ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

ಕೇವಲ ಜ್ಞಾನಪ್ರಾಪ್ತಿಯ ಉದ್ದೇಶವಿರಿಸದೇ ‘ಕಾಲಕ್ಕನುಸಾರ ಯಾವುದು ಆವಶ್ಯಕವಿದೆ ಆ ಜ್ಞಾನಾರ್ಜನೆಯನ್ನು ಮಾಡುವುದಕ್ಕೆ ಮಹತ್ವವಿದೆ !

‘ಒಮ್ಮೆ ಓರ್ವ ಸಂತರು ನಮಗೆ ಜ್ಞಾನದ ಸ್ತರದಲ್ಲಿ ಮಾರ್ಗದರ್ಶನವನ್ನು ಮಾಡುತ್ತಿದ್ದರು; ಆದರೆ ಅವರ ಮಾರ್ಗದರ್ಶನವು ವೈಯಕ್ತಿಕ ಸ್ತರದಲ್ಲಿತ್ತು. ಕೇವಲ ಜ್ಞಾನಪ್ರಾಪ್ತಿಯ ಉದ್ದೇಶವಿರಿಸದೇ ಕಾಲಕ್ಕನುಸಾರ ಅವಶ್ಯಕವಿರುವ ಜ್ಞಾನಾರ್ಜನೆಗೆ ಮಹತ್ವವಿದೆ; ಆದುದರಿಂದ ನಾನು ಅವರಿಗೆ ನಮ್ರತೆಯಿಂದ, ಈಗ ನಮ್ಮದೆಂದು ಏನೂ ಉಳಿದಿಲ್ಲ. ಆದುದರಿಂದ ವೈಯಕ್ತಿಕ ಮಾರ್ಗದರ್ಶನಕ್ಕಿಂತ ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ಮತ್ತು ಈಗಿನ ಕಾಲಕ್ಕನುಸಾರ ತಾವು ನಮಗೆ ಮಾರ್ಗದರ್ಶನ ಮಾಡಬೇಕು’, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ,” ಎಂದು ಹೇಳಿದೆ.

ಇತರರಿಗೆ ಗುರುಗಳ ಸಂದೇಶವನ್ನು ನೀಡುವಾಗಲೂ ನಮ್ಮ ಸಾಧನೆಯಾಗುವುದು ಅವಶ್ಯಕ !

‘ಒಮ್ಮೆ ಓರ್ವ ಮೂರ್ತಿಕಾರರಿಗೆ ನಾವು ಗಣಪತಿಯ ಒಂದು ಮೂರ್ತಿಯನ್ನು ಸಿದ್ಧಪಡಿಸಲು ಹೇಳಿದ್ದೆವು. ಮೂರ್ತಿಯನ್ನು ಸಿದ್ಧಪಡಿಸಿದ ನಂತರ ಆ ಮೂರ್ತಿಗೆ ಬಣ್ಣವನ್ನು ಕೊಡುವುದರ ಬಗ್ಗೆ ಪರಾತ್ಪರ ಗುರು ಡಾಕ್ಟರರು, “ಮೂರ್ತಿಕಾರರಿಗೆ ಹೇಗೆ ಬೇಕೋ, ಹಾಗೆ ಬಣ್ಣವನ್ನು ಅವರು ಕೊಡಬಹುದು, ಎಂದು ಹೇಳಿದರು. ಗುರುಗಳ ಸಂದೇಶವನ್ನು ಇತರರಿಗೆ ತಲುಪಿಸುವಾಗಲೂ ನಮ್ಮ ಸಾಧನೆಯಾಗಬೇಕು; ಎಂದು ನಾನು ಆ ಮೂರ್ತಿಕಾರನಿಗೆ, “ನಿಮಗೆ ಒಳಗಿನಿಂದ ಸಿಗುವ ದೈವೀ ಪ್ರೇರಣೆಗನುಸಾರ ಮೂರ್ತಿಗೆ ಬಣ್ಣವನ್ನು ಹಚ್ಚಿರಿ ಎಂದು ಹೇಳಿದೆನು.

ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿ ಎಂದರೆ ‘ಸಾಧನೆ ಮತ್ತು ಉಳಿದ ಎಲ್ಲ ಕಾರ್ಯಗಳು ಕೇವಲ ಮಾಯೆ !

‘ದಿನವಿಡಿ ಮಾಡಿದ ಕೃತಿಗಳ ಅಭ್ಯಾಸ (ಅಧ್ಯಯನ) ಮಾಡಿದರೆ, ಅವುಗಳಲ್ಲಿ ಎಷ್ಟು ಶೇಕಡಾದಷ್ಟು ಕೃತಿಗಳನ್ನು ಕೆಲಸವೆಂದು ಮಾಡಿದಿರಿ ಮತ್ತು ಎಷ್ಟು ಶೇಕಡಾದಷ್ಟು ಕೃತಿಗಳನ್ನು ಸೇವೆ ಎಂದು ಮಾಡಿದಿರಿ ಎಂಬ ಚಿಂತನೆ ಮಾಡಬೇಕು. ಸೇವೆ ಮಾಡುವಾಗ ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿಗಳೆಂದರೆ ‘ಸಾಧನೆಯಾಗಿದೆ. ಉಳಿದ ಎಲ್ಲ ಕಾರ್ಯಗಳೆಂದರೆ ಕೇವಲ ಮಾಯೆಯೇ ಆಗಿದೆ. -ಶ್ರೀಚಿತಶಕ್ತಿ (ಸೌ.) ಅಂಜಲಿ ಗಾಡಗೀಳ