ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ರಾಜಕಾರಣಿಗಳು, ಬುದ್ಧಿಜೀವಿಗಳು ಅಥವಾ ವಿಜ್ಞಾನಿಗಳು ಇವರಿಂದಾಗಿ ವಿದೇಶಿಯರು ಭಾರತಕ್ಕೆ ಬರುವುದಿಲ್ಲ ಬದಲಾಗಿ ಸಂತರಿಂದಾಗಿ ಹಾಗೂ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ. ಆದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮ ಇವುಗಳ ಬೆಲೆ ತಿಳಿದಿರುವುದಿಲ್ಲ.
‘ಒಬ್ಬೊಬ್ಬ ಭಕ್ತನಿಗೆ ಸಹಾಯ ಮಾಡುವ ದೇವತೆಗಿಂತ ಸಮಷ್ಟಿಗೆ ಸಹಾಯ ಮಾಡುವ ಈಶ್ವರನ ರಾಮ-ಕೃಷ್ಣ ಮುಂತಾದ ಅವತಾರಗಳು ಎಲ್ಲರಿಗೂ ಆತ್ಮೀಯರು ಎನಿಸುತ್ತಾರೆ.
‘ಎಲ್ಲಿ ಬುದ್ಧಿಗೆ ಮೀರಿದ ಜ್ಞಾನವನ್ನು ಕಲಿಸುವ ಬುದ್ಧಿಜೀವಿಗಳು ಮತ್ತು ಎಲ್ಲಿ ಬುದ್ಧಿಲಯಗೊಳಿಸಲು ಕಲಿಸುವ ಅಧ್ಯಾತ್ಮಶಾಸ್ತ್ರ !
‘ಇತರ ಧರ್ಮದವರಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವುಗಳಲ್ಲಿನ ಧರ್ಮ ಮತ್ತು ಮೋಕ್ಷ ಇವುಗಳ ಜ್ಞಾನವು ಬಹುತೇಕ ಇರುವುದಿಲ್ಲ. ಧರ್ಮ ಮತ್ತು ಮೋಕ್ಷ ಇವುಗಳ ಜ್ಞಾನ ಇಲ್ಲದಿರುವುದರಿಂದ ಅವರ ಜೀವನ ಕೇವಲ ಅರ್ಥ ಮತ್ತು ಕಾಮ ಇವುಗಳಲ್ಲಿ ಕಳೆಯುತ್ತದೆ !
‘ಕ್ರೈಸ್ತರು, ಮುಸಲ್ಮಾನರು ತಮ್ಮ ಸಂಖ್ಯಾಬಲ ಹೆಚ್ಚಾಗಲೆಂದು ಇತರರ ಮತಾಂತರ ಮಾಡುತ್ತಾರೆ; ತದ್ವಿರುದ್ಧ ಹಿಂದೂಗಳು ಇತರ ಧರ್ಮದವರಿಗೆ ಮೋಕ್ಷ ದೊರಕಲೆಂದು ಅವರಿಗೆ ಧರ್ಮವನ್ನು ಕಲಿಸುತ್ತಾರೆ !
‘ಹಿಂದೂಗಳು ಇತರ ಧರ್ಮದವರಿಗೆ ಕೇವಲ ಸಾಧನೆಯನ್ನು ಕಲಿಸುತ್ತಾರೆ. ಹಿಂದೂಗಳು ಇತರ ಧರ್ಮದವರಂತೆ ಇತರರ ಮತಾಂತರ ಮಾಡುವುದಿಲ್ಲ ! – ಪರಾತ್ಪರ ಗುರು (ಡಾ.) ಆಠವಲೆ