ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ಬುದ್ಧಿಜೀವಿಗಳಿಗೆ, ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರ ಇದ್ದರೂ, ಬಾಹ್ಯ ವಸ್ತುಗಳ ಬಳಕೆಯಿಲ್ಲದೇ ಚಿಕ್ಕ ಚಿಕ್ಕ ಏಕ ಕೋಶದ ಪ್ರಾಣಿಯಷ್ಟೇ ಅಲ್ಲ; ಒಂದೇ ಒಂದು ಚಿಕ್ಕ ಕಲ್ಲನ್ನು ಸಹ ಸೃಷ್ಟಿಸಲು ಸಾಧ್ಯವಿಲ್ಲ. ತದ್ವಿರುದ್ಧವಾಗಿ ಈಶ್ವರನು ಲಕ್ಷಾಂತರ ಕೋಶಗಳುಳ್ಳ, ಮನುಷ್ಯನನ್ನು ಮತ್ತು ಅನಂತ ಕೋಟಿ ಬ್ರಹ್ಮಾಂಡಗಳನ್ನು ಸೃಷ್ಟಿಸಿದ್ದಾನೆ.’

ವಿಜ್ಞಾನಕ್ಕೆ ಹೆಚ್ಚಾಗಿ ಏನೂ ತಿಳಿಯದಿರುವುದರಿಂದಲೇ ಸತತ ಸಂಶೋಧನೆಗಳನ್ನು ಮಾಡುತ್ತಿರಬೇಕಾಗುತ್ತದೆ. ತದ್ವಿರುದ್ಧ  ಅಧ್ಯಾತ್ಮದಲ್ಲಿ ಎಲ್ಲವೂ ತಿಳಿದಿರುವುದರಿಂದ ಸಂಶೋಧನೆ ಮಾಡುವ ಅಗತ್ಯವಿಲ್ಲ.

‘ಸಾಧನೆಯಿಂದಾಗಿ ‘ದೇವರು ಬೇಕು’, ಎಂದೆನಿಸಿದಾಗ ‘ಪೃಥ್ವಿಯ ಮೇಲಿನ ಏನಾದರೂ ಬೇಕು’ ಎಂದು ಅನಿಸುವುದಿಲ್ಲ. ಆದ್ದರಿಂದ ಯಾರ ಬಗ್ಗೆಯೂ ಅಸೂಯೆ, ಮತ್ಸರ ಅಥವಾ ದ್ವೇಷವೆನಿಸುವುದಿಲ್ಲ, ಅದೇ ರೀತಿ ಇತರರೊಂದಿಗೆ ಅಂತರ, ಜಗಳಗಳು ಆಗುವುದಿಲ್ಲ.’

‘ಹಿಂದೂಗಳು ಮತಾಂತರವಾಗುವುದು ಈಶ್ವರಪ್ರಾಪ್ತಿಗಾಗಿ ಅಲ್ಲ, ಆರ್ಥಿಕ ಸುಖ-ಸೌಲಭ್ಯಗಳಿಗಾಗಿ. ಅಂತಹ ಜನರು ಹಿಂದೂ ಧರ್ಮದಲ್ಲಿಲ್ಲ, ಅದೇ ಒಳ್ಳೆಯದು ! ’

‘ವಿಜ್ಞಾನಕ್ಕೆ ಹೆಚ್ಚಾಗಿ ಏನೂ ಗೊತ್ತಿಲ್ಲದ ಕಾರಣ ಒಂದು ಸಿದ್ಧಾಂತವನ್ನು ಸಾಬೀತುಪಡಿಸಲು ಪುನಃ ಪುನಃ ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ಎಲ್ಲವೂ ತಿಳಿದಿರುವುದರಿಂದ, ಆ ರೀತಿ ಮಾಡಬೇಕಾಗಿಲ್ಲ. ಪ್ರಸ್ತುತ ಪೀಳಿಗೆಗೆ ಅಧ್ಯಾತ್ಮವನ್ನು ನಂಬಲು ಮತ್ತು ಅಧ್ಯಾತ್ಮದತ್ತ ಹೊರಳಲು ವಿಜ್ಞಾನ ಯುಗದಲ್ಲಿ ಅಧ್ಯಾತ್ಮದ ಸಂಶೋಧನೆ ಮಾಡಬೇಕಾಗಿದೆ. – ಪರಾತ್ಪರ ಗುರು ಡಾ. ಆಠವಲೆ