ಅಧಿಕ ಮಾಸದಲ್ಲಿನ ಶುಭ-ಅಶುಭ ದಿನಗಳು ಮತ್ತು ಆ ದಿನಗಳ ಆಧ್ಯಾತ್ಮಿಕ ಮಹತ್ವ
‘೧೮.೯.೨೦೨೦ ಈ ದಿನದಿಂದ ಅಧಿಕ ಆಶ್ವಯುಜ ಮಾಸ ಆರಂಭವಾಗಿದೆ. ಅಧಿಕ ಮಾಸದಿಂದ ಎಲ್ಲರಿಗೂ ಹಿಂದೂ ಧರ್ಮದಲ್ಲಿನ ತಿಥಿ, ನಕ್ಷತ್ರ, ಶುಭಾಶುಭತ್ವ ಮತ್ತು ಕನ್ನಡ ಮಾಸಕ್ಕನುಸಾರ ಪ್ರತಿಯೊಂದು ದಿನದ ಶಾಸ್ತ್ರಾರ್ಥದ ಜ್ಞಾನವಾಗಬೇಕೆಂದು ‘ಸಾಪ್ತಾಹಿಕ ಶಾಸ್ತ್ರಾರ್ಥ’ (ಸಾಪ್ತಾಹಿಕ ದಿನವಿಶೇಷ) ಎಂಬ ಲೇಖನವನ್ನು ಪ್ರಕಟಿಸುತ್ತಿದ್ದೇವೆ.
೧. ಹಿಂದೂ ಧರ್ಮಕ್ಕನುಸಾರ ‘ಶಾರ್ವರಿ’ ನಾಮ ಸಂವತ್ಸರ, ಶಾಲಿವಾಹನ ಶಕೆ – ೧೯೪೨, ದಕ್ಷಿಣಾಯನ, ಶರದಋತು, ಅಧಿಕ ಆಶ್ವಯುಜ ಮಾಸ ನಡೆಯುತ್ತಿದೆ.
೨. ಶಾಸ್ತ್ರಾರ್ಥ
೨ ಅ. ಅಧಿಕ ಮಾಸ : ಅಧಿಕ ಮಾಸದ ಬಗೆಗಿನ ವಿವರವಾದ ಮಾಹಿತಿಯು’https://www.sanatan.org/mr/a/6627.html ‘ಈ ಕೊಂಡಿ ಯಲ್ಲಿ (ಲಿಂಕ್‌ನಲ್ಲಿ) ಲಭ್ಯವಿದೆ. ಅಧಿಕ ಮಾಸಕ್ಕೆ ‘ಪುರುಷೋತ್ತಮ ಮಾಸ’ವೆಂದೂ ಹೇಳುತ್ತಾರೆ. ಈ ಮಾಸದಲ್ಲಿ ಹೆಚ್ಚೆಚ್ಚು ನಾಮಜಪ, ದಾನ ಮತ್ತು ಪುಣ್ಯಕರ್ಮಗಳನ್ನು ಮಾಡಬೇಕು. ಇದರ ಫಲವು ಮುಂದಿನ ಅಧಿಕ ಮಾಸದವರೆಗೆ ಪ್ರಾಪ್ತವಾಗುತ್ತದೆ.
೨ ಆ. ಕಮಲಾ ಏಕಾದಶಿ : ಹಿಂದೂ ಪಂಚಾಂಗ ಕ್ಕನುಸಾರ ಕನ್ನಡ ಮಾಸದಲ್ಲಿ (ತಿಂಗಳಲ್ಲಿ) ಶುಕ್ಲ ಪಕ್ಷದಲ್ಲಿ ಒಂದು ಮತ್ತು ಕೃಷ್ಣ ಪಕ್ಷದಲ್ಲಿ ಒಂದು ಹೀಗೆ ಎರಡು ಏಕಾದಶಿ ತಿಥಿಗಳು ಬರುತ್ತವೆ. ಇದಕ್ಕನುಸಾರ ಚೈತ್ರದಿಂದ ಫಾಲ್ಗುಣ ಈ ಮಾಸಗಳಲ್ಲಿ ಒಟ್ಟು ೨೪ ಏಕಾದಶಿ ತಿಥಿಗಳು ಬರುತ್ತವೆ. ಈ ಪ್ರತಿಯೊಂದು ಏಕಾದಶಿಗೆ ಸ್ವತಂತ್ರ ಹೆಸರನ್ನು ಕೊಡಲಾಗಿದೆ. ಇದಕ್ಕನುಸಾರ ಅಧಿಕ ಮಾಸದಲ್ಲಿನ ಎರಡೂ ಏಕಾದಶಿಗಳಿಗೆ ‘ಕಮಲಾ ಏಕಾದಶಿ’ ಎಂಬ ಹೆಸರಿದೆ. ಇವುಗಳಿಗೆ ‘ಪದ್ಮಿನಿ ಏಕಾದಶಿ’ ಎಂದೂ ಹೇಳುತ್ತಾರೆ. ಅಧಿಕ ಮಾಸದಲ್ಲಿನ ಏಕಾದಶಿಗೆ ಭಗವಾನ ಶ್ರೀವಿಷ್ಣುವಿನ ಪೂಜೆಗೆ ಹೆಚ್ಚು ಮಹತ್ವವಿದೆ.
೨ ಇ. ಗಜಗೌರಿವ್ರತ (ಹಾದಗಾ-ಭೋಂಡಲಾ) : ಆಶ್ವಯುಜ ಮಾಸದಲ್ಲಿ ಸೂರ್ಯನು ಹಸ್ತಾನಕ್ಷತ್ರದಲ್ಲಿ ಪ್ರವೇಶಿಸುತ್ತಾನೆ. ಆ ದಿನದಿಂದ ಗಜಗೌರಿ ವ್ರತ ಆರಂಭವಾಗುತ್ತದೆ. ಈ ವ್ರತದಲ್ಲಿ ದೇವಿಗಜ ಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ದೇವಿಯ ಸ್ತೋತ್ರ, ದೇವಿಕವಚ, ಅರ್ಗಲಾಸ್ತೋತ್ರ, ಕನಕ ಸ್ತೋತ್ರ ಮುಂತಾದ ದೇವಿ ಸ್ತೋತ್ರಗಳನ್ನು ಪಠಿಸುತ್ತಾರೆ. ‘ಇದರಿಂದ ಸಮೃದ್ಧಿ ಪ್ರಾಪ್ತವಾಗುತ್ತದೆ’, ಎಂದು ಹೇಳಲಾಗುತ್ತದೆ. ಹಾದಗಾ-ಭೋಂಡಲಾ ಇದು ಪಶ್ಚಿಮ ಮಹಾರಾಷ್ಟ್ರದಲ್ಲಿ ಮತ್ತು ಕೊಂಕಣದಲ್ಲಿ ವಿಶೇಷವಾಗಿ ಪ್ರಚಲಿತವಿದೆ. ಇದರಲ್ಲಿ ಸ್ತ್ರೀಯರು ಹಾಡು ಹೇಳುತ್ತಾ ಸಾಮೂಹಿಕ ನೃತ್ಯ ಮಾಡುತ್ತಾರೆ.
೨ ಈ. ಘಬಾಡ ಮುಹೂರ್ತ : ಇದು ಶುಭ ಮುಹೂರ್ತವಾಗಿದೆ. ಘಬಾಡ ಮುಹೂರ್ತದಲ್ಲಿ ಕಾರ್ಯವನ್ನು ಮಾಡಲು ಆರಂಭಿಸಿದರೆ, ಆ ಕಾರ್ಯ ಸಫಲವಾಗಿ ಅಪಾರ ಪ್ರಮಾಣದಲ್ಲಿ ಲಾಭವಾಗುತ್ತದೆ. ಅನಪೇಕ್ಷಿತವಾಗಿ ಒಂದು ದೊಡ್ಡ ಲಾಭವಾದರೆ ‘ಹಾತಿ ಘಭಾಡ ಲಾಗಲೆ ಎಂದು ಮರಾಠಿ ಭಾಷೆಯ ಜನರು ಹೇಳುತ್ತಾರೆ’. ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ಸೂರ್ಯ ನಕ್ಷತ್ರದಿಂದ ಚಂದ್ರ ನಕ್ಷತ್ರದವರೆಗೆ ಅಳತೆಯನ್ನು ಮಾಡಿದರೆ ಯಾವ ಸಂಖ್ಯೆಯು ಬರುತ್ತದೆಯೋ, ಆ ಸಂಖ್ಯೆಯನ್ನು ಮೂರು ಪಟ್ಟು ಮಾಡಿ ಬರುವ ಅಂಕೆಯಲ್ಲಿ ಶುಕ್ಲ ಪ್ರತಿಪದೆಯಿಂದ ಬರುವ ತಿಥಿಯ ದಿನ ಸೇರಿಸಬೇಕು. ಬರುವ ಮೊತ್ತಕ್ಕೆ ೭ ರಿಂದ ಭಾಗಿಸಿದಾಗ ಶೇಷ ೩ ಬಂದರೆ ‘ಆ ದಿನ ಘಬಾಡ ಮುಹೂರ್ತವಿದೆ’, ಎಂದು ತಿಳಿಯುತ್ತಾರೆ. ಉದಾ. ಸೂರ್ಯ ನಕ್ಷತ್ರ : ಹಸ್ತ
ಚಂದ್ರ ನಕ್ಷತ್ರ : ಧನಿಷ್ಠಾ
ತಿಥಿ : ಶುಕ್ಲ ಪಕ್ಷ ದ್ವಾದಶಿ (೧೨ ನೇ ದಿನ)
‘ಹಸ್ತ’ ಸೂರ್ಯ ನಕ್ಷತ್ರದಿಂದ ‘ಧನಿಷ್ಠಾ’ ಚಂದ್ರ ನಕ್ಷತ್ರ ೧೧ ನೇಯದಾಗಿದೆ.
೧೧ X ೩ = ೩೩ ಇದರಲ್ಲಿ ಶುಕ್ಲ ದ್ವಾದಶಿ ತಿಥಿ ಎಂದರೆ ೧೨ ನೇ ತಿಥಿ ಸೇರಿಸಿದಾಗ ಮೊತ್ತವು ೩೩ + ೧೨ = ೪೫ ಬರುತ್ತದೆ.
೪೫ ಈ ಸಂಖ್ಯೆಯನ್ನು ೭ ರಿಂದ ಭಾಗಿಸಿದಾಗ ಶೇಷ ೩ ಬರುತ್ತದೆ.
೨೮.೯.೨೦೨೦ ಈ ರಾತ್ರಿ ೮.೫೯ ರ ವರೆಗೆ ಶುಕ್ಲ ದ್ವಾದಶಿ ತಿಥಿ ಮುಗಿಯುವವರೆಗೆ ಘಬಾಡ ಮುಹೂರ್ತವಿದೆ.
೨ ಉ. ಭೌಮಪ್ರದೋಷ : ಪ್ರತಿಯೊಂದು ಮಾಸದಲ್ಲಿನ ಶುಕ್ಲ ಮತ್ತು ಕೃಷ್ಣ ತ್ರಯೋದಶಿಗೆ ‘ಪ್ರದೋಷ’ ಎಂದು ಹೇಳುತ್ತಾರೆ. ಮಂಗಳವಾರ ಬರುವ ಪ್ರದೋಷ ತಿಥಿಗೆ ‘ಭೌಮಪ್ರದೋಷ’ ಎಂದು ಹೇಳುತ್ತಾರೆ. ಆರ್ಥಿಕ ಅಡಚಣೆಗಳನ್ನು ದೂರಗೊಳಿಸಲು ‘ಭೌಮಪ್ರದೋಷ’ ವ್ರತವನ್ನು ಮಾಡುತ್ತಾರೆ. ‘ಶಿವ’ನು ಪ್ರದೋಷ ವ್ರತದ ದೇವತೆಯಾಗಿದ್ದಾನೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದ ತಗಲಿದ ವಿವಿಧ ಪ್ರಕಾರದ ದೋಷಗಳ ನಿವಾರಣೆಗಾಗಿ, ಹಾಗೆಯೇ ಭಗವಾನ ಶಿವನನ್ನು ಪ್ರಸನ್ನಗೊಳಿಸಲು ಸಾಯಂಕಾಲದ ಸಮಯದಲ್ಲಿ ಈ ವ್ರತವನ್ನು ಮಾಡುತ್ತಾರೆ. ಪ್ರದೋಷ ವ್ರತವನ್ನು ಮಾಡುವುದರಿಂದ ಆಧಿ ಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗಿ ಆನಂದ ಪ್ರಾಪ್ತವಾಗುತ್ತದೆ.
೨ ಊ. ಅಮೃತಯೋಗ : ಅಮೃತಯೋಗದಲ್ಲಿ ಯಾವುದೇ ಶುಭಕಾರ್ಯ ಮಾಡಿದರೂ ಯಶಸ್ಸು ಪ್ರಾಪ್ತವಾಗುತ್ತದೆ. ೨.೧೦.೨೦೨೦ ಈ ದಿನದಂದು ಈ ಯೋಗವು ಅಹೋರಾತ್ರಿ ಅಂದರೆ ಸಂಪೂರ್ಣ ಹಗಲು ಮತ್ತು ಸಂಪೂರ್ಣ ರಾತ್ರಿ ಇದೆ.’ – ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ವಾಸ್ತು ವಿಶಾರದ, ಅಂಕ ಜ್ಯೋತಿಷ್ಯ ವಿಶಾರದ, ರತ್ನ ಶಾಸ್ತ್ರ ವಿಶಾರದ, ಅಷ್ಟಕವರ್ಗ ವಿಶಾರದ, ಸರ್ಟಿಫೈಡ್ ಡೌಜರ್, ರಮಲ ಪಂಡಿತ, ಹಸ್ತಾಕ್ಷರ ಮನೋ ವಿಶ್ಲೇಷಣೆ ಶಾಸ್ತ್ರ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೨೧.೯.೨೦೨೦).