೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

ಪರಾತ್ಪರ ಗುರು ಡಾ. ಆಠವಲೆ
ಪೂ. ಶಿವಾಜಿ ವಟಕರ

‘ನನಗೆ ೧೯೮೯ ರಿಂದ ಮುಂಬೈಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಭ್ಯಾಸವರ್ಗಗಳಲ್ಲಿ ಸಹಭಾಗಿಯಾಗುವ ಭಾಗ್ಯ ಲಭಿಸಿತು. ಅವರು ತಮ್ಮ ನಿವಾಸದಲ್ಲಿ ಸಮ್ಮೋಹನ-ಉಪಚಾರ ‘ಚಿಕಿತ್ಸಾಲಯ’ದ ಒಂದು ಕೋಣೆಯಲ್ಲಿ ಅಭ್ಯಾಸ ವರ್ಗ ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುತ್ತಿದ್ದರು. ಈಗ ಅವರು ವಿಶ್ವರೂಪವನ್ನು ಧರಿಸಿದ್ದು ಮಹರ್ಷಿಗಳು ಹೇಳಿದಂತೆ, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ವು ಸಂಪೂರ್ಣ ಜಗತ್ತಿಗಾಗಿ ಒಂದು ಆದರ್ಶ ಗುರುಕುಲ ಮತ್ತು ದೀಪಸ್ತಂಭವಾಗುತ್ತಿದೆ. ಆದುದರಿಂದ ನನ್ನ ಆನಂದವು ಈಗ ಗಗನದಲ್ಲಿ ಹಿಡಿಸಲಾರದಷ್ಟಾಗಿದೆ. ಪರಾತ್ಪರ ಗುರು ಡಾಕ್ಟರರ ಅಭ್ಯಾಸವರ್ಗಗಳಲ್ಲಿ ಕಲಿಯುವಾಗ, ಹಾಗೆಯೇ ಸೇವೆ ಮತ್ತು ಪ್ರಸಾರವನ್ನು ಮಾಡುವಾಗ ನನಗೆ ಅವರನ್ನು ಬಹಳ ಹತ್ತಿರದಿಂದ ನೋಡಲು ಮತ್ತು ಅನುಭವಿಸಲು ಸಿಕ್ಕಿತ್ತು. ಅವರ ಅಭ್ಯಾಸವರ್ಗದಿಂದಲೇ ನಾನು ‘ಅಧ್ಯಾತ್ಮಶಾಸ್ತ್ರ ಮತ್ತು ಸಾಧನೆ’ಯನ್ನು ಆರಂಭಿಸಿದೆನು. ಮೊದಲ ಭೇಟಿಯಿಂದಲೇ ನನಗೆ ‘ಅವರು ಒಬ್ಬ ಅಸಾಮಾನ್ಯ ಮಹಾಪುರುಷರಾಗಿದ್ದಾರೆ’ ಮತ್ತು ‘ನನ್ನ ಸರ್ವಸ್ವರಾಗಿದ್ದಾರೆ’, ಎಂದು ಅನಿಸಿತ್ತು.

ಮಹರ್ಷಿಗಳು ಮತ್ತು ಉಚ್ಚ ಕೋಟಿಯ ಸಂತರು ಅವರನ್ನು ಗುರುತಿಸಿ ‘ಅವರು ಸಾಕ್ಷಾತ್ ವಿಷ್ಣುವಿನ ಅವತಾರವಾಗಿದ್ದಾರೆ’, ಎಂದು ಹೇಳಿದ್ದಾರೆ. ಆರಂಭದಲ್ಲಿ ನನಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಕ್ಷಮೆಯಾಚನೆ ಮಾಡುತ್ತೇನೆ. ಅವರು ಅಧ್ಯಾತ್ಮಶಾಸ್ತ್ರದಲ್ಲಿನ ಮುಖ್ಯ ಮತ್ತು ಆವಶ್ಯಕ ಜ್ಞಾನವನ್ನು ಅವರ ಅಭ್ಯಾಸವರ್ಗಗಳು, ಸತ್ಸಂಗಗಳು ಮತ್ತು ಗ್ರಂಥಗಳ ಮೂಲಕ ಕಲಿಸಿದ್ದಾರೆ. ಅವರು ಮೊದಲು ಸ್ವತಃ ತಮ್ಮ ಆಚರಣೆಯಿಂದ, ಮಾತುಗಳಿಂದ ಮತ್ತು ಕೃತಿಗಳಿಂದ ಕಲಿಸಿದರು ‘ಬೊಲೆ ತೈಸಾ ಚಾಲೆ, ತ್ಯಾಚಿ ವಂದಾವಿ ಪಾವೂಲೆ |’, ಎಂಬ ಮರಾಠಿ ವಚನಕ್ಕನುಸಾರ ನಾನು ಅವರ ಚರಣಗಳಲ್ಲಿ ನಿರಂತರ ನತಮಸ್ತಕನಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಈಗ ನನ್ನ ವಯಸ್ಸು ೭೧, ಆದುದರಿಂದ ನನಗೆ ಕೆಲವು ವಿಷಯಗಳು ನೆನಪಾಗುವುದಿಲ್ಲ. ‘ನಾನು ಸನಾತನ ಸಂಸ್ಥೆಯ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಕಳೆದ ೨೭ ವರ್ಷಗಳಿಂದ ಸಾಧನೆಯನ್ನು ಮಾಡು ತ್ತಿದ್ದೇನೆ, ಎಂದು ಯಾವಾಗಲೂ ಹೇಳುತ್ತಿರುತ್ತೇನೆ; ಆದರೆ ‘ಅದು ಯಾವುದರ ಮೇಲಿನಿಂದ ?’, ಎಂದು ನನಗೆ ಆಗಾಗ ಸಂಶಯ ಬರುತ್ತಿತ್ತು. ‘೧೧.೨.೧೯೮೯ ರಿಂದ ಪರಾತ್ಪರ ಗುರು ಡಾಕ್ಟರರು ಏನು ಕಲಿಸಿದರು ?’, ಎಂಬ ಟಿಪ್ಪಣಿಗಳ ವಹಿಗಳು ನನಗೆ ದೊರಕಿದ ನಂತರ ನಾನು ಹೇಳುವುದು ಸರಿ ಅನಿಸಿತು. ಆಗ ನನ್ನ ಭಾವಜಾಗೃತವಾಗಿ ನನಗೆ ತುಂಬಾ ಆನಂದವಾಯಿತು. ಆ ಟಿಪ್ಪಣಿಗಳ ವಹಿಗಳ ಆಧಾರದಲ್ಲಿ ನಾನು ಮುಂದಿನ ಮಾಹಿತಿಯನ್ನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕೊಡುತ್ತಿದ್ದೇನೆ.

ಕಳೆದವಾರ ನಾವು ಅಭ್ಯಾಸವರ್ಗದ ಕೆಲವು ಅಂಶಗಳನ್ನು ನೋಡಿದೆವು. ಇಂದು ನಾವು ಅದರ ಮುಂದಿನ ಅಂಶಗಳನ್ನು ನೋಡೋಣ.

೪. ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ವಿವಿಧ ಅಭ್ಯಾಸವರ್ಗಗಳಲ್ಲಿನ ಅಂಶಗಳು

೧. ಉಪನಿಷತ್ತುಗಳಿಂದ ಜ್ಞಾನವು ಸಿಗುತ್ತದೆ ಮತ್ತು ಅವುಗಳ ಚಿಂತನೆಯನ್ನು ಮಾಡಲು ಬರುತ್ತದೆ; ಆದರೆ ಈಶ್ವರನನ್ನು ಅನುಭವಿಸಲು ಸಾಧನೆಯನ್ನೇ ಮಾಡಬೇಕಾಗುತ್ತದೆ.

೨. ಬೀಜವು ವೃಕ್ಷವಾಗಿ ರೂಪಾಂತರವಾಗಲು ತನ್ನ ಸರ್ವಸ್ವವನ್ನು ಕಳೆದುಕೊಳ್ಳಬೇಕಾಗುತ್ತದೆ, ಹಾಗೆಯೇ ಮನುಷ್ಯನು ತನ್ನ  ಅಹಂಕಾರವನ್ನು ತ್ಯಜಿಸಿದಾಗಲೇ ಅವನ ಪ್ರಗತಿಯಾಗುತ್ತದೆ ಇಲ್ಲದಿದ್ದರೆ ಮೋಕ್ಷದೆಡೆಗಿನ ಪ್ರಗತಿ ಕುಂಠಿತವಾಗುತ್ತದೆ

೩. ಸಂಸಾರವು ಪರಮಾರ್ಥವನ್ನು ಕಲಿಸಲಿಕ್ಕಾಗಿಯೇ ಇದೆ. ಪತ್ನಿಯಿಂದ ವಾಸನೆಯ ಮೇಲೆ ಮತ್ತು ಮಕ್ಕಳಿಂದ ಕ್ರೋಧದ ಮೇಲೆ ನಿಯಂತ್ರಣವನ್ನಿಡಲು ಸಾಧ್ಯವಾಗುತ್ತದೆ.

೪. ಪರಾತ್ಪರ ಗುರು ಡಾ. ಆಠವಲೆಯವರು ನಮಗೆ, “ನಾನು ಪ್ರಥಮ ಬಾರಿ ಶೂನ್ಯಾವಸ್ಥೆ ಅನುಭವಿಸಿದೆ. ಯೋಗದಲ್ಲಿ ಧ್ಯಾನವನ್ನು ಮಾಡಿ ಮತ್ತು ತುಂಬಾ ಪ್ರಯತ್ನಿಸಿದಾಗ ಶೂನ್ಯಾವಸ್ಥೆಯು ಲಭಿಸುತ್ತದೆ; ಆದರೆ ಭಕ್ತಿಮಾರ್ಗದಲ್ಲಿ ಅದು ತಾನಾಗಿಯೇ ಲಭಿಸುತ್ತದೆ. ಶೂನ್ಯಾವಸ್ಥೆ ಅಂದರೆ ಮನೋಲಯ ಮತ್ತು ಕಾರಣದೇಹ ನಾಶವಾಗುವುದು. ಶೂನ್ಯವೆಂದರೆ ಆಕಾಶತತ್ತ್ವ !” ಎಂದು ಹೇಳಿದರು.

೫. ಅಧ್ಯಾತ್ಮದಲ್ಲಿ ವಿರೋಧಾಭಾಸಗಳು ಇರುತ್ತವೆ; ಆದರೆ ಅವುಗಳಲ್ಲಿ ಸಮನ್ವಯವನ್ನು ಸಾಧಿಸಿದರೆ, ಅಧ್ಯಾತ್ಮವು ತಿಳಿಯುತ್ತದೆ.

೬. ಅಧ್ಯಾತ್ಮದಲ್ಲಿ ಇತರರೊಂದಿಗೆ ತುಲನೆ ಮಾಡಬಾರದು.

೭. ಇತರ ಸಾಧಕರ ವರ್ತನೆ ಯನ್ನು ಟೀಕಿಸಬಾರದು.

೮. ಚೌಕಟ್ಟಿನ ಹೊರಗೆ ಹೋಗಿ ವಿಚಾರ ಮಾಡಬೇಕು.

೯. ‘ಹೇ ವಿಶ್ವಚಿ ಮಾಝೆ ಘರ’, (ಈ ಜಗತ್ತೇ ನನ್ನ ಮನೆ) ಎಂಬುದನ್ನು ಕಲಿಸಲು ಪರಾತ್ಪರ ಗುರು ಡಾಕ್ಟರರು ೯ ಬಿಂದು, ೩ ನೇರ ಮತ್ತು ೩ ಅಡ್ಡ ಸಾಲುಗಳಲ್ಲಿ ಕೈಯನ್ನು ಎತ್ತದೇ ೪ ರೇಖೆಗಳನ್ನು ಜೋಡಿಸುವ ಒಗಟನ್ನು ಹಾಕಿದರು. ಈ ೯ ಬಿಂದುಗಳನ್ನು ಜೋಡಿಸಲು ಬಿಂದುಗಳ ಹೊರಗೆ ಹೋಗಿ ಅವುಗಳನ್ನು ಜೋಡಿಸಬೇಕಾಗುತ್ತದೆ. ಆಗಲೇ ಈ ಬಿಂದುಗಳನ್ನು ಜೋಡಿಸಬಹುದು ಎಂಬುದನ್ನು ಅವರು ಸ್ವತಃ ಚಿತ್ರವನ್ನು ಬಿಡಿಸಿ ತೋರಿಸಿದರು. ಇದರ ಮೇಲಿನಿಂದ ಗಮನಕ್ಕೆ ಬರುವುದೇನೆಂದರೆ, ಈ ‘ವಿಶ್ವವೇ ನನ್ನ ಮನೆ, ಎಂಬುದನ್ನು ತಿಳಿದುಕೊಳ್ಳಬೇಕಾದರೆ ವಿಚಾರಗಳ ಚೌಕಟ್ಟಿನಿಂದ ಹೋಗಬೇಕು ಆಗಲೇ ಅದು ಸಾಧ್ಯವಾಗುತ್ತದೆ.

ಮೊದಲು ಮೇಲಿನಂತೆ ೯ ಬಿಂದುಗಳನ್ನು ತೆಗೆದರು. ‘ಕೈಯನ್ನು ಎತ್ತದೇ ೯ ಬಿಂದುಗಳನ್ನು ಜೋಡಿಸಲು ಪ್ರಯತ್ನಿಸಿದರು. ಆದರೆ ಜೋಡಿಸಲು ಆಗುತ್ತಿರಲಿಲ್ಲ; ಮಾತ್ರ ಬಿಂದುಗಳ ೧, ೨, ೩, ೪, ೫ ರ ನಂತರ ಹೊರಗೆ ರೇಖೆಯನ್ನು ಎಳೆದು ಪುನಃ ೬ ನೇ ಬಿಂದುವನ್ನು ಜೋಡಿಸಬೇಕು. ಮುಂದೆ ೭, ೮ ಮತ್ತು ೯ ನೇ ಬಿಂದುಗಳನ್ನು ಜೋಡಿಸಬಹುದು.

ಸಾಮಾನ್ಯವಾಗಿ ವ್ಯಕ್ತಿಯು ‘ನಾನು ಮತ್ತು ನನ್ನ ಕುಟುಂಬ’ ಈ ಚೌಕಟ್ಟಿನಲ್ಲಿದ್ದು ವಿಚಾರ ಮಾಡುತ್ತಾನೆ, ಅಂದರೆ ಅವನಲ್ಲಿ ಸಂಕುಚಿತವೃತ್ತಿ ಇರುತ್ತದೆ. ‘ವಿಶಾಲತೆ’ ಈ ಈಶ್ವರೀ ಗುಣವನ್ನು ಮೈಗೂಡಿಸಿಕೊಳ್ಳಲು ಸಾಧಕನು ಈ ಚೌಕಟ್ಟಿನಿಂದ ಹೊರಗೆ ಹೋಗಿ ‘ರಾಷ್ಟ್ರ ಮತ್ತು ಧರ್ಮಕ್ಕಾಗಿ ನಾನು ಏನು ಮಾಡಬಹುದು ?’, ಎಂಬ ವಿಚಾರವನ್ನು ಮಾಡಬೇಕು’, ಇದನ್ನು ಈ ಮೇಲಿನ ಪ್ರಯೋಗದಿಂದ ಕಲಿಸಲಾಯಿತು.

೪ ಉ. ೨೨.೧೧.೧೯೯೧ : ಕಾವ್ಯಗಳನ್ನು ರಚಿಸುವ ಕವಿಗಳು, ಆಟಗಾರರು ಮತ್ತು ರಾಜಕಾರಣಿಗಳಲ್ಲಿನ ಕೆಲವರ ಆಧ್ಯಾತ್ಮಿಕ ಮಟ್ಟ ಶೇ. ೫೦ ರಿಂದ ೫೫ ರಷ್ಟಿರುತ್ತದೆ; ಏಕೆಂದರೆ ಅವರು ಹಿಂದೆ ಸಾಧನೆಯನ್ನು ಮಾಡಿರುತ್ತಾರೆ.  (ಮುಂದುವರೆಯುವುದು)

– (ಪೂ.) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ. (೧೬.೮.೨೦೧೭)