ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರ ಮಠದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಪ್ರಸ್ತುತ ಪಡಿಸಿದ ಗಾಯನಸೇವೆ

ಬಿಂದೂ ಮಾಧವ ಶರ್ಮಾ ಸ್ವಾಮೀಜಿ

‘೯.೧೨.೨೦೧೯ ರಂದು ಶ್ರೀ ಕ್ಷೇತ್ರ ಬೆಲಗೂರಿನ ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರ ಮಠದಲ್ಲಿ ‘ಮಹಾಬ್ರಹ್ಮ ರಥೋತ್ಸವದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಗಾಯನಸೇವೆಯನ್ನು ಪ್ರಸ್ತುತ ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಸೌ. ಅನಘಾ ಜೋಶಿಯವರು ಭಕ್ತಿಗೀತೆಗಳನ್ನು ಮತ್ತು ಮಹಾರಾಷ್ಟ್ರದ ಠಾಣೆ ಎಂಬಲ್ಲಿನ ಶ್ರೀ. ಪ್ರದೀಪ ಚಿಟಣಿಸ ಇವರು ಶಾಸ್ತ್ರೀಯ ಗಾಯನವನ್ನು ಪ್ರಸ್ತುತ ಪಡಿಸಿದ್ದರು. ಈ ಸಮಯದಲ್ಲಿ ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರು ತಮ್ಮ ಭಕ್ತರ ಮೂಲಕ ‘ಹನುಮಂತನಿಗೆ ನಿಮ್ಮ ಗಾಯನವು ಇಷ್ಟವಾಯಿತು. ನಿಮ್ಮ ಗಾಯನದ ಕಾರ್ಯಕ್ರಮವು ಚೆನ್ನಾಗಿ ಆಯಿತು. ನಿಮ್ಮ ಉತ್ತರ ಹಿಂದುಸ್ಥಾನಿ ಸಂಗೀತವನ್ನು ಕೇಳುವಾಗ ‘ನಾನು ಧ್ವನಿಸುರುಳಿಯನ್ನು (ಕ್ಯಾಸೆಟ್) ಕೇಳುತ್ತಿದ್ದೇನೆ, ಎಂದು ನನಗೆ ಅನಿಸಿತು, ಎಂಬ ಸಂದೇಶವನ್ನು ಕಳುಹಿಸಿದರು. ಅವರು ತಮ್ಮ ಭಕ್ತರ ಪರವಾಗಿ ಈ ಕಾರ್ಯಕ್ರಮದ ನಿರೂಪಣೆ, ಗಾಯನ ಮತ್ತು ವಾದನ ಮಾಡಿದ ಸಾಧಕರಿಗೆ ಶಾಲು ಮತ್ತು ಫಲಗಳನ್ನು ನೀಡಿ ಸತ್ಕರಿಸಿದ್ದರು.

– ಸೌ. ಅನಘಾ ಜೋಶಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೧೨.೨೦೧೯)