
ಅ. ಯಾವುದೇ ರೀತಿಯ ತೊಂದರೆ ಆಗದಿದ್ದರೆ ಮುಂದೆ ತೊಂದರೆ ಆಗಬಾರದೆಂದು, ಸ್ವಲ್ಪ ತೊಂದರೆ ಇದ್ದರೆ ಪ್ರತಿದಿನ ೧ ರಿಂದ ೨ ಗಂಟೆ ‘ಶ್ರೀ ಗುರುದೇವ ದತ್ತ ‘ ಈ ನಾಮಜಪವನ್ನು ಮಾಡಬೇಕು.

ಆ. ಮಧ್ಯಮ ತೊಂದರೆ ಇದ್ದರೆ ಕುಲದೇವರ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೨ ರಿಂದ ೪ ಗಂಟೆ ಮಾಡಬೇಕು. ಅದರೊಂದಿಗೆ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆ ಹಾಕಬೇಕು ಹಾಗೂ ಅಲ್ಲಿ ಕುಳಿತು ಒಂದೆರಡು ಮಾಲೆ ಜಪ ಮಾಡಬೇಕು. ಇದನ್ನು ಒಂದು ವರ್ಷದವರೆಗಾದರೂ ಮಾಡಬೇಕು. ಅನಂತರ ಮೂರು ಮಾಲೆ ಜಪವನ್ನು ನಿಯಮಿತವಾಗಿ ಮಾಡಬೇಕು.
ಇ. ತೀವ್ರ ತೊಂದರೆಯಿದ್ದರೆ ಕುಲದೇವತೆಯ ನಾಮಜಪದ ಜೊತೆಗೆ ‘ಶ್ರೀಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೪ ರಿಂದ ೬ ಗಂಟೆ ಮಾಡಬೇಕು. ಯಾವುದಾದರೊಂದು ಜ್ಯೋತಿರ್ಲಿಂಗದ ಸ್ಥಳಕ್ಕೆ ಹೋಗಿ ನಾರಾಯಣ ನಾಗಬಲಿ, ನಾಗಬಲಿ, ತ್ರಿಪಿಂಡಿ ಶ್ರಾದ್ಧ, ಕಾಳಸರ್ಪ ಶಾಂತಿ ಇತ್ಯಾದಿ ವಿಧಿ ಮಾಡಬೇಕು. ಅದರ ಜೊತೆಗೆ ಯಾವುದಾದರೊಂದು ದತ್ತ ಕ್ಷೇತ್ರದಲ್ಲಿದ್ದು ಸಾಧನೆ ಮಾಡಬೇಕು ಅಥವಾ ಸಂತರ ಸೇವೆ ಮಾಡಿ ಅವರ ಆಶೀರ್ವಾದವನ್ನು ಪಡೆಯಬೇಕು.
ಈ. ಪಿತೃಪಕ್ಷದಲ್ಲಿ ದತ್ತನ ನಾಮಜಪ ಮಾಡುವುದರಿಂದ ಪಿತೃಗಳ ಮುಂದಿನ ಪ್ರವಾಸಕ್ಕೆ ಗತಿ ಪ್ರಾಪ್ತಿಯಾಗುತ್ತದೆ; ಆದ್ದರಿಂದ ಈ ಅವಧಿಯಲ್ಲಿ ಪ್ರತಿದಿನ ೬ ಗಂಟೆ (೭೨ ಮಾಲೆ) ದತ್ತನ ನಾಮಜಪ ಮಾಡಬೇಕು. ನಾಮಜಪದ ಹೊರತು ಉಳಿದ ಸಮಯದಲ್ಲಿ ಪ್ರಾರಬ್ಧದಿಂದ ತೊಂದರೆಯಾಗಬಾರದೆಂದು ಹಾಗೂ ಆಧ್ಯಾತ್ಮಿಕ ಉನ್ನತಿಯಾಗಲು ಸಾಮಾನ್ಯ ಜನರು ಹಾಗೂ ಪ್ರಾಥಮಿಕ ಹಂತದ ಸಾಧಕರು ತಮ್ಮ ಕುಲದೇವತೆಯ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.
ದತ್ತಾತ್ರೇಯರ ಇತರ ತೀರ್ಥಕ್ಷೇತ್ರಗಳು
ಶ್ರೀ ದತ್ತಜಯಂತಿ (ಡಿಸೆಂಬರ್ ೧೪)
ಭಗವಾನ ದತ್ತಾತ್ರೇಯರು ಶಾಶ್ವತವಾಗಿ ನೆಲೆಸಿದ ಹಾಗೂ ೧೨ ಸಾವಿರ ವರ್ಷಗಳ ತಪಶ್ಚರ್ಯದಿಂದ ಸಿದ್ಧಪಡಿಸಿದ ‘ಗಿರ್ನಾರ್ ಪರ್ವತ’ಕ್ಕೆ ಪ್ರದಕ್ಷಿಣೆ ಹಾಕಿದ ಪುಣೆಯ ಶ್ರೀ. ಮಯುರೇಶ ಅನಗರಕರ್ !
ವರದಹಳ್ಳಿಯ ಪ.ಪೂ. ಶ್ರೀಧರಸ್ವಾಮಿ ಜಯಂತಿ
ಮಾಣಿಕಪ್ರಭು ಪುಣ್ಯತಿಥಿ