೫ ಜುಲೈ ೨೦೨೦ ರಂದು ಆಷಾಢ ಹುಣ್ಣಿಮೆ, ಅಂದರೆ ಗುರುಪೂರ್ಣಿಮೆಯಾಗಿದೆ. ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಈ ದಿನ ಗುರುತತ್ತ್ವವು ಒಂದು ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸಾಧಕರಿಗೆ ಗುರುಪೂರ್ಣಿಮೆಯ ಹೆಚ್ಚೆಚ್ಚು ಲಾಭವಾಗಬೇಕೆಂದು ಗುರುಕೃಪಾಯೋಗದ ಮಾಧ್ಯಮದಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು ಸಂತಪದವಿಯನ್ನು ಮತ್ತು ಸದ್ಗುರುಪದವಿಯನ್ನು ಪ್ರಾಪ್ತಮಾಡಿಕೊಂಡಿರುವ ಸನಾತನದ ಕೆಲವು ಸಂತರ ಬಗೆಗಿನ ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ.
ಈ ಲೇಖನಮಾಲೆಯಲ್ಲಿ ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರು ಮಾಡಿದ ಮಾರ್ಗದರ್ಶನವನ್ನು ನೋಡಿದೆವು, ಇದರ ಮುಂದುವರಿದ ಮಾರ್ಗದರ್ಶನ ಮತ್ತು ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳನ್ನು ನೋಡೋಣ !
ಪೂ. ರಮಾನಂದ ಗೌಡ ಇವರ ಬಗೆಗಿನ ಸವಿಸ್ತಾರ ಮಾಹಿತಿಯನ್ನು ಮುಂದೆ ಪ್ರಕಾಶಿತಗೊಳ್ಳುವ ಸಂತರ ಬಗೆಗಿನ ಚರಿತ್ರೆಗಳಲ್ಲಿ ಕೊಡಲಾಗುವುದು.
ಈ ಲೇಖನದಲ್ಲಿನ ಬರವಣಿಗೆಯು ಮೊದಲಿನದ್ದಾಗಿರುವುದರಿಂದ ಸಂತರ ಹೆಸರನ್ನು ಮೊದಲಿ ನಂತೆಯೇ ಉಲ್ಲೇಖಿಸಲಾಗಿದೆ. – ಸಂಪಾದಕರು
ಪೂ. ರಮಾನಂದ ಗೌಡರವರು ಸಾಧಕರಿಗೆ ಮಾಡಿದ ಮಾರ್ಗದರ್ಶನ
೨ ಆ ೪. ಪೂ. ರಮಾನಂದ ಗೌಡರವರ ಹಸ್ತಗಳಿಂದ ಧರ್ಮ ಶಾಸ್ತ್ರಕ್ಕನುಸಾರ ಕಾರಖಾನೆಯ ಉದ್ಘಾಟನೆ ಮಾಡಿ ಎಲ್ಲರೆದುರು ಆದರ್ಶ ನಿರ್ಮಾಣ ಮಾಡುವ ಬೆಂಗಳೂರಿನ ಉದ್ಯಮಿ ರಾಜೇಂದ್ರ ಪಾರೀಖ ! : ‘ಮೂಲ ರಾಜಸ್ಥಾನದವರಾಗಿದ್ದ ಮತ್ತು ಸದ್ಯ ಬೆಂಗಳೂರಿನಲ್ಲಿ ವ್ಯವಸಾಯ ಮಾಡುವ ಉದ್ಯಮಿ ಶ್ರೀ. ರಾಜೇಂದ್ರ ಪಾರೀಖ ಇವರು ಇಲ್ಲಿ ‘ಗ್ರೀನಕೊರ್ ಇಂಡಿಯಾ’ ಹೆಸರಿನ ಒಂದು ಹೊಸ ಕಾರಖಾನೆಯನ್ನು ಸ್ಥಾಪಿಸಿದ್ದಾರೆ. ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡರವರು ವಸಂತ ಪಂಚಮಿಯ ಶುಭದಿನ, ಅಂದರೆ ೧೨.೨.೨೦೧೯ ರಂದು ಈ ಕಾರಖಾನೆಯ ಉದ್ಘಾಟನೆಯನ್ನು ತಮ್ಮ ಶುಭಹಸ್ತಗಳಿಂದ ಮಾಡಿದರು.
೨ ಆ ೪ ಅ. ಶ್ರೀ. ಪಾರೀಖರವರಲ್ಲಿನ ಸಂತರ ಬಗೆಗಿನ ಭಾವ ! : ‘ ಪೂ. ರಮಾನಂದ ಗೌಡರವರು ಶ್ರೀ. ಪಾರೀಖ ಇವರಿಗೆ ಶ್ರೀಕೃಷ್ಣನ ಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಆಗ ‘ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಪೂ. ರಮಾನಂದ ಗೌಡ ಇವರ ಹಸ್ತಗಳಿಂದ ಶ್ರೀಕೃಷ್ಣನ ಚಿತ್ರವು ಉಡುಗೊರೆಯಾಗಿ ಸಿಕ್ಕಿತು’, ಎಂಬ ಭಾವದಿಂದ ಶ್ರೀ. ಪಾರೀಖರವರು ಆ ಚಿತ್ರವನ್ನು ನತಮಸ್ತಕರಾಗಿ ಸ್ವೀಕರಿಸಿದರು. ನಂತರ ಪೂ. ರಮಾನಂದ ಅಣ್ಣನವರನ್ನು ಉದ್ದೇಶಿಸಿ, “ನಿಮ್ಮ ಚರಣಸ್ಪರ್ಶದಿಂದ ಈ ಕಾರಖಾನೆಯು ಪಾವನವಾಯಿತು, ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕು ! ಈಗ ನನಗೆ ಯಾವುದೇ ಚಿಂತೆ ಇಲ್ಲ’, ಎಂದು ಹೇಳಿದರು.
೨ ಇ. ಪೂ. ರಮಾನಂದ ಗೌಡರವರ ಮಾರ್ಗದರ್ಶನದ ವೈಶಿಷ್ಟ್ಯಗಳು ಮತ್ತು ಅವರ ಮಾರ್ಗದರ್ಶನದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿಗಳು
೨ ಇ ೧. ಪೂ. ಅಣ್ಣನವರ ಮಾರ್ಗದರ್ಶನದ ವೈಶಿಷ್ಟ್ಯಗಳು
೨ ಇ ೧ ಅ. ಕಥೆಗಳ ಮಾಧ್ಯಮದಿಂದ ಸಾಧನೆ ಮತ್ತು ಅಧ್ಯಾತ್ಮವನ್ನು ಸುಲಭ ಮಾಡಿ ಹೇಳುವುದು : ಮಾರ್ಗದರ್ಶನವನ್ನು ಮಾಡುವಾಗ ಪೂ. ಅಣ್ಣನವರು ಚಿಕ್ಕ-ಚಿಕ್ಕ ಕಥೆಗಳನ್ನು ಹೇಳಿ ಸಾಧಕರ ಮನಸ್ಸಿನ ಮೇಲೆ ಸಾಧನೆಯನ್ನು ಬಿಂಬಿಸುತ್ತಾರೆ. ಅವರ ಕಥೆಗಳು ಅಂತರ್ಮನಸ್ಸನ್ನು ಸ್ಪರ್ಶಿಸುತ್ತವೆ ಮತ್ತು ಕೃತಿ ಮಾಡಲು ಪ್ರೇರಣೆ ನೀಡುತ್ತವೆ. ಅವರ ಕಥೆಗಳು ತುಂಬಾ ವೈಶಿಷ್ಟ್ಯಪೂರ್ಣವಾಗಿರುತ್ತವೆ. ನಾನು ಹೊಸದಾಗಿ ಸಾಧನೆಯಲ್ಲಿ ಬಂದಿದ್ದಾಗ ಅವರು ನನಗೆ ಮಹರ್ಷಿ ವಸಿಷ್ಠ ಮತ್ತು ವಿಶ್ವಾಮಿತ್ರರ ಕಥೆಯಿಂದ ಸತ್ಸಂಗದ ಮಹತ್ವವನ್ನು ಹೇಳಿದ್ದರು. ಅವರು ಇಂತಹ ನೂರಾರು ಕಥೆಗಳ ಅಧ್ಯಯನ ಮಾಡಿದ್ದಾರೆ. ಅವುಗಳಿಂದ ಸಾಧನೆ ಸುಲಭವಾಗುವ ಹಾಗೆ ಅವರು ಮಾರ್ಗದರ್ಶನ ಮಾಡುತ್ತಾರೆ.
೨ ಇ ೧ ಆ. ಕಥೆಗಳ ಮಾಧ್ಯಮದಿಂದ ಸಾಧನೆಯ ವಿಷಯವನ್ನು ಮನಸ್ಸಿನ ಮೇಲೆ ಬಿಂಬಿಸುವುದು : ‘ಗುರು-ಶಿಷ್ಯ, ಆಜ್ಞಾಪಾಲನೆಯ ಮಹತ್ವ, ಗುರುಗಳ ಮೇಲಿನ ದೃಢ ಶ್ರದ್ಧೆ, ಗುರುಗಳೇ ಜೀವನದಲ್ಲಿ ಹೇಗೆ ಸರ್ವಶ್ರೇಷ್ಠರಾಗಿದ್ದಾರೆ, ಪ್ರೇಮಭಾವದ ಉದಾಹರಣೆಗಳು, ಭಾವಜಾಗೃತಿಯ ಪ್ರಯತ್ನವನ್ನು ಹೆಚ್ಚಿಸುವುದರ ಮಹತ್ವ, ಸ್ವಭಾವದೋಷ ಮತ್ತು ಅಹಂನಿಂದ ಸಾಧನೆಯಲ್ಲಾಗುವ ಅಪಾರ ಹಾನಿ’, ಇಂತಹ ಅನೇಕ ವಿಷಯಗಳ ಬಗ್ಗೆ ಪೂ.ಅಣ್ಣನವರು ಕಥೆಗಳನ್ನು ಹೇಳುತ್ತಾರೆ ಮತ್ತು ಆ ಮೂಲಕ ಆ ವಿಷಯವನ್ನು ನಮ್ಮ ಮನಸ್ಸಿನ ಮೇಲೆ ಬಿಂಬಿಸುತ್ತಾರೆ.
೨ ಇ ೧ ಇ. ಪೂ. ಅಣ್ಣನವರ ಒಂದೊಂದು ಶಬ್ದದಿಂದ ಭಾವವನ್ನು ಅನುಭವಿಸಲು ಸಿಗುತ್ತದೆ. ‘ಅವರು ಮಾಡುವ ಮಾರ್ಗದರ್ಶನವನ್ನು ಪೂ. ಅಣ್ಣನವರು ಸ್ವತಃ ಅನುಭವಿಸಿದ್ದಾರೆ’, ಎಂದು ಅವರ ಮಾತುಗಳಿಂದ ಅನಿಸುತ್ತದೆ.
೨ ಇ ೧ ಈ. ಅನೇಕ ಸಲ ಪೂ. ರಮಾನಂದ ಅಣ್ಣನವರು ಹೇಳುತ್ತಿರುವ ಕಥೆಗಳಲ್ಲಿ ಗುರು-ಶಿಷ್ಯರಿರುತ್ತಾರೆ. ಆಗ ‘ಪರಾತ್ಪರ ಗುರುದೇವರು ಮತ್ತು ಪೂ. ಅಣ್ಣನವರಲ್ಲಿಯೇ ಆ ಪ್ರಸಂಗವು ನಡೆದಿದೆ’, ಎಂದು ನನಗೆ ಅನಿಸುತ್ತದೆ.
೨ ಇ ೨. ಪೂ. ಅಣ್ಣನವರ ಮಾರ್ಗದರ್ಶನದಿಂದ ‘ಸಾಧನೆಯು ಸುಲಭ ಮತ್ತು ಸಹಜತೆಯಿಂದ ಮಾಡುವಂತಹದ್ದಾಗಿದೆ’, ಎಂದು ಅನೇಕ ಧರ್ಮಾಭಿಮಾನಿಗಳು ಹೇಳಿದ್ದಾರೆ ಮತ್ತು ಸಾಧನೆಯಲ್ಲಿನ ಅಂಶಗಳನ್ನು ಪ್ರತ್ಯಕ್ಷ ಕೃತಿಯಲ್ಲಿ ತಂದು ಅವರು ಅಧ್ಯಾತ್ಮವನ್ನು ಅನುಭವಿಸಿದ್ದಾರೆ.
೨ ಇ ೩. ‘ಗುರುಗಳ ಆಜ್ಞಾಪಾಲನೆ ಮಾಡಿದರೆ ಶಿಷ್ಯನ ಕಲ್ಯಾಣವೇ ಆಗುತ್ತದೆ’, ಇದರ ಬಗ್ಗೆ ಪೂ. ಅಣ್ಣನವರು ಹೇಳಿದ ಒಂದು ಕಥೆ : ಒಮ್ಮೆ ಓರ್ವ ಗುರುಗಳು ತಮ್ಮ ಶಿಷ್ಯನಿಗೆ ಸೇವೆಯೆಂದು ಒಂದು ಗೋಡೆಯನ್ನು ಕಟ್ಟಲು ಹೇಳುತ್ತಾರೆ. ಗುರುಗಳ ಆಜ್ಞಾಪಾಲನೆಯೆಂದು ಶಿಷ್ಯನು ಗೋಡೆಯನ್ನು ಕಟ್ಟುತ್ತಾನೆ. ಗುರುಗಳು ಆ ಗೋಡೆಯನ್ನು ನೋಡಿ “ನೀನು ಈ ಗೋಡೆಯನ್ನು ಚೆನ್ನಾಗಿ ಕಟ್ಟಿಲ್ಲ, ಇದನ್ನು ಕೆಡುವಿ ನೀನು ಪುನಃ ಗೋಡೆಯನ್ನು ಕಟ್ಟು,” ಎಂದು ಹೇಳುತ್ತಾರೆ. ಶಿಷ್ಯನು ಪುನಃ ಗುರುಗಳ ಆಜ್ಞಾಪಾಲನೆ ಮಾಡುತ್ತಾ ಮೊದಲು ಕಟ್ಟಿದ ಗೋಡೆಯನ್ನು ಕೆಡುವಿ ಹೊಸ ಗೋಡೆಯನ್ನು ಕಟ್ಟುತ್ತಾನೆ; ಆದರೆ ಗುರುಗಳು ಪುನಃ ‘ಆ ಗೋಡೆಯನ್ನು ಜೆನ್ನಾಗಿ ಕಟ್ಟಿಲ್ಲ. ನೀನು ಪುನಃ ಬೇರೆ ಗೋಡೆಯನ್ನು ಕಟ್ಟು’, ಎಂದು ಹೇಳಿ ಅದನ್ನು ಕೆಡವಲು ಹೇಳುತ್ತಾರೆ. ಶಿಷ್ಯನು ಗೋಡೆಯನ್ನು ಕಟ್ಟುತ್ತಾನೆ ಮತ್ತು ಗುರುಗಳು ಅದನ್ನು ಕೆಡವುತ್ತಾರೆ, ಹೀಗೆ ೫೬ ಬಾರಿ ಆಗುತ್ತದೆ; ಆದರೆ ಆ ಶಿಷ್ಯನ ಮನಸ್ಸಿನಲ್ಲಿ ಒಮ್ಮೆಯೂ ‘ಗುರುಗಳು ಹೀಗೇಕೆ ಹೇಳುತ್ತಿದ್ದಾರೆ ?’, ಎಂಬ ವಿಚಾರ ಬರುವುದಿಲ್ಲ. ಶಿಷ್ಯನು ‘ಕೇವಲ ಗುರುಗಳ ಆಜ್ಞಾಪಾಲನೆ ಮಾಡಬೇಕು’, ಎಂಬ ಭಾವವನ್ನಿಟ್ಟು ಗೋಡೆಯನ್ನು ಕಟ್ಟುತ್ತಿರುತ್ತಾನೆ. ಕೊನೆಗೆ ಗುರುಗಳು ಶಿಷ್ಯನಿಗೆ, ‘ನೀನು ನನ್ನ ಉತ್ತರಾಧಿಕಾರಿಯಾದೆ’ ಎಂದು ಹೇಳುತ್ತಾರೆ.
ಪೂ. ಅಣ್ಣನವರು ಈ ಕಥೆಯ ಮಾಧ್ಯಮದಿಂದ ‘ಗುರುಗಳ ಮೇಲೆ ಶ್ರದ್ಧೆಯನ್ನಿಟ್ಟು ಆಜ್ಞಾಪಾಲನೆಯನ್ನು ಮಾಡಿದರೆ ನಮ್ಮ ಕಲ್ಯಾಣ ಹೇಗೆ ಆಗುತ್ತದೆ ಎಂಬುದನ್ನು ಹೇಳುತ್ತಾರೆ. ಇದರಿಂದ ಸಾಧಕರ ಭಾವ ಜಾಗೃತವಾಗುತ್ತದೆ, ಹಾಗೆಯೇ ‘ನಮ್ಮ ಗುರುಗಳು ಇಷ್ಟೊಂದು ಕಠಿಣ ಸೇವೆಯನ್ನು ಹೇಳುವುದಿಲ್ಲ. ಕೇವಲ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಕ್ರಿಯೆಯನ್ನು ಮಾಡಲು ಹೇಳುತ್ತಾರೆ. ಒಂದು ವೇಳೆ, ನಾವು ಮನಃಪೂರ್ವಕ ಪ್ರಕ್ರಿಯೆಯನ್ನು ಮಾಡಿದರೆ, ಆ ಶಿಷ್ಯನಂತೆ ನಮ್ಮ ಕಲ್ಯಾಣವೂ ಆಗುವುದು’, ಎಂಬುದು ಈ ಕಥೆಯಿಂದ ಕಲಿಯಲು ಸಿಗುತ್ತದೆ.
೨ ಇ ೪. ಅನುಭೂತಿಗಳು
ಅ. ಪೂ. ಅಣ್ಣನವರ ಮಾರ್ಗದರ್ಶನದ ಸಮಯದಲ್ಲಿ ವಾತಾವರಣದಲ್ಲಿ ತುಂಬಾ ಒಳ್ಳೆಯ ಬದಲಾವಣೆಯ ಅರಿವಾಗುತ್ತದೆ.
ಆ. ‘ಸ್ವಭಾವದೋಷ-ನಿರ್ಮೂಲನಾ ಸತ್ಸಂಗದಲ್ಲಿ ಸಾಧಕರಿಗೆ ಸ್ವಭಾವ ದೋಷ ಮತ್ತು ಅಹಂನ ವಿಷಯದಲ್ಲಿ ಕಠೋರವಾಗಿ ಅರಿವು ಮಾಡಿ ಕೊಡುವಾಗಲೂ ಪೂ. ಅಣ್ಣನವರಲ್ಲಿ ಭಾವವಿರುತ್ತದೆ.’
ಇ. ‘ಸತ್ಸಂಗದಲ್ಲಿ ಹಗುರೆನಿಸುವುದು, ಭಾವ ಅನುಭವವಾಗುವುದು, ಉಪಾಯವಾಗುವುದು, ಚೈತನ್ಯದ ಅರಿವಾಗುವುದು, ‘ಪೂ. ಅಣ್ಣನವರು ಮಾತನಾಡುತ್ತಲೇ ಇರಬೇಕು’ ಎಂದೆನಿಸುವುದು’, ಈ ರೀತಿ ಅನುಭವಿಸಲು ಸಿಗುತ್ತದೆ.
ಈ. ಪೂ. ಅಣ್ಣನವರ ಮಾತುಗಳಲ್ಲಿ ಮಾಧುರ್ಯವನ್ನು ಅನುಭವಿಸಲು ಸಿಗುತ್ತದೆ ‘ಹೇ, ಶ್ರೀಮನ್ನಾರಾಯಣಾ, ನಿನ್ನ ಅನಂತ ಕೃಪೆಯಿಂದಾಗಿ ನನಗೆ ಪೂ. ಅಣ್ಣನವರ ಮಾರ್ಗದರ್ಶನದ ಲಾಭವಾಯಿತು. ‘ನನಗೆ ಏನೆಲ್ಲ ಕಲಿಯಲು ಸಿಕ್ಕಿತೋ, ಅದರಿಂದ ಗುರುದೇವರಿಗೆ ಅಪೇಕ್ಷಿತವಿರುವಂತಹ ಕೃತಿಯನ್ನು ಮಾಡುವ ಸದ್ಬುದ್ಧಿಯನ್ನು ನೀನೇ ನೀಡು’, ಇದೇ ನಿನ್ನ ಶ್ರೀ ಚರಣಗಳಲ್ಲಿ ಪ್ರಾರ್ಥನೆ.’ – ಸೌ. ಸಂಗೀತಾ ಚೌಧರಿ, ಹುಬ್ಬಳ್ಳಿ. (೬.೬.೨೦೧೮)
ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು
೩ ಅ. ಸಮಯಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮತ್ತು ಸಾಧಕರಿಂದ ಭಾವದ ಸ್ತರದಲ್ಲಿ ಸೇವೆಯನ್ನು ಮಾಡಿಸಿಕೊಳ್ಳುವ ಪೂ. ರಮಾನಂದ ಗೌಡ !
೧. ಪೂ. ರಮಾನಂದ ಗೌಡ ಇವರು ಸೇವೆಯನ್ನು ಯಾವಾಗಲೂ ಒಂದು ಸಮಯಮಿತಿಯಲ್ಲಿ ಪೂರ್ಣಗೊಳಿಸುತ್ತಾರೆ. ಯಾವುದಾದರೊಂದು ಅಂಶವು ಜಿಲ್ಲೆಯಲ್ಲಿನ ಸಾಧಕರಿಂದ ಪೂರ್ಣವಾಗದಿದ್ದರೆ ಅದರ ಬಗ್ಗೆ ಅವರು ಕ್ಷಮೆ ಕೇಳುತ್ತಾರೆ.
೨. ಜಿಲ್ಲೆಯಲ್ಲಿನ ಸಾಧಕರಿಗೆ ಪ್ರತಿಯೊಂದು ಸೇವೆಯನ್ನು ಭಾವದ ಸ್ತರದಲ್ಲಿ, ಆನಂದದಿಂದ ಮತ್ತು ಒತ್ತಡವಿಲ್ಲದೇ ಹೇಗೆ ಮಾಡಬೇಕು, ಎಂಬುದನ್ನು ಅವರು ಎಲ್ಲರ ಮನಸ್ಸಿನ ಮೇಲೆ ಬಿಂಬಿಸುತ್ತಾರೆ. ಬೆಳಗಾವಿಯಲ್ಲಿಯೂ ಅವರು ಈ ಬದಲಾವಣೆಯನ್ನು ಮಾಡಿದುದರಿಂದ ಸಾಧಕರ ಒತ್ತಡವು ಕಡಿಮೆಯಾಗಿ ಎಲ್ಲರೂ ಆನಂದದಿಂದ ಸೇವೆಯನ್ನು ಮಾಡುತ್ತಿದ್ದಾರೆ.’ – ಕು. ಮಾಯಾ ಪಾಟೀಲ, ಸನಾತನ ಆಶ್ರಮ, ದೇವದ, ಪನವೇಲ. (೮.೭.೨೦೧೭)
೩ ಆ. ಕಾಯಿಲೆಯಿಂದ ಬಳಲುತ್ತಿರುವಾಗ ಪೂ. ರಮಾನಂದ ಅಣ್ಣನವರು ಮಾಡಿದ ಭಾವಜಾಗೃತಿಯ ಪ್ರಯತ್ನಗಳು ಮತ್ತು ಅವರಿಗೆ ಬಂದ ಅನುಭೂತಿಗಳು
‘ಕೆಲವು ವರ್ಷಗಳ ಹಿಂದೆ ಅಣ್ಣನವರು ಬೆನ್ನುನೋವಿನ ತೀವ್ರ ತೊಂದರೆಯಿಂದಾಗಿ ಔಷಧೋಪಚಾರಕ್ಕೆಂದು ಮನೆಗೆ ಬಂದಿದ್ದರು. ಆ ಸಮಯದಲ್ಲಿ ಅವರು ಮನಸ್ಸಿನಿಂದ ಗುರುದೇವರಿಗೆ, ‘ಎಲ್ಲವನ್ನು ಬಿಟ್ಟು ನಾನು ಆಶ್ರಮಕ್ಕೆ ಹೋಗಿದ್ದೆನು; ಆದರೆ ಈಗ ನಾನು ಆಶ್ರಮದಲ್ಲಿ ಇಲ್ಲ, ಎಂದು ಹೇಳುತ್ತಿದ್ದರು.
೩ ಆ ೧. ಗಿಡಗಳಿಗೆ ಮತ್ತು ಪಶು-ಪಕ್ಷಿಗಳಿಗೆ ಪ್ರಾರ್ಥನೆಯನ್ನು ಮಾಡಿದಾಗ ಅವು ಮಾತನಾಡುತ್ತಿರುವುದರ ಅರಿವಾಗುವುದು : ಅವರು ಪ್ರತಿದಿನ ‘ಊರುಗೋಲಿನ’ ಸಹಾಯದಿಂದ ತೋಟದ ಕಡೆಗೆ ಹೋಗುತ್ತಿದ್ದರು. ಅವರು ಗಿಡಗಳಿಗೆ ಮತ್ತು ಪಶು-ಪಕ್ಷಿಗಳಿಗೆ ಪ್ರಾರ್ಥನೆಯನ್ನು ಮಾಡುತ್ತಿದ್ದರು. ‘ಗಿಡಗಳು ಮತ್ತು ಪಶು-ಪಕ್ಷಿಗಳು ಮಾತನಾಡುತ್ತಿವೆ’, ಎಂದು ಅವರಿಗೆ ಅನಿಸುತ್ತಿತ್ತು.
೩ ಆ ೨. ಒಮ್ಮೆ ಒಂದು ಗಿಡದ ಮೇಲೆ ಪೂ. ಅಣ್ಣನವರಿಗೆ ಸಂತ ಭಕ್ತರಾಜ ಮಹಾರಾಜರ ದರ್ಶನವಾಯಿತು.
೩ ಆ ೩. ರಾತ್ರಿ ಗುರುದೇವರು ಬೆನ್ನಿನ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತಿರುವುದು ಪೂ. ಅಣ್ಣನವರಿಗೆ ಅರಿವಾಗುವುದು : ಅಣ್ಣನವರು ಎಲ್ಲರಲ್ಲಿ ಗುರುದೇವರ ರೂಪವನ್ನು ನೋಡುತ್ತಿದ್ದರು. ಪ್ರತಿದಿನ ರಾತ್ರಿ ಕುಳಿತುಕೊಂಡು ನಾಮಜಪ ಮಾಡಿ ಮಲಗುತ್ತಿದ್ದರು. ಅವರಿಗೆ ‘ಪ್ರತಿದಿನ ರಾತ್ರಿ ೧.೩೦ ಗಂಟೆಗೆ ಗುರುದೇವರು ಬೆನ್ನಿನ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತಿದ್ದಾರೆ’, ಎಂದು ಅನಿಸುತ್ತಿತ್ತು. ಅಣ್ಣನವರು ಬೇಗನೆ ಗುಣಮುಖರಾದರು. ಗುರುಗಳ ಕೃಪೆಯಿಂದಾಗಿ ಅವರಿಗೆ ಶಾರೀರಿಕ ಪ್ರಾರಬ್ಧವನ್ನು ಆನಂದದಿಂದ ಭೋಗಿಸಲು ಸಾಧ್ಯವಾಯಿತು. ಗುರುದೇವರು ಅವರ ಪ್ರಗತಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ.’ – ಕು. ರೂಪಾ ಗೌಡ (ನಾದಿನಿ), ಮಂಗಳೂರು. (೨.೪.೨೦೧೮)
೪. ಪೂ. ರಮಾನಂದ ಗೌಡ ಇವರ ಸಹವಾಸದಿಂದ ಸಾಧಕನಿಗೆ ತನ್ನಲ್ಲಿ ಅರಿವಾದ ಬದಲಾವಣೆಗಳು
‘ಶ್ರೀ. ಸುಕೇಶ ಗುರವ ಇವರು ನಂದಿಹಳ್ಳಿಯಲ್ಲಿರುವಾಗ ಸಾಧನೆಯನ್ನು ಮಾಡುತ್ತಿದ್ದರು; ಪೂ. ರಮಾನಂದ ಅಣ್ಣನವರ ಭೇಟಿಯ ನಂತರ ಅವರ ಸಾಧನೆಗೆ ವೇಗ ಬಂದಿತು. ಅವರು ‘ವ್ಯಷ್ಟಿ ಸಾಧನೆ ಚೆನ್ನಾಗಿ ಆಗಬೇಕೆಂದು’, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿತುಕೊಂಡರು.
೪ ಅ. ಪೂ. ರಮಾನಂದ ಗೌಡ ಇವರು ನಂದಿಹಳ್ಳಿಗೆ ಬಂದು ಮಾರ್ಗದರ್ಶನ ಮಾಡುವುದು, ಹೋಗುವಾಗ ಕೈಯನ್ನು ಗಟ್ಟಿಯಾಗಿ ಹಿಡಿದು ದಾದಾ, ಅಭಿ ಜೋರಸೆ ಸಾಧನಾ ಕರೇಂಗೆ !’ ಎಂದು ಹೇಳುವುದು, ಆಗ ‘ಒಂದು ಶಕ್ತಿಯು ಶರೀರದಲ್ಲಿ ಹೋಗುತ್ತಿದ್ದು ಪೂ. ಅಣ್ಣನವರಿಂದ ಪ್ರಕ್ಷೇಪಿತವಾಗುತ್ತಿರುವ ಚೈತನ್ಯವು ಶರೀರದಾದ್ಯಂತ ಹರಡುತ್ತಿದೆ’, ಎಂದು ಅರಿವಾಗುವುದು ಮತ್ತು ಮನಸ್ಸಿಗೆ ಆನಂದ ಹಾಗೂ ಉತ್ಸಾಹ ಬರುವುದು : ಪೂ. ರಮಾನಂದ ಅಣ್ಣನವರು ನಂದಿಹಳ್ಳಿ ಗ್ರಾಮಕ್ಕೆ ಬಂದಿದ್ದರು. ಆಗ ಅವರು ನಮಗೆ ಸಾಧನೆಯ ಕುರಿತು ಮಾರ್ಗದರ್ಶನ ಮಾಡಿದರು. ಪೂ. ಅಣ್ಣನವರ ಊಟವಾದ ನಂತರ ಅವರು ಹೊರಡಲು ಸಿದ್ಧರಾದರು. ವಾಹನದಲ್ಲಿ ಕುಳಿತುಕೊಳ್ಳುವ ಮೊದಲು ಅವರು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ನನಗೆ, ‘ದಾದಾ, ಅಭಿ ಜೋರಸೆ ಸಾಧನಾ ಕರೇಂಗೆ ಎಂದು ಹೇಳಿದರು. ವಾಹನದಲ್ಲಿ ಕುಳಿತುಕೊಂಡ ನಂತರ ಅವರು ನಮಗೆ ನಮಸ್ಕಾರ ಮಾಡಿದರು. ಆ ಸಮಯದಲ್ಲಿ ನನಗೆ, ‘ಒಂದು ಶಕ್ತಿಯು ನನ್ನ ಶರೀರದಲ್ಲಿ ಪ್ರವೇಶಿಸುತ್ತಿದ್ದು ಪೂ. ಅಣ್ಣವರಿಂದ ಪ್ರಕ್ಷೇಪಿತವಾಗುತ್ತಿರುವ ಚೈತನ್ಯವು ಶರೀರದಾದ್ಯಂತ ಹರಡುತ್ತಿದೆ’, ಎಂದು ಅನಿಸಿತು. ಅದರಿಂದ ನನ್ನ ಮನಸ್ಸಿಗೆ ತುಂಬಾ ಆನಂದ ಮತ್ತು ಉತ್ಸಾಹವೆನಿಸುತ್ತಿತ್ತು. ಪೂ. ಅಣ್ಣನವರು ಹೇಳಿದ ‘ದಾದಾ, ಅಭಿ ಜೋರಸೆ ಸಾಧನಾ ಕರೇಂಗೆ (ಈಗ ಜೋರಾಗಿ ಸಾಧನೆಯನ್ನು ಪ್ರಾರಂಭಿಸೋಣ) !’ ಎಂಬ ವಾಕ್ಯದಿಂದ ನನ್ನ ಮನಸ್ಸಿನ ಪ್ರಕ್ರಿಯೆಯು ನಿಧಾನವಾಗಿ ಬದಲಾಗಿ ಮನಸ್ಸು ಸಕಾರಾತ್ಮಕವಾಯಿತು.
೪ ಆ. ಕಳೆದ ೬ ತಿಂಗಳುಗಳಿಂದ ನನ್ನ ಕೈ ನೋಯುವುದು ಮತ್ತು ಪೂ. ಅಣ್ಣನವರು ಕೈ ಹಿಡಿದ ನಂತರ ಕೈ ನೋವು ಕಡಿಮೆಯಾಗುವುದು : ಕಳೆದ ೬ ತಿಂಗಳುಗಳಿಂದ ಪ್ರತಿದಿನ ಬೆಳಗ್ಗೆ ಏಳುವಾಗ ನನ್ನ ಎಡ ಭುಜ ನೋಯಿಸುತ್ತಿತ್ತು ಮತ್ತು ಹೆಚ್ಚು ಭಾರವನ್ನು ಎತ್ತಿದರೆ ಸಂಪೂರ್ಣ ಕೈಯು ಸಹ ನೋಯಿಸುತ್ತಿತ್ತು. ಆ ದಿನ ಪೂ. ಅಣ್ಣನವರು ಕೆಲವು ಕ್ಷಣಗಳವರೆಗೆ ನನ್ನ ಕೈಯನ್ನು ತಮ್ಮ ಕೈಯಲ್ಲಿ ಹಿಡಿದಿದ್ದರು. ನಂತರ ನನ್ನ ಕೈನೋವು ನಿಂತಿತು. ಅಂದಿನಿಂದ ನನಗೆ ತುಂಬಾ ಆನಂದ ಮತ್ತು ಉತ್ಸಾಹವೆನಿಸುತ್ತಿದೆ ಹಾಗೂ ಪೂ. ರಮಾನಂದ ಅಣ್ಣನವರ ಬಗ್ಗೆ ತುಂಬಾ ಕೃತಜ್ಞತೆ ಅನಿಸುತ್ತದೆ.
೪ ಇ. ಕೇವಲ ೨ ದಿನ ಉತ್ಸಾಹದಿಂದ ಪ್ರಚಾರ ಮಾಡಿದುದರಿಂದ ನಂದಿಹಳ್ಳಿಯ ಹತ್ತಿರವಿರುವ ದೆಸೂರ ಎಂಬ ಗ್ರಾಮದಲ್ಲಿ ತೆಗೆದುಕೊಂಡ ಗ್ರಾಮಸಭೆಗೆ ಉತ್ತಮ ಬೆಂಬಲ ಸಿಗುವುದು : ನಂತರ ಜವಾಬ್ದಾರ ಸಾಧಕರು ನನಗೆ, ‘ಜಿಲ್ಲೆಯಲ್ಲಿ ಗ್ರಾಮಸಭೆಯನ್ನು ಆರಂಭಿಸಬೇಕಾಗಿದೆ’, ಎಂದು ಹೇಳಿದರು. ಆಗ ನಾನು ಉತ್ಸಾಹದಿಂದ ಸೇವೆಯನ್ನು ಆರಂಭಿಸಿದೆನು. ಮೊದಲನೆ ಗ್ರಾಮಸಭೆಯನ್ನು ನಂದಿಹಳ್ಳಿ ಗ್ರಾಮದ ಹತ್ತಿರದಲ್ಲಿರುವ ದೆಸೂರ ಎಂಬ ಗ್ರಾಮದಲ್ಲಿ ನಡೆಸಬೇಕೆಂಬ ಆಯೋಜನೆಯಾಯಿತು. ನಾವು ಅಲ್ಲಿನ ಧರ್ಮಪ್ರೇಮಿಗಳನ್ನು ಕರೆದುಕೊಂಡು ಗ್ರಾಮಸಭೆಯ ಪ್ರಚಾರವನ್ನು ಪ್ರಾರಂಭಿಸಿದೆವು. ನಾವು ಎರಡೇ ದಿನ ಪ್ರಚಾರ ಮಾಡಿದೆವು ಮತ್ತು ಅಕ್ಕಪಕ್ಕದ ವಸತಿಗಳಲ್ಲಿನ ಜನರೊಂದಿಗೆ ೨ ಸಭೆಗಳನ್ನು ತೆಗೆದುಕೊಂಡೆವು. ಆ ಸಮಯದಲ್ಲಿ ‘ಈ ಸಭೆಯನ್ನು ತೆಗೆದುಕೊಳ್ಳಲೇಬೇಕು’, ಎಂದು ನನ್ನ ಮನಸ್ಸಿನಲ್ಲಿ ನಿಶ್ಚಯವಾಯಿತು. ಸಭೆಯ ದಿನದಂದು ಸಭೆಯ ಪೂರ್ವಸಿದ್ಧತೆಗಾಗಿ ನಾನು ೨ ಗಂಟೆ ಮೊದಲೇ ಸಭೆಯ ಸ್ಥಳಕ್ಕೆ ಹೋದೆನು. ದೇವರ ಕೃಪೆಯಿಂದ ಆ ಸಭೆಗೆ ೫೫೦ ಜನರ ಉಪಸ್ಥಿತಿಯಿತ್ತು ಮತ್ತು ಉತ್ಸಾಹದಿಂದ ಘೋಷಣೆಗಳನ್ನು ನೀಡುತ್ತಾ ಈ ಮೊದಲನೆ ಸಭೆಯು ಯಾವುದೇ ವಿಘ್ನಗಳಿಲ್ಲದೇ ನಡೆಯಿತು.
೪ ಈ. ಪೂ. ರಮಾನಂದ ಅಣ್ಣನವರ ಜೊತೆಯಲ್ಲಿದ್ದಾಗ ಮಾಯೆಯ ಸೆಳೆತ ಕಡಿಮೆಯಾಗುವುದು ಮತ್ತು ಈಶ್ವರನು ಪೂರ್ಣವೇಳೆ ಸಾಧನೆ ಮಾಡುವ ವಿಚಾರ ಕೊಡುವುದು : ಮೊದಲು ನನ್ನ ಮನಸ್ಸಿನಲ್ಲಿ ಮಾಯೆಯಲ್ಲಿನ ತುಂಬಾ ಇಚ್ಛೆಗಳಿದ್ದವು. ನನ್ನ ಮನಸ್ಸಿನಲ್ಲಿ, ‘ತುಂಬಾ ಹಣವನ್ನುಗಳಿಸಿ ಮನಸ್ಸಿನಲ್ಲಿನ ಎಲ್ಲ ಇಚ್ಛೆಗಳನ್ನು ಪೂರ್ಣಗೊಳಿಸಬೇಕು’, ಎಂಬ ವಿಚಾರಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತಿದ್ದವು; ಆದರೆ ಈಗ ಸಂತರ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ನನ್ನ ಮನಸ್ಸಿನಲ್ಲಿನ ಮಾಯೆಯಲ್ಲಿನ ವಿಚಾರಗಳು ನಿಧಾನವಾಗಿ ಕಡಿಮೆಯಾಗುತ್ತಿವೆ. ಕೆಲವು ದಿನಗಳ ನಂತರ ನಾನು ಪೂ. ಅಣ್ಣನವರೊಂದಿಗೆ ಅಧಿವೇಶನಕ್ಕಾಗಿ ರಾಮನಾಥಿ ಆಶ್ರಮಕ್ಕೆ ಹೋಗಿದ್ದೆನು. ಅಧಿವೇಶನ ಮುಗಿಯುವವರೆಗೆ ನಾನು ಅವರ ಸೇವೆಯನ್ನು ಮಾಡುತ್ತ ಅವರ ಜೊತೆಗಿದ್ದೆನು. ಪೂ. ಅಣ್ಣನವರು ಪ್ರತಿದಿನ ಒಂದೊಂದು ಚೈತನ್ಯಮಯ ವಾಕ್ಯಗಳನ್ನು ಹೇಳಿ ನನ್ನ ಸಾಧನೆ ಮತ್ತು ಸೇವೆಯನ್ನು ಮಾಡುವ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು. ಪೃಥ್ವಿಯ ಮೇಲಿನ ವೈಕುಂಠಧಾಮ, ಅಂದರೆ ರಾಮನಾಥಿ ಆಶ್ರಮದಲ್ಲಿರುವಾಗ ಒಮ್ಮೆ ರಾತ್ರಿ ನಾನು ಸಂತ ಸೇವೆಯನ್ನು ಮುಗಿಸಿ ಬಂದನಂತರ ಮಲಗುವಾಗ ದೇವರಿಗೆ ಆತ್ಮನಿವೇದನೆಯನ್ನು ಮಾಡುತ್ತಿದ್ದೆನು. ಆಗ ಪೂರ್ಣವೇಳೆ ಸಾಧನೆಯನ್ನು ಮಾಡುವ ಚೈತನ್ಯಮಯ ವಿಚಾರವನ್ನು ಈಶ್ವರನು ನನ್ನ ಅಂತರ್ಮನಸ್ಸಿನಲ್ಲಿ ಹಾಕಿದನು ಮತ್ತು ನನ್ನನ್ನು ಮೋಹ-ಮಾಯೆಯಿಂದ ನಿಧಾನವಾಗಿ ದೂರ ಕರೆದೊಯ್ದನು.’ – ಶ್ರೀ. ಸುಕೇಶ ಗುರುವ, ನಂದಿಹಳ್ಳಿ, ಜಿಲ್ಲೆ ಬೆಳಗಾವಿ. (೮.೧೧.೨೦೧೯)