಅರಿವು, ಅವುಗಳ ಹಿಂದಿನ ಕಾರ್ಯಕಾರಣಭಾವ, ಅವುಗಳ ಮೇಲಿನ ಉಪಾಯಯೋಜನೆ ಇತ್ಯಾದಿ ವಿಷಯಗಳನ್ನು ಸಮಾಜಕ್ಕೆ ವಿವರಿಸುವುದು ಸಮಾಜವನ್ನು ಸುಸ್ಥಿತಗೊಳಿಸುವುದರಲ್ಲಿನ ಮೊದಲ ಹಂತವಾಗಿದೆ. ಈ ವಿಷಯದಲ್ಲಿ ಸಮಾಜದ ವಾಸ್ತವಿಕತೆಯನ್ನು ಯೋಗ್ಯ ರೀತಿಯಲ್ಲಿ ವ್ಯಕ್ತಿಗಳಿಗೆ ತಲಪಿಸುವುದು ಮಹತ್ವದ್ದಾಗಿದೆ. ನಿಯತಕಾಲಿಕೆಗಳು ಈ ಕಾರ್ಯದ ಮಹತ್ವದ ಮಾಧ್ಯಮವಾಗಿದೆ. ನಿಯತಕಾಲಿಕೆಗಳಲ್ಲಿ ಯಾವುದೇ ಒಂದು ಘಟನೆಯ ಕೇವಲ ಮಾಹಿತಿಯನ್ನು ನೀಡುವ ವಾರ್ತೆಯಿಂದ ಸಣ್ಣ ಮಕ್ಕಳಿಗಾಗಿ ಇರುವ ವಿಷಯಗಳವರೆಗೆ ಅನೇಕ ವಿಷಯಗಳನ್ನು ಮಂಡಿಸಲಾಗುತ್ತದೆ; ಬಹುಶಃ ನಿಯತಕಾಲಿಕೆಗಳಲ್ಲಿ ಬರದಿರುವ ವಿಷಯ ಯಾವುದು ಎಂದು ಯಾರಾದರೂ ಕೇಳಿದರೆ, ಯಾವುದು ಅದರಲ್ಲಿ ವ್ಯಕ್ತವಾಗಲು ಸಾಧ್ಯವಿಲ್ಲವೋ, ಅದೆ, ಎಂಬ ಉತ್ತರ ಬರಬಹುದು. ಇಂತಹ ಎಲ್ಲ ವಿಷಯಗಳಲ್ಲಿ ಯಾವ ವಿಷಯವನ್ನು ಮಂಡಿಸುವುದು, ಯಾವ ವಿಷಯವನ್ನು ಮಂಡಿಸಬಾರದು, ಮಂಡಿಸಿದರೆ ಅವುಗಳನ್ನು ಯಾವ ಪದ್ಧತಿಯಲ್ಲಿ ಮಂಡಿಸಬೇಕು ಹಾಗೂ ಅವುಗಳಿಂದ ನಿಜವಾಗಿ ಏನು ಆಕಲನ ಮಾಡಿಕೊಳ್ಳಬೇಕು, ಎಂಬುದನ್ನು ವಿಚಾರ ಮಾಡುವುದೆಂದರೆ ‘ಪತ್ರಿಕೋದ್ಯಮದ ಎನಿಸುತ್ತದೆ. ಯಾವುದೇ ನಿಯತಕಾಲಿಕೆಯಲ್ಲಿ ಯಾವ ವಿಷಯವನ್ನು ಮಂಡಿಸಲಾಗುವುದೊ, ಅದು ಆ ನಿಯತಕಾಲಿಕೆಯವರ ಪತ್ರಿಕೋದ್ಯಮದ ವಿಷಯದ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. (ಆಧಾರ : ಸನಾತನದ ಗ್ರಂಥ – ‘ಸನಾತನದ ಪತ್ರಕಾರಿಕೆ)

ದೈನಿಕ ‘ಸನಾತನ ಪ್ರಭಾತದಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳನ್ನು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ೭.೪.೨೦೧೯ ರಂದು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಪರಿಶೀಲನೆ ಮಾಡಲಾಯಿತು. ಈ ಪರಿಶೀಲನೆಯ ಸ್ವರೂಪ, ಮಾಡಿದ ಅಳತೆಯ (ಮಾಪನದ) ನೊಂದಣಿ ಮತ್ತು ಅವುಗಳ ವಿವರಣೆಯನ್ನು ಮುಂದೆ ನೀಡಲಾಗಿದೆ.

ಸನಾತನ ಪ್ರಭಾತದಿಂದ ಸಾತ್ತ್ವಿಕತೆ ಪ್ರಕ್ಷೇಪಣೆಯಾಗುವುದು !

ಸನಾತನ ಪ್ರಭಾತದಲ್ಲಿ ರಜ-ತಮ ಪ್ರಧಾನ ವಾರ್ತೆಗಳನ್ನು ಮುದ್ರಿಸಿದರೂ ಅದರಿಂದ ಸಾತ್ತ್ವಿಕತೆ ಪ್ರಕ್ಷೇಪಣೆಯಾಗುವ ಕಾರಣವೆಂದರೆ ಅದರ ಸಾತ್ತ್ವಿಕ ಉದ್ದೇಶ ಮತ್ತು ಸೇವೆ ಮಾಡುವ ಸಾಧಕರು ಸನಾತನ ಪ್ರಭಾತ ನಿಯತಕಾಲಿಕೆ ಆಗಿರುವುದರಿಂದ ಅದರಲ್ಲಿ ಪ್ರತಿದಿನ ರಜ-ತಮ ಘಟಿಸುವ ಪ್ರಧಾನ ವಾರ್ತೆಗಳನ್ನು ಮುದ್ರಿಸ ಬೇಕಾಗುತ್ತದೆ. ಆದರೂ ಅದರಿಂದ ಸಾತ್ತ್ವಿಕತೆ ಪ್ರಕ್ಷೇಪಣೆ ಯಾಗುತ್ತದೆ, ಎಂಬುದು ಉಪಕರಣದ ಮೂಲಕ ಮಾಡಿದ ಪರಿಶೀಲನೆಯಿಂದ ಸಿದ್ಧವಾಗಿದೆ. ಈ ಸಾತ್ತ್ವಿಕತೆಯ ಕಾರಣವೆಂದರೆ ನಿಯತಕಾಲಿಕೆಯ ಉದ್ದೇಶ ಸತ್ತ್ವ ಪ್ರಧಾನ ಸಮಾಜ ಮತ್ತು ಹಿಂದೂರಾಷ್ಟ್ರ ಸ್ಥಾಪನೆ ಮಾಡುವುದು, ಆಗಿದೆ ಹಾಗೂ ನಿಯತಕಾಲಿಕೆಯಲ್ಲಿ ಸೇವೆ ಮಾಡುವವರೇ ಸಾಧಕರಾಗಿದ್ದಾರೆ. ‘ಸನಾತನ ಪ್ರಭಾತದ ಸಾತ್ತ್ವಿಕತೆಯಿಂದಾಗಿ ವಾಚಕರಿಗೆ ಅದರ ಅನುಭೂತಿ ಬರುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ

‘ಸನಾತನ ಪ್ರಭಾತದಲ್ಲಿ ಸಾತ್ತ್ವಿಕತೆ ಇರುವುದರಿಂದ ಕೆಟ್ಟಶಕ್ತಿಗಳ ತೊಂದರೆ ಇರುವ ಅನೇಕ ಜನರು ಆಧ್ಯಾತ್ಮಿಕ ಉಪಾಯಕ್ಕಾಗಿ ಅದನ್ನು ಉಪಯೋಗಿಸುತ್ತಾರೆ ಹಾಗೂ ಅವರಿಗೆ ಅದರಿಂದ ಲಾಭವಾಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ

೧. ಪರಿಶೀಲನೆಯ ಸ್ವರೂಪ

ಈ ಪರಿಶೀಲನೆಯಲ್ಲಿ ದೈನಿಕ ‘ಸನಾತನ ಪ್ರಭಾತ (ಮರಾಠಿ) ಮತ್ತು ತುಲನೆಗಾಗಿ ಬೇರೆ ಎರಡು ದೈನಿಕಗಳನ್ನು (ಮರಾಠಿ) ‘ಯು.ಟಿ.ಎಸ್. ಉಪಕರಣಗಳ ಮೂಲಕ ಮಾಡಿದ ಪರಿಶೀಲನೆಯ ಪಲಿತಾಂಶವನ್ನು ನೊಂದಣಿ ಮಾಡಲಾಯಿತು. ಇವೆಲ್ಲ ನೊಂದಣಿಯ ತುಲನಾತ್ಮಕ ಅಭ್ಯಾಸ ಮಾಡಲಾಯಿತು.

೨. ಮಾಡಿದ ಪರಿಶೀಲನೆಗಳ ನೊಂದಣಿ ಮತ್ತು ಅವುಗಳ ವಿವೇಚನೆ

೨ ಅ. ನಕರಾತ್ಮಕ ಊರ್ಜೆದ ವಿಷಯದಲ್ಲಿ ಮಾಡಿದ ಪರಿಶೀಲನೆಯ ನೊಂದಣಿಯ ವಿವೇಚನೆ

೨ ಅ ೧. ದೈನಿಕ ‘ಸನಾತನ ಪ್ರಭಾತದಲ್ಲಿ ನಕರಾತ್ಮಕ ಊರ್ಜೆ ಇಲ್ಲದಿರುವುದು; ಆದರೆ ಪರಿಶೀಲನೆಯಲ್ಲಿನ ಇತರ ವರ್ತಮಾನ ಪತ್ರಿಕೆಗಳಲ್ಲಿ ತುಂಬಾ ನಕಾರಾತ್ಮಕ ಊರ್ಜೆ ಕಂಡು ಬರುವುದು

ಟಿಪ್ಪಣಿ – ದೈನಿಕ ‘ಸನಾತನ ಪ್ರಭಾತದಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ. ಅದರ ವಿಷಯದಲ್ಲಿ ‘ಯು.ಟಿ.ಸ್ಕ್ಯಾನರ್ನ ಭುಜಗಳು ೦ ಅಂಶದ ಕೋನವನ್ನು ತೋರಿಸಿದವು. (‘ಯು.ಟಿ.ಸ್ಕ್ಯಾನರ್ನ ಭುಜಗಳು ೦ ಅಂಶದ ಕೋನ ತೋರಿಸುವುದೆಂದರೆ, ‘ಆ ವಸ್ತುವಿನಲ್ಲಿ (ದೈನಿಕದಲ್ಲಿ) ನಕಾರಾತ್ಮಕ ಊರ್ಜೆ ಸ್ವಲ್ಪವೂ ಇಲ್ಲ ಎಂದಾಗುತ್ತದೆ.)

೨ ಆ. ಸಕಾರಾತ್ಮಕ ಊರ್ಜೆ ವಿಷಯದಲ್ಲಿ ಮಾಡಿದ ಪರೀಶೀಲನೆಯ ನೋಂದಣಿಯ ವಿವೇಚನೆ ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿಯೂ ಸಕಾರಾತ್ಮಕ ಊರ್ಜೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

೨ ಆ ೧. ಪರಿಶೀಲನೆಯಲ್ಲಿನ ಇತರ ಪತ್ರಿಕೆಗಳಲ್ಲಿ ಸಕಾರಾತ್ಮಕ ಊರ್ಜೆ ಇಲ್ಲದಿರುವುದು; ಆದರೆ ದೈನಿಕ ‘ಸನಾತನ ಪ್ರಭಾತದಲ್ಲಿ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು : ಪರಿಶೀಲನೆಯಲ್ಲಿನ ಇತರ ಪತ್ರಿಕೆಗಳಲ್ಲಿ ಸಕರಾತ್ಮಕ ಊರ್ಜೆ ಕಂಡು ಬರಲಿಲ್ಲ. ಆ ದೈನಿಕಗಳ ವಿಷಯದಲ್ಲಿ ‘ಯು.ಟಿ.ಸ್ಕ್ಯಾನರ್ನ ಭುಜಗಳು ೦ ಅಂಶದ ಕೋನವನ್ನು ತೋರಿಸಿದವು. (‘ಯು.ಟಿ.ಸ್ಕ್ಯಾನರ್ನ ಭುಜಗಳು ೦ ಅಂಶದ ಕೋನವನ್ನು ತೋರಿಸುವುದೆಂದರೆ ‘ಆ ದೈನಿಕಗಳಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇಲ್ಲ ಎಂದಾಗುತ್ತದೆ.) ದೈನಿಕ ‘ಸನಾತನ ಪ್ರಭಾತದಲ್ಲಿ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ಅದರ ಪ್ರಭಾವಲಯ ೧೦.೨೨ ಮೀಟರ್ ಇತ್ತು.

೨ ಇ. ಒಟ್ಟು ಪ್ರಭಾವಲಯದ (ಟಿಪ್ಪಣಿ) ವಿಷಯದಲ್ಲಿ ಮಾಡಿದ ಪರಿಶೀಲನೆಗಳ ನೊಂದಣಿಯ ವಿವೇಚನೆ 

ಟಿಪ್ಪಣಿ – ಒಟ್ಟು ಪ್ರಭಾವಲಯ : ವ್ಯಕ್ತಿಗೆ ಸಂಬಂಧಿಸಿ ಅವರ ಜೊಲ್ಲು, ವಸ್ತುವಿಗೆ ಸಂಬಂಧಿಸಿ ಅದರ ಮೇಲಿನ ಧೂಳು ಅಥವಾ ಅದರ ಸ್ವಲ್ಪ ಅಂಶವನ್ನು ‘ನಮೂನೆಯೆಂದು ಉಪಯೋಗಿಸಿ ಆ ವ್ಯಕ್ತಿಯ ಅಥವಾ ವಸ್ತುವಿನ ಪ್ರಭಾವಲಯವನ್ನು ಅಳೆಯುತ್ತಾರೆ. ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಪ್ರಭಾವಲಯ ಸುಮಾರು ೧ ಮೀಟರ್ ಇರುತ್ತದೆ.

೨ ಇ ೧. ಪರಿಶೀಲನೆಯಲ್ಲಿನ ಮೂರೂ ದೈನಿಕಗಳ ಒಟ್ಟು ಪ್ರಭಾವಲಯ

ಈ ಮೇಲಿನ ಎಲ್ಲ ವಿಷಯಗಳ ಬಗ್ಗೆ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ವಿಷಯ ೪ ರಲ್ಲಿ ಕೊಡಲಾಗಿದೆ.

– ಶ್ರೀ. ಅರುಣ ಡೋಂಗ್ರೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೮.೪.೨೦೧೯)

ವಾಚಕರಿಗೆ ಸೂಚನೆ : ಸ್ಥಳದ ಅಭಾವದಿಂದ ಈ ಲೇಖನದ ‘ಯು.ಟಿ.ಎಸ್ ಉಪಕರಣದ ಪ್ರಭಾವಲಯದ ಪರಿಚಯ ಉಪಕರಣದ ಮೂಲಕ ಮಾಡಿದ ಪರಿಶೀಲನೆಯಲ್ಲಿನ ಘಟಕಗಳು ಮತ್ತು ಅವುಗಳ ವಿವರಣೆ ಘಟಕದ ಪ್ರಭಾವಲಯವನ್ನು ಅಳೆಯುವುದು ‘ಪರೀಕ್ಷಣೆಯ ಪದ್ಧತಿ ಮತ್ತು ‘ಪರಿಶೀಲನೆಯಲ್ಲಿ ಸಮಾನತೆ ಬರಲು ತೆಗೆದುಕೊಂಡಿರುವ ದಕ್ಷತೆ ಇತ್ಯಾದಿ ನಿಯಮಿತ ವಿಷಯಗಳನ್ನು ಸನಾತನ ಸಂಸ್ಥೆಯ goo.gl/tBjGXa ಈ ಲಿಂಕ್‌ನಲ್ಲಿ ಇಡಲಾಗಿದೆ. ಈ ಲಿಂಕ್ ನಲ್ಲಿನ ಕೆಲವು ಅಕ್ಷರಗಳು ಕೆಪಿಟಲ್ (Capital) ಇವೆ.