ಚೀನಾದಲ್ಲಿ ಕೊರೋನಾದಿಂದ ಗುಣಮುಖನಾಗಿದ್ದ ರೋಗಿಗಳಿಗೆ ಪುನಃ ಕೊರೋನಾದ ಸೋಂಕು

ಬೀಜಿಂಗ್ – ಕೊರೋನಾದಿಂದ ಮುಕ್ತವಾಗಿ ಅನೇಕ ತಿಂಗಳು ಕಳೆದ ನಂತರವೂ ಇಬ್ಬರು ರೋಗಿಗಳ ಕೊರೋನಾ ಪರೀಕ್ಷಣೆಯ ವರದಿಯಲ್ಲಿ ಪುನಃ ಸಕಾರಾತ್ಮಕ (ಪಾಸಿಟಿವ್) ಬಂದಿರುವ ಘಟನೆ ಬೆಳಕಿಗೆ ಬಂದಿದೆ.

ಚೀನಾದ ಹುಬೈ ಪ್ರದೇಶದಲ್ಲಿ ವಾಸವಾಗಿರುವ ೬೮ ವರ್ಷದ ಮಹಿಳೆಯು ೬ ತಿಂಗಳ ಹಿಂದೆಯೇ ಕೊರೋನಾದಿಂದ ಮುಕ್ತವಾಗಿದ್ದರು. ಆಕೆಗೆ ಪುನಃ ಕೊರೋನಾದ ಸೋಂಕು ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಇನ್ನೋರ್ವ ವ್ಯಕ್ತಿಯು ವಿದೇಶದಿಂದ ಮರಳಿದ ನಂತರ ಕೊರೋನಾದ ಸೋಂಕು ತಗಲಿತ್ತು. ನಂತರ ಆತನೂ ಕೊರೋನಾದಿಂದ ಮುಕ್ತರಾಗಿದ್ದರು. ಈಗ ಅದೇ ವ್ಯಕ್ತಿಗೆ ಕೊರೋನಾದ ಸೋಂಕು ತಗಲಿದೆ. ‘ಈ ವ್ಯಕ್ತಿಯಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಂಡು ಬರುತ್ತಿರಲಿಲ್ಲ, ಅದೇರೀತಿ ಆತ ಇತರ ಯಾರ ಸಂಪರ್ಕಕ್ಕೂ ಬಂದಿರಲಿಲ್ಲ’, ಎಂದು ಹೇಳಲಾಗಿದೆ. ಚೀನಾದ ಈ ಘಟನೆಯಿಂದ ಜಗತ್ತಿನ ಚಿಂತೆಯು ಹೆಚ್ಚಾಗಿದೆ.