ಆಪತ್ಕಾಲದಲ್ಲಿ ಜೀವಂತವಾಗಿರಲು ಮಾರ್ಗದರ್ಶನ ಮಾಡುವ ಸನಾತನ ಸಂಸ್ಥೆ !

ಅಖಿಲ ಮನುಕುಲವು ಆಪತ್ಕಾಲದಲ್ಲಿ ಜೀವಂತವಾಗಿರಲು ಸಿದ್ಧತೆ ಮಾಡಿಕೊಳ್ಳುವ ಕುರಿತು ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಪರಾತ್ಪರ ಗುರು ಡಾ. ಆಠವಲೆ

ಸನಾತನದ ‘ಆಪತ್ಕಾಲದಲ್ಲಿ ಜೀವರಕ್ಷಣೆ’ ಈ ಗ್ರಂಥಮಾಲಿಕೆಯ ೨ ಹೊಸ ಗ್ರಂಥಗಳು ಪ್ರಕಾಶಿತ !

ಖಂಡ ೧ : ಆಪತ್ಕಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ ! (ಅನ್ನ, ನೀರು ವಿದ್ಯುತ್ ಇತ್ಯಾದಿಗಳ ಬಗೆಗಿನ ಸಿದ್ಧತೆ)

ಖಂಡ ೨ : ಆಪತ್ಕಾಲವು ಸುಸಹ್ಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಿ ! (ಸ್ವಯಂಸೂಚನೆ-ಉಪಾಯ, ಸಾಧನೆಯ ಮಹತ್ವ ಇತ್ಯಾದಿ)

ಗ್ರಂಥದ ಸಂಕಲಕರು : ಪರಾತ್ಪರ ಗುರು ಡಾ. ಆಠವಲೆ ಮತ್ತು ಪೂ. ಸಂದೀಪ ಆಳಶಿ

ಲೇಖನ ೧

ಸಂತ-ಮಹಾತ್ಮರು, ಜೋತಿಷಿಗಳು ಮುಂತಾದವರು ಮೊದಲೇ ಹೇಳಿದಂತೆ ಆಪತ್ಕಾಲವು ಆರಂಭವಾಗಿದ್ದು ಇನ್ನು ಮುಂದೆ ಸಮಾಜಕ್ಕೆ ಮಹಾ ಯುದ್ಧದಂತಹ ಅನೇಕ ಭೀಕರ ಆಪತ್ತುಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಭೀಕರ ಆಪತ್ಕಾಲವನ್ನು ಎದುರಿಸುವ ಪೂರ್ವಸಿದ್ಧತೆಯ ಒಂದು ಭಾಗವೆಂದು ಸನಾತನವು ‘ಆಪತ್ಕಾಲದಲ್ಲಿ ಜೀವರಕ್ಷಣೆ’ ಈ ಗ್ರಂಥಮಾಲಿಕೆಯನ್ನು ತಯಾರಿಸುತ್ತಿದೆ.

ಇಲ್ಲಿಯವರೆಗೆ ಈ ಮಾಲಿಕೆಯಲ್ಲಿ ೨ ಗ್ರಂಥಗಳು ಪ್ರಕಾಶಿತಗೊಂಡಿವೆ. ಈ ಗ್ರಂಥಗಳ ಪರಿಚಯವಾಗಬೇಕೆಂದು, ಪ್ರಸ್ತುತ ಲೇಖನದಲ್ಲಿ ಈ ಗ್ರಂಥ ಮಾಲಿಕೆಯ ಸಾರ್ವತ್ರಿಕ ಮನೋಗತ, ಹಾಗೆಯೇ ಎರಡೂ ಗ್ರಂಥಗಳ ವಿವರವನ್ನು ಸ್ವಲ್ಪದರಲ್ಲಿ ಮುದ್ರಿಸುತ್ತಿದ್ದೇವೆ. ಈ ಎರಡೂ ಗ್ರಂಥಗಳನ್ನು ವಾಚಕರು ಅವಶ್ಯವಾಗಿ ಸಂಗ್ರಹದಲ್ಲಿಡಬೇಕು; ಏಕೆಂದರೆ ಅವು ಆಪತ್ಕಾಲದಲ್ಲಿ ಜೀವಂತವಾಗಿರಲು ಸಹಾಯಕವಾಗಲಿವೆ. ‘ಈ ಗ್ರಂಥಗಳ ಕುರಿತು ಸಮಾಜದಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಿ ಸಾಮಾಜಿಕ ಕಟ್ಟುಪಾಡುಗಳನ್ನು ಕಾಪಾಡುವುದರೊಂದಿಗೆ ಸಮಾಜದ ಋಣವನ್ನು ತೀರಿಸಬೇಕು’, ಎಂದು ಸವಿನಯ ವಿನಂತಿ !

‘ಆಪತ್ಕಾಲದಲ್ಲಿ ಜೀವರಕ್ಷಣೆ’ ಈ ಗ್ರಂಥಮಾಲಿಕೆಯ ಸಾರ್ವತ್ರಿಕ ಮನೋಗತ

೧. ‘ಕೊರೋನಾ ವೈರಾಣುರೂಪಿ ಆಪತ್ತು ಇದು ಮಹಾಭೀಕರ ಆಪತ್ಕಾಲದ ತುಣುಕು

ಜನವರಿ ೨೦೨೦ ರಿಂದ ‘ಕೊರೋನಾ ವೈರಾಣು ಜಗತ್ತಿನಾದ್ಯಂತ ಹಾಹಾಕಾರವೆಬ್ಬಿಸಿತು. ‘ಕೊರೋನಾದ ಆಪತ್ತಿನಿಂದ ಸಂಚಾರ ನಿರ್ಬಂಧದಿಂದ ಅನೇಕ ಉದ್ಯೋಗ ವ್ಯಾಪಾರಗಳ ಮೇಲೆ ವಿಪರೀತ ಪರಿಣಾಮವಾಗಿದೆ, ಹಾಗೆಯೇ ಆರ್ಥಿಕ ಮುಗ್ಗಟ್ಟೂ ಉಂಟಾಗಿದೆ. ‘ಕೊರೋನಾದಿಂದ ಬಹಳ ಜೀವಹಾನಿ ಮತ್ತು ಆರ್ಥಿಕ ಹಾನಿಯಾಗುತ್ತಿದೆ. ಕೊರೋನಾ ಸೋಂಕು ಎಂಬ ತೂಗುಕತ್ತಿಯು ತಲೆಯ ಮೇಲಿರುವುದರಿಂದ ಎಲ್ಲೆಡೆ ಮುಕ್ತವಾಗಿ ಸಂಚಾರ ಮಾಡುವುದು, ಆಸ್ಪತ್ರೆಗಳಿಗೆ ಹೋಗಿ ಉಪಚಾರ ಪಡೆಯುವುದು ಇವೆಲ್ಲ ಕಠಿಣವೆನಿಸುತ್ತಿದೆ. ಎಲ್ಲೆಡೆ ಒಂದು ರೀತಿಯಲ್ಲಿ ಒತ್ತಡ ಮತ್ತು ಭಯದ ವಾತಾವರಣವು ಉದ್ಭವಿಸಿದೆ. ಅಕ್ಟೋಬರ್ ೨೦೨೦ ರಿಂದ ಉಂಟಾದ ಮೇಲಿನ ಪರಿಸ್ಥಿತಿಯಿಂದ ‘ಕೊರೋನಾ ಇದು ಮಹಾಭೀಕರ ಆಪತ್ಕಾಲದ ಒಂದು ಚಿಕ್ಕ ತುಣುಕಾಗಿದೆ ಎಂದು ಕಂಡು ಬರುತ್ತದೆ.

೨. ಮಹಾಭೀಕರ ಆಪತ್ಕಾಲದ ಕಿರು ಸ್ವರೂಪ

ಮಹಾಯುದ್ಧ, ಭೂಕಂಪ, ನೆರೆ ಮುಂತಾದ ಸ್ವರೂಪದ ಮಹಾಭಯಂಕರ ಆಪತ್ಕಾಲವು ಇನ್ನೂ ಬರಲಿಕ್ಕಿದೆ. ‘ಅದು ಬರುವುದು ಖಂಡಿತ’, ಎಂದು ಅನೇಕ ನಾಡಿಭವಿಷ್ಯಕಾರರು ಮತ್ತು ದಾರ್ಶನಿಕ ಸಾಧು-ಸಂತರು ಮೊದಲೇ ಹೇಳಿದ್ದಾರೆ. ಆ ಸಂಕಟಗಳ ನಗಾರಿಯೂ ಈಗ ಮೊಳಗತೊಡಗಿದೆ. ಮಹಾಯುದ್ಧವು ಈಗ ಸಮೀಪ ಬರುತ್ತಿದೆ. ಈ ಭೀಕರ ಆಪತ್ಕಾಲವು ಕೆಲವು ದಿನಗಳದ್ದು ಅಥವಾ ತಿಂಗಳುಗಳದ್ದಾಗಿರದೇ ಅದು ೨೦೨೩ ರವರೆಗೆ ಇರಲಿದೆ. ಅಂದರೆ ಇಂದಿನಿಂದ (ವರ್ಷ ೨೦೨೦ ರಿಂದ) ಮೂರು ವರ್ಷಗಳ ಅಂದರೆ ಭಾರತದಲ್ಲಿ ‘ಹಿಂದೂ ರಾಷ್ಟ್ರ’ದ (ಆದರ್ಶ ಈಶ್ವರೀ ರಾಜ್ಯದ) ಸ್ಥಾಪನೆಯಾಗುವವರೆಗೆ ಇರಲಿದೆ.

೩. ಆಪತ್ಕಾಲದಲ್ಲಿ ಜೀವಂತವಾಗಿರಲು ವಿವಿಧ ಪೂರ್ವತಯಾರಿ ಮಾಡುವುದು ಆವಶ್ಯಕ

ಆಪತ್ಕಾಲದಲ್ಲಿ ವಿದ್ಯುತ್ ಪೂರೈಕೆಯು ಸ್ಥಗಿತವಾಗುತ್ತದೆ. ಪೆಟ್ರೋಲ್, ಡಿಸೇಲ್ ಮುಂತಾದವುಗಳ ಕೊರತೆಯಾಗಲಿದೆ. ಹಾಗಾಗಿ ಸಾರಿಗೆ-ವ್ಯವಸ್ಥೆಯು ಕುಸಿಯಲಿದೆ. ಆದ್ದರಿಂದ ಸರಕಾರಿವ್ಯವಸ್ಥೆಯು ಎಲ್ಲ ಕಡೆಗಳಲ್ಲಿ ಸಹಾಯಕ್ಕಾಗಿ ತಲುಪಲಾರದು. ಸರಕಾರವು ಮಾಡುತ್ತಿರುವ ಸಹಾಯ ಕಾರ್ಯದಲ್ಲಿ ಅಡಚಣೆಗಳು ಬರುತ್ತವೆ. ಆದ್ದರಿಂದ ಅಡುಗೆ ಅನಿಲ, ತಿನ್ನುವ-ಕುಡಿಯುವ ವಸ್ತುಗಳು ಮುಂತಾದವುಗಳು ಅನೇಕ ತಿಂಗಳುಗಳ ಕಾಲ ಸಿಗಲಾರವು ಮತ್ತು ಸಿಕ್ಕಿದರೂ ಅವುಗಳ ‘ರೇಶನಿಂಗ್’ ಆಗುತ್ತದೆ. ಡಾಕ್ಟರರು (ಅಲೋಪಥಿ), ವೈದ್ಯರು (ಆಯುರ್ವೇದಿಕ), ಔಷಧಿಗಳು, ಆಸ್ಪತ್ರೆಗಳು ಮುಂತಾದವುಗಳು ಸಹಜವಾಗಿ ಲಭ್ಯವಾಗಲು ಕಠಿಣವಾಗಿರುತ್ತದೆ. ಇವೆಲ್ಲವನ್ನು ಗಮನದಲ್ಲಿರಿಸಿ ಈ ಆಪತ್ಕಾಲವನ್ನು ಎದುರಿಸಲು ಎಲ್ಲರೂ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಆವಶ್ಯಕವಾಗಿದೆ. ಪ್ರಸ್ತುತ ಗ್ರಂಥ ಮಾಲಿಕೆಯ ಮೊದಲ ಖಂಡದಲ್ಲಿ ಶಾರೀರಿಕ ಸ್ತರದ ಮತ್ತು ೨ ನೇ ಖಂಡದಲ್ಲಿ ಇತರ ಪೂರ್ವ ಸಿದ್ಧತೆಗಳ ಬಗ್ಗೆ ಹೇಳಲಾಗಿದೆ.

೪. ವಾಚಕರೇ, ಶೀಘ್ರವೇ ಸಿದ್ಧತೆ ಆರಂಭಿಸಿ

ವಾಚಕರು ಗ್ರಂಥಮಾಲಿಕೆಗನುಸಾರ ಇಂದಿನಿಂದಲೇ ಕಾರ್ಯಾಚರಣೆ ಆರಂಭಿಸಿದರೆ ಅವರಿಗೆ ಆಪತ್ಕಾಲವು ಸಹನೀಯವಾಗುವುದು ವಾಚಕರು ಈ ವಿಷಯದ ಕುರಿತು ಸಮಾಜ ಬಾಂಧವರಲ್ಲಿಯೂ ಜಾಗೃತಿ ಮೂಡಿಸಬೇಕು.

೫. ಪ್ರಾರ್ಥನೆ

‘ಆಪತ್ಕಾಲದಲ್ಲಿ ಕೇವಲ ತಾಳ್ಮೆಯಿಂದಿರುವುದಕ್ಕೆ ಅಷ್ಟೇ ಅಲ್ಲ, ಜೀವನದಲ್ಲಿ ಸಾಧನೆಯ ದೃಷ್ಟಿಕೋನವನ್ನು ಅಂಗೀಕರಿಸಿ ಆನಂದಿಯಾಗಿರಲು ಈ ಗ್ರಂಥಮಾಲಿಕೆ ಉಪಯೋಗವಾಗಲಿ, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ ! – ಸಂಕಲನಕಾರರು

[ಪ್ರಸ್ತುತ ಲೇಖನದ ಕೃತಿಸ್ವಾಮ್ಯವು (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಕಡೆಗೆ ಸುರಕ್ಷಿತವಾಗಿದೆ.]

(ಲೇಖನ ೨ : ಮುಂದಿನ ಸಂಚಿಕೆಯಲ್ಲಿ ಕೊಡಲಾಗುವುದು.)