ಅಮೇರಿಕಾದಲ್ಲಿ ಆಕ್ರೋಶಿತ ಹಿಂದೂಗಳಿಂದ ‘ಬ್ರಹ್ಮಾ’ ಬಿಯರ್ ಅನ್ನು ನಿರ್ಮಿಸುವ ಕಂಪನಿಗೆ ಬಿಯರ್ ಹೆಸರನ್ನು ಬದಲಾಯಿಸುವಂತೆ ಒತ್ತಾಯ

  • ಧರ್ಮಹಾನಿಯನ್ನು ತಡೆಗಟ್ಟಲು ಧ್ವನಿ ಎತ್ತಿದ ಅಮೇರಿಕಾದ ಹಿಂದೂಗಳಿಂದ ಭಾರತದ ಜನ್ಮಹಿಂದೂಗಳು ಕಲಿಯಬೇಕು !

  • ವಿದೇಶಿ ಕಂಪನಿಗಳು ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುತ್ತವೆ, ಭಾರತ ಸರಕಾರವೂ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ದೇಶಕ್ಕೆ ಒತ್ತಾಯಿಸಬೇಕು !

ನೆವಾಡಾ (ಅಮೇರಿಕಾ) – ಲೆವೆನ್ಹನ್(ಬೆಲ್ಜಿಯಮ್) ಇಲ್ಲಿ ಪ್ರಧಾನ ಕಛೇರಿ ಇರುವ ಹಾಗೂ ಜಗತ್ತಿನ ಎಲ್ಲಕ್ಕಿಂತ ದೊಡ್ಡದಾದ ಬಿಯರ್ ಉತ್ಪಾದಿಸುವ ‘ಅನ್ಹುಏಸರ-ಇನಬೇವ’ ಕಂಪನಿಯು ತನ್ನ ಬಿಯರ್ ಉತ್ಪಾದನೆಗೆ ‘ಬ್ರಹ್ಮಾ’ ಎಂದು ಹಿಂದೂ ದೇವತೆಯ ಹೆಸರನ್ನು ಇಡಲಾಗಿದೆ. ಆದ್ದರಿಂದ ಆಕ್ರೋಶಗೊಂಡ ಜನರು ಅಮೇರಿಕಾದ ಸಂಸ್ಥೆಗೆ ‘ಬ್ರಹ್ಮಾ’ ಎಂದು ಬರೆದಿರುವ ಬಿಯರ್‌ನ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.
ಅಮೇರಿಕಾದ ಹಿಂದೂಗಳ ಧಾರ್ಮಿಕ ನಾಯಕ ಶ್ರೀ. ರಾಜನ ಝೆದ್ ಇವರು ಸಂಸ್ಥೆಗೆ ಬರೆದಿರುವ ಪತ್ರದಲ್ಲಿ, ವ್ಯವಹಾರದ ಲಾಭಕ್ಕಾಗಿ ಬಿಯರ್‌ಗೆ ಹಿಂದೂ ದೇವತೆಗಳ ಹೆಸರು ನೀಡದಿರಿ. ಬ್ರಹ್ಮದೇವರನ್ನು ಆಲ್ಕೋಹಾಲ್‌ಯುಕ್ತ ಪಾನಿಯದೊಂದಿಗೆ ಜೋಡಿಸುವುದು ದೇವತೆಯ ಅವಮಾನವೇ ಆಗಿದೆ. ಆದ್ದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಉಂಟಾಗಿದೆ, ಎಂದಿದ್ದಾರೆ.