‘ಸೇವೆಯ ಫಲನಿಷ್ಪತ್ತಿಯನ್ನು ಹೇಗೆ ಹೆಚ್ಚಿಸಬೇಕು ?, ಎಂಬುದರ ಬಗ್ಗೆ ಪೂ. ಸಂದೀಪ ಆಳಶಿಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ವೈದ್ಯ ಮೇಘರಾಜ ಪರಾಡಕರ್

‘ಸಮಷ್ಟಿ ಸಾಧನೆಯು ಇತರರಿಗಾಗಿಯಲ್ಲ, ಅದು ನಮಗಾಗಿಯೇ ಇದೆ. ಇತರರಿಂದ ಕಲಿಯವುದೆಂದರೆ ಸಮಷ್ಟಿ ಸಾಧನೆ. – (ಪೂ.) ಶ್ರೀ. ಸಂದೀಪ ಆಳಶಿ (೧೫.೧೨.೨೦೨೦)

೧. ಅಧ್ಯಯನ

‘ನಾವು ಮಾಡುತ್ತಿರುವ ಸೇವೆಯು ಪರಿಪೂರ್ಣವಾಗಲು ಅಧ್ಯಯನ (ಅಭ್ಯಾಸ) ಮಾಡುವುದು ತುಂಬಾ ಮಹತ್ವದ್ದಾಗಿದೆ. ಸೇವೆಯಲ್ಲಿ ತಪ್ಪುಗಳನ್ನು ಕಡಿಮೆ ಮಾಡಲು ಸಾಧಕರು ನಿಯಮಿತವಾಗಿ ಅಧ್ಯಯನ ಮಾಡಬೇಕು. ಪ್ರತಿದಿನ ತಮ್ಮ ಸೇವೆಗಳ ಆಯೋಜನೆಯನ್ನು ಮಾಡುವಾಗ ಅಧ್ಯಯನಕ್ಕಾಗಿ ವಿಶಿಷ್ಟ ಸಮಯವನ್ನು ಇಟ್ಟುಕೊಳ್ಳಬೇಕು. ಸಾಧಕರು ತಮ್ಮ ಸೇವೆಯ ಗಂಟೆಗಳು, ಸೇವೆಗಳ ಆವಶ್ಯಕತೆಗನುಸಾರ ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಅಧ್ಯಯನಕ್ಕಾಗಿ ಸಮಯವನ್ನು ನಿಶ್ಚಯಿಸಬಹುದು, ಉದಾ. ಒಬ್ಬ ಸಾಧಕನು ದಿನವಿಡಿ ೭-೮ ಗಂಟೆಗಳ ಕಾಲ ಗಣಕೀಯ ಸೇವೆಯನ್ನು ಮಾಡುತ್ತಿದ್ದರೆ ಮತ್ತು ಈ ಸೇವೆಯು ತುಂಬ ತುರ್ತಿನದ್ದಾಗಿದ್ದಲ್ಲಿ ಅವನು ಕನಿಷ್ಠ ಪಕ್ಷ ಪ್ರತಿದಿನ ೩೦ ನಿಮಿಷಗಳನ್ನು ಅಧ್ಯಯನಕ್ಕಾಗಿ ಇಟ್ಟುಕೊಳ್ಳಬಹುದು. ಅವನು ಪ್ರತಿದಿನ ಅಧ್ಯಯನವಾಗಲೇ ಬೇಕು ಎಂಬಂತೆ ಆಯೋಜನೆಯಿರಬೇಕು. ಗ್ರಂಥಗಳ ಸಂದರ್ಭದಲ್ಲಿ ಸಂಕಲನದ ಸೇವೆಯನ್ನು ಮಾಡುವ ಸಾಧಕನು, ಸಾಧಕರು ಮೊದಲೇ ಸಂಕಲನ ಮಾಡಿದ ಕಡತಗಳನ್ನು ಓದುವುದು, ಶುದ್ಧಲೇಖನ, ವ್ಯಾಕರಣ ಮುಂತಾದವುಗಳ ಅಧ್ಯಯನ ಮಾಡುವುದು, ಅವುಗಳಲ್ಲಿ ತಪ್ಪುಗಳ ಅಧ್ಯಯನ ಮಾಡುವುದು, ಗ್ರಂಥಗಳನ್ನು ಓದುವುದು, ಇತರರು ಸಂಕಲನ ಮಾಡಿದ ಲೇಖನಗಳನ್ನು ಓದುವುದು,  ಸಾಪ್ತಾಹಿಕ ‘ಸನಾತನ ಪ್ರಭಾತ’ ಓದಿ ಅದರಲ್ಲಿ ತಪ್ಪುಗಳನ್ನು ಹುಡುಕುವುದು ಇತ್ಯಾದಿ ರೀತಿಯಲ್ಲಿ ಅಧ್ಯಯನ ಮಾಡಬಹುದು.

ಸೇವೆಯನ್ನು ಪ್ರಾರಂಭಿಸುವ ಮೊದಲು ಸಾಧಕರು ಅಧ್ಯಯನ ಮಾಡುವುದರಲ್ಲಿ ಕಡಿಮೆ ಬೀಳುತ್ತಾರೆ. ಸೇವೆಯನ್ನು ಪ್ರಾರಂಭಿಸುವ ಮೊದಲು ೫-೧೦ ನಿಮಿಷಗಳ ಕಾಲ ವಿಚಾರ ಮಾಡಿ ‘ನಮಗೆ ಸೇವೆಯ ಕೊನೆಯವರೆಗೆ ನಿರ್ದಿಷ್ಟವಾಗಿ ಏನೇನು ಮಾಡಬೇಕಾಗಿದೆ ?’, ಎಂದು ನೋಡಬೇಕು. ಆ ಸಮಯದಲ್ಲಿ ‘ಏನು ಮಾಡಬೇಕಾಗಿದೆ ಮತ್ತು ಎಷ್ಟು ಸಮಯದಲ್ಲಿ ಸಾಧಿಸಬೇಕಾಗಿದೆ ?’, ಎಂಬುದರ ಅಭ್ಯಾಸ ಮಾಡಬೇಕು.

೨. ಏಕಾಗ್ರತೆ

ಯಾವ ರೀತಿ ಆಧ್ಯಾತ್ಮಿಕ ಉಪಾಯಗಳು ಪರಿಣಾಮಕಾರಿಯಾಗಲು ಏಕಾಗ್ರತೆಯು ಆವಶ್ಯಕವಾಗಿರುತ್ತದೋ, ಅದೇ ರೀತಿ ಸೇವೆಯು ಉತ್ತಮ ರೀತಿಯಲ್ಲಾಗಲು ಸೇವೆಯನ್ನು ಮಾಡುವಾಗ ಮನಸ್ಸು ಏಕಾಗ್ರವಾಗಿರುವುದು ಆವಶ್ಯಕವಾಗಿದೆ. ಸೇವೆಯು ಏಕಾಗ್ರತೆಯಿಂದಾದರೆ ಸೇವೆಯಿಂದ ಚೈತನ್ಯ ಸಿಗುತ್ತದೆ ಮತ್ತು ನಮ್ಮ ಸಾಧನೆಯಾಗುತ್ತದೆ; ಏಕಾಗ್ರತೆ ಇಲ್ಲದಿದ್ದರೆ ತಪ್ಪುಗಳಾಗಿ ಕೇವಲ ಕಾರ್ಯವಾಗಬಹುದು. ಇದಕ್ಕಾಗಿ ಸಾಧಕರು ಸೇವೆಯನ್ನು ಆರಂಭಿಸುವ ಮೊದಲು ೫-೧೦ ನಿಮಿಷಗಳ ಕಾಲ ಆವರಣವನ್ನು ತೆಗೆಯುವುದು, ಭಾವಪೂರ್ಣ ಪ್ರಾರ್ಥನೆಯನ್ನು ಮಾಡುವುದು ಮುಂತಾದ ಉಪಾಯಗಳನ್ನು ಮಾಡಬಹುದು. ಸೇವೆಯನ್ನು ಮಾಡುವಾಗ ‘ದಿನವಿಡಿ ಯಾವ ಸಮಯದಲ್ಲಿ ನಾವು ಸೇವೆಯನ್ನು ಹೆಚ್ಚು ಏಕಾಗ್ರತೆಯಿಂದ ಮಾಡಬಹುದು ?’, ಇದರ ಅಭ್ಯಾಸವನ್ನೂ ಮಾಡಬೇಕು. ಅದಕ್ಕನುಸಾರ ಸೇವೆಗಳ ಆಯೋಜನೆಯನ್ನು ಮಾಡಿ ಕಠಿಣ ಸೇವೆಯನ್ನು ಆ ಕಾಲಾವಧಿಯಲ್ಲಿ ಮಾಡುವ ಆಯೋಜನೆಯನ್ನು ಮಾಡಬೇಕು.

ಮನಸ್ಸಿನಲ್ಲಿ ವಿಚಾರಗಳ ಪ್ರಮಾಣ ಹೆಚ್ಚಿರುವುದರಿಂದ ಬಹಳಷ್ಟು ಸಾಧಕರ ಸೇವೆಯು ಏಕಾಗ್ರತೆಯಿಂದ ಆಗುವುದಿಲ್ಲ. ಇಂತಹ ಸಮಯದಲ್ಲಿ ವಿಚಾರಗಳ ಮೂಲಕ್ಕೆ ಹೋಗಿ ಅವುಗಳನ್ನು ಕಡಿಮೆ ಮಾಡಲು ಸ್ವಯಂಸೂಚನೆಗಳನ್ನು ನೀಡುವುದು, ಸ್ವಭಾವದೋಷ ನಿರ್ಮೂಲನೆಗಾಗಿ ಪ್ರಯತ್ನ ಮಾಡುವುದು, ಮನಮುಕ್ತತೆಯಿಂದ ಮಾತನಾಡುವುದು ಇತ್ಯಾದಿ ಪ್ರಯತ್ನಗಳನ್ನು ಮಾಡಬೇಕು.

(‘ಓರ್ವ ಸಾಧಕಿಯ ಮನಸ್ಸಿನಲ್ಲಿ ಬಹಳಷ್ಟು ಅನಾವಶ್ಯಕ ವಿಚಾರಗಳು ಬರುತ್ತಿದ್ದವು. ಅವುಗಳನ್ನು ಕಡಿಮೆ ಮಾಡಲು ಅವಳು ಪೂ. ಸಂದೀಪ ಅಣ್ಣನವರು ಹೇಳಿದಂತೆ ಭಾವಪ್ರಯೋಗ ಮತ್ತು ೫ ನಿಮಿಷ ಶಿವನ ನಾಮಜಪವನ್ನು ಮಾಡಿದಳು. ಅನಂತರ ಅವಳ ಮನಸ್ಸಿನಲ್ಲಿದ್ದ ಅನಾವಶ್ಯಕ ವಿಚಾರಗಳು ಕಡಿಮೆಯಾದವು.’ – ಸಂಕಲನಕಾರರು)

೩. ಸೇವೆಯ ವೇಗ

ಕಾಲದ ವೇಗವು ಬಹಳ ಪ್ರಚಂಡವಾಗಿದೆ. ಅದರೊಂದಿಗೆ ಹೊಂದಿಕೊಳ್ಳದಿದ್ದರೆ ನಾವು ಹಿಂದೆ ಉಳಿಯುತ್ತೇವೆ. ಸೇವೆಯ ಆರಂಭದಲ್ಲಿ ಚಿಂತನೆಯನ್ನು ಮಾಡಬೇಕು. ಅದರ ಬಗ್ಗೆ ಯಾರೊಂದಿಗಾದರೂ ಮಾತನಾಡಿಕೊಳ್ಳಬೇಕು. ಆತ್ಮವಿಶ್ವಾಸ ಕಡಿಮೆಯಿದ್ದರೆ ಅಭ್ಯಾಸವನ್ನು ಹೆಚ್ಚಿಸಬೇಕು. ಸಾಧನೆಯಲ್ಲಿ ಮುಂದೆ ಹೋಗಬೇಕಾಗಿದ್ದರೆ ಸೇವೆಯ ವೇಗವನ್ನು ಹೆಚ್ಚಿಸಬೇಕು.

೩ ಅ. ಸಮಯವನ್ನು ವ್ಯರ್ಥಗೊಳಿಸಬಾರದು : ಸಾಧಕರು ದೈನಂದಿನಿಯನ್ನು ನಿಯಮಿತವಾಗಿ ಬರೆಯಬೇಕು. ಓರ್ವ ಸಾಧಕಿಯ ಕ್ಷಮತೆ ಇದ್ದರೂ ಅವಳು ಕ್ಷಮತೆಯನ್ನು ಪೂರ್ಣವಾಗಿ ಉಪಯೋಗಿಸುತ್ತಿರಲಿಲ್ಲ; ಓರ್ವ ಸಂತರು ಅವಳಿಗೆ ದೈನಂದಿನಿಯನ್ನು ಬರೆಯಲು ಹೇಳಿದರು ಮತ್ತು ಅವರು ಅವಳ ದೈನಂದಿನಿಯನ್ನು ಸ್ವತಃ ಪರಿಶೀಲಿಸುತ್ತಿದ್ದರು. ಅವರು ಅವಳಿಗೆ ಭೋಜನಕ್ಕಾಗಿ ಬೇಕಾಗುವ ಕಾಲಾವಧಿಯನ್ನು ಕಡಿಮೆ ಮಾಡಲು ಹೇಳಿದರು.

ನಾವು ಪ್ರತಿಯೊಂದು ನಿಮಿಷವನ್ನು ಉಳಿಸಬೇಕು. ದೈನಂದಿನಿ ಬರೆಯುವ ಉದ್ದೇಶವನ್ನು ಗಮನದಲ್ಲಿಡಬೇಕು. ‘ನಮ್ಮ ಸಮಯದ ಬಳಕೆಯು ಸರಿಯಾಗಿ ಆಗುವುದಿಲ್ಲ’, ಎಂದು ಅನಿಸುತ್ತಿದ್ದರೆ, ನಾವಾಗಿಯೇ ದೈನಂದಿನಿಯನ್ನು ಬರೆಯಬೇಕು.

‘ಮಾತನಾಡುವಲ್ಲಿ ನಮ್ಮ ಸಮಯ ವ್ಯರ್ಥವಾಗುತ್ತದೆಯೇ ?’, ಎಂಬುದನ್ನು ನೋಡಬೇಕು. ಯಾವುದಾದರೊಬ್ಬನು ಅತಿ ಕಡಿಮೆ ಮಾತನಾಡುವವನಾಗಿದ್ದರೆ, ಅವನು ಇತರರೊಂದಿಗೆ ಮಾತನಾಡಲು ಪ್ರಯತ್ನಿಸಬೇಕು; ಆದರೆ ನಾವು ಎಲ್ಲರೊಂದಿಗೆ ಬೆರೆಯುತ್ತಿದ್ದರೆ, ಎಲ್ಲರೊಂದಿಗೆ ಮಾತನಾಡುತ್ತಿದ್ದರೆ ಸೇವೆಗೆ ಹೆಚ್ಚು ಸಮಯವನ್ನು ನೀಡಬೇಕು.

೩ ಆ. ಸೇವೆಗಳನ್ನು ತಪ್ಪುಗಳಿಲ್ಲದೇ ಮಾಡಬೇಕು : ಸೇವೆಯಲ್ಲಿ ತಪ್ಪುಗಳ ಪ್ರಮಾಣವು ಹೆಚ್ಚಾಗಿದ್ದರೆ, ನಮ್ಮ ವೇಗವು ಕಡಿಮೆಯಾಗುತ್ತದೆ. ತಪ್ಪುಗಳಿಂದ ಕಲಿಯಲು ಪ್ರಯತ್ನಿಸಬೇಕು. ‘ತಪ್ಪುಗಳಾಗಬಾರದು’, ಎಂದು ಪರಿಶೀಲನೆಯ ಅಂಶಗಳ ಪಟ್ಟಿಯನ್ನು ತಯಾರಿಸಬೇಕು. ಪರೀಕ್ಷಣೆ ಪಟ್ಟಿಯು ಕೇವಲ ಆಧಾರವಾಗಿದೆ. ನಮ್ಮ ವೃತ್ತಿಯಲ್ಲಿಯೇ ಬದಲಾವಣೆಯಾಗಬೇಕು. ಪುನಃ ಪುನಃ ಆಗುವ ತಪ್ಪುಗಳನ್ನು ಫಲಕದಲ್ಲಿ ಬರೆಯುವುದು ಮತ್ತು ಅವುಗಳಿಗಾಗಿ ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

೪. ಭಾವ

ಭಾವವಿದ್ದರೆ ದೇವರ ಸಹಾಯ ಸಿಗುತ್ತದೆ. ಅದಕ್ಕಾಗಿ ಪ್ರಾರ್ಥನೆಯನ್ನು (ಸಾಮೂಹಿಕ ಮತ್ತು ವೈಯಕ್ತಿಕ) ಮಾಡುವುದು ಮತ್ತು ಶರಣಾಗತಿಗಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಸೇವೆಯನ್ನು ಮಾಡುವಾಗ ನಡುನಡುವೆ ಪ್ರಾರ್ಥನೆಯನ್ನು ಮಾಡಬೇಕು. ಯಾರಲ್ಲಿ ಭಾವವಿದೆಯೋ, ಅವರಿಂದ ಭಾವಜಾಗೃತಿಯ ಪ್ರಯತ್ನವನ್ನು ಕಲಿಯಬೇಕು. ಸೇವೆಯನ್ನು ಮಾಡುವಾಗ ಬೇಸರ ಬಂದರೆ, ಭಾವಪ್ರಯೋಗ, ನಾಮಜಪ, ಯಾವುದಾದರೊಂದು ಭಜನೆಯನ್ನು ಕೇಳುವುದು ಹೀಗೆ ಮಾಡಬಹುದು.’ – ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೫.೧೨.೨೦೨೦)