ಆಪತ್ಕಾಲವನ್ನು ಎದುರಿಸಲು ಬಾಳಿಕೆ ಬರುವ ಆಹಾರಪದಾರ್ಥಗಳನ್ನು ಸಂಗ್ರಹಿಸಿ
ಆಪತ್ಕಾಲದಲ್ಲಿ ಅಡುಗೆ ಮಾಡಲು ಇಂಧನದ ಕೊರತೆಯಾಗುವುದು, ಮನೆಯಲ್ಲಿ ಎಲ್ಲರೂ ಅನಾರೋಗ್ಯಕ್ಕೊಳಗಾಗುವುದು, ಇದ್ದಕ್ಕಿದ್ದಂತೆ ಸ್ಥಳಾಂತರವಾಗಬೇಕಾಗುವುದು, ಮಾರುಕಟ್ಟೆಯಲ್ಲಿ ತರಕಾರಿಗಳು ಸಿಗದಂತಹ ಪರಿಸ್ಥಿತಿ ಉದ್ಭವಿಸಬಹುದು. ಅಂತಹ ಸಮಯದಲ್ಲಿ ಎಂದಿನಂತೆ ತಿಂಡಿ ಮತ್ತು ಅಡುಗೆ ತಯಾರಿಸಲು ಆಗುತ್ತದೆ ಎಂದೇನಿಲ್ಲ. ಈ ಪರಿಸ್ಥಿತಿಯಲ್ಲಿ ಬಾಳಿಕೆ ಬರುವ ಇತರ ಆಹಾರಗಳನ್ನು ಸಂಗ್ರಹಿಸುವುದು ಉಪಯುಕ್ತವಾಗಿದೆ. ಮುಂದಿನ ಕೆಲವು ಪದಾರ್ಥಗಳ ಪೈಕಿ ಕೆಲವು ಪದಾರ್ಥಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿಗುತ್ತವೆ. ಅದನ್ನು ಖರೀದಿಸಿಡಬಹುದು. ಮಾರುಕಟ್ಟೆಯಲ್ಲಿ ಸಿಗದ ಪದಾರ್ಥಗಳನ್ನು ತಯಾರಿಸಲು ಇಂದಿನಿಂದ ಅಭ್ಯಾಸ ಮಾಡಿ. ಮುಂದೆ ಆಪತ್ಕಾಲ ತೀವ್ರವಾಗುತ್ತಿದ್ದಂತೆ ಇವು ಮಾರುಕಟ್ಟೆಯಲ್ಲಿ ಸಿಗುವುದು ಕಠಿಣವಾಗುವುದು.
ಅಕ್ಕಿಯ ಮತ್ತು ರಾಗಿಯ ಹಿಟ್ಟು
‘ಈ ಹಿಟ್ಟುಗಳಲ್ಲಿ ರಾಗಿಯ ಹಿಟ್ಟು ಹೆಚ್ಚು ಪೌಷ್ಟಿಕವಾಗಿದೆ. ಅಕ್ಕಿಯನ್ನು ೩-೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಬಸಿಗೆಯಲ್ಲಿ ಬಸಿಯಲು ಇಡಬೇಕು. ಸಾಧಾರಣ ೧ ಗಂಟೆಯ ನಂತರ ಅಕ್ಕಿಯಲ್ಲಿನ ನೀರು ಬಸಿದು ಹೋದ ನಂತರ ಮತ್ತು ಅದರಲ್ಲಿನ ಹಸಿತನ ಕಡಿಮೆಯಾದ ನಂತರ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಮಧ್ಯಮ ಉಷ್ಣತೆಯಲ್ಲಿ ಹುರಿಯಬೇಕು. ಒಂದು ಬಾರಿಗೆ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡರೆ ಅವು ಅರಳಿನಂತೆ ಅರಳುತ್ತವೆ. ಕೊನೆಗೆ ಎಲ್ಲ ಅಕ್ಕಿಯ ಹಿಟ್ಟು ಮಾಡಿ ಒಣ ಭರಣಿಯಲ್ಲಿ ತುಂಬಿಸಿಡಬೇಕು. ಈ ಹಿಟ್ಟು ಸಾಧಾರಣ ೩ ತಿಂಗಳು ಕಾಲ ಉಳಿಯುತ್ತದೆ. ಈ ಹಿಟ್ಟನ್ನು ಹಾಲು, ಮೊಸರು, ಮಜ್ಜಿಗೆ ಅಥವಾ ಸಾರಿನೊಂದಿಗೆ ತಿನ್ನಬಹುದು. ಹಿಟ್ಟನ್ನು ಹಾಲಿನೊಂದಿಗೆ ಸೇವಿಸುವುದಾದರೆ ಅದರಲ್ಲಿ ರುಚಿಗಾಗಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬಹುದು. (ಅಕ್ಕಿಯ ಹಿಟ್ಟು ತಯಾರಿಸುವ ಪದ್ಧತಿಯಂತೆಯೇ ರಾಗಿಯ ಹಿಟ್ಟನ್ನೂ ತಯಾರಿಸಿಡಬಹುದು. ಈ ಹಿಟ್ಟು ಸಹ ಸಾಧಾರಣ ೩ ತಿಂಗಳುಗಳ ಕಾಲ ಉಳಿಯುತ್ತದೆ.)
ಜವೆಗೋದಿಯ ಹಿಟ್ಟು
ಗೋದಿಯನ್ನು ತೊಳೆದು ಬಸಿಯಲು ಇಡಬೇಕು. ಸಾಧಾರಣ ೧ ಗಂಟೆಯಲ್ಲಿ ಗೋದಿಯಲ್ಲಿನ ನೀರು ಬಸಿದಾದ ನಂತರ ಅದರ ತೇವಾಂಶ ಕಡಿಮೆಯಾದ ಮೇಲೆ ಅದನ್ನು ಮಧ್ಯಮ ಉಷ್ಣತೆಯಲ್ಲಿ ಹುರಿಯಬೇಕು. ಅದರಲ್ಲಿ ಕಡಲೆ ಬೇಳೆ ಮತ್ತು ಜೀರಿಗೆಯನ್ನು ಹುರಿದು ಹಾಕಬೇಕು. ಎಲ್ಲವನ್ನು ಸೇರಿಸಿ ಅದರ ಹಿಟ್ಟು ಮಾಡಬೇಕು. ಈ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಅಥವಾ ಒಣಗಿದ ಭರಣಿಯಲ್ಲಿ ತುಂಬಿಡಬೇಕು. ಈ ಹಿಟ್ಟನ್ನು ನೀರು ಅಥವಾ ಹಾಲಿನಲ್ಲಿ ಹಾಕಿ ರುಚಿಗನುಸಾರ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ತಿನ್ನಬೇಕು. ಈ ಹಿಟ್ಟು ಸಾಧಾರಣ ೬ ತಿಂಗಳು ಉಳಿಯುತ್ತದೆ.
ಪ್ರದೇಶಗಳಿಗನುಸಾರ ಜವೆಗೋದಿಯ ಹಿಟ್ಟು ಮಾಡುವ ಪದ್ಧತಿಯು ಬೇರೆ ಬೇರೆಯಾಗಿರುತ್ತದೆ. ಕೆಲವೆಡೆ ಗೋದಿಯನ್ನು ಉಪಯೋಗಿಸದೇ ಜವೆಗೋದಿಯನ್ನು ಉಪಯೋಗಿಸುತ್ತಾರೆ ಮತ್ತು ಕೆಲವೆಡೆ ಕೇವಲ ಕಡಲೆಗಳನ್ನು ಹುರಿದು ಅದರ ಹಿಟ್ಟು ಮಾಡುತ್ತಾರೆ. – ಶ್ರೀಮತಿ ಕ್ಷಮಾ ರಾಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಆಪತ್ಕಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ ! (ಆಹಾರ, ನೀರು, ವಿದ್ಯುತ್ ಇತ್ಯಾದಿಗಳ ಸಿದ್ಧತೆ)
ಮಾವಿನಕಾಯಿಯ ಚಟ್ನಿ
ಸಕ್ಕರೆಯ ಏರುಪಾಕವನ್ನು ಮಾಡಬೇಕು. ಅದರಲ್ಲಿ ಆವಶ್ಯಕವಿರುವ ಮಸಾಲೆ ಪದಾರ್ಥಗಳು ಮತ್ತು ಬೇಯಿಸಿದ ಮಾವಿನಕಾಯಿಗಳನ್ನು ಹಾಕಿ ಚಟ್ನಿಯನ್ನು ಮಾಡಬೇಕು. ಇಂತಹ ಚಟ್ನಿಯನ್ನು ಮಧ್ಯಮ ಹಣ್ಣಾಗಿರುವ ಮಾವಿನಹಣ್ಣುಗಳಿಂದಲೂ ಮಾಡಬಹುದು ಮತ್ತು ಸಕ್ಕರೆಯ ಬದಲಾಗಿ ಬೆಲ್ಲದ ಪಾಕವನ್ನು ಉಪಯೋಗಿಸಿಯೂ ಮಾಡಬಹುದು.
ನೆಲ್ಲಿಕಾಯಿಯ ಚಟ್ನಿ : ಮಾವಿನಕಾಯಿಗಳಂತೆಯೇ ನೆಲ್ಲಿಕಾಯಿಗಳ ಚಟ್ನಿಯನ್ನು ಮಾಡಬಹುದು. – ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮೀರಜ