ನಾಸ್ಟ್ರಡಾಮಸ್ ಮತ್ತು ಬಾಬಾ ವಂಗಾ ಇವರು ಮಹಾಯುದ್ಧದ ಬಗ್ಗೆ ನುಡಿದ ಭವಿಷ್ಯವಾಣಿ ಹಾಗೂ ಕ್ರೈಸ್ತರ – ಮುಸಲ್ಮಾನರ ಸಂಘರ್ಷ

ಈಗ ನಾಸ್ಟ್ರಡಾಮಸ್‌ನ ಭವಿಷ್ಯವಾಣಿ ಸತ್ಯವಾಗುವ ಸ್ಥಿತಿ ಉದ್ಭವಿಸಿರುವುದು

ಇಸ್ಲಾಮಿಕ್ ರಾಷ್ಟ್ರಗಳು ಫ್ರಾನ್ಸ್ ದೇಶದ ವಿಷಯದಲ್ಲಿ ತಳೆದಿರುವ ನಿಲುವಿನಿಂದ ಒಂದು ಹೊಸ ಸಂಘರ್ಷ ಎದುರಾಗುವ ಸಾಧ್ಯತೆ ಇದೆ. ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷರಾಗಿರುವ ಇಮಾನ್ಯುಏಲ್ ಮೆಕ್ರಾನ್ ಇವರು ಕಟ್ಟರ್ ಇಸ್ಲಾಮ್‌ನಿಂದ ಉದ್ಭವಿಸಿರುವ ಸಂಕಟಗಳತ್ತ ಜಗತ್ತಿನ ಗಮನವನ್ನು ಸೆಳೆದಿದ್ದಾರೆ ಮತ್ತು ಜಗತ್ತಿನಾದ್ಯಂತದ ಮುಸಲ್ಮಾನರು ಒಕ್ಕೊರಳಿನಿಂದ ಮೆಕ್ರಾನ್‌ರನ್ನು ಗುರಿ ಮಾಡಲು ಪ್ರಾರಂಭಿಸಿದ್ದಾರೆ. ಭಾರತದಲ್ಲಿಯೂ ರಝಾ ಎಕಾಡಮಿ ಎಂಬ ಮತಾಂಧ ಸಂಘಟನೆಯು ಮೆಕ್ರಾನ್‌ರ ವಿರುದ್ಧ ‘ಫತ್ವಾ ಹೊರಡಿಸಿದೆ.

ತಮ್ಮ ಕುಕರ್ಮಗಳೆಡೆಗೆ ಕಣ್ಣು ಮುಚ್ಚಿಕೊಂಡಿರುವ ಜಗತ್ತಿನಾದ್ಯಂತವಿರುವ ಧಾರ್ಮಿಕ ಕಟ್ಟರವಾದಿಗಳು ಮೆಕ್ರಾನ್‌ರ ವಿರುದ್ಧ ನಡೆಸುತ್ತಿರುವ ಚಳುವಳಿಯನ್ನು ಗಮನಿಸಿದರೆ, ಭವಿಷ್ಯದಲ್ಲಿ ಕ್ರೈಸ್ತರು ಮತ್ತು ಮುಸಲ್ಮಾನರಲ್ಲಿ ಪುನಃ ೮ ನೇ ಯುದ್ಧ ಪ್ರಾರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ. ಈ ವಿಷಯದಲ್ಲಿ ಹೆಸರಾಂತ ಭವಿಷ್ಯಕಾರ ನಾಸ್ಟ್ರಡಾಮಸ್ ಕೆಲವು ಶತಮಾನಗಳ ಹಿಂದೆ ನುಡಿದ ಭವಿಷ್ಯವಾಣಿಯು ನಿಜವಾಗುವ ಸ್ಥಿತಿ ಉದ್ಭವಿಸುತ್ತಿದೆ.

ನಾಸ್ಟ್ರಡಾಮಸ್‌ನ ಭವಿಷ್ಯವಾಣಿ

ಹೆಸರಾಂತ ಭವಿಷ್ಯಕಾರ ಮಿಶೆಲ್‌ದ ನಾಸ್ಟ್ರಡಾಮಸ್ ಇವನು ಮೂರನೇ ಮಹಾಯುದ್ಧ ಪ್ರಾರಂಭವಾಗುವ ಸಂಕೇತವನ್ನು ನೀಡುವಾಗ ತನ್ನ ‘ಸೆಂಚುರೀಸ್ ಎಂಬ ಪುಸ್ತಕದಲ್ಲಿ ಯಾವಾಗ “ಯುದ್ಧ ಪ್ರಾರಂಭವಾಗುವುದೋ, ಆಗ ಒಂಟೆ ರಾಯಿನ್ ಡೆನ್ಯೂಬ್ ಇವರ ನೀರು ಕುಡಿಯುವುದು ಮತ್ತು ಅದಕ್ಕೆ ಅದರ ಪಶ್ಚಾತ್ತಾಪವಾಗುವುದಿಲ್ಲ. ತದನಂತರ ರೋನಾ ಮತ್ತು ಲಾರಾ ನಡುಗುವರು; ಆದರೆ ಆಲ್ಪಸನಲ್ಲಿ ಒಂದು ಹುಂಜ ಅದನ್ನು ನಾಶ ಮಾಡುವುದು ಎಂದು ಬರೆದಿದ್ದಾನೆ. ನಾಸ್ಟ್ರಡಾಮಸ್‌ನ ಈ ಭವಿಷ್ಯವಾಣಿಯನ್ನು ಮೂರನೇ ಮಹಾಯುದ್ಧದ ಸಂಕೇತವೆಂದು ತಿಳಿಯಲಾಗುತ್ತದೆ. ಅದರಂತೆ ‘ಒಂಟೆ ಮುಸಲ್ಮಾನ ದೇಶಗಳನ್ನು ಪ್ರತಿನಿಧಿಸುತ್ತಿದ್ದು, ಅದು ಯುರೋಪ ದೇಶಗಳಲ್ಲಿ ಪ್ರಚಂಡ ತಾಂಡವವಾಡುವುದು. ಪ್ರಾರಂಭದಲ್ಲಿ ಕ್ರೈಸ್ತ ದೇಶಗಳು ಪರಾಭವಗೊಳ್ಳುವವು; ಆದರೆ ನಂತರ ಇಸ್ಲಾಂ ಸೇನೆಯನ್ನು ನಾಶ ಮಾಡಲಾಗುವುದು ಎಂದು ಹೇಳಲಾಗಿದೆ. ಅನೇಕ ಪುಸ್ತಕಗಳಲ್ಲಿ ನಾಸ್ಟ್ರಡಾಮಸ್‌ನ ಭವಿಷ್ಯವಾಣಿಯ ವಿಶ್ಲೇಷಣೆಯನ್ನು ಮಾಡಲಾಗಿದೆ. ಅದರಲ್ಲಿ ‘ನಾಸ್ಟ್ರಡಾಮಸ್ ಮತ್ತು ಯುರೋಪಿಯನ್ ದೇಶಗಳ ಮೇಲೆ ಇಸ್ಲಾಂನ ಆಕ್ರಮಣ, ಈ ಪುಸ್ತಕ ಅತ್ಯಧಿಕ ಮಾರಾಟವಾಗಿದೆ. ಈ ಪುಸ್ತಕದಲ್ಲಿ ನಾಸ್ಟ್ರಡಾಮಸ್‌ನ ಭವಿಷ್ಯವಾಣಿಯನ್ನು ಸವಿಸ್ತಾರವಾಗಿ ನೀಡಲಾಗಿದೆ.

ಬಾಬಾ ವಂಗಾಳೂ ಕೂಡ ಮಹಾಯುದ್ಧದ ಭವಿಷ್ಯವಾಣಿಯನ್ನು ಮಾಡಿದ್ದಳು

ನಾಸ್ಟ್ರಡಾಮಸ್‌ನಂತೆಯೇ ಬಲ್ಗೇರಿಯಾ ದೇಶದ ಬಾಬಾ ವಂಗಾ ಇವಳೂ ಮಹಾಯುದ್ಧದ ಭವಿಷ್ಯವಾಣಿಯನ್ನು ನುಡಿದಿದ್ದಾಳೆ. ಬಲ್ಗೇರಿಯಾದ ಅಂಧ ಮಹಿಳಾ ಭವಿಷ್ಯಕಾರಳಾದ ಬಾಬಾ ವಂಗಾ ಇವಳು ಯುರೋಪಿನಲ್ಲಿ ಮುಸಲ್ಮಾನ-ಕ್ರೈಸ್ತ ಸಂಘರ್ಷದ ಬಗ್ಗೆ ಸ್ಪಷ್ಟ ಭವಿಷ್ಯವಾಣಿಯನ್ನು ನುಡಿದಿದ್ದಾಳೆ. ಅವಳು “ಜಗತ್ತಿನಾದ್ಯಂತ ಗ್ರೇಟ್ ಮುಸಲ್ಮಾನ ಯುದ್ಧ ಪ್ರಾರಂಭವಾಗಲಿದೆ. ಈ ಯುದ್ಧವು ಅರಬ್‌ರ ಭೂಮಿಯಿಂದ ಪ್ರಾರಂಭವಾಗುವುದು. ತದನಂತರ ಸಿರಿಯಾ ಮತ್ತು ಬಳಿಕ ಯುರೋಪಿನಲ್ಲಿ ಯುದ್ಧ ನಡೆಯಲಿದೆ ಮತ್ತು ಅದು ವರ್ಷ ೨೦೪೩ ರ ವರೆಗೆ ನಡೆಯುವುದು ಎಂದು ಭವಿಷ್ಯವನ್ನು ನುಡಿದಿದ್ದಾಳೆ. ಬಾಬಾ ವಂಗಾ ಇವಳು ೧೯೯೬ ನೇ ಇಸವಿಯಲ್ಲಿ ಅವಳ ೮೫ನೇ ವರ್ಷದಲ್ಲಿ ನಿಧನಳಾದಳು. ಅವಳು ಅಮೇರಿಕಾದ ಮೇಲೆ ನಡೆದ ೯/೧೧ ರ ಆಕ್ರಮಣ ಮತ್ತು ವರ್ಷ ೨೦೦೪ ರಲ್ಲಿ ಬಂದ ‘ಸುನಾಮಿ ಘಟನೆಯ ಬಗ್ಗೆ ಅನೇಕ ವರ್ಷಗಳ ಹಿಂದೆ ಭವಿಷ್ಯವಾಣಿ ಮಾಡಿದ್ದಳು. ಯುರೋಪಿನ ದೇಶಗಳೊಂದಿಗೆ ಸಂಪೂರ್ಣ ಜಗತ್ತಿನಾದ್ಯಂತದ ಇಸ್ಲಾಂ ಮತ್ತು ಇತರೆ ಧರ್ಮಗಳ ಸಂಘರ್ಷವನ್ನು ನೋಡಿದರೆ, ಈ ಭವಿಷ್ಯವಾಣಿ ಸತ್ಯವಾಗುವ ಸಮಯ ಸನ್ನಿಹಿತವಾಗಿದೆ ಎಂದೆನಿಸುತ್ತದೆ. ಏಕೆಂದರೆ ಸಂಪೂರ್ಣ ಜಗತ್ತು ಮುಸಲ್ಮಾನ ಮತ್ತು ಅನ್ಯ ಪಂಥೀಯರು ಇವರೆಡು ಗುಂಪುಗಳಲ್ಲಿ ವಿಭಜನೆಯಾಗುತ್ತಿದೆ. ಭಾರತವೂ ಇದಕ್ಕೆ ಅಪವಾದವಾಗಿಲ್ಲ.

(ಆಧಾರ : ‘ಝೀ ನ್ಯೂಸ್ ಹಿಂದಿಯ ಜಾಲತಾಣ)

ವಾಚಕರಿಗೆ ವಿನಂತಿ

ಈ ಲೇಖನದ ವಿಸ್ತೃತ ಭಾಗವನ್ನು www.sanatan.org/kannada/92552.html ಈ ಲಿಂಕ್ ನಲ್ಲಿ ಓದಿರಿ.