ಯುದ್ಧದ ಸಂಕಟ ಬರುತ್ತಿರುವಾಗ, ತಮ್ಮ ಜಿಲ್ಲೆಯಲ್ಲಿ ಅಥವಾ ಊರಿನಲ್ಲಿ ಸಿದ್ಧತೆ ಎಷ್ಟಾಗಿದೆ ?

ಯಾವುದೇ ಸಮಯದಲ್ಲಿ ಎದುರಾಗ ಬಹುದಾದ ಯುದ್ಧದ ಆಪತ್ಕಾಲದ ವಿಷಯವನ್ನು ಸ್ವಲ್ಪವೂ ದುರ್ಲಕ್ಷಿಸ ಬೇಡಿರಿ. ‘ಇದು ದೇಶದ ಗಡಿಯ ಚಿಂತೆಯ ವಿಷಯವಾಗಿದೆ, ಎಂದು ತಿಳಿದುಕೊಂಡು ಅಲ್ಲಗಳೆಯಬಾರದು. ಸರಕಾರದ ಬಳಿ ವ್ಯವಸ್ಥೆಯಿದೆಯೇ ? ವಿಪತ್ತು ನಿರ್ವಹಣೆಯ (ಡಿಸಾಸ್ಟರ್ ಮ್ಯಾನೇಜ ಮೆಂಟ್) ಸ್ಥಿತಿ ಏನಿದೆ ? ಆಧ್ಯಾತ್ಮಿಕ ಸಂಘಟನೆಗಳು ಹೇಗೆ ಮುಂದಾಳತ್ವ ವಹಿಸಿಕೊಂಡಿವೆ ? ಇವುಗಳನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಯುದ್ಧದ ಸಂಕಟದ ವ್ಯಾಪ್ತಿ ಎಷ್ಟಿರಬಹುದು ? ಈ ಮಾಹಿತಿಯನ್ನು ಪಡೆದುಕೊಂಡರೆ ನಾನು, ನನ್ನ ಮನೆ ಮತ್ತು ನನ್ನ ಪರಿವಾರವು  ಖಚಿತವಾಗಿಯೂ ಸುರಕ್ಷಿತವಾಗಿದೆಯೇ ? ಇದರ ಉತ್ತರವು ಪ್ರತಿಯೊಬ್ಬರಿಗೂ ಸಿಗುವುದು. ನಮ್ಮ ಊರು, ನಮ್ಮ ಜಿಲ್ಲೆ ಮತ್ತು ಗ್ರಾಮದ ಉಸ್ತುವಾರಿಯನ್ನು ನೋಡಿಕೊಳ್ಳುವವರು ನಿರ್ದಿಷ್ಟವಾಗಿ ಎಷ್ಟು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ? ಎಂಬುದರ ಕಲ್ಪನೆಯೂ ನಿಮಗೆಲ್ಲರಿಗೂ ಬರಬಹುದು; ಆದರೆ ಭಯ ಹುಟ್ಟಿಸುವ ವಾಸ್ತವಿಕತೆಯೆಂದರೆ, ಇಂತಹ ಅನುಮಾನವನ್ನು ಮಾಡುವ ಮತ್ತು ಪೂರ್ವಸಿದ್ಧತೆಯನ್ನು ಮಾಡುವ ವಿಚಾರಗಳು ಜನಸಾಮಾನ್ಯರ ಮನಸ್ಸಿನಲ್ಲಿ ಇನ್ನೂ ಜಾಗೃತವಾಗಿಲ್ಲ. ಯುದ್ಧಕಾಲದಲ್ಲಿ ದೇಶದ ಎಲ್ಲ ಪ್ರಮುಖ ನಗರಗಳ ದೈನಂದಿನ ಜೀವನದಲ್ಲಿ ಅನೇಕ ಸ್ತರಗಳಲ್ಲಿ ಪರಿಣಾಮವಾಗುತ್ತದೆ. ಇದರ ಕಲ್ಪನೆಯ ಅರಿವನ್ನು ಸಹ ಜನರಲ್ಲಿ ಮೂಡಿಸುವ ಕಾರ್ಯವಾಗುತ್ತಿಲ್ಲ. ರಕ್ಷಣಾತ್ಮಕ ಕಾರ್ಯವನ್ನು ಹೆಚ್ಚು ಪ್ರಭಾವಪೂರ್ಣವಾಗಿ ಮಾಡುವವರ ಆವಶ್ಯಕತೆ ಆಗ ಇರುವುದು, ಊರಿನ ಎಲ್ಲ ಜನರಿಗೆ ಮಹಾಯುದ್ಧದಿಂದಾಗುವ ಪರಿಣಾಮಗಳನ್ನು ಹೇಳಬೇಕು. ಊರಿನ ಪ್ರತಿಯೊಂದು ಮನೆ ಮತ್ತು ಪ್ರತಿಯೊಂದು ಊರಿನಲ್ಲಿ ಇದರ ತಯಾರಿಯ ವರದಿಯನ್ನು ತೆಗೆದುಕೊಳ್ಳಬೇಕು.

ಆಪತ್ಕಾಲದ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ  ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳು ಮುಂಚೂಣಿಯಲ್ಲಿವೆ

ಯಾವುದೇ ದೊಡ್ಡ ವಿಪತ್ತು ಬಂದಾಗ ಸಹಾಯಕ್ಕಾಗಿ ಹೋಗುವ ಎಲ್ಲ ಕ್ಷೇತ್ರಗಳಲ್ಲಿ ಸ್ವಯಂಸೇವಕರ ತಂಡವನ್ನು ರಾ.ಸ್ವ.ಸಂಘವು ಎಲ್ಲ ಕಾಲದಲ್ಲಿಯೂ ಸಿದ್ಧವಾಗಿಡುತ್ತದೆ, ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಇಲ್ಲಿ ಒತ್ತಿ ಹೇಳಬೇಕಾದ ವಿಷಯವೆಂದರೆ, ಮುಂಬರುವ ಆಪತ್ಕಾಲದ ವಿಷಯದ ಪ್ರಬೋಧನೆಗಾಗಿ ಸ್ವಯಂಸೇವಕರ ತಂಡವನ್ನು ತಯಾರಿಸುವುದರಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆ-ಸಂಘಟನೆಗಳು ಇಂದು ಮುಂಚೂಣಿಯಲ್ಲಿವೆ. ‘ಸಂಕಟಕಾಲ ಭದ್ರತೆಗಾಗಿ ವಸ್ತು, ಧಾನ್ಯ, ಹಣ ಇತ್ಯಾದಿಗಳ ವ್ಯವಸ್ಥೆ ಮಾಡುವುದರೊಂದಿಗೆ ಆಧ್ಯಾತ್ಮಿಕ ಸಾಧನೆಯ ಬಲವನ್ನೂ ಹೆಚ್ಚಿಸಿ, ಆ ಸಮಯದಲ್ಲಿ ಅದು ಉಪಯುಕ್ತವಾಗಲಿದೆ, ಎನ್ನುವ ಸಂದೇಶವನ್ನು ಆಧ್ಯಾತ್ಮಿಕ ಸಂಸ್ಥೆಗಳು ಕೊಡುತ್ತಿವೆ. ಜೀವನ ಧ್ವಂಸವಾಗುವ ಸ್ಥಿತಿಯಲ್ಲಿರುವಾಗ ತಮ್ಮ ಪೂರ್ವಸಿದ್ಧತೆ ಹೇಗಿರಬೇಕು ? ಎಂಬುದರ ಆಳವಾದ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಲು ಅವರು ಮೊದಲೇ ಆರಂಭಿಸಿದ್ದಾರೆ. (ಯುದ್ಧ ಆಗುವುದು ಮತ್ತು ನೀವು ಸಂಕಟಕ್ಕೀಡಾಗುವಿರಿ, ಎಂದು ಹೇಳಿ ಅವರು ನಿಮ್ಮನ್ನು ಹೆದರಿಸುತ್ತಿದ್ದಾರೆ ಎಂದು ಯಾರೂ ತಿಳಿದುಕೊಳ್ಳಬಾರದು ಯುದ್ಧಕಾಲದಲ್ಲಿ ಪರಿಣಾಮವನ್ನು ಹೇಳಿ ಆಡಳಿತದವರಿಗೆ ಸಹಾಯವಾಗುವ ಮಾನಸಿಕತೆಯನ್ನು ಮೂಡಿಸಲು ಅವರು ಅನೇಕ ಜನರನ್ನು ಉತ್ತೇಜಿಸಿದ್ದಾರೆ. ಬಾಹ್ಯ ಜಗತ್ತು ಕೊರೋನಾ, ಬಾಲಿವುಡ್, ಡ್ರಗ್ಸ್ ಇತ್ಯಾದಿ ವಿಷಯಗಳನ್ನು ಚರ್ಚಿಸುವುದರಲ್ಲಿ ಮಗ್ನವಾಗಿರುವಾಗ ಈ ಜನರು ಮಾತ್ರ ಈ ವಿಷಯದಲ್ಲಿ ಜನಜಾಗೃತಿ ಮಾಡಲು ಮತ್ತು ಸ್ವಯಂಸೇವಕರನ್ನು ತಯಾರು ಮಾಡುವುದರಲ್ಲಿ ಮಗ್ನವಾಗಿರುವುದು ಕಾಣಿಸುತ್ತದೆ. ಇದು ನಿಜವಾಗಿಯೂ ಪ್ರಶಂಸನೀಯವಾಗಿದೆ.

ಮೂರನೆಯ ಮಹಾಯುದ್ಧದ ಸಂಕೇತಗಳು

ದೊಡ್ಡ ಪ್ರಮಾಣದಲ್ಲಿ ಮಾನವ ಸಂಹಾರವಾಗುವುದು, ಎಂದು ಹೇಳುತ್ತಿರುವುದು ಕಾಲ್ಪನಿಕ ಯುದ್ಧವಲ್ಲ, ಎಂಬುದನ್ನು ಮೊದಲು ಗಾಂಭೀರ್ಯದಿಂದ ತಿಳಿದುಕೊಳ್ಳಬೇಕು. ಮನೆಯ ಸಣ್ಣ ಪರದೆಯ ಮೇಲೆ ಪ್ರತಿದಿನ ಅದರ ಟ್ರೇಲರ್ ನೋಡಲು ಸಿಗುತ್ತದೆ. ಈಗ ಅಝರ್‌ಬೈಜಾನ್ ಮತ್ತು ಅರ್ಮೇನಿಯಾ ಇವೆರಡು ರಾಷ್ಟ್ರಗಳಲ್ಲಿ ಆರಂಭವಾಗಿರುವ ಯುದ್ಧವು ದಿನ ಕಳೆದಂತೆ ಉಗ್ರ ರೂಪವನ್ನು ಧಾರಣೆ ಮಾಡುತ್ತಿದೆ. ಯಾವುದೇ ದಯೆದಾಕ್ಷಿಣೆ ಇಲ್ಲದೆ ನೇರವಾಗಿ ಮಾನವ ವಸತಿಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಯುದ್ಧ ಆರಂಭವಾದ ೮ ದಿನಗಳಲ್ಲಿಯೇ ೧೫ ಸಾವಿರಕ್ಕಿಂತಲೂ ಹೆಚ್ಚು ಜೀವಗಳ ಹತ್ಯೆಯಾಗಿದೆ. ಇನ್ನೊಂದೆಡೆ ಭಾರತ, ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಎಷ್ಟು ಉದ್ವಿಗ್ನವಿದೆ ? ಎನ್ನುವ ವಿಷಯವು ಎಲ್ಲರಿಗೂ ತಿಳಿದಿದೆ. ಅಂದರೆ ಭವಿಷ್ಯದಲ್ಲಿ ಯಾವಾಗಲಾದರು ದೊಡ್ಡ ಕಿಡಿ ಹಾರಬಹುದು ಮತ್ತು ಮಹಾಯುದ್ಧದ ಸಂಕಟ ಎದುರಾಗಬಹುದು, ಇದನ್ನು ಯಾರೂ ನಿರಾಕರಿಸುವಂತಿಲ್ಲ. ಅಲ್ಲದೇ ಕೊರೋನಾ ಮಹಾಮಾರಿಯು ಲಕ್ಷಗಟ್ಟಲೆ ಜನರನ್ನು ಬಲಿ ತೆಗೆದುಕೊಂಡಿದ್ದು ಅದು ಇನ್ನೂ ಹೆಚ್ಚಾಗುತ್ತಲೇ ಇದೆ.

ಆಪತ್ಕಾಲದಲ್ಲಿ ಉದ್ಭವಿಸುವ ಸ್ಥಿತಿಯ ಅನುಮಾನ

ಆಪತ್ + ಕಾಲ = ಆಪತ್ಕಾಲ. ಸಂಸ್ಕೃತದಲ್ಲಿ ಆಪತ್ ಅಂದರೆ ಸಂಕಟ. ಆಪತ್ಕಾಲವೆಂದರೆ, ಸಂಕಟದಕಾಲ. ಜಗತ್ಪ್ರಸಿದ್ಧ ಭವಿಷ್ಯಕಾರ ನಾಸ್ಟ್ರಡಾಮಸ್‌ನ ಭವಿಷ್ಯವಾಣಿಯಿಂದ ಹಾಲಸಿದ್ಧನಾಥರ ಭವಿಷ್ಯವಾಣಿಯ ವರೆಗೆ ಎಲ್ಲ ಭವಿಷ್ಯವಾಣಿಗಳು ನಮಗೆ ಇದರ ಪೂರ್ವಸೂಚನೆಯನ್ನು ಎಷ್ಟೋ ವರ್ಷಗಳಿಂದ ನೀಡುತ್ತಾ ಬಂದಿವೆ. ಆದರೆ ನಿನ್ನೆಯ ವರೆಗೆ ಅನೇಕ ಜನರಿಗೆ ಅವು ಕೇವಲ ಮನೋರಂಜನೆಯಾಗಿವೆ ಎಂದು ಅನಿಸುತ್ತಿತ್ತು. ಇಂದು ಮಾತ್ರ ಅವು ನಿಜವಾಗುತ್ತಿರುವುದನ್ನು ನೋಡಿ ಅನೇಕ ಜನರು ಭಯಭೀತರಾಗುತ್ತಿದ್ದಾರೆ, ಏಕೆಂದರೆ ಈಗ ಯುದ್ಧ ನಡೆಯುವುದೆಂದರೆ, ಸೈನ್ಯಕ್ಕಷ್ಟೇ ಗಂಡಾಂತರ ಎಂಬ ಸೀಮಿತ ಅರ್ಥ ಉಳಿದಿಲ್ಲ. ಇಂದಿನ ಆಧುನಿಕ ಯುದ್ಧದಲ್ಲಿ ಗಡಿಯಿಂದ ದೂರವಿರುವ ಊರುಗಳು, ನಗರಗಳು ಕೂಡ ಸಂಕಟಕ್ಕೀಡಾಗಬಹುದು. ಮುಂಬರುವ ಕಾಲದಲ್ಲಿ ನೈಸರ್ಗಿಕ, ಜೈವಿಕ ಮತ್ತು ಮಾನವ ನಿರ್ಮಿತ ಎಲ್ಲ ರೀತಿಯ ಸಂಕಟಗಳು ಒಟ್ಟಾಗಿ ಬರಲಿವೆ, ಎಂಬುದು ಜ್ಞಾನಿಗಳ ಹೇಳಿಕೆಯಾಗಿದೆ. ರೋಗಗಳನ್ನು ಹರಡುವುದು, ಆಂತರಿಕ ಅರಾಜಕತೆಯನ್ನು ಹುಟ್ಟಿಸುವುದು ಮತ್ತು ಇದರೊಂದಿಗೆ ವಿವಿಧ ಅಸ್ತ್ರ-ಶಸ್ತ್ರಗಳನ್ನು ಉಪಯೋಗಿಸಲಾಗಬಹುದು. ಸಂಚಾರಸಾರಿಗೆ ಧ್ವಂಸವಾಗಿ, ಜೀವನಾವಶ್ಯಕ ವಸ್ತುಗಳ ಪೂರೈಕೆಗಳು ಕಡಿತವಾಗುವುದು, ವಿದ್ಯುತ್ ನಿಲುಗಡೆಯಾಗುವುದು, ನೀರು ಪೂರೈಕೆಯ ಮೇಲೆ ಪರಿಣಾಮವಾಗುವುದು, ಸೋಂಕು ರೋಗಗಳು ಹರಡುವುದು, ಡಾಕ್ಟರ್ ಮತ್ತು ಔಷಧಕ್ಕಾಗಿ ಪರದಾಟವಾಗುವುದು, ಇಂತಹ ನೂರಾರು ಪ್ರಕಾರಗಳು ಆ ಸಮಯದಲ್ಲಿ ಘಟಿಸಬಹುದು. ಆ ಸ್ಥಿತಿಯಲ್ಲಿ ಸರಕಾರೀ ಜಿಲ್ಲಾವ್ಯವಸ್ಥೆ ಸಾಕಾಗಬಹುದು, ಎಂದು ಊಹಿಸುವುದು ತಪ್ಪಾಗಬಹುದು. ಕೊರೋನಾ ಎಂದರೇನು ಎಂಬುದು ತಿಳಿಯದಿರುವಾಗ ಆರಂಭಿಕ ಹಂತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಊರುಬಿಟ್ಟು ಹೊರಟರು, ಆಗ ನಾವೆಲ್ಲರೂ ಅನುಭವಿಸಿದ ಸ್ಥಿತಿಯನ್ನು ನೆನಪಿಸಿಕೊಂಡರೆ ಈ ಹೇಳಿಕೆಯ ಅರ್ಥ ಅರಿವಾಗುವುದು ಮತ್ತು ಜಿಲ್ಲಾವ್ಯವಸ್ಥೆಗೆ ಎಲ್ಲವನ್ನು ನಿಯಂತ್ರಿಸಲು ಅಸಾಧ್ಯವೆಂಬುದು ಅರಿವಾಗುವುದು.

ಅಪತ್ಕಾಲಕ್ಕಾಗಿ ಸರಕಾರಿ ಸ್ತರದಲ್ಲಿ ಆವಶ್ಯಕವಿರುವ ವಿವಿಧ ಪ್ರಕಾರದ ಸಿದ್ಧತೆಗಳು

‘ರಾಷ್ಟ್ರೀಯ ಆಪತ್ತು ವ್ಯವಸ್ಥಾಪನೆ ಕಾನೂನು ೨೦೦೫ರ ಅಂತರ್ಗತ ನೀಡಿರುವ ಅಧಿಕಾರಗಳನ್ನು ಉಪಯೋಗಿಸುತ್ತಾ ಜಿಲ್ಲಾ ಆಡಳಿತ ವ್ಯವಸ್ಥೆ ಆಪತ್ಕಾಲದ ಎಲ್ಲ ವಿಷಯದಲ್ಲಿನ ನಿರ್ಣಯಗಳನ್ನು ತೆಗೆದುಕೊಳ್ಳುತ್ತವೆ. ಉದಾಹರಣೆಗಾಗಿ ಈಗ ಕೊರೋನಾದ ಪ್ರಸಾರವನ್ನು ತಡೆಗಟ್ಟಲು ನೇರವಾಗಿ ಸಂಚಾರನಿಷೇಧ, ಖಾಸಗಿ ಆಸ್ಪತ್ರೆಗಳನ್ನು ವಶಪಡಿಸಿಕೊಳ್ಳುವಂತಹ ನಿರ್ಣಯಗಳನ್ನು ಆವಶ್ಯಕವಿರುವ ಸಮಯದಲ್ಲಿ ತೆಗೆದುಕೊಳ್ಳಲಾಯಿತು. ಆಪತ್ಕಾಲದಲ್ಲಿ ಜಿಲ್ಲಾ ವಿಪತ್ತು ವ್ಯವಸ್ಥಾಪನೆ ಪ್ರಾಧಿಕರಣ ಇದೇ ಪದ್ಧತಿಯಲ್ಲಿ ಕಾರ್ಯನಿರತವಾಗಿರುತ್ತದೆ. ಜಿಲ್ಲಾಧಿಕಾರಿಗಳು ಪ್ರಾಧಿಕರಣದ ಪದಸಿದ್ಧ ಅಧ್ಯಕ್ಷರಾಗಿರುತ್ತಾರೆ. ಮುಂಬರುವ ಕಾಲದಲ್ಲಿ ಯಾವಾಗ ಯುದ್ಧಜನ್ಯ ಸ್ಥಿತಿಯಿಂದ ಜನಜೀವನದ ಮೇಲೆ ಪರಿಣಾಮವಾಗುವುದೋ, ಆಗ ಈ ಪ್ರಾಧಿಕರಣದ ಮೂಲಕ ಎಲ್ಲ ವ್ಯವಸ್ಥೆಗಳನ್ನು ನಿರ್ವಹಿಸಲಾಗುವುದು. ಪ್ರಸಂಗಾನುಸಾರ ಕಾರ್ಯವನ್ನು ವ್ಯಾಪಕ ಸ್ಥರದಲ್ಲಿ ನಿರ್ವಹಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ದಿಂದ ಆ ಕಾಲದಲ್ಲಿ ಇನ್ನೂ ಹೆಚ್ಚಿನ ಸ್ವತಂತ್ರ ಅಧಿಕಾರವನ್ನು ನೀಡಲಾಗುವುದು. ಆದರೂ ಆಪತ್ಕಾಲದಲ್ಲಿ ಜಿಲ್ಲಾ ನಿಯಂತ್ರಣ ಕಕ್ಷೆ ಸುಸಜ್ಜಿತವಾಗಿರುವುದು (ಅಪ್‌ಟುಡೇಟ್) ಆಗಿರುವುದು, ವಯರ್‌ಲೆಸ್ ಸಂದೇಶ ವ್ಯವಸ್ಥೆ ಅಧಿಕಾಧಿಕ ಸಕ್ಷಮ ಆಗಿರುವುದು, ಪ್ರತಿಯೊಂದು ಸಂಕಟದಿಂದ ಜನರನ್ನು ರಕ್ಷಿಸಲು ತರಬೇತಿ ಇರುವ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಇರುವುದು, ರಸಾಯನ, ಗ್ಯಾಸ್ ಅಥವಾ ಸ್ಫೋಟಕಗಳನ್ನು ನಿರ್ವಹಿಸುವ ತಜ್ಞರ ತಂಡವನ್ನು ಸಜ್ಜಾಗಿಡುವುದು, ಎಲ್ಲ ಪ್ರಕಾರದ ವಾಹನಗಳು, ಸೌರಇಂಧನದ ಉಪಕರಣಗಳು, ವಿದ್ಯುತ್ ಜನರೇಟರ್ಗಳನ್ನು ಸುಸಜ್ಜಿತವಾಗಿರುವುದು, ಆಣೆಕಟ್ಟು ಮತ್ತು ಹರಿಯುವ ನೀರಿನ ಪರಿಸರದಲ್ಲಿ ಖಾಸಗಿ ಮತ್ತು ಸರಕಾರಿ ಬೋಟ್ ಗಳನ್ನು ತಯಾರಿಟ್ಟು ಸಕ್ಷಮವಾಗಿ ಈಜುವವರ ಮಾಹಿತಿಯನ್ನು ಉಪಲಬ್ಧಗೊಳಿಸಿರುವುದು, ಜಿಲ್ಲೆಯ ಆಸ್ಪತ್ರೆಯಲ್ಲಿ ನಿಯಂತ್ರಣ ಕಕ್ಷೆ ಸುಸಜ್ಜವಾಗಿರುವುದು, ಉಪಜಿಲ್ಲಾ, ಗ್ರಾಮೀಣ ಮತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಅಂಬ್ಯುಲೆನ್ಸ್‌ಗಳನ್ನು ಸಿದ್ಧವಿಡುವುದು ಇಂತಹ  ಎಲ್ಲ ಸಿದ್ಧತೆಗಳನ್ನು ಜಿಲ್ಲಾ ವ್ಯವಸ್ಥಾಪನೆಯು ಈಗಿಂದಲೇ ಮಾಡಿಡಬೇಕು. – ಶ್ರೀ. ಯೋಗೇಂದ್ರ ಜೋಶಿ.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಪತ್ಕಾಲದ ಬಗ್ಗೆ ಮಾಡಲಾಗುತ್ತಿರುವ ಜನಜಾಗೃತಿ

ವಿವಿಧ ಸೇವಾಭಾವಿ ಸಂಸ್ಥೆಗಳು, ಸಂಘಟನೆಗಳಿಗಿಂತಲೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಘಟನೆಗಳು ಈ ಕಾರ್ಯವನ್ನು ಈ ಹಿಂದೆಯೇ ಆರಂಭಿಸಿವೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಕಳೆದ ೧೫ ವರ್ಷಗಳಿಂದ ಈ ಘೋರ ಆಪತ್ಕಾಲದ ಬಗ್ಗೆ ಹೇಳುತ್ತಾ ಬಂದಿದ್ದಾರೆ. ಪ್ರಥಮೋಪಚಾರವೆಂದರೇನು ? ರೋಗಿಗಳನ್ನು ಹೇಗೆ ನೋಡಿಕೊಳ್ಳಬೇಕು ? ಇತ್ಯಾದಿ ತರಬೇತಿಯನ್ನು ಸಂಕಟಕಾಲದಲ್ಲಿ ನೀಡಿ ಸ್ವಯಂಸೇವಕರನ್ನು ತಾತ್ಕಾಲಿಕವಾಗಿ ಹೇಗೆ ತಯಾರು ಮಾಡುವುದು ? ಎಂಬುದನ್ನು ಗುರುತಿಸಿ ಕಳೆದ ೫ ವರ್ಷಗಳಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಪ್ರಥಮೋಪಚಾರ ವರ್ಗ ಮತ್ತು ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ. ಈಗ ಕೂಡ ಕೆಲವು ತಿಂಗಳುಗಳಿಂದ ‘ಸನಾತನ ಪ್ರಭಾತದ ಮೂಲಕ ಮತ್ತು ಗ್ರಂಥ ಗಳನ್ನು ಪ್ರಕಾಶಿಸಿ ಆಪತ್ಕಾಲದ ವಿಷಯದಲ್ಲಿ ವಿಶೇಷ ಜನಜಾಗೃತಿ ಮಾಡಲಾಗುತ್ತಿದೆ. ಯುದ್ಧದ ಕಾಲದಲ್ಲಿ ವಿದ್ಯುತ್, ಇಂಧನ, ಗ್ಯಾಸ್, ಸಂಚಾರಸಾರಿಗೆ, ದೂರವಾಣಿ ಸಂಪರ್ಕವ್ಯವಸ್ಥೆ ಮತ್ತು ಆರ್ಥಿಕ ಉತ್ಪನ್ನಗಳ ಅಭಾವ ನಿರ್ಮಾಣವಾಗಬಹುದು. ಆ ಸ್ಥಿತಿಯಲ್ಲಿ ಹೇಗಿರಬಹುದು ? ರಾಷ್ಟ್ರೀಯ ಸುರಕ್ಷಾ ಮತ್ತು ಆಡಳಿತಕ್ಕೆ ಸಹಾಯದ ದೃಷ್ಟಿಕೋನದಿಂದ ಹೇಗೆ ಕಾರ್ಯವನ್ನು ಮಾಡಬಹುದು ? ಎನ್ನುವ ವಿಷಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಭ್ಯಾಸಪೂರ್ಣ ಮಾರ್ಗದರ್ಶನವನ್ನು ಮಾಡಲಾಗುತ್ತದೆ. (ಯುದ್ಧಸನ್ನದ್ಧ ಕಾಲದಲ್ಲಿ ಅಂದರೆ ಆಪತ್ಕಾಲದಲ್ಲಿ ಕಠಿಣ ಪರಿಸ್ಥಿತಿಯು ಹೇಗಿರಬಹುದು, ಎಂದು ತಿಳಿದುಕೊಳ್ಳುವ ಜಿಜ್ಞಾಸೆಯಿರುವವರು  ಇದರ ಲೇಖನಗಳನ್ನು ಸನಾತನ ಸಂಸ್ಥೆಯ

ಜಾಲತಾಣದಲ್ಲಿ : www.sanatan.org/mr/natural-disasters-and-survival-guide ‘ಆನ್‌ಲೈನ್’ ಓದಬಹುದು.)