‘ಸೌ. ವಿನೋದಕ್ಕನವರು ಕಳೆದ ೧೮ ವರ್ಷಗಳಿಂದ ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಅವರು ಜನಸಂಪರ್ಕ ಸೇವೆ, ಜಾಹೀರಾತು ಪಡೆಯುವ ಸೇವೆ, ವೈಯಕ್ತಿಕ ಸಂಪರ್ಕ ಮಾಡುವುದು, ಈ ಸೇವೆಗಳನ್ನು ಮಾಡುತ್ತಾರೆ. ಅವರ ಮನಸ್ಸಿನಲ್ಲಿ ಪ.ಪೂ. ಗುರುದೇವರ ಬಗ್ಗೆ ಅಪಾರ ಶ್ರದ್ಧೆಯಿದೆ.
೧. ತ್ಯಾಗ ವೃತ್ತಿ : ಅಕ್ಕನವರಲ್ಲಿ ತ್ಯಾಗ ವೃತ್ತಿಯಿದೆ. ಅವರ ಸ್ವಂತದ ‘ರೈಸ್ ಮಿಲ್ ಇದೆ. ಅವರು ಆಶ್ರಮಕ್ಕೆ ನಿಯಮಿತವಾಗಿ ಅಕ್ಕಿಯನ್ನು ಕಳುಹಿಸಿಕೊಡುತ್ತಾರೆ.
೨. ಅಲ್ಪ ಅಹಂ : ಅಕ್ಕನವರು ಶ್ರೀಮಂತ ಕುಟುಂದವರಾಗಿದ್ದರೂ ಅವರಲ್ಲಿ ಸ್ವಲ್ಪವೂ ಶ್ರೀಮಂತಿಕೆ ಅಥವಾ ಅಹಂಭಾವವಿಲ್ಲ. ಅವರು ಯಾವಾಗಲೂ ಕಡಿಮೆತನವನ್ನು ತೆಗೆದುಕೊಂಡು ಪ್ರತಿಯೊಂದು ಸೇವೆಯನ್ನು ಮಾಡುತ್ತಾರೆ.
೩. ನಿಯಮಿತವಾಗಿ ವ್ಯಷ್ಟಿ ಸಾಧನೆಯನ್ನು ಮಾಡುವುದು : ಅಕ್ಕನವರ ವ್ಯಷ್ಟಿ ಸಾಧನೆಯ ಪ್ರಯತ್ನವು ನಿಯಮಿತವಾಗಿರುತ್ತದೆ. ಪ್ರಯತ್ನವಾಗದಿದ್ದರೆ ಅವರಿಗೆ ದುಃಖವಾಗುತ್ತದೆ.
೪. ಕುಟುಂಬದವರನ್ನು ಸಾಧನೆಗೆ ಜೋಡಿಸುವುದು : ಅಕ್ಕನವರು ತಮ್ಮ ಎಲ್ಲ ಕುಟುಂಬದವರನ್ನು ಸಾಧನೆಯೆಡೆಗೆ ಹೊರಳಿಸಿದ್ದಾರೆ. ಈಗ ಅವರ ಸಂಪೂರ್ಣ ಕುಟುಂಬವು ಸಾಧನೆಯನ್ನು ಮಾಡುತ್ತಿದೆ. ಅಕ್ಕನವರು ತಮ್ಮ ಯಜಮಾನರಿಗೆ ಸಾಧನೆಯ ಬಗ್ಗೆ ಹೇಳಿ ಅವರನ್ನು ರಾಷ್ಟ್ರೀಯ ಮಟ್ಟದ ‘ಉದ್ಯಮಿ ಶಿಬಿರ’ದಲ್ಲಿ ಸಹಭಾಗಿಯಾಗಲು ಜೋಡಿಸಿಕೊಟ್ಟಿದ್ದರು. ಅಕ್ಕನವರ ತವರುಮನೆಯಲ್ಲಿ ಅವಿಭಕ್ತ ಕುಟುಂಬವಿದೆ. ಅಕ್ಕನವರು ಅವರೆಲ್ಲರನ್ನೂ ಸಾಧನೆಗೆ ಜೋಡಿಸಿದ್ದಾರೆ. ಅವರು ತವರು ಮನೆಗೆ ಹೋದಾಗ ಅವರ ಸಹೋದರ ಅವರಿಗೆ ಕೆಲವು ವೈಯಕ್ತಿಕ ಪ್ರಸಂಗಗಳ ಬಗ್ಗೆ ಹೇಳುತ್ತಿರುವಾಗ ಅವರು ಅವರಿಗೆ ‘ನೀವು ನಕಾರಾತ್ಮಕ ವಿಚಾರವನ್ನು ಏಕೆ ಮಾಡುತ್ತೀರಿ ? ನಮಗೆ ಈಗ ಭಗವಂತನು ದೊರಕಿದ್ದಾನೆ, ನಾವು ಮಾಯೆಯ ವಿಚಾರವನ್ನು ಏಕೆ ಮಾಡಬೇಕು’, ಎಂಬ ಆಧ್ಯಾತ್ಮಿಕ ದೃಷ್ಟಿಕೋನವನ್ನು ನೀಡುತ್ತಾರೆ.
೫. ಇತರರಿಗೆ ಸಹಾಯ ಮಾಡುವುದು : ಸಾಧಕರಿಗೆ ಏನಾದರೂ ಅಡಚಣೆಗಳಿದ್ದರೆ ‘ಅವರಿಗೆ ನಾನು ಹೇಗೆ ಸಹಾಯ ಮಾಡಲಿ ?’, ಎಂಬ ಅವರ ವಿಚಾರವಿರುತ್ತದೆ.
೬. ಸೇವೆಯ ತೀವ್ರ ತಳಮಳ
ಅ. ಅಕ್ಕನವರ ಮನೆಯಲ್ಲಿ ಅನೇಕ ಅಡಚಣೆಗಳಿದ್ದರೂ ಅವರು ‘ತವರು ಮನೆಗೆ’ ಅಥವಾ ಕೆಲವೊಮ್ಮೆ ‘ಬೇರೆ ಕಾರ್ಯಕ್ರಮಕ್ಕೆ ಹೋಗುತ್ತೇನೆ’, ಎಂದು ಹೇಳಿ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ ಅಥವಾ ಜಾಹೀರಾತು ಪಡೆಯುವ ಸೇವೆ’ ಇಂತಹ ಸೇವೆಗಳಿಗೆ ಹೋಗುತ್ತಾರೆ.
ಆ. ಅಕ್ಕನವರು ಸತ್ಸಂಗ ತೆಗೆದುಕೊಳ್ಳಲು ೩ ಗಂಟೆ ಪ್ರವಾಸ ಮಾಡಿ ರಾಯಚೂರಿಗೆ ಹೋಗಬೇಕಾಗುತ್ತದೆ; ಆದರೂ ಅವರು ತಪ್ಪದೇ ಸತ್ಸಂಗ ತೆಗೆದುಕೊಳ್ಳಲು ಹೋಗುತ್ತಾರೆ.
ಈ. ಅಕ್ಕನವರ ಊರಿನಲ್ಲಿ ಕೇವಲ ಇಬ್ಬರು ಸಾಧಕರಿದ್ದಾರೆ; ಆದರೂ ಅಕ್ಕನವರ ತೀವ್ರ ತಳಮಳದಿಂದಾಗಿ ಅಲ್ಲಿ ಪ್ರಸಾರಕಾರ್ಯವು ಒಳ್ಳೆಯದಾಗಿ ನಡೆದಿದೆ.
ಉ. ಅವರು ಬಹಳ ಜಾಹೀರಾತುಗಳನ್ನು ತೆಗೆದುಕೊಂಡಿದ್ದು ‘ಸನಾತನ ಪ್ರಭಾತ ನಿಯತಕಾಲಿಕೆಯ ತುಂಬಾ ಚಂದಾದಾದಾರರನ್ನೂ ಮಾಡಿದ್ದಾರೆ. ಅವರು ಈ ವರ್ಷ ಗುರುಪೂರ್ಣಿಮೆಯ ನಿಮಿತ್ತ ತುಂಬಾ ಜಾಹೀರಾತುಗಳನ್ನು ಪಡೆದಿದ್ದಾರೆ.
ಊ. ಅಕ್ಕನವರಿಗೆ ‘ಸಾಧಕರ ಸಾಧನೆಯು ಸುವ್ಯವಸ್ಥಿತವಾಗಿ ನಡೆಯಬೇಕೆಂದು, ತುಂಬಾ ಅನಿಸುತ್ತದೆ. ಅದಕ್ಕಾಗಿ ಅವರು ಸತತ ಪ್ರಯತ್ನಿಸುತ್ತಿರುತ್ತಾರೆ.
೭. ಆಜ್ಞಾಪಾಲನೆ ಮಾಡುವುದು : ಅಕ್ಕನವರು ಪೂ. ರಮಾನಂದ ಅಣ್ಣನವರು ತೆಗೆದುಕೊಂಡ ಜನಸಂಪರ್ಕ ಶಿಬಿರಕ್ಕೆ ಹೋಗಿ ಬಂದರು. ಪೂ. ಅಣ್ಣನವರ ಮಾರ್ಗದರ್ಶನವನ್ನು ಕೇಳಿ ಅವರಲ್ಲಿ ತುಂಬಾ ಬದಲಾವಣೆಯಾಯಿತು. ಪೂ. ಅಣ್ಣನವರು ಅವರಿಗೆ ಜನಸಂಪರ್ಕ ಮಾಡುವ ಸೇವೆಯ ಜವಾಬ್ದಾರಿಯನ್ನು ನೀಡಿದರು. ಆ ಸಮಯದಲ್ಲಿ ‘ಸಂತರ ಆಜ್ಞಾಪಾಲನೆ ಮಾಡಬೇಕು, ಎಂದು ಅಕ್ಕನವರು ಸೇವೆಯ ಜವಾಬ್ದಾರಿಯನ್ನು ಸ್ವೀಕರಿಸಿದರು. ಇಷ್ಟು ದಿನ ನಾನು ತುಂಬಾ ಸಮಯವನ್ನು ವ್ಯರ್ಥ ಕಳೆದೆ, ಎಂದು ಈಗ ಅವರಿಗೆ ಅನಿಸುತ್ತಿದೆ.
೮. ಅಕ್ಕನವರಲ್ಲಿ ಗುರುದೇವರು ಹಾಗೂ ಸಾಧಕರ ಬಗ್ಗೆ ಕೃತಜ್ಞತಾ ಭಾವವು ಅರಿವಾಗುತ್ತದೆ.
ಅಕ್ಕನವರಲ್ಲಿ ನಮ್ರತೆ, ಮುಗ್ಧತೆ, ಕಲಿಯುವ ಸ್ಥಿತಿಯಲ್ಲಿರುವುದು, ಕೇಳಿ ಕೇಳಿ ಮಾಡುವುದು, ಸಕಾರಾತ್ಮಕತೆ, ಸ್ವೀಕರಿಸುವ ವೃತ್ತಿ, ಪ್ರೇಮಭಾವ, ಅಂತರ್ಮುಖತೆ, ಸಮರ್ಪಣಭಾವ ಮುಂತಾದ ಅನೇಕ ಗುಣಗಳಿವೆ. – ಸೌ. ಸುಜಾತಾ ಹುಳಿಪಲ್ಲೇದ, ಬಾಗಲಕೋಟ. (೫.೬.೨೦೨೦) – ಸೌ. ಸುಜಾತಾ ಹುಳಿಪಲ್ಲೇದ, ಬಾಗಲಕೋಟ. (೫.೬.೨೦೨೦)