ಹಿಂದೂ ರಾಷ್ಟ್ರದ ಸ್ಥಾಪನೆ ಇದು ಸನಾತನ ಪ್ರಭಾತದ ಧ್ಯೆಯವಾಕ್ಯವನ್ನು ಸಾರ್ಥಕಗೊಳಿಸಿ
ಹಿಂದೂ ರಾಷ್ಟ್ರದ ಸ್ಥಾಪನೆ ಇದು ಸನಾತನ ಪ್ರಭಾತದ ಧ್ಯೇಯ ವಾಕ್ಯವಾಗಿದೆ ಅದು ಕೇವಲ ಶೋಭೆಗಾಗಿ ಅಲ್ಲದೇ ಅದು ಕೃತಿಗೆ ತರುವಂತಹುದು ಆಗಿದೆ. ಸನಾತನ ಪ್ರಭಾತದ ವಾಚಕರು ಈ ಹಿಂದೂ ರಾಷ್ಟ್ರದ ವೈಚಾರಿಕ ಶಕ್ತಿ ಯಾಗಿದ್ದಾರೆ ಈ ಶಕ್ತಿಯು ಈಗ ಸಕ್ರಿಯವಾಗುವುದು ಕಾಲದ ಆವಶ್ಯಕತೆಯಾಗಿದೆ.
ವರ್ಷ ೧೯೬೨ ರ ಯುದ್ಧದಲ್ಲಿ ಭಾರತದ ಭೂಮಿಯನ್ನು ಚೀನಾವು ಕಬಳಿಸಿತು. ಇದು ಅಪಮಾನವಾಗಿದೆ ಇದನ್ನು ಮರೆತವರಿಗೆ ದೇಶದಲ್ಲಿರುವ ಅಧಿಕಾರವಿದೆಯೇ ? ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ವಾಗಿರುವ ನೇಪಾಳವನ್ನು ಚೀನಾ ಸಾಮ್ಯವಾದಿಯನ್ನಾಗಿ ಮಾಡಿತು, ಇದು ದೇಶದ ಹಿಂದೂಗಳೂ ಯಾವತ್ತು ಮರೆಯಬಾರದು.
೧೯೭೧ರ ಭಾರತ-ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ಸಹಾಯ ಕ್ಕಾಗಿ ನೌಕಾ ಸೇನೆಯನ್ನು ಕಳುಹಿಸಲು ಇಚ್ಛಿಸಿದ ಚೀನಾದ ಕಪಟತನವನ್ನು ಗಮನದಲ್ಲಿಟ್ಟುಕೊಂಡು ಅರ್ಥಕಾರಣದ ಹೆಜ್ಜೆಯನ್ನಿಟ್ಟರೆ ಭಾರತವು ಮಹಾ ಆಡಳಿತವಾಗಬಹುದು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಡ್ಯಾಮ್ ಕಟ್ಟಲು ಇಚ್ಛಿಸುವ ಚೀನಾದ ಧೂರ್ತ ಆಟ ತಿಳಿದು ಹಿಂದೀ-ಚೀನೀ ಭಾಯೀ-ಭಾಯೀ ಎಂದು ಹೇಳುವವರ ಬಗ್ಗೆ ಎಷ್ಟು ಹೇಯವೆನಿಸಿದರೂ ಕಡಿಮೆಯೇ ಆಗಿದೆ.
ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ