ಚೀನಾ ಬಗ್ಗೆ ನೇಪಾಳ ಈಗಲಾದರೂ ಎಚ್ಚರದಿಂದಿರುವುದೇ

೧. ಚೀನಾ ಬಗ್ಗೆ ನೇಪಾಳ ಈಗಲಾದರೂ ಎಚ್ಚರದಿಂದಿರುವುದೇ ?

ನೇಪಾಳ ಭಾರತದ ೩ ಭಾಗಗಳನ್ನು ತನ್ನದೆಂದು ಹೇಳಿಕೊಂಡರೆ, ಚೀನಾವು ಕಳೆದ ೩ ವರ್ಷಗಳಿಂದ ನೇಪಾಳದ ರುಯಿ ಗ್ರಾಮವನ್ನು ನಿಯಂತ್ರಣದಲ್ಲಿಟ್ಟಿದೆ. ಆದರೆ ನೇಪಾಳದ ಕಮ್ಯುನಿಸ್ಟ್ ಪಕ್ಷದ ಸರಕಾರವು ಚೀನಾದ ದುಷ್ಕೃತ್ಯಗಳ ಬಗ್ಗೆ ಮೌನವಾಗಿದೆ.

೨. ಕ್ರೈಸ್ತ ಮಿಷನರಿಗಳನ್ನು ವಿರೋಧಿಸಿದ್ದರ ಪರಿಣಾಮಗಳನ್ನು ತಿಳಿಯಿರಿ !

ಮತಾಂತರಕ್ಕೆ ಸಂಬಂಧಿಸಿದಂತೆ ಕ್ರೈಸ್ತ ಮಿಷನರಿಗಳ ಷಡ್ಯಂತ್ರವನ್ನು ಬಹಿರಂಗಪಡಿಸಿದ್ದರಿಂದ ನನ್ನ ಜೀವಕ್ಕೆ ಅಪಾಯವಿದೆ ಎಂದು ಆಂಧ್ರ ಪ್ರದೇಶz ಆಡಳಿತದ ಕ್ರೈಸ್ತ ಪ್ರಾಬಲ್ಯದ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಸದ ರಘುರಾಮ್ ಕೃಷ್ಣಮ್ ರಾಜು ಇವರು ಲೋಕಸಭಾ ಅಧ್ಯಕ್ಷರಲ್ಲಿ ದೂರು ನೀಡಿದ್ದಾರೆ.

೩. ರಾಜಸ್ಥಾನದಲ್ಲಿ ಮೊಘಲ್ ಪ್ರಾಬಲ್ಯದ ಕಾಂಗ್ರೆಸ್ ಸರಕಾರದ ಹಿಂದೂದ್ವೇಷವನ್ನು ತಿಳಿಯಿರಿ !

ರಾಜಸ್ಥಾನದ ಕಾಂಗ್ರೆಸ್ ಸರಕಾರ ತನ್ನ ೧೦ ನೇ ತರಗತಿಯ ಪಠ್ಯಪುಸ್ತಕ ‘ಸಾಮಾಜಿಕ ವಿಜ್ಞಾನ’ದಲ್ಲಿ ಮಹಾನ್ ಹೋರಾಟಗಾರ ಮಹಾರಾಣಾ ಪ್ರತಾಪ ಅವರನ್ನು ‘ಕಡಿಮೆ ಧೈರ್ಯವುಳ್ಳ ಸೇನಾ ನಾಯಕ’ ಎಂದು ಅವಮಾನಿಸಿದೆ. ಹಾಗೆಯೇ ಮಹಾರಾಣಾ ಪ್ರತಾಪ ನಡೆಸಿದ ಹೋರಾಟದ ಇತಿಹಾಸವನ್ನೂ ಕಡಿಮೆ ಮಾಡಿದೆ.

೪. ಅಮೆರಿಕಾವು ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಏಕೆ ಘೋಷಿಸುತ್ತಿಲ್ಲ ?

ಪಾಕಿಸ್ತಾನ ಇದುವರೆಗೂ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿದೆ. ಅಲ್ಲಿ ಹಕ್ಕಾನಿ ನೆಟ್‌ವರ್ಕ್, ಲಷ್ಕರ್-ಎ-ತೊಯಬಾ ಮತ್ತು ಜೈಶ್-ಎ-ಮೊಹಮದ ಮುಂತಾದ ಭಯೋತ್ಪಾದಕ ಸಂಘಟನೆಗಳು ಕಾರ್ಯನಿರತ ಇವೆ ಎಂದು ಅಮೇರಿಕದ ವಿದೇಶಾಂಗ ಸಚಿವಾಲಯದ ವರದಿಯೊಂದು ತಿಳಿಸಿದೆ.

೫. ಪಾಕಿಸ್ತಾನದ ಅಸುರಕ್ಷಿತ ಹಿಂದೂಗಳ ರಕ್ಷಣೆ ಯಾವಾಗ ?

ಪಾಕಿಸ್ತಾನದ ಸಿಂಧ್ ಪ್ರಾಂತದ ಜಾಕೋಬಾಬಾದ್‌ನ ಅಪ್ರಾಪ್ತ ಹಿಂದೂ ಹುಡುಗಿಯನ್ನು ವಜೀರ್ ಹುಸೇನ್ ಎಂಬ ಹೆಸರಿನ  ಮತಾಂಧನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ವಿವಾಹವಾದನು.

೬. ಮತಾಂಧರ ಉದ್ಧಟತನವನ್ನು ತಿಳಿಯಿರಿ !

ಮುಂಬೈನ ಮಾನಖುರ್ದದಲ್ಲಿ ಮಸೀದಿಯ ಮೇಲಿನ ಅನಧಿಕೃತ ಧ್ವನಿ ವರ್ಧಕದ ಶಬ್ದವನ್ನು ಕಡಿಮೆ ಮಾಡಲು ವಿನಂತಿಸಲು  ಹೋದ ಕು. ಕರಿಷ್ಮಾ ಭೋಸಲೆ ಎಂಬ ಹಿಂದೂ ಯುವತಿಯನ್ನು ಆಗ ಮತಾಂಧರು ಅಶ್ಲೀಲ ಭಾಷೆಯಲ್ಲಿ ಅವಮಾನಿಸಿದರು. ಹಾಗೆಯೇ ಅಲ್ಲಿದ್ದ ಪೊಲೀಸರನ್ನೂ ಗದರಿಸಿದರು.

೭. ಇಂತಹ ರಾಷ್ಟ್ರಘಾತಕ ಪಕ್ಷಗಳನ್ನು ನಿಷೇಧಿಸಬೇಕು !

ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ‘ಪೀಪಲ್ಸ್ ಡೆಮೊಕ್ರೆಸಿಯ’ ಜೂನ್ ೨೮ ರ ಸಂಚಿಕೆಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಸಂಪಾದಕೀಯವನ್ನು ಪ್ರಕಟಿಸಿದೆ. “ಕಾಶ್ಮೀರವನ್ನು ವಿಭಜಿಸುವ ಭಾರತದ ನಿರ್ಧಾರಕ್ಕೆ ಚೀನಾ ಪ್ರತಿಕ್ರಿಯೆ” ಎಂದು ಹೇಳಿದೆ