ದತ್ತನ ಪೂಜನೀಯ ರೂಪವಾದ ಔದುಂಬರ ವೃಕ್ಷದ ಮಹತ್ವ

೧.  ದತ್ತನ ಪೂಜನೀಯ ರೂಪ. ಅದರಲ್ಲಿ ದತ್ತತತ್ತ್ವವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

೨. ಕರ್ಮಕಾಂಡ ಮತ್ತು ಉಪಾಸನಾಕಾಂಡಕ್ಕನುಸಾರ ಸಾಧನೆಯನ್ನು ಮಾಡುವ ಜೀವದ ಒಲವು ದತ್ತತತ್ತ್ವದ ಪ್ರತೀಕವಾಗಿರುವ ಬಾಹ್ಯ ಔದುಂಬರದ ಕಡೆಗೆ ಇರುತ್ತದೆ. ಇದರಿಂದ ಆಧ್ಯಾತ್ಮಿಕ ಉನ್ನತಿಯು ನಿಧಾನವಾಗಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ಆಗುತ್ತದೆ. ಜ್ಞಾನ ಕಾಂಡದಲ್ಲಿ ಆಂತರಿಕ ಔದುಂಬರದ, ಅಂದರೆ ಆಂತರಿಕ ಆಧ್ಯಾತ್ಮಿಕ ಪ್ರವಾಸದ ಅರಿವಿರುತ್ತದೆ ಮತ್ತು ಕುಂಡಲಿನಿಯನ್ನು ಸಹಸ್ರಾರಚಕ್ರದಲ್ಲಿ ಸ್ಥಿರಗೊಳಿಸಿ ನಿರ್ಗುಣದ ಅನುಭೂತಿಯನ್ನು ಪಡೆಯಲು ಬರುತ್ತದೆ.

೩. ಔದುಂಬರದ ಹೂವುಗಳೆಂದರೆ ನಿರ್ಗುಣ ತತ್ತ್ವದ ಅಥವಾ ನಿರಾಕಾರ ಪರಮೇಶ್ವರನ ಅನುಭೂತಿಯಾಗಿದೆ. ಅಂದರೆ ಯಾವುದನ್ನು ಕಣ್ಣುಗಳಿಂದ ನೋಡಲು ಆಗುವುದಿಲ್ಲವೋ, ಆದರೆ ಅನುಭವಿಸಲು ಬರುತ್ತದೆಯೋ, ಅದುವೇ ನಿರ್ಗುಣ ತತ್ತ್ವ ಅಥವಾ ನಿರಾಕಾರ ಪರಮೇಶ್ವರನ ಅನುಭೂತಿ.

೪. ಔದುಂಬರದ ಹಣ್ಣುಗಳೆಂದರೆ ನಿರ್ಗುಣದ ಅನುಭೂತಿ