ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಾಧಕರಿಗೆ ನೀಡಿದ ಅಮೂಲ್ಯ ಮಾರ್ಗದರ್ಶನ
೧. ವ್ಯಷ್ಟಿ ಸಾಧನೆ
ಅ. ಭಗವಂತನ ಪ್ರಾಪ್ತಿಯಾದರೆ, ಉಳಿದದ್ದೆಲ್ಲವೂ ಸಾಧ್ಯವಾಗುತ್ತದೆ ! : ‘ಪೂ. (ಸೌ.) ಬಿಂದಾ ಸಿಂಗಬಾಳ ಇವರು ನನಗೆ, “ಸತತವಾಗಿ ಭಾವಾವಸ್ಥೆಯಲ್ಲಿರಬೇಕು. ಭಗವಂತನ ಪ್ರಾಪ್ತಿಯಾದರೆ, ಉಳಿದದ್ದೆಲ್ಲವೂ ಸಾಧ್ಯವಾಗುತ್ತದೆ. ಕೃತಜ್ಞತಾಭಾವವು ವೃದ್ಧಿಯಾದ ಮೇಲೆ ಸಂಘರ್ಷದಲ್ಲಿ ಶಕ್ತಿಯು ಖರ್ಚಾಗದೇ ಸಾಧನೆಯ ಪ್ರಗತಿಗಾಗಿ ಉಪಯೋಗವಾಗುತ್ತದೆ”, ಎಂದು ಹೇಳಿದರು. – ಕು. ದೀಪಾಲಿ ಮತಕರ, ರತ್ನಾಗಿರಿ
ಆ. ‘ನಮ್ಮ ಉಸಿರಾಟದ ಮೇಲೆಯೂ ಭಗವಂತನ ಅಧಿಕಾರವಿರುವಾಗ ಇತರ ವಿಷಯಗಳ ಕರ್ತೃತ್ವವನ್ನು ನಾವು ಹೇಗೆ ಇಟ್ಟುಕೊಳ್ಳಲು ಸಾಧ್ಯ ?’ – ಸದ್ಗುರು (ಸೌ.) ಬಿಂದಾ ಸಿಂಗಬಾಳ (೨೫.೮.೨೦೧೯)
ಇ. ತಳಮಳದ ಮಹತ್ವ : ‘ನಮಗೆ ಎಷ್ಟೇ ತೊಂದರೆಯಾದರೂ, ನಾವು ಮಾಡುತ್ತಲೇ ಇರಬೇಕು. ದೇವರೇ ಎಲ್ಲವನ್ನು ಮಾಡುವವನಿದ್ದಾನೆ. ಪರಿವರ್ತನೆಯಾಗುವ ಈ ಮಾರ್ಗವು ದೊಡ್ಡದೆಂದು ಕಾಣಿಸಿದರೂ, ಪರಿವರ್ತನೆಯ ಆ ಕ್ಷಣವು ಬೇಗ ಬರುವುದು. ಇದರಲ್ಲಿ ಮನಸ್ಸಿನ ತಳಮಳಕ್ಕೆ ಹೆಚ್ಚು ಮಹತ್ವವಿದೆ.’ – ಪೂ. (ಸೌ.) ಬಿಂದಾ ಸಿಂಗಬಾಳ
೨. ಸಮಷ್ಟಿ ಸಾಧನೆ
ಅ. ಎಲ್ಲೆಡೆಯ ಸಾಧಕರೇ, ಆಂತರ್ಯದಲ್ಲಿ ಭಾವವಿದ್ದರೆ ನಾವು ಪೃಥ್ವಿಯ ಮೇಲೆ ಎಲ್ಲಿದ್ದರೂ, ಭಗವಂತನು ನಮಗೆ ಖಂಡಿತ ಮಾರ್ಗದರ್ಶನವನ್ನು ಮಾಡುವನು, ಎಂಬ ದೃಢ ಶ್ರದ್ಧೆಯನ್ನಿಟ್ಟು ನಿಶ್ಚಿಂತೆಯಿಂದಿರಿ !
ಆ. ಎಸ್.ಎಸ್.ಆರ್.ಎಫ್.ನ ಸಾಧಕರ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಓರ್ವ ಸಾಧಕಿಯ ಮನಸ್ಸಿನಲ್ಲಿ ‘ನಾವು ನಮ್ಮ ತಾಯ್ನಾಡಿಗೆ ಹಿಂತಿರುಗಿದ ಮೇಲೆ ನಮಗೆ ಯಾರು ಮಾರ್ಗದರ್ಶನ ಮಾಡುವರು ?’ ಎಂಬ ಕಾಳಜಿಪೂರ್ವಕ ವಿಚಾರ ಬರುವುದು : ‘೨೦೧೫ ಜನವರಿಯಲ್ಲಿ ರಾಮನಾಥಿ ಆಶ್ರಮದಲ್ಲಿ ಎಸ್.ಎಸ್.ಆರ್.ಎಫ್.ನ ಸಾಧಕರ ಕಾರ್ಯಾಗಾರ ನೆರವೇರಿತು. ಆ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಸಾಧಕರಿಗೆ ಕಾರ್ಯಾಗಾರದಲ್ಲಿ ಜವಾಬ್ದಾರ ಸಂತರಿಂದ ಸಾಧನೆಯ ಕುರಿತು ಅಮೂಲ್ಯ ಮಾರ್ಗದರ್ಶನವು ಲಭಿಸಿತು, ಹಾಗೆಯೇ ಸಾಧಕರ ಭಾವದಿಂದಾಗಿ ಆಶ್ರಮದಲ್ಲಿನ ಚೈತನ್ಯವನ್ನು ಅನುಭವಿಸಿ ಶ್ರೀಕೃಷ್ಣನ ಹೆಚ್ಚೆಚ್ಚು ಅನುಸಂಧಾನದಲ್ಲಿ ಇರಲು ಸಾಧ್ಯವಾಯಿತು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಓರ್ವ ಸಾಧಕಿಗೆ ‘ನಾವು ನಮ್ಮ ದೇಶಕ್ಕೆ ಹಿಂತಿರುಗಿದ ಮೇಲೆ ಸಾಧನೆಯ ಪ್ರಯತ್ನಗಳನ್ನು ಇದೇ ರೀತಿ ಮುಂದುವರಿಸಲು ಯಾರು ನಮಗೆ ಮಾರ್ಗದರ್ಶನ ಮಾಡುವರು ? ಇನ್ನು ಮುಂದೆ ನಮ್ಮಿಂದ ಸಾಧನೆಯ ಪ್ರಯತ್ನಗಳು ಇದೇ ರೀತಿ ಆಗದಿದ್ದರೆ, ಭಗವಂತನೊಂದಿಗೆ ಅನುಸಂಧಾನವನ್ನು ಹೇಗೆ ಸಾಧಿಸುವುದು ?’, ಎಂಬ ಬಗ್ಗೆ ಚಿಂತೆಯಾಗುತ್ತಿತ್ತು.
ಇ. ಇಂತಹ ಪ್ರಸಂಗದಲ್ಲಿ ಸೂಕ್ಷ್ಮದಿಂದ ಭಗವಂತನು ಮಾಡುತ್ತಿರುವ ಮಾರ್ಗದರ್ಶನವನ್ನು ಅನುಭವಿಸಲು ಸಾಧಕರು ಅಂತರ್ಮನಸ್ಸಿನಲ್ಲಿ ಭಾವವನ್ನು ಹೆಚ್ಚಿಸುವುದು ಆವಶ್ಯಕ ! : ಮೇಲಿನ ಪ್ರಸಂಗದಲ್ಲಿ ನೋಡುವುದಾದರೆ ನಿಜವಾದ ಭಾವವಿರುವ ಸಾಧಕನು ಪೃಥ್ವಿಯ ಮೇಲೆ ಎಲ್ಲಿಯೇ ಇದ್ದರೂ, ದೇವರು ಅವನಿಗೆ ಖಂಡಿತ ಮಾರ್ಗದರ್ಶನ ಮಾಡುತ್ತಾನೆ. ಆದ್ದರಿಂದ ಸಾಧಕರು ‘ಜವಾಬ್ದಾರ ಸಾಧಕರನ್ನು ಭೇಟಿಯಾದಾಗ ಮಾತ್ರ ನಮಗೆ ಮಾರ್ಗದರ್ಶನ ಸಿಗುವುದು, ಇತರ ಸಮಯದಲ್ಲಿ ಯಾರೂ ಮಾರ್ಗದರ್ಶನವನ್ನು ಮಾಡುವವರು ಇರುವುದಿಲ್ಲ’, ಎಂಬ ವಿಚಾರ ಮಾಡಬಾರದು. ಕೃಪಾಳು ಭಗವಂತನ ಮೇಲೆ ಶ್ರದ್ಧೆಯನ್ನಿಟ್ಟರೆ ಅವರಿಗೆ ಅವನು ಸೂಕ್ಷ್ಮದಿಂದ ಮಾಡುತ್ತಿರುವ ಮಾರ್ಗದರ್ಶನದ ಆನಂದವನ್ನು ಅನುಭವಿಸಿ ತನ್ನ ಆಧ್ಯಾತ್ಮಿಕ ಉನ್ನತಿಯನ್ನು ಶೀಘ್ರವಾಗಿ ಮಾಡಿಕೊಳ್ಳಬಹುದು.’ – (ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ದೇವದ, ಪನವೇಲ. (೨೫.೨.೨೦೧೫)
ಪೂ. ಬಿಂದಾ ಸಿಂಗಬಾಳ ಇವರು ನೀಡಿದ ಕೆಲವು ಅಮೂಲ್ಯ ದೃಷ್ಟಿಕೋನಗಳು
ಅ. ‘ಸಾಧನೆಯಲ್ಲಿ ಸಂತೃಪ್ತಿಯ (ಸೆಚ್ಯುರೇಶನ್‌ದ) ಹಂತವು ಬರಬಾರದು, ಅದಕ್ಕಾಗಿ ಸಾಧಕರು ಪ್ರತಿಯೊಂದು ಕ್ಷಣ ಕಲಿಯುತ್ತಿರಬೇಕು.
ಆ. ಸಾಧಕತ್ವವಿದ್ದರೆ ಖಂಡಿತ ಪ್ರಗತಿಯಾಗುವುದು !
ಇ. ಸಾಧನೆಯೆಂದರೆ ಒಂದು ಪ್ರಕಾರದ ಶಿವಧನುಷ್ಯವಾಗಿದೆ. ಅದನ್ನು ಎತ್ತುವ ಕ್ಷಮತೆಯು ನಮ್ಮಲ್ಲಿಲ್ಲ. ಶ್ರೀಗುರುಗಳ ಮೇಲೆ ಶ್ರದ್ಧೆಯನ್ನಿಟ್ಟರೆ, ಅವರೇ ಎಲ್ಲವನ್ನು ಮಾಡಿಸಿಕೊಳ್ಳುತ್ತಾರೆ.
ಈ. ಸಾಧನೆಯನ್ನು ಅಂಗೀಕರಿಸಿದರೆ, ಎಲ್ಲಿ ಹೋದರೂ, ಅದು ಸತತವಾಗಿ ನಡೆಯುತ್ತಿರುತ್ತದೆ.
ಉ. ಸರ್ವಸ್ವವನ್ನು ತ್ಯಾಗ ಮಾಡದಿದ್ದರೂ ‘ಸ್ವ’ (ನಾನು) ವನ್ನು ಮಾತ್ರ ತ್ಯಾಗ ಮಾಡಲೇಬೇಕು.
ಊ. ಯಾವುದೇ ಪ್ರಯತ್ನವನ್ನು ಮಾಡುವ ಮೊದಲು ಮನಸ್ಸಿನಲ್ಲಿ ದೃಢನಿಶ್ಚಯವನ್ನು ಮಾಡಿದರೆ ಕಡಿಮೆ ಅವಧಿಯಲ್ಲಿ ಬದಲಾವಣೆ ಆಗುವುದು !
ಎ. ಮನಸ್ಸು ಒಂದು ಯುದ್ಧಭೂಮಿಯಾಗಿದೆ. ಯುದ್ಧವನ್ನು ಮಾಡಿ ನಮಗೆ ಅದನ್ನು ಗೆಲ್ಲಬೇಕಾಗಿದೆ.
ಐ. ನಮ್ಮ ಮನಸ್ಸಿನಲ್ಲಿ ಸೋಲೊಪ್ಪುವ ಮಾನಸಿಕತೆಯ ಎಷ್ಟೇ ವಿಚಾರಗಳು ಬಂದರೂ, ಸಾಧನೆಯ ಶಸ್ತ್ರದಿಂದ ಆ ವಿಚಾರಗಳನ್ನು ಎದುರಿಸಿದರೆ ಖಂಡಿತ ದೇವರು ಭೇಟಿಯಾಗುವನು !
ಓ. ನಾವು ನಮ್ಮನ್ನು ಕೀಳಾಗಿ ಕಾಣುವುದೆಂದರೆ ನಮ್ಮೊಳಗಿರುವ ದೇವರನ್ನೇ ಕೀಳಾಗಿ ಕಂಡಂತೆ ಆಗಿದೆ.
ಔ. ಯಾವುದೇ ಅಯೋಗ್ಯ ವಿಚಾರದಿಂದ ಸಮಯ ವ್ಯರ್ಥವಾಗುತ್ತಿದ್ದರೆ ಸ್ವಯಂಸೂಚನೆ ಸತ್ರವನ್ನು ನೀಡುವುದು ಆವಶ್ಯಕ !
ಅಂ. ನಕಾರಾತ್ಮಕವಿದ್ದರೆ ಎಲ್ಲ ವಿಷಯಗಳಿಂದ ಮನಸ್ಸು ಅಸ್ವಸ್ಥವಾಗುತ್ತದೆ, ಆದರೆ ಸಕಾರಾತ್ಮಕವಿದ್ದರೆ ಎಲ್ಲೆಡೆ ಆನಂದ ಅನುಭವಿಸಲು ಸಿಗುತ್ತದೆ.
ಕ. ತಪ್ಪುಗಳ ಬಗ್ಗೆ ಸಂವೇದನಾಶೀಲ ಇರುವ ಸಾಧಕರೇ ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಕೈಜೋಡಿಸಬಹುದು.
ಖ. ಯಾವುದೇ ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವಾಗ ‘ನನ್ನ ಕ್ಷಮಾಯಾಚನೆಯು ಈಶ್ವರನ ಚರಣಗಳಿಗೆ ತಲುಪಬೇಕು’, ಎಂಬ ವಿಚಾರವಿರಬೇಕು.
ಗ. ಪ. ಪೂ. ಡಾಕ್ಟರರು ಎಲ್ಲರನ್ನು ನೀರಪೇಕ್ಷವಾಗಿ ಪ್ರೀತಿಸುತ್ತಾರೆ. ನಾವು ಸಹ ಅದೇ ರೀತಿ ಸಾಧಕ, ಹಾಗೆಯೇ ಕುಟುಂಬದವರನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೇಮ ಮಾಡಬೇಕು.
ಘ. ‘ನನ್ನ ಉದ್ಧಾರಕ್ಕಾಗಿ ಶ್ರೀಗುರುಗಳು ಈ ಸೇವೆಯನ್ನು ಕೊಟ್ಟಿದ್ದಾರೆ’, ಎಂಬ ವಿಚಾರವಿರಬೇಕು. ‘ನಾನು ಉಪಕಾರವೆಂದು ಈ ಸೇವೆಯನ್ನು ಮಾಡುತ್ತಿದ್ದೇನೆ’, ಎಂಬ ವಿಚಾರವು ಎಂದಿಗೂ ಇರಬಾರದು.
ಚ. ಸಾಧನೆಯ ಚಿಕ್ಕಚಿಕ್ಕ ಪ್ರಯತ್ನಗಳಿಂದಲೇ ಪ್ರಗತಿಯ ದೊಡ್ಡ ಕಟ್ಟಡವು ನಿಲ್ಲುವುದು (ಪ್ರಗತಿಯಾಗುವುದು) !’
– ಕು. ಸಯೀ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧.೨೦೧೫)