ಸಂತರು ನೀಡಿರುವ ಉದಾಹರಣೆಯಿಂದ ‘ಸಾಧನೆ ಮಾಡದಿರುವ ಮನುಷ್ಯನು ಪ್ರಾಣಿಯಂತಿದ್ದು ಅವನಿಗೆ ದಂಡ ಮತ್ತು ಭೇದ ಈ ನಿಯಮಗಳು ಅನ್ವಯಿಸುತ್ತದೆ’, ಎಂಬುದು ಸಾಧಕನ ಗಮನಕ್ಕೆ ಬರುವುದು

ಶ್ರೀ. ಧನಂಜಯ ರಾಜಹಂಸ

೧. ಪ್ರಾಣಿಗೆ ಶಿಕ್ಷಾಪದ್ಧತಿ ಅನುಸರಿಸಿದಾಗಲೇ ಅದು ಕೇಳುತ್ತದೆ, ಎಂದು ಸಂತರು ಹೇಳುವುದು

‘ಆಶ್ರಮದ ಭೇಟಿಯ ನಿಮಿತ್ತದಿಂದ ರಾಮನಾಥಿಯ (ಗೋವಾ) ಸನಾತನದ ಆಶ್ರಮಕ್ಕೆ ಸಾಧಕರೊಬ್ಬರು ಬಂದಿದ್ದರ. ಅವರು ೨೦೦೮ ರವರೆಗೆ ನೌಕರಿ ಮಾಡುತ್ತ ಪ್ರಸಾರಸೇವೆಯನ್ನು ಮಾಡುತ್ತಿದ್ದರು. ಕಾಲಾಂತರದಿಂದ ಅದು ಕಡಿಮೆಯಾಗುತ್ತಾ ಹೋಗಿ ಸಾಧನೆಯು ನಿಂತು ಹೋಯಿತು. ಅವರು ಸಹಜವಾಗಿ ಮಾತನಾಡುತ್ತಾ, ‘ನಿನ್ನೆ ಸಂತರ ಸತ್ಸಂಗದ ಯೋಗವು ಕೂಡಿ ಬಂದಿತು”, ಎಂದು ಹೇಳಿದರು. ಆಗ ನಾನು ಅವರಿಗೆ, “ಸಂತರು ಏನು ಹೇಳಿದರು ?’ ಎಂಬುದನ್ನು ಸ್ವಲ್ಪಮಟ್ಟಿಗೆ ಹೇಳಿ”, ಎಂದು ಕೇಳಿದೆನು. ಆಗ ಆ ಸಾಧಕರು, “ನನ್ನಿಂದ ಸಾಧನೆಯ ಕುರಿತು ಯಾವುದೇ ಪ್ರಯತ್ನಗಳಾಗುವುದಿಲ್ಲ,” ಎಂದು ಹೇಳಿದೆನು. ಅದಕ್ಕೆ ಸಂತರು ಮನುಷ್ಯ ಮತ್ತು ಪ್ರಾಣಿ ಇವುಗಳ ಉದಾಹರಣೆಯನ್ನು ಕೊಟ್ಟರು. ‘ಪ್ರಾಣಿಗೆ ಶಿಕ್ಷಾಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಆಗಲೇ ಅದು ಕೇಳುತ್ತದೆ’, ಎಂದು ಅವರು ಹೇಳಿದರು”, ಎಂದರು.

೨. ‘ಮನುಷ್ಯ ಮತ್ತು ಪ್ರಾಣಿ ಇವುಗಳ ಉದಾಹರಣೆಯಿಂದ ಸಂತರಿಗೆ ನಿಜವಾಗಲೂ ಏನು ಹೇಳುವುದಿದೆ ?’, ಎಂಬುದರ ಬಗ್ಗೆ ಆದ ಚಿಂತನೆ

೨ ಅ. ಮನುಷ್ಯ : ಯಾರು ಹಿತೋಪದೇಶವನ್ನು ಕೇಳಿ ಅದಕ್ಕನುಸಾರ ಕೃತಿ ಮಾಡಲು ಪ್ರಯತ್ತಿಸುತ್ತಾರೆಯೋ, ಅವರಿಗೆ ‘ಮನುಷ್ಯ’ನೆಂದು ಕರೆಯಲಾಗುತ್ತದೆ.

೨ ಆ. ಪ್ರಾಣಿ : ‘ಮನುಷ್ಯಜನ್ಮವು ಪ್ರಾಪ್ತಿಯಾದಾಗ ಯಾರಿಗೆ ಅದನ್ನು ಸಾರ್ಥಕಗೊಳಿಸಬೇಕು’, ಎಂದೆನಿಸುವುದಿಲ್ಲವೋ, ಅವರೆಲ್ಲ ಪ್ರಾಣಿಗಳಾಗಿಯೇ ಇರುತ್ತಾರೆ.

೨ ಇ. ಮನುಷ್ಯ ಮತ್ತು ಪ್ರಾಣಿಗಳು ಈ ಭೂಮಿಯ ಮೇಲೆ ಎಲ್ಲಡೆ ಓಡಾಡುತ್ತಿರುತ್ತಾರೆ. ಮನುಷ್ಯನಿಗೆ ದೇವರು ಯೋಗ್ಯ-ಅಯೋಗ್ಯ ವಿಚಾರಗಳನ್ನು ಮಾಡುವ ಬುದ್ಧಿಯನ್ನು ಕೊಟ್ಟಿದ್ದಾನೆ. ಇದನ್ನೇ ನಾವು ‘ವಿವೇಕ’ವೆಂದು ಹೇಳುತ್ತೇವೆ. ಪ್ರಾಣಿಗಳಿಗೆ ವಿವೇಕಬುದ್ಧಿ ಇರುವುದಿಲ್ಲ. ಹಾಗಾಗಿ ಅವರಿಗಾಗಿ ದಂಡ ಮತ್ತು ಭೇದ ಇವುಗಳನ್ನು ಅನುಸರಿಸಬೇಕಾಗುತ್ತದೆ. ಆಗಲೇ ಅವು ದಾರಿಗೆ ಬರುತ್ತವೆ. ದೇವರ ಕೃಪೆಯಿಂದ ಪ್ರಸಂಗಗಳಿಗನುಸಾರ ಆದ ಚಿಂತನೆಯನ್ನು ಕೃತಜ್ಞತಾಭಾವದಿಂದ ಅರ್ಪಿಸುತ್ತಿದ್ದೇನೆ.’ – ಶ್ರೀ. ಧನಂಜಯ ರಾಜಹಂಸ, ಸನಾತನ ಆಶ್ರಮ, ರಾಮನಾಥಿ, ಗೋವಾ.