ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಅಡಚಣೆಯ ಸಮಯದಲ್ಲಿ ಸಹಾಯವಾಗಲಿ ಎಂದು ನಾವು ಬ್ಯಾಂಕಿನಲ್ಲಿ ಹಣವನ್ನು ಇಡುತ್ತೇವೆ, ಅದರಂತೆ ಸಂಕಟದ ಸಮಯದಲ್ಲಿ ಸಹಾಯವಾಗಲಿ ಎಂದು ಸಾಧನೆಯ ಉಳಿಕೆಯು ತಮ್ಮ ಸಂಗ್ರಹದಲ್ಲಿ ಇರುವುದು ಆವಶ್ಯಕವಾಗಿದೆ. ಅದರಿಂದ ಸಂಕಟದ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ.

ಶರೀರದಲ್ಲಿ ಜಂತುಗಳಿದ್ದರೆ ಔಷಧಿ ತೆಗೆದುಕೊಳ್ಳುವುದರಿಂದ ಸಾಯುತ್ತದೆ. ಅದರಂತೆ ವಾತಾವರಣದಲ್ಲಿಯ ನಕಾರಾತ್ಮಕ ರಜ-ತಮವು ಯಜ್ಞದ ಸ್ಥೂಲ ಮತ್ತು ಸೂಕ್ಷ್ಮ ಧೂಮದಿಂದ ನಾಶವಾಗುತ್ತದೆ.

ನಿಜವಾದ ಸುಖ ಕೇವಲ ಸಾಧನೆಯಿಂದಲೇ ಸಿಗುತ್ತದೆ, ಕೆಟ್ಟ ಮಾರ್ಗದಿಂದ ಸಿಕ್ಕಿದ ಹಣದಿಂದಲ್ಲ

ಹಿಂದಿನ ಯುಗದಲ್ಲಿ ಪ್ರಜೆಗಳು ಸಾತ್ತ್ವಿಕರಾಗಿದ್ದರಿಂದ ಋಷಿಗಳಿಗೆ ಸಮಷ್ಟಿ ಪ್ರಸಾರ ಕಾರ್ಯ ಮಾಡಬೇಕಾಗಿರಲಿಲ್ಲ. ಆದರೆ ಈಗಿನ ಕಲಿಯುಗದಲ್ಲಿ ಬಹಳಷ್ಟು ಜನರು ಸಾಧನೆಯನ್ನು ಮಾಡದಿರುವುದರಿಂದ ಸಂತರಿಗೆ ಸಮಷ್ಟಿ ಪ್ರಸಾರ ಕಾರ್ಯ ಮಾಡಬೇಕಾಗುತ್ತಿದೆ.

ಈಶ್ವರನಲ್ಲಿ ಸ್ವಭಾವದೋಷ ಮತ್ತು ಅಹಂ ಇರುವುದಿಲ್ಲ, ಅವನೊಂದಿಗೆ ಏಕರೂಪವಾಗಬೇಕಾದರೆ ನಮಗೆ ಅದು ಇಲ್ಲದಿರುವುದು ಆವಶ್ಯಕವಾಗಿದೆ.

ಚಿರಂತನ ಆನಂದಪ್ರಾಪ್ತಿಗಾಗಿ ಸಾಧನೆಯಲ್ಲದೆ ಬೇರೆ ಪರ್ಯಾಯ ಇಲ್ಲ !

ದೇವರು ಮತ್ತು ಸಾಧನೆಯ ಮೇಲೆ ವಿಶ್ವಾಸವಿಲ್ಲದಿದ್ದರೂ ಚಿರಂತನ ಆನಂದ ಪ್ರತಿಯೊಬ್ಬರಿಗೂ ಬೇಕಾಗಿರುತ್ತದೆ. ಅದು ಕೇವಲ ಸಾಧನೆಯಿಂದ ಸಿಗುತ್ತದೆ. ಒಮ್ಮೆ ಇದು ಗಮನಕ್ಕೆ ಬಂದರೆ ಸಾಧನೆಯು ಅನಿವಾರ್ಯವಾಗಿರುವುದಿಂದ ಮಾನವನು ಸಾಧನೆಯ ಕಡೆಗೆ ಹೊರಳುತ್ತಾನೆ.

ಕರ್ಮಯೋಗ, ಜ್ಞಾನಯೋಗ, ಹಠಯೋಗ ಇತ್ಯಾದಿ ಯೋಗಗಳಲ್ಲಿ ದೇವರ ವಿಚಾರವಿಲ್ಲದಿರುವುದರಿಂದ ದೇವರಲ್ಲಿ ಏನನ್ನು ಬೇಡಲು ಬರುವುದಿಲ್ಲ. ಆದರೆ ಭಕ್ತಿಯೋಗದಲ್ಲಿ ಸಾಧಕನು ದೇವರಲ್ಲಿ ಬೇಡಬಹುದು. ಹಾಗಿದ್ದರೂ ಇತರ ಯೋಗದಲ್ಲಿಯ ಸಾಧಕರಿಗೂ ದೇವರು ಅನುಕೂಲ ಮಾಡಿದ್ದಾನೆ. ಗುರುಗಳಿದ್ದರೆ ಅವರು ಗುರುಗಳಲ್ಲಿ ಎಲ್ಲವನ್ನು ಬೇಡಬಹುದು. – (ಪರಾತ್ಪರ ಗುರು) ಡಾ. ಆಠವಲೆ