ಚಾತುರ್ಮಾಸ

೧. ತಿಥಿ

ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯ ವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ ಎನ್ನುತ್ತಾರೆ.

೨. ಕಾಲ ಮತ್ತು ದೇವತೆ

ಮನುಷ್ಯನ ಒಂದು ವರ್ಷವು ದೇವರ ಒಂದು ಅಹೋರಾತ್ರಿಯಾಗಿರುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಂತೆ ಕಾಲದ ಪರಿಮಾಣವು ಬದಲಾಗುತ್ತದೆ. ಇದು ಅಂತರಿಕ್ಷ ಯಾತ್ರಿಗಳು ಚಂದ್ರನ ಮೇಲೆ ಹೋಗಿ ಬಂದ ನಂತರ ಅವರಿಗೆ ಬಂದ ಅನುಭವದಿಂದ ಸಿದ್ಧವಾಗಿದೆ.

೩. ಮಹತ್ವ

ದೇವರ ಈ ನಿದ್ರಾಕಾಲದಲ್ಲಿ ಅಸುರರು ಪ್ರಬಲರಾಗುತ್ತಾರೆ ಮತ್ತು ಮಾನವರಿಗೆ ತೊಂದರೆಗಳನ್ನು ಕೊಡುತ್ತಾರೆ. ‘ಅಸುರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಒಂದಲ್ಲೊಂದು ವ್ರತವನ್ನು ಅವಶ್ಯವಾಗಿ ಮಾಡಬೇಕು ಎಂದು ಧರ್ಮಶಾಸ್ತ್ರವು ಹೇಳುತ್ತದೆ –

ವಾರ್ಷಿಕಾಂಶ್ಚತುರೋ ಮಾಸಾನ್ ವಾಹಯೇತ್ ಕೇನಚಿನ್ನರಃ |

ವ್ರತೇನ ನ ಚೇದಾಪ್ನೋತಿ ಕಿಲ್ಮಿಷಂ ವತ್ಸರೋದ್ಭವಮ್ ||

ಅರ್ಥ : ಪ್ರತಿವರ್ಷ ಚಾತುರ್ಮಾಸದಲ್ಲಿ ಮನುಷ್ಯನು ಯಾವುದಾದರೊಂದು ವ್ರತವನ್ನು ಅವಶ್ಯ ಮಾಡಬೇಕು; ಇಲ್ಲದಿದ್ದರೆ ಅವನಿಗೆ ಸಂವತ್ಸರೋದ್ಭವವೆಂಬ ದೋಷ ತಗಲುತ್ತದೆ.

೪. ವೈಶಿಷ್ಟ್ಯಗಳು

ಅ. ಈ ಕಾಲಾವಧಿಯಲ್ಲಿ ಮಳೆಗಾಲ ಇರುವುದರಿಂದ ಧರಣಿಯ ರೂಪವು ಬದಲಾಗಿರುತ್ತದೆ.

ಆ. ಮಳೆ ಹೆಚ್ಚಿರುವುದರಿಂದ ಬಹಳಷ್ಟು ಸ್ಥಳಾಂತರವಾಗುವುದಿಲ್ಲ. ಆದುದರಿಂದಲೇ ಚಾತುರ್ಮಾಸ ವ್ರತವನ್ನು ಒಂದೇ ಸ್ಥಳದಲ್ಲಿದ್ದು ಮಾಡಬೇಕೆಂಬ ರೂಢಿಯು ಬಂದಿದೆ. ಒಂದೇ ಸ್ಥಳದಲ್ಲಿ ಕುಳಿತು ಗ್ರಂಥವಾಚನ, ಜಪ, ನಾಮಸ್ಮರಣೆ, ಅಧ್ಯಯನ, ಸಾಧನೆ ಮಾಡುವುದು ಇದು ಈ ಉಪಾಸನೆಗೆ ಮಹತ್ವವಿದೆ.

ಇ. ಮನುಷ್ಯನ ಮಾನಸಿಕ ರೂಪವೂ ಬದಲಾಗಿರುತ್ತದೆ. ದೇಹದಲ್ಲಿನ ಜೀರ್ಣಾಂಗ ಇತ್ಯಾದಿಗಳ ಕಾರ್ಯವೂ ಭಿನ್ನ ರೀತಿಯಲ್ಲಿ ನಡೆದಿರುತ್ತದೆ. ಅದಕ್ಕನುಸಾರ ಈ ಕಾಲದಲ್ಲಿ ಗೆಡ್ಡೆ, ಬದನೆ, ಹುಣಸೇಹಣ್ಣು ಇತ್ಯಾದಿ ಆಹಾರ ಪದಾರ್ಥಗಳನ್ನು ತಿನ್ನಬಾರದೆಂದು ಹೇಳಲಾಗಿದೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು)