ದೇಶದ ಕಾನೂನು ವ್ಯವಸ್ಥೆಯು ಭಾರತೀಯ ಸಂಸ್ಕೃತಿಗನುಸಾರ ಇರುವುದು ಆವಶ್ಯಕ ! – ನ್ಯಾಯವಾದಿ ರಾಜೇಂದ್ರ ವರ್ಮಾ, ಸರ್ವೋಚ್ಚ ನ್ಯಾಯಾಲಯ
ಭಾರತದಲ್ಲಿ ನಮ್ಮ ಗೌರವಶಾಲಿ ಪರಂಪರೆಯನ್ನು ಕಾಪಾಡಲಾಗಿದೆ. ನಾವು ಶ್ರೀರಾಮ ಮತ್ತು ಶ್ರೀಕೃಷ್ಣನ ವಂಶಜರಾಗಿದ್ದೇವೆ. ಒಂದು ಕಾಲ ಹೇಗಿತ್ತೆಂದರೆ, ಆ ಕಾಲದಲ್ಲಿ ಧರ್ಮಹಾನಿಯಾಯಿತು, ಸಮಾಜದ ಅವನತಿಯಾಯಿತು ಹಾಗೂ ರಾಷ್ಟ್ರಕ್ಕೂ ಹಾನಿಯಾಯಿತು. ಸ್ವಾತಂತ್ರ್ಯದ ನಂತರ ರಾಜ್ಯಗಳ ಅಂದರೆ ಪ್ರದೇಶಗಳನ್ನು ಧರ್ಮದ ಆಧಾರದಲ್ಲಿ ಆಗಬೇಕಿತ್ತು. ಆದರೆ ಭಾಷೆಯ ಆಧಾರದಲ್ಲಿ ರಚನೆ ಮಾಡಲಾಯಿತು. ಸ್ವಾತಂತ್ರ್ಯದ ನಂತರ ಸಂವಿಧಾನವನ್ನು ರಚಿಸಲಾಯಿತು, ಅದರಲ್ಲಿ ಒಂದು ಮಿತಿಯವರೆಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳ ಮಹತ್ವವನ್ನು ಕಾಪಾಡಲಾಯಿತು; ಆ ಕಾಲದಲ್ಲಿ ಒಂದು ದೊಡ್ಡ ಷಡ್ಯಂತ್ರ ನಡೆಯಿತು ಮತ್ತು ಅದರಲ್ಲಿ ‘ಅಲ್ಪಸಂಖ್ಯಾತ ಶಬ್ದವನ್ನು ತುರುಕಿಸಲಾಯಿತು. ಸಂವಿಧಾನದಲ್ಲಿ ಎಲ್ಲಿಯೂ ಅಲ್ಪಸಂಖ್ಯಾತ ಇದರ ವಿಶ್ಲೇಷಣೆಯನ್ನು ನೀಡಿಲ್ಲ. ಇದರಿಂದ ಇಂದಿನ ಸ್ಥಿತಿಯಲ್ಲಿ ಅಲ್ಪಸಂಖ್ಯಾತ ಎಂಬ ಪದವನ್ನು ಮುಂದಿಟ್ಟು ಯಾವ ರೀತಿ ಸಮಾಜದ ಹಾನಿಯನ್ನು ಮಾಡಲಾಗುತ್ತದೆಯೋ, ಅದರಿಂದ ಸಂಪೂರ್ಣ ಸಮಾಜ ವಿಭಜಿಸಲಟ್ಟಿದೆ. ಅದರ ಮೂಲಭೂತ ಕಾರಣಗಳನ್ನು ತಿಳಿದುಕೊಳ್ಳಲು ನಾವು ಸ್ವಲ್ಪ ಭೂತಕಾಲಕ್ಕೆ ಹೋಗಬೇಕಾಗುವುದು.
ಮೊಗಲರ ಕಾಲದಲ್ಲಿ ಹಿಂದೂಗಳಿಗೆ ‘ಜಿಝಿಯಾ ತೆರಿಗೆಯನ್ನು ಕಟ್ಟಲು ಸಾಧ್ಯವಾಗದ ಕಾರಣ ಅವರನ್ನು ಮತಾಂತರಿಸಲಾಗುತ್ತಿತ್ತು
ಮೊಗಲರು ನಮ್ಮ ದೇಶವನ್ನಾಳಲು ಸಮಾಜದಲ್ಲಿನ ಅಥವಾ ದೇಶದಲ್ಲಿನ ಕೆಲವು ಸ್ವಾರ್ಥಿ ಜನರೇ ಕಾರಣವಾಗಿದ್ದರು. ಮೊಗಲರ ಕಾಲದಲ್ಲಿ ಹಿಂದೂಗಳಿಂದ ‘ಜಿಝಿಯಾ ತೆರಿಗೆಯನ್ನು ವಸೂಲು ಮಾಡಲಾಗುತಿತ್ತು. ಹಿಂದೂಗಳು ಈ ತೆರಿಗೆಯನ್ನು ತಮ್ಮ ರಕ್ಷಣೆಗಾಗಿ ಶುಲ್ಕದ ರೂಪದಲ್ಲಿ ಕೊಡಬೇಕಾಗುತ್ತಿತ್ತು. ಆ ಕಾಲದಲ್ಲಿ ಮೊಗಲರು ‘ನಾವು ನಿಮ್ಮ ರಕ್ಷಣೆಯನ್ನು ಮಾಡುವೆವು. ಒಂದು ವೇಳೆ ನೀವು ಹಿಂದೂಗಳಾಗಿರಲು ಇಚ್ಛಿಸಿದರೆ, ನೀವು ಈ ತೆರಿಗೆಯನ್ನು ಕೊಡಬೇಕಾಗುವುದು ಎಂಬ ಆದೇಶವನ್ನು ನೀಡಿದ್ದರು. ಹೆಚ್ಚಿನ ಹಿಂದೂಗಳಿಗೆ ಆರ್ಥಿಕ ಅಡಚಣೆಯಿಂದಾಗಿ ಮತಾಂತರವಾಗಿ ಮುಸಲ್ಮಾನ ಧರ್ಮವನ್ನು ಸ್ವೀಕರಿಸಬೇಕಾಗುತ್ತಿತ್ತು. ಯಾರಲ್ಲಿ ತೆರಿಗೆ ತುಂಬಲು ಹಣವಿರಲಿಲ್ಲ, ಅವರಿಂದ ಜಿಝಿಯಾ ತೆರಿಗೆಯನ್ನು ಪಡೆಯದೇ ಅವರನ್ನು ಮತಾಂತರಿಸಲಾಯಿತು. ಆ ಕಾಲದಲ್ಲಿ ಹೆಚ್ಚಿನ ಹಿಂದೂಗಳು ಬಡವರಾಗಿದ್ದರು.
ಇಸ್ಲಾಮ್ ಮತ್ತು ಕ್ರೈಸ್ತರು ಮತಾಂತರದ ಮೂಲಕ ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸುವುದು
ಒಂದೆಡೆ ಇಸ್ಲಾಮ್ ಖಡ್ಗದ ಬಲದಿಂದ ಆಡಳಿತವನ್ನು ನಡೆಸುತ್ತಿತ್ತು ಮತ್ತು ಇನ್ನೊಂದೆಡೆ ಕ್ರೈಸ್ತರು ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದರು. ಎಲ್ಲಕ್ಕಿಂತ ಮೊದಲು ಮೊಗಲರು ಭಾರತೀಯ ಸಂಸ್ಕೃತಿಯನ್ನು ನಾಶ ಮಾಡಲು ಇಸ್ಲಾಮ್‌ನ ಹೆಸರಿನಲ್ಲಿ ದೇವಸ್ಥಾನಗಳನ್ನು ಕೆಡವಿದರು, ಗೋಹತ್ಯೆಗಳನ್ನು ಮಾಡಿದರು ಮತ್ತು ಹಿಂದೂಗಳನ್ನು ಇಸ್ಲಾಮ್‌ಗೆ ತರಲು ಮತಾಂತರಗೊಳಿಸಿದರು; ಆದರೆ ಕ್ರೈಸ್ತರು ಬಂದು ಅದಕ್ಕೆ (ಮತಾಂತರಕ್ಕೆ) ಒಂದು ದುಶ್ಶಾಸನನ ಸ್ವರೂಪವನ್ನು ನೀಡಿದರು. ಈ ರೀತಿಯಲ್ಲಿ ಹಿಂದೂ ಸಂಸ್ಕೃತಿಯನ್ನು ನಾಶಗೊಳಿಸಲು ಎರಡೂ ಬದಿಯಿಂದ ಭಯಂಕರ ಪ್ರಯತ್ನಗಳಾದವು.
ಇಲ್ಲಿಯವರೆಗೆ ಅಲ್ಪಸಂಖ್ಯಾತರೇ ಬಹುಸಂಖ್ಯಾತರ ಮೇಲೆ ಆಡಳಿತವನ್ನು ಮಾಡಿರುವಾಗ ಅವರು ದುರ್ಬಲರು ಹೇಗೆ ?
ಮೊಗಲರ ಮತ್ತು ಆಂಗ್ಲರ ಕಾಲದಲ್ಲಿಯೂ ಯಾವುದೇ ಸಮಾಜಕ್ಕೆ ಎಲ್ಲಿಯೂ ವಿಶೇಷ ಸೌಲಭ್ಯಗಳಿರಲಿಲ್ಲ. ಆ ಕಾಲದಲ್ಲಿ ‘ಅಲ್ಪಸಂಖ್ಯಾತ ಈ ಪದವೇ ಅಸ್ತಿತ್ವದಲ್ಲಿರಲಿಲ್ಲ. ಈ ಪದವು ೧೯೦೦ ರ ನಂತರ ಬಂದಿತು. ಯಾರ ಅಧಿಕಾರವಿತ್ತೋ ಅಥವಾ ಯಾರು ಆಡಳಿತವನ್ನು ನಡೆಸಿದರೋ, ಅವರು ಮೊಗಲರಿರಲಿ ಅಥವಾ ಆಂಗ್ಲರಿರಲಿ, ಅವರು ಸಂಖ್ಯೆಯಲ್ಲಿ ಕಡಿಮೆಯಿದ್ದರೂ, ಅವರೇ ಬಹುಸಂಖ್ಯಾತ ಹಿಂದೂಗಳನ್ನು ಆಳಿದರು. ಹೀಗಿರುವಾಗ ಅವರು ಯಾವಾಗಿನಿಂದ ದುರ್ಬಲರಾದರು ? ಅವರು ಯಾವ ರೂಪದಲ್ಲಿ ದುರ್ಬಲರಾದರು ? ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡುವ ಯಾವ ಕಾರಣಗಳಿದ್ದವು ? ಎಂಬುದನ್ನು ನಾವು ವಿಚಾರ ಮಾಡಿ ಅವುಗಳನ್ನು ತಿಳಿದುಕೊಳ್ಳಬೇಕಾಗುವುದು. ಹಿಂದೂ ರಾಷ್ಟ್ರದ ಮಾರ್ಗದಲ್ಲಿ, ಅಂದರೆ ಭಾರತೀಯ ಸಂಸ್ಕೃತಿಯ ಪುನರುತ್ಥಾನದ ಮಾರ್ಗದಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆ ಬಂದಿದ್ದರೆ, ಅದು ಈ ಅಲ್ಪಸಂಖ್ಯಾತರಿಂದಲೇ ! ೧೯೫೨ ರಲ್ಲಿ ಕೂಡ ಈ ಮನೆಹಾಳರು ನಮ್ಮೊಂದಿಗಿದ್ದರು. ಆ ಕಾಲದಲ್ಲಿ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ (ನ್ಯಾಶನಲ್ ಮೈನಾರಿಟಿ ಕಮಿಶನ್) ಎಂಬ ಒಂದು ಯೋಜನೆ ಬಂದಿತ್ತು ! ಅವರಿಂದ ಅಲ್ಪಸಂಖ್ಯಾತ ಕಾನೂನನ್ನು (ಮೈನಾರಿಟಿ ಆಕ್ಟ್) ಮಾಡಲಾಯಿತು.
ಕೇವಲ ‘ಆರ್ಯ ಸನಾತನ ಧರ್ಮವೊಂದೇ ಧರ್ಮ !
ನಮ್ಮ ದೇಶದಲ್ಲಿ ಧರ್ಮ ಮತ್ತು ಪಂಥ ಈ ವಿಷಯಗಳು ಸ್ಪಷ್ಟವಾಗಿವೆ. ಧರ್ಮವೆಂದರೆ ‘ಆರ್ಯ ಸನಾತನ ಧರ್ಮ ! ಉಳಿದೆಲ್ಲವೂ ತಥಾಕಥಿತ ಧರ್ಮಗಳಾಗಿವೆ, ಅವು ನಿಜವಾದ ಅರ್ಥದಲ್ಲಿ ಧರ್ಮಗಳಾಗಿಲ್ಲ. ಇಸ್ಲಾಮ್ ಅಥವಾ ಇತರ ಯಾವುದೇ ಧರ್ಮವಿರಲು ಸಾಧ್ಯವಿಲ್ಲ. ಅವು ಪಂಥಗಳಾಗಿರಬಹುದು. ಯಾವುದನ್ನು ವ್ಯಕ್ತಿಗಳು ನಡೆಸುತ್ತಾರೆಯೋ, ಅದು ‘ಪಂಥವಾಗಿದೆ ಮತ್ತು ಯಾವುದು ಸನಾತನ ಪರಂಪರೆಯಿಂದ ನಡೆಯುತ್ತಾ ಬಂದಿದೆಯೋ, ಅದು ‘ಧರ್ಮವಾಗಿದೆ.
ಸರಕಾರ ಲಾಭಾರ್ಥಿ ಸಮಾಜವನ್ನು ರೂಪಿಸುವುದು ಮತ್ತು ಅದಕ್ಕೆ ವಿರೋಧವಾಗದಿರುವುದೇ ಷಡ್ಯಂತ್ರ !
ನಮ್ಮ ಸಮಾಜದಲ್ಲಿ ವೈಶ್ಯ ಸಮಾಜ ಎಂಬ ಒಂದು ದೊಡ್ಡ ಆಡಳಿತ ವರ್ಗವಿತ್ತು ಹಾಗೂ ಅದು ಜೈನ ಪರಂಪರೆಯದ್ದಾಗಿತ್ತು. ಅದರ ದಾನಶೂರತೆಗೆ ಯಾರೂ ಸರಿಸಾಟಿ ಇರಲಿಲ್ಲ. ಇನ್ನೊಂದು ವರ್ಗ ವೆಂದರೆ ಸಿಕ್ಖ್, ಅದು ಹೋರಾಟದ ವೃತ್ತಿಯದ್ದಾಗಿದ್ದು ಭಾರತೀಯ ಸಂಸ್ಕೃತಿಯ ಮೂಲಾಧಾರ, ಅಂದರೆ ಕ್ಷತ್ರೀಯವಾಗಿತ್ತು. ಇನ್ನೊಂದು ಮೂರನೆಯ ವರ್ಗವಿತ್ತು, ಅದಕ್ಕೆ ನಾವು ಹಿಂದುಳಿದ ಅಂದರೆ ದುರ್ಬಲವೆಂದು ಹೇಳುತ್ತೇವೆ. ಈ ಮೂರೂ ಸಮಾಜದಲ್ಲಿ ಹಿಂದೂ ಧರ್ಮವು ಅವಿಭಾಜ್ಯ ಅಂಗವಾಗಿತ್ತು. ಸರಕಾರ ಸೌಲಭ್ಯಗಳನ್ನು ಪಡೆಯಲು ಲಾಭಾರ್ಥಿ ಸಮಾಜವನ್ನು (ಅಲ್ಪಸಂಖ್ಯಾತ) ನಿರ್ಮಾಣ ಮಾಡುತ್ತಿತ್ತು ಹಾಗೂ ಅದಕ್ಕೆ ಯಾವತ್ತೂ ವಿರೋಧವಾಗಲಿಲ್ಲ. ಇದು ಷಡ್ಯಂತ್ರವೇ ಆಗಿತ್ತು.
ಪ್ರಸಕ್ತ ಕಾನೂನುಗಳು ಆಂಗ್ಲರ ವ್ಯವಸ್ಥೆಗನುಸಾರ ಇರುವುದರಿಂದ ನಿಜವಾದ ನ್ಯಾಯ ಸಿಗಲು ಜನಾಂದೋಲನವಾಗಬೇಕು !
ಯಾವುದೇ ಆಂದೋಲನವನ್ನು ಕೊನೆಗಾಣಿಸಬೇಕಾಗಿದ್ದರೆ, ಅದನ್ನು ನ್ಯಾಯಾಲಯಕ್ಕೆ ಒಯ್ಯಬೇಕು ಅಂದರೆ ಅದು ಮುಗಿಯುತ್ತದೆ. ಅದರ ಚರ್ಚೆಯನ್ನೂ ಕೂಡ ಮಾಡಲು ಆಗುವುದಿಲ್ಲ. ಇಂದಿನ ಆಡಳಿತ ವ್ಯವಸ್ಥೆಯನ್ನು ಆಂಗ್ಲರು ಮಾಡಿದ್ದಾರೆ. ನಾವು ಬೇರೆ ಅನೇಕ ದೇಶಗಳ ಸಂವಿಧಾನದಲ್ಲಿನ ವಿಷಯಗಳನ್ನು ಅದರಲ್ಲಿ ಸೇರಿಸಿಕೊಂಡಿದ್ದೇವೆ. ನಾವು ಈಗಲೂ ಆಂಗ್ಲರ ಆಡಳಿತ ಪದ್ಧತಿಗನುಸಾರ ಜೀವನವನ್ನು ನಡೆಸುತ್ತಿದ್ದೇವೆ. ಈಗಿನ ಎಲ್ಲ ಕಾನೂನುಗಳನ್ನು ೧೮೦೦ ರಲ್ಲಿ ಮಾಡಲಾಗಿದೆ. ಇಂತಹ ಕಾನೂನುಗಳು ನಿಜವಾದ ನ್ಯಾಯವನ್ನು ನೀಡಬಹುದೇ ? ಎಂದಿಗೂ ಇಲ್ಲ. ನಾನು ಕಾನೂನಿನ ವಿದ್ಯಾರ್ಥಿಯಾಗಿದ್ದೇನೆ, ಆದರೂ ಹೇಳುತ್ತಿದ್ದೇನೆ, ‘ನಮ್ಮ ನ್ಯಾಯವ್ಯವಸ್ಥೆಯಲ್ಲಿ ನೈಜ ನ್ಯಾಯ ಸಿಗುವ ಯಾವುದೇ ವ್ಯವಸ್ಥೆಯಿಲ್ಲ. ನಾವು ಕೇವಲ ನಮಗೆ ಮೋಸ ಮಾಡಿಕೊಳ್ಳಲು ನ್ಯಾಯದ ವಿಷಯಗಳನ್ನು ಮಾತನಾಡುತ್ತೇವೆ. ಇಂದು ನ್ಯಾಯಾಲಯಗಳಲ್ಲಿ ನಿರ್ಣಯಗಳಾಗುತ್ತವೆ, ತೀರ್ಪುಗಳು ಬರುತ್ತವೆ; ಆದರೆ ನಿಜವಾದ ನ್ಯಾಯವು ಎಂದಿಗೂ ಸಿಗುವುದಿಲ್ಲ. ನ್ಯಾಯವನ್ನು ಪಡೆಯಬೇಕಾದರೆ, ಜನಾಂದೋಲನವನ್ನು ಮಾಡಬೇಕಾಗುತ್ತದೆ.
ನಾವು ಆಧ್ಯಾತ್ಮಿಕದೃಷ್ಟಿಯಲ್ಲಿ ಸಕ್ಷಮವಾದರೆ ಮಾತ್ರ ಸಂಘರ್ಷವನ್ನು ಮಾಡಬಹುದು !
ಈ ಪಾವನ ಪವಿತ್ರ ಭೂಮಿಯಲ್ಲಿ, ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯಲ್ಲಿ, ಜೀಜಾಮಾತೆ ಇರದಿದ್ದರೆ, ಛತ್ರಪತಿ ಶಿವಾಜಿ ಮಹಾರಾಜರು ತಯಾರಾಗುತ್ತಿರಲಿಲ್ಲ. ನಮ್ಮ ಮುಂದೆ ಅನೇಕ ಸಂಕಟ ಗಳಿವೆ, ನಮ್ಮ ಸಾಧನೆ ಅಂದರೆ, ಆಧ್ಯಾತ್ಮಿಕ ಪಕ್ಷ ಎಲ್ಲಿಯವರೆಗೆ ಪ್ರಬಲ ವಾಗುವುದಿಲ್ಲವೊ, ಅಲ್ಲಿಯ ವರೆಗೆ ನಮ್ಮಲ್ಲಿ ಸಂಘರ್ಷ ಮಾಡುವ ಕ್ಷಮತೆ ನಿರ್ಮಾಣವಾಗುವುದಿಲ್ಲ.
‘ಲವ್ ಜಿಹಾದ್ ಮೂಲಕ ಹಿಂದೂಗಳ ಸರ್ವನಾಶವಾಗುತ್ತಿದೆ
ಇಂದು ನಾವು ಎಲ್ಲಿದ್ದೇವೆ, ಎಂಬುದನ್ನು ಮೊದಲು ತಿಳಿದುಕೊಳ್ಳ ಬೇಕು, ನಮ್ಮ ವಿಭಜನೆಯನ್ನು ಹೇಗೆ ಮಾಡಲಾಗುತ್ತಿದೆ ? ಮತಾಂಧರು ವೇಷ ಬದಲಾಯಿಸಿ ಹಿಂದೂಗಳ ಹೆಸರಿನಲ್ಲಿ ಕೈಗೆ ಕೆಂಪು ದಾರವನ್ನು ಕಟ್ಟಿಕೊಂಡು, ಹಣೆಗೆ ಕುಂಕುಮವನ್ನು ಹಚ್ಚಿಕೊಂಡು ನಮ್ಮ ಮನೆಗಳಲ್ಲಿ ನುಸುಳುತ್ತಿದ್ದಾರೆ, ಅದು ಲವ್ ಜಿಹಾದ್ ಆಗಿದೆ. ಯಾವಾಗ ಅವರು ವೇಷ ಮತ್ತು ಹೆಸರುಗಳನ್ನು ಬದಲಾಯಿಸಿ ಬರುತ್ತಾರೆಯೋ, ಆಗ ನಮ್ಮ ಸರ್ವನಾಶವಾಗುತ್ತಿದೆ, ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗುವುದು.
ಆಧ್ಯಾತ್ಮಿಕ ವ್ಯಕ್ತಿತ್ವದ ಮೂಲಕವೇ ಹಿಂದೂ ರಾಷ್ಟ್ರದ ಸಂಕಲ್ಪನೆಯು ಖಂಡಿತವಾಗಿ ಯಶಸ್ವಿಯಾಗುವುದು !
ನಾವು ದೇಶದ ಸ್ವಾಭಿಮಾನವನ್ನು ತಿಳಿದುಕೊಳ್ಳಬೇಕು. ನಾವು ಎಷ್ಟೊಂದು ಗೌರವಶಾಲಿ ಪರಂಪರೆಯಿಂದ ಬಂದಿದ್ದೇವೆ. ಇಂದು ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವವಿದೆ, ಸಂಸತ್ತಿನ ವ್ಯವಸ್ಥೆಯಿದೆ. ನಾವು ಕೇವಲ ನಿಯಮಗಳನ್ನು ಮತ್ತು ಕಾನೂನುಗಳನ್ನು ಪಾಲನೆ ಮಾಡುವ ವ್ಯವಸ್ಥೆಯನ್ನು ಅನುಸರಿಸುತ್ತಿದ್ದೇವೆ; ನಮಗೆ ಗಾಂಭೀರ್ಯದಿಂದ ವಿಚಾರ ಮಾಡುವ ಅವಶ್ಯಕತೆಯಿದೆ. ನಮಗಿರುವ ಏಕೈಕ ಮಾರ್ಗವೆಂದರೆ, ಅಧ್ಯಾತ್ಮ ! ನಮ್ಮ ದೇಶದಲ್ಲಿ ಸಾವಿರಾರು ಮಠಾಧೀಶರಿದ್ದಾರೆ. ನಾವು ಅವರೆಲ್ಲರನ್ನೂ ಮತ್ತು ವಿವಿಧ ಸಾಮಾಜಿಕ ಸಂಘಟನೆಗಳನ್ನು ಸಂಘಟಿಸಿ ಒಂದು ವ್ಯಾಸಪೀಠದ ಮೇಲೆ ತರಬೇಕು. ರಾಜಕಾರಣದಲ್ಲಿ ಅಧ್ಯಾತ್ಮದ ದೃಷ್ಟಿಕೋನದಿಂದ ವಿಚಾರ ಮಾಡುವ ಜನರಿರಬಹುದು, ಅದಕ್ಕಾಗಿ ನಾವು ಪ್ರಯತ್ನಿಸೋಣ. ಹಾಗೆಯೇ ಆಧ್ಯಾತ್ಮಿಕ ಚಿಂತನೆಯನ್ನು ಮಾಡಿ ನಾವು ನಮ್ಮ ವ್ಯಕ್ತಿತ್ವದ ವಿಕಾಸವನ್ನು ಮಾಡಿಕೊಳ್ಳೋಣ. ಮೊದಲು ವೈಯಕ್ತಿಕ ವಿಕಾಸವಾದರೆ, ನಂತರ ಸಮಷ್ಟಿಯ, ಅಂದರೆ ನಮ್ಮ ಹಿಂದೂ ರಾಷ್ಟ್ರದ ಸಂಕಲ್ಪನೆಯು ಖಂಡಿತ ಯಶಸ್ವಿಯಾಗುವುದು; ಆದರೆ ಅದು ಬೇರೆ ಬೇರೆ ಗುಂಪುಗಳಿಂದ ಸಾಧ್ಯವಾಗಲಿಕ್ಕಿಲ್ಲ. ಭಗವಾನ ಶ್ರೀಕೃಷ್ಣನ ಪೂರ್ಣ ಚಿಂತನೆಯಿಂದ ಇದು ಸಾಧ್ಯವಿದೆ.
ಹಿಂದೂ ಧರ್ಮದಲ್ಲಿನ ಶ್ರೇಷ್ಠ ಪರಂಪರೆಗಳ ಆಚರಣೆಗಳಿಂದಲೇ ಹಿಂದೂ ರಾಷ್ಟ್ರದ ಧ್ಯೇಯವನ್ನು ತಲುಪಬಹುದು !
ಸತ್ಯವು ಯಾವಾಗಲೂ ಸತ್ಯವೇ ಆಗಿರುತ್ತದೆ. ಅದನ್ನು ಸ್ವಲ್ಪ ಸಮಯದ ವರೆಗೆ ನಾವು ಮುಚ್ಚಿಡಬಹುದು ಮತ್ತು ಸ್ವಲ್ಪ ಸಮಯದವರೆಗೆ ನಾವು ಜನರಿಗೆ ಸುಳ್ಳು ಹೇಳಿ ಮೋಸ ಮಾಡಬಹುದು; ಆದರೆ ಯಾವಾಗ ಸತ್ಯ ಹೊರಬರುತ್ತದೆಯೋ, ಆಗ ಅದರ ನಿಜಸ್ವರೂಪ ಬಯಲಾಗುತ್ತದೆ. ಇದೇ ನಮ್ಮ ರಾಷ್ಟ್ರದ, ಭಾರತದ, ಸನಾತನ ಧರ್ಮದ, ಆರ್ಯ ಸಂಸ್ಕೃತಿಯ, ನಮ್ಮ ಋಷಿ ಪರಂಪರೆ, ನಮ್ಮ ವೇದ ಮತ್ತು ನಮ್ಮ ಎಲ್ಲ ವ್ಯವಸ್ಥೆಯ ಬೋಧನೆಯಾಗಿದೆ. ನಾವು ಆ ಶ್ರೇಷ್ಠ ಪರಂಪರೆಗನುಸಾರ ಆಚರಣೆ ಮಾಡಿಯೇ ನಮ್ಮ ವೈಯಕ್ತಿಕ ಆಧ್ಯಾತ್ಮಿಕ ಹಾಗೂ ಅದರೊಂದಿಗೆ ಸಾಮಾಜಿಕ ವಿಕಾಸವನ್ನು ಮಾಡಿ ನಮ್ಮ ಧ್ಯೇಯವನ್ನು ಖಂಡಿತವಾಗಿಯೂ ತಲುಪಬಲ್ಲೆವು; ಆದರೆ ಎಲ್ಲಕ್ಕಿಂತ ಮೊದಲು ನಾವೇ ಅದನ್ನು ಆರಂಭಿಸಬೇಕಾವುದು. ಮೊಟ್ಟಮೊದಲು ನಮಗೆ ನಮ್ಮಲ್ಲಿರುವ ಕಪಟಿ ಜನರನ್ನು ಗುರುತಿಸಲು ಬರಬೇಕು ಮತ್ತು ಎರಡನೇಯದ್ದೆಂದರೆ ನಾವೆಲ್ಲರೂ ಪರಸ್ಪರ ಅನ್ಯೋನ್ಯವಾಗಿರೋಣ. ‘ಪರಮಪಿತಾ ಪರಮೇಶ್ವರನ ಸಾಕ್ಷಿಯನ್ನಿಟ್ಟು ಅಂದರೆ, ಭಗವಾನ ಶ್ರೀಕೃಷ್ಣನನ್ನು ಸ್ಮರಿಸಿ ವರ್ತಮಾನ ಕಾಲದಲ್ಲಿ ಯಾವುದನ್ನು ಯೋಗ್ಯ ಮಾಡುವುದಿದೆಯೋ, ಅದನ್ನು ನಮಗೆ ಮಾಡಲೇ ಬೇಕಾಗುವುದು. ಇದರಲ್ಲಿ ನಾವು ನಿಶ್ಚಿತವಾಗಿ ಯಶಸ್ವಿಯಾಗುವೆವು. – ನ್ಯಾಯವಾದಿ ರಾಜೇಂದ್ರ ವರ್ಮಾ, ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯ (ಮೇ ೨೭ ರಿಂದ ೮ ಜೂನ್ ೨೦೧೯ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀ ರಾಮನಾಥ ದೇವಸ್ಥಾನ, ರಾಮನಾಥಿ, ಫೋಂಡಾ, ಗೋವಾದಲ್ಲಿ ನೆರೆವೇರಿದ ೮ ನೇ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಮಂಡಿಸಿದ ಅಂಶಗಳು)