ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ
೧. ‘ಕೊರೋನಾ ವಿಷಾಣುರೂಪಿ ಆಪತ್ತು ಎಂದರೆ, ಭಾವೀ ಮಹಾಭೀಕರ ಆಪತ್ಕಾಲದ ಒಂದು ಚಿಕ್ಕ ತುಣುಕು !
‘ಫೆಬ್ರವರಿ ೨೦೨೦ ರಿಂದ ‘ಕೊರೋನಾ ವಿಷಾಣುವು ಜಗತ್ತಿನಾದ್ಯಂತ ಹಾಹಾಕಾರ ಎಬ್ಬಿಸಿದೆ. ‘ಕೊರೋನಾ ವಿಷಾಣುವಿನ ಸಾಂಕ್ರಾಮಿಕತೆಯಿಂದ ೧೩ ಮೇ ೨೦೨೦ ರ ತನಕ ಇಡಿ ಜಗತ್ತಿನಾದ್ಯಂತ ೪ ಲಕ್ಷದ ೨೮ ಸಾವಿರದ ೭೪೦ ಜನರು ಮೃತಪಟ್ಟಿದ್ದಾರೆ. ೭೭ ಲಕ್ಷದ ೬೪ ಸಾವಿರದ ೬೨೧ ಮಂದಿ ರೋಗಿಗಳಿದ್ದಾರೆ. ‘ಕೊರೋನಾದ ಆಪತ್ತಿನ ಕಾಲದಲ್ಲಿ ಆಹಾರಧಾನ್ಯಗಳು, ನೀರು, ವಿದ್ಯುತ್ ಮುಂತಾದ ಜೀವನಾವಶ್ಯಕ ವಸ್ತುಗಳ ಕೊರತೆಯಾಗಿಲ್ಲ. ಜನರ ಕೈಯಲ್ಲಿ ಮೊಬೈಲ್, ಇಂಟರ್‌ನೆಟ್, ಟಿ.ವಿ. ಮುಂತಾದ ಸುಖಸೌಲಭ್ಯಗಳನ್ನು ನೀಡುವ ಸಾಧನಗಳು ಸಹ ಇವೆ. ಆದರೆ ಲಾಕ್‌ಡೌನ್‌ಅನ್ನು ಪಾಲಿಸ ಬೇಕಾಗಿರುವುದರಿಂದ ಉದ್ಯೋಗ ದಂಧೆಗಳ ಮೇಲೆ ವಿಪರೀತ ಪರಿಣಾಮವಾಗುವುದು ಮತ್ತು ಅದರಿಂದ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗುವುದು, ನಾಗರಿಕರು ದೇಶಗಳಲ್ಲಿ ಹಾಗೂ ವಿದೇಶಗಳಲ್ಲಿ ಅಲ್ಲಲ್ಲಿ ಸಿಲುಕಿಕೊಂಡಿರುವುದು ಮುಂತಾದ ಸಮಸ್ಯೆಗಳು ಉದ್ಭವಿಸಿವೆ. ಉಳಿದಂತೆ ಹೆಚ್ಚಿನ ಜನರಿಗೆ ಮನೆಯಲ್ಲಿ ಕುಳಿತುಕೊಳ್ಳುವ ಬಗ್ಗೆ ವಿಶೇಷವಾಗಿ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿಲ್ಲ. ಹೀಗಿರುವಾಗಲೂ ‘ಕೊರೋನಾದ ಸಂಕಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದು, ಮದ್ಯ ಸಿಗಲಿಲ್ಲವೆಂದು ಅನೇಕ ಮದ್ಯವ್ಯಸನಿಗಳು ರಸ್ತೆಗಿಳಿಯುವುದು, ಅನೇಕರು ‘ಕೊರೋನಾದಿಂದ ನಮ್ಮ ರಕ್ಷಣೆಗೆಂದು ಸರಕಾರವು ಹಾಕಿಕೊಟ್ಟ ನಿಯಮಗಳನ್ನು ಪಾಲಿಸದಿರುವುದು ಮುಂತಾದ ಚಿತ್ರಣವೂ ಕಾಣಲು ಸಿಗುತ್ತಿದೆ. ಜನತೆಗೆ ಧರ್ಮಶಿಕ್ಷಣ ನೀಡದ ಕಾರಣ ಹಾಗೂ ಸಾಧನೆ ಕಲಿಸದಿರುವುದರಿಂದ ಜನರ ಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
೨. ಮುಂಬರುವ ಮಹಾಭೀಕರ ಆಪತ್ಕಾಲದ ಅಲ್ಪಸ್ವಲ್ಪ ಸ್ವರೂಪ
ಮಹಾಯುದ್ಧ, ಭೂಕಂಪ, ಪ್ರವಾಹ ಮುಂತಾದ ಸ್ವರೂಪದ ಮಹಾಭಯಂಕರ ಆಪತ್ಕಾಲವು ಇನ್ನೂ ಬರಲಿಕ್ಕಿದೆ. ‘ಅದು ಖಂಡಿತ ಬರುವುದು ಎಂದು ಅನೇಕ ನಾಡಿಭವಿಷ್ಯಕಾರರು ಮತ್ತು ದೃಷ್ಟಾರ ಸಾಧು-ಸಂತರು ಮೊದಲೇ ಹೇಳಿದ್ದಾರೆ. ಆ ಸಂಕಟಗಳ ನಗಾರಿ ಸಹ ಈಗ ಮೊಳಗತೊಡಗಿದೆ. ‘ಕೊರೋನಾ ವಿಷಾಣುವಿನ ಆಪತ್ತು ಚೀನಾದಿಂದಾಗಿಯೇ ಉದ್ಭವಿಸಿದೆ, ಎಂದು ಹೇಳುತ್ತಾ ಅಮೇರಿಕಾ ಸಹಿತ ಕೆಲವು ಯುರೋಪಿಯನ್ ದೇಶಗಳು ಚೀನಾದ ವಿರುದ್ಧ ಕೆಂಡಕಾರಲು ಪ್ರಾರಂಭಿಸಿವೆ. ಸ್ವಲ್ಪದರಲ್ಲಿ ಈಗ ಮಹಾಯುದ್ಧವು ಸಮೀಪಿಸುತ್ತಿದೆ. ಈ ಭಯಂಕರ ಆಪತ್ಕಾಲವು ಕೆಲವು ದಿನಗಳದ್ದು ಅಥವಾ ತಿಂಗಳುಗಳದ್ದಾಗಿರದೇ ಅದು ೨೦೨೩ ರ ತನಕ ಇರಲಿದೆ. ಅಂದರೆ ಇಂದಿನಿಂದ ಮೂರು ವರ್ಷಗಳ ಅಂದರೆ ಭಾರತದಲ್ಲಿ ‘ಹಿಂದೂ ರಾಷ್ಟ್ರದ (ಆದರ್ಶವಾದ ಈಶ್ವರಿ ರಾಜ್ಯದ) ಸ್ಥಾಪನೆಯಾಗುವ ತನಕ ಇರಲಿದೆ. ಈ ಆಪತ್ಕಾಲದಲ್ಲಿ ವಿದ್ಯುತ್ ಪೂರೈಕೆ ಕಡಿತವಾಗುತ್ತದೆ. ಪೆಟ್ರೋಲ್, ಡಿಸೆಲ್ ಮುಂತಾದವುಗಳ ಕೊರತೆ ಬರಲಿದೆ. ಹಾಗಾಗಿ ವಾಹನ ಸಂಚಾರ ಸಾಗಾಟ ವ್ಯವಸ್ಥೆಯು ಕುಸಿಯಲಿದೆ. ಹಾಗಾಗಿ ಸರಕಾರಿ ವ್ಯವಸ್ಥೆಯು ಎಲ್ಲ ಕಡೆಗಳಲ್ಲಿ ಸಹಾಯಕ್ಕಾಗಿ ತಲುಪಲು ಸಾಧ್ಯವಾಗಲಾರದು. ಸರಕಾರವು ಮಾಡುತ್ತಿರುವ ಸಹಾಯ ಕಾರ್ಯದಲ್ಲಿ ಅಡಚಣೆಗಳು ಸಹ ಬರುತ್ತವೆ. ಹಾಗಾಗಿ ಅಡುಗೆ ಅನಿಲ (‘ಗ್ಯಾಸ್), ತಿನ್ನುವ ಕುಡಿಯುವ ವಸ್ತುಗಳು ಅನೇಕ ತಿಂಗಳುಗಳ ಕಾಲ ಸಿಗಲಾರವು ಮತ್ತು ಸಿಕ್ಕಿದರೂ ಅದಕ್ಕೆ ರೇಶನಿಂಗ ಇರಲಿದೆ ಡಾಕ್ಟರರು (ಅಲೋಪೆಥಿ), ವೈದ್ಯರು (ಆಯುರ್ವೇದಿಕ್), ಔಷಧಿಗಳು, ಆಸ್ಪತ್ರೆಗಳು ಸಹಜವಾಗಿ ಲಭ್ಯವಾಗಲು ಕಠಿಣವಿರುತ್ತದೆ ಇದೆಲ್ಲವನ್ನೂ ಗಮನದಲ್ಲಿರಿಸಿ ಈ ಆಪತ್ಕಾಲವನ್ನು ಎದುರಿಸಲು ಎಲ್ಲರೂ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಆಧ್ಯಾತ್ಮಿಕ ಮುಂತಾದ ಎಲ್ಲ ಸ್ತರಗಳಲ್ಲಿ ಪೂರ್ವ ತಯಾರಿ ಮಾಡು ವುದು ಅವಶ್ಯಕವಾಗಿದೆ.
೩. ಶಾರೀರಿಕ ಸ್ತರದ ಪೂರ್ವತಯಾರಿ
‘ಆಹಾರ ಇದು ಜೀವಂತವಿರಲು ಬೇಕಾದ ಒಂದು ಮಹತ್ವದ ಅವಶ್ಯಕತೆಯಾಗಿದೆ. ಆಪತ್ಕಾಲದಲ್ಲಿ ನಾವು ಉಪವಾಸ ಇರಬಾರದು ಎಂದು ಮೊದಲೇ ಆಹಾರಧಾನ್ಯಗಳನ್ನು ಎಷ್ಟು ಬೇಕೋ ಅಷ್ಟನ್ನು ಖರೀದಿ ಮಾಡಿ ಶೇಖರಿಸಿಡುವುದು ಅವಶ್ಯವಾಗಿದೆ. ಸದ್ಯದ ಪೀಳಿಗೆಗೆ ಆಹಾರಧಾನ್ಯಗಳನ್ನು ಶೇಖರಿಸಿಡುವುದು ಮತ್ತು ಅದು ದೀರ್ಘಕಾಲ ಕೆಡದಂತೆ ಇಡುವ ಪದ್ಧತಿಯು ಗೊತ್ತಿರುವುದಿಲ್ಲ. ಅದಕ್ಕಾಗಿ ನಾವು ಕೆಲವು ಪದ್ಧತಿಗಳನ್ನು ಈ ಲೇಖನಮಾಲೆಯಲ್ಲಿ ನೀಡುತ್ತಿದ್ದೇವೆ. ಆಹಾರಧಾನ್ಯಗಳನ್ನು ಎಷ್ಟು ಶೇಖರಣೆ ಮಾಡಿಟ್ಟರೂ ಅದು ಕ್ರಮೇಣ ಖಾಲಿ ಆಗುತ್ತದೆ. ಇಂತಹ ಸಮಯದಲ್ಲಿ ಹಸಿವಿನಿಂದ ಬಳಲಬಾರದು ಎಂದು ಪೂರ್ವತಯಾರಿಯಾಗಿ ಆಹಾರಧಾನ್ಯಗಳ ತೋಟಗಾರಿಕೆ ಮಾಡುವುದು ಸಹ ಅವಶ್ಯವಾಗಿದೆ. ಭತ್ತ (ಅಕ್ಕಿ), ಕಾಳುಗಳಂತಹ ಆಹಾರಧಾನ್ಯಗಳ ತೋಟಗಾರಿಕೆ ಮಾಡಲು ಎಲ್ಲರಿಗೆ ಸಾಧ್ಯವಿಲ್ಲ. ಆದರೆ ಗೆಡ್ಡೆಗೆಣಸು, ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದಿಸಬಲ್ಲಂತಹ ೧೨ ತಿಂಗಳು ಬೆಳೆಯುವಂತಹ ತರಕಾರಿಗಳು ಮತ್ತು ಬಹುಪಯೋಗಿ ಹಣ್ಣುಗಳ ಗಿಡಗಳನ್ನು, ಮನೆಯ ಪರಿಸರದಲ್ಲಿ ಮತ್ತು ವಸತಿ ಸಮುಚ್ಛಯಗಳ (ಫ್ಲಾಟ್‌ಗಳ) ಬಾಲ್ಕನಿಯಲ್ಲಿ ನೆಡಬಹುದು. ಈ ತೋಟಗಾರಿಕೆಯ ಬಗ್ಗೆ ಉಪಯುಕ್ತ ಸೂಚನೆಯನ್ನು ಲೇಖನಮಾಲೆಯಲ್ಲಿ ನೀಡಲಾಗಿದೆ.
ಆಪತ್ಕಾಲದಲ್ಲಿ ಆಹಾರಧಾನ್ಯಗಳನ್ನು ಬೇಯಿಸಲು ‘ಗ್ಯಾಸ್‘ ಲಭ್ಯವಿಲ್ಲದಿದ್ದಾಗ, ಒಲೆ, ‘ಸೊಲಾರ್ ಕುಕ್ಕರ್, ಮುಂತಾದವುಗಳನ್ನು ಉಪಯೋಗಿಸುವ ಬಗ್ಗೆ ಹೇಳಲಾಗಿದೆ. ಆಪತ್ಕಾಲದಲ್ಲಿ ಪ್ರತಿದಿನದಂತೆ ಆಹಾರವನ್ನು ತಯಾರಿಸಲು ಆಗಬಹುದು ಎಂದೇನಿಲ್ಲ. ಈ ದೃಷ್ಟಿಯಿಂದ ಹೆಚ್ಚು ಕಾಲ ಬಾಳಿಕೆ ಬರುವಂತಹ ಆಹಾರ ಪದಾರ್ಥಗಳ ಶೇಖರಣೆ ಮಾಡಬೇಕು ಮತ್ತು ಅವುಗಳ ದೀರ್ಘಕಾಲಿ ಕಾಲ ಬಾಳಿಕೆಗಾಗಿ ಉಪಯುಕ್ತ ಸೂಚನೆಗಳ ಬಗ್ಗೆಯೂ ಹೇಳಲಾಗಿದೆ. ಕುಟುಂಬಕ್ಕಾಗಿ ಬೇಕಾಗುವ ನಿತ್ಯೋಪಯೋಗಿ ಹಾಗೂ ಪ್ರಸಂಗವಶಾತ್ ಬೇಕಾಗುವ ಅಗತ್ಯ ವಸ್ತುಗಳ ಪಟ್ಟಿಯನ್ನು ಸಹ ನೀಡಲಾಗಿದೆ. ಇದರಿಂದ ವಾಚಕರಿಗೆ ಎಲ್ಲ ರೀತಿಯ ವಸ್ತುಗಳನ್ನು ಖರೀದಿಸಲು ಸುಲಭವಾಗುವುದು. ಮನುಷ್ಯನು ನೀರಿಲ್ಲದೇ ಜೀವಿಸಲಾರನು ಮತ್ತು ವಿದ್ಯುತ್ ರಹಿತ ಜೀವನದ ಕಲ್ಪನೆಯನ್ನು ಸಹ ಮಾಡಲಾರನು. ಇದಕ್ಕಾಗಿ ನೀರಿನ ವ್ಯವಸ್ಥೆ, ನೀರಿನ ಶೇಖರಣೆ ಮತ್ತು ಶುದ್ಧೀಕರಣದ ಪದ್ಧತಿ ಹಾಗೂ ವಿದ್ಯುತ್ತಿನ ಇತರ ಪರ್ಯಾಯಗಳನ್ನು ಸಹ ಈ ಲೇಖನಮಾಲೆಯಲ್ಲಿ ನೀಡಲಾಗಿದೆ.
ಲೇಖನಮಾಲೆಯಲ್ಲಿ ಒಂದೇ ವಿಷಯದ ಬಗ್ಗೆ ವಿವಿಧ ರೀತಿಯ ತಯಾರಿಗಳನ್ನು ಹೇಳಲಾಗಿದೆ. ಪ್ರತಿಯೊಬ್ಬರೂ ತಮ್ಮ ತನ್ನ ಆವಶ್ಯಕತೆ, ಸ್ಥಳದ ಲಭ್ಯತೆ, ಆರ್ಥಿಕ ಪರಿಸ್ಥಿತಿ ಮತ್ತು ನಾವು ವಾಸಿಸುತ್ತಿರುವ ಸ್ಥಳದ ಹವಾಮಾನ ಮತ್ತು ಭೌಗೋಲಿಕ ಸ್ಥಿತಿ ಇವೆಲ್ಲವುಗಳ ವಿಚಾರ ಮಾಡಿ ತಮಗೆ ಅನುಕೂಲವಾದಂತಹ ತಯಾರಿಯನ್ನು ಮಾಡಬೇಕು. ಎಲ್ಲಿ ತಯಾರಿಯ ಸಂದರ್ಭದಲ್ಲಿ ಕೃತಿಯ ಸ್ತರದಲ್ಲಿ ಹೇಳಲು ಮಿತಿ ಇದೆಯೋ, ಅಲ್ಲಿ ಕೇವಲ ನಿರ್ದೇಶನ ಮಾಡಲಾಗಿದೆ. ಉದಾ. ‘ಆಪತ್ಕಾಲದಲ್ಲಿ ನೀರಿನ ಕೊರತೆಯಾಗಬಾರದೆಂದು ಬಾವಿ ತೋಡಬೇಕು ಹೇಳಲಾಗಿದೆ. ಆದರೆ ಅದಕ್ಕಾಗಿ ‘ನಿರ್ದಿಷ್ಟವಾಗಿ ಏನೆಲ್ಲ ಮಾಡಬೇಕಾಗುತ್ತದೆ, ಇದನ್ನು ಹೇಳಿಲ್ಲ. ಇಂತಹ ಕೃತಿಗಳ ವಿಷಯದಲ್ಲಿ ವಾಚಕರು ಗೊತ್ತಿದ್ದವರ ಬಳಿ ವಿಚಾರಿಸಿಕೊಳ್ಳಬೇಕು ಅಥವಾ ಅದಕ್ಕೆ ಸಂಬಂಧಿತ ಗ್ರಂಥವನ್ನು ಓದಬೇಕು.
೪. ಮಾನಸಿಕ ಸ್ತರದ ಪೂರ್ವತಯಾರಿ
ಆಪತ್ಕಾಲದಲ್ಲಿ ಅನೇಕ ಜನರಿಗೆ ಮನಸ್ಸಿನಲ್ಲಿ ಅಸ್ಥಿರತೆ, ಚಿಂತೆ, ನಿರಾಶೆ, ಭೀತಿ ಮುಂತಾದ ತೊಂದರೆಗಳಾಗುತ್ತವೆ. ಈ ತೊಂದರೆಗಳು ಆಗಬಾರದು, ಅಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಆಗಬೇಕೆಂದು ಮೊದಲೇ ‘ಮನಸ್ಸಿಗೆ ಯಾವ ಸ್ವಯಂಸೂಚನೆ ನೀಡಬೇಕು ಎಂಬುದರ ಮಾರ್ಗದರ್ಶನ ಮಾಡಲಾಗಿದೆ.
೫. ಆಧ್ಯಾತ್ಮಿಕ ಸ್ತರದ ಪೂರ್ವತಯಾರಿ
ಆಪತ್ಕಾಲದಲ್ಲಿ ರಕ್ಷಣೆಯಾಗಲು ವ್ಯಕ್ತಿಯು ಸ್ವಂತದ ಬಲದಲ್ಲಿ ಎಷ್ಟು ತಯಾರಿ ಮಾಡಿದರೂ ಮಹಾಭೀಕರ ಆಪತ್ತುಗಳಿಂದ ಬದುಕುಳಿಯಲು ಎಲ್ಲ ಭರವಸೆಯನ್ನು ಅಂತಿಮವಾಗಿ ದೇವರ ಮೇಲಿಡಬೇಕಾಗುತ್ತದೆ. ವ್ಯಕ್ತಿಯು ಸಾಧನೆಯನ್ನು ಮಾಡಿ ದೇವರ ಕೃಪೆಯನ್ನು ಸಂಪಾದಿಸಿದರೆ ದೇವರು ವ್ಯಕ್ತಿಯನ್ನು ಎಂತಹ ಸಂಕಟದಿಂದಲೂ ಪಾರು ಮಾಡಬಲ್ಲನು. ಸಾಧನೆಯ ವಿಷಯದ ಗಾಂಭೀರ್ಯವು ಸಹ ಈ ಲೇಖನಮಾಲೆಯನ್ನು ಓದಿದ ನಂತರ ಮೂಡಲಿದೆ.
೬. ವಾಚಕರೇ, ಬೇಗನೇ ತಯಾರಿಯನ್ನು ಪ್ರಾರಂಭಿಸಿರಿ !
ವಾಚಕರು ಲೇಖನಮಾಲೆಗನುಸಾರ ಇಂದಿನಿಂದಲೇ ಬೇಕಾದ ಏರ್ಪಾಡುಗಳನ್ನು ಆರಂಭಿಸಿದರೆ ಮುಂಬರುವ ಆಪತ್ಕಾಲವು ಸುಸಹ್ಯವಾಗುವುದು. ವಾಚಕರು ಈ ವಿಷಯದ ಸಂದರ್ಭದಲ್ಲಿ ಸಮಾಜ ಬಾಂಧವರಲ್ಲಿಯೂ ಜಾಗೃತಿ ಮೂಡಿಸಬೇಕು. ಲೇಖನಮಾಲೆಯಲ್ಲಿರುವ ಕೆಲವು ವಿಷಯಗಳ ಬಗ್ಗೆ ಇನ್ನೂ ಬರೆಯಲಾಗುತ್ತಿದೆ. ಬೇಗನೇ ಪೂರ್ವತಯಾರಿಯನ್ನು ಆರಂಭಿಸಲು ವಾಚಕರಿಗೆ ಸಾಧ್ಯವಾಗಬೇಕು ಎಂದು ಲೇಖನಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ. ಈ ವಿಷಯದಲ್ಲಿ ಗ್ರಂಥಮಾಲಿಕೆಯನ್ನೂ ಶೀಘ್ರವಾಗಿ ಪ್ರಕಟಿಸಲಾಗುವುದು.
೭. ಪ್ರಾರ್ಥನೆ
‘ಆಪತ್ಕಾಲದಲ್ಲಿ ಕೇವಲ ಜೀವಂತವಾಗಿರಲು ಮಾತ್ರವಲ್ಲದೇ ಜೀವನದಲ್ಲಿ ಸಾಧನೆಯ ದೃಷ್ಟಿಕೋನವನ್ನು ಅಂಗೀಕರಿಸಿ ಆನಂದದಿಂದಿ ರಲು ಸಹ ಈ ಲೇಖನಮಾಲೆಯು ಉಪಯೋಗವಾಗಬೇಕು, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !
೩. ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡಬೇಕಾದ ವಿವಿಧ ಸಿದ್ಧತೆಗಳು !
೩ ಅ. ಆಹಾರವಿಲ್ಲದೇ ಉಪವಾಸವಿರದಂತೆ ಮುಂದಿನಂತೆ ಮಾಡಬೇಕು !
೩ ಅ ೨. ಅಡುಗೆ ಅನಿಲ, ‘ಸ್ಟೊವ್ಗಾಗಿ ಬೇಕಾಗುವ ಸೀಮೆಎಣ್ಣೆ ಇತ್ಯಾದಿಗಳ ಕೊರತೆ ಮತ್ತು ಅಲಬ್ಧತೆಯನ್ನು ಗಮನದಲ್ಲಿರಿಸಿಕೊಂಡು ಮುಂದಿನವುಗಳಲ್ಲಿ ಅವಶ್ಯವಿರುವುದನ್ನು ಮಾಡಬೇಕು.
೩ ಅ ೨ ಅ. ಮನೆಯಲ್ಲಿ ಒಲೆಯ ವ್ಯವಸ್ಥೆ ಮಾಡುವುದು
೧. ಮನೆಯಲ್ಲಿ ಒಲೆ ಇಲ್ಲದಿದ್ದರೆ ಪೇಟೆಯಿಂದ ಮಣ್ಣಿನ, ಸಿಮೆಂಟಿನ ಅಥವಾ ಕಚ್ಚಾಲೋಹ (ಬಿಡ ಎಂಬ ಲೋಹದಿಂದ ತಯಾರಿಸಿದ) ಒಲೆಯನ್ನು ಖರೀದಿಸಿಡಬೇಕು. ಕೆಲವು ಉತ್ಪಾದಕರು ಪಾರಂಪಾರಿಕ ಒಲೆಗಳ ತುಲನೆಯಲ್ಲಿ ಕಡಿಮೆ ಇಂಧನ ತಗಲುವ, ಕಡಿಮೆ ಹೊಗೆಯಿರುವ, ಒಲೆಯನ್ನು ಅವಶ್ಯಕತೆಗನುಸಾರ ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಆಗುವುದು ಇತ್ಯಾದಿ ಲಾಭವಾಗುವ ಕಬ್ಬಿಣದ ಒಲೆಯನ್ನು ತಯಾರಿಸುತ್ತಾರೆ. ಉದಾ. ಮಧ್ಯಪ್ರದೇಶದ ಭೋಪಾಳದ ‘ದತ್ತೂ ಚುಲ್ಹಾ (ದೂ.ಕ್ರ. ೯೪೨೫೦ ೦೯೧೧೩) ಕೆಲವು ಉತ್ಪಾದಕರು ತಯಾರಿಸಿದ ಒಲೆಗೆ ಹೊಗೆ ಹೊರಹೋಗಲು ‘ಚಿಮಣಿ (ಉದ್ದದ ಹೊಗೆ ನಳಿಕೆ) ಯ ವ್ಯವಸ್ಥೆಯಿರುತ್ತದೆ. ಇಂತಹ ಆಧುನಿಕ ಒಲೆಗಳ ಅಭ್ಯಾಸ ಮಾಡಿ ನಮ್ಮ ಆವಶ್ಯಕತೆಗನುಸಾರ ಒಲೆಯನ್ನು ಖರೀದಿಸಬಹುದು. (ಪ್ರಸಂಗ ಬಂದರೆ ಮೂರು ಕಲ್ಲುಗಳನ್ನು ವಿಶಿಷ್ಟ ಪದ್ಧತಿಯಲ್ಲಿ ಜೋಡಿಸಿಯೂ ತಯಾರಿಸಬಹುದು.)
೨. ಒಲೆ ಉರಿಸುವುದು, ಪ್ರತಿದಿನ ಅದನ್ನು ಸ್ವಚ್ಛಗೊಳಿಸುವುದು ಮುಂತಾದ ಕೃತಿಗಳನ್ನು ಕಲಿತುಕೊಳ್ಳಬೇಕು.
೩. ಒಲೆಗಾಗಿ ಉರುವಲು ಎಂದು ಕಟ್ಟಿಗೆ, ಇದ್ದಿಲು, ಬೆರಣಿ, ‘ಬಯೊಮಾಸ ಬ್ರಿಕೆಟ್ (ಕಬ್ಬಿನ ಸಿಪ್ಪೆ, ಕಟ್ಟಿಗೆಯ ಪುಡಿ, ಕಾಳುಬೇಳೆಗಳ ಸಿಪ್ಪೆ, ಸೂರ್ಯಕಾಂತಿ ಹೂವನ್ನು ತೆಗೆದ ನಂತರದ ಭಾಗ ಮುಂತಾದವುಗಳ ಮೇಲೆ ವಿಶಿಷ್ಟ ಒತ್ತಡದಿಂದ ಪ್ರಕ್ರಿಯೆ ಮಾಡಿ ಅದನ್ನು ಸಮಾನವಾಗಿ ತಯಾರಿಸಿದ ಚಿಕ್ಕ ಚಿಕ್ಕ ತುಂಡುಗಳು) ಇತ್ಯಾದಿಗಳನ್ನು ಬೇಕಾದಷ್ಟು ಶೇಖರಣೆ ಮಾಡಿಡಬೇಕು. ‘ಬಯೋಮಾಸ ಬ್ರಿಕೆಟ್ಟ ದೊಡ್ಡ ನಗರದ ಅಂಗಡಿಗಳಲ್ಲಿ ಹಾಗೂ ‘ಆನ್‌ಲೈನ್ದಲ್ಲಿ ಮಾರಾಟಕ್ಕೆ ಸಿಗುತ್ತವೆ.
೪. ಒಲೆಯಲ್ಲಿ ಅಡುಗೆ ಮಾಡಲು ಕಲಿಯಬೇಕು. ಇದರಲ್ಲಿ ‘ಪ್ರೆಶರ್ ಕುಕ್ಕರ್ ಉಪಯೋಗಿಸದೇ ಪಾತ್ರೆಯಲ್ಲಿ ಅಥವಾ ಇತರ ಪಾತ್ರೆಗಳಲ್ಲಿ ಅನ್ನ ಬೇಯಿಸುವುದು, ಸಾಂಬಾರಿಗಾಗಿ ಬೇಳೆಯನ್ನು ಬೇಯಿಸುವುದು, ರೊಟ್ಟಿಯನ್ನು ಬೇಯಿಸಿ ಅದನ್ನು ಕೆಂಡದ ಮೇಲೆ ಕಾಯಿಸುವುದು ಮುಂತಾದವುಗಳು ಒಳಗೊಂಡಿರುತ್ತವೆ. ಒಲೆಯಲ್ಲಿ ಭೋಜನವನ್ನು ತಯಾರಿಸಲು ಕಲಿಯುವಾಗ ‘ಸ್ಲಾಬ್‌ನ ಮೇಲೆ ಅಡುಗೆ ಮಾಡುವ ಅಭ್ಯಾಸವನ್ನು ಕಡಿಮೆ ಗೊಳಿಸಲು ಪ್ರಯತ್ನಿಸಬೇಕು.
೩ ಅ ೧ ಆ. ಅಡುಗೆಗೆ ಸಹಾಯವಾಗುವಂತಹ ಸೌರಶಕ್ತಿಯಿಂದ ನಡೆಯುವ ಉಪಕರಣಗಳನ್ನು ಖರೀದಿಸಿಡಬೇಕು
೧. ಯಾರ ಬಳಿ ಸೌರಶಕ್ತಿಯಿಂದ (ಸೊಲಾರನಲ್ಲಿ) ನಡೆಯುವ ವಿದ್ಯುತ್ ನಿರ್ಮಿತಿಯ ವ್ಯವಸ್ಥೆ ಇಲ್ಲವೋ ಅಂತಹವರು ‘ಸೊಲಾರ್ ಕುಕ್ಕರ್ ನಂತಹ ಉಪಕರಣಗಳನ್ನು ಖರೀದಿಸಿಡಬೇಕು.
೨. ಯಾರ ಬಳಿ ಸೌರಶಕ್ತಿಯಿಂದ ನಡೆಯುವ ವಿದ್ಯುತ್ ನಿರ್ಮಿತಿಯ ವ್ಯವಸ್ಥೆ ಇದೆಯೋ ಅವರು ವಿದ್ಯುತ್‌ನಿಂದ ಆಹಾರ ತಯಾರಿಸುವ ‘ಇಂಡಕ್ಷನ್ ಒಲೆ ಮತ್ತು ಆ ಒಲೆಯ ಸಂದರ್ಭದಲ್ಲಿ ಉಪಯುಕ್ತವಿರುವ ಅಡುಗೆಯ ಪಾತ್ರೆಗಳನ್ನು ಖರೀದಿಸಿಡಬೇಕು (ಮೋಡದ ವಾತಾವರಣದಲ್ಲಿ ಸೌರಶಕ್ತಿಯು ಸಿಗಲು ಮಿತಿಯುಂಟಾಗುತ್ತದೆ.)
೩ ಅ ೧ ಇ. ಸಾಕಾಗುವಷ್ಟು ಪ್ರಮಾಣದಲ್ಲಿ ಹಸಿಕಸವನ (ಸೊಪ್ಪುಕಾಯಿಪಲ್ಲೆಗಳ ದಂಟುಗಳು, ತಂಗಳು, ಕೊಳೆಯುವಂತಹ ಆಹಾರ ಪದಾರ್ಥ ಇತ್ಯಾದಿ) ಲಭ್ಯವಿರುವವರು ‘ಬಯೋ-ಗ್ಯಾಸ್ ಘಟಕವನ್ನು ಕಟ್ಟುವುದು
ಈ ಯಂತ್ರದಲ್ಲಿ ಸೆಗಣಿಯನ್ನು ಉಪಯೋಗಿಸಬಹುದು. ಅದೇ ರೀತಿ ಈ ಘಟಕಕ್ಕೆ ಶೌಚಾಲಯವನ್ನು ಜೋಡಿಸ ಬಹುದು. ಕೆಲವು ರಾಜ್ಯಗಳಲ್ಲಿ ಸರಕಾರವು ‘ಬಯೊ-ಗ್ಯಾಸ್ ಘಟಕ ಕಟ್ಟಲು ಸಂಪೂರ್ಣ ಖರ್ಚನ್ನು ನೀಡುತ್ತದೆ ಹಾಗೂ ಕೆಲವು ರಾಜ್ಯಗಳಲ್ಲಿ ಸರಕಾರವು ಇಂತಹ ಸಂಯಂತ್ರ ಅಳವಡಿಸಲು ಸ್ವಲ್ಪ ಪ್ರಮಾಣದಲ್ಲಿ ಅನುದಾನವನ್ನು ನೀಡುತ್ತದೆ.
೩ ಅ ೧ ಈ. ಗೋವು, ಎತ್ತು ಮುಂತಾದ ಸಾಕು ಪ್ರಾಣಿಗಳಿರುವವರು, ‘ಗೋಬರ್ ಗ್ಯಾಸ್ ಘಟಕವನ್ನು ಕಟ್ಟುವುದು
ಇದಕ್ಕೆ ಶೌಚಾಲಯವನ್ನು ಜೋಡಿಸಬಹುದು. ಈ ಘಟಕವನ್ನು ಅಳವಡಿಸಲು ರೈತರಿಗೆ ರಾಜ್ಯ ಸರಕಾರದಿಂದ ವಿಶಿಷ್ಟ ನಿಯಮಾವಗಳಿಗನುಸಾರ ಅನುದಾನ ಸಿಗಬಲ್ಲದು.
೩ ಅ ೨. ಅಡುಗೆಯನ್ನು ಮಾಡುವಾಗ ಯಂತ್ರದ (ಉದಾ. ಮಿಕ್ಸರ್‌ನ) ಉಪಯೋಗವನ್ನು ಮಾಡದೇ ಪಾರಂಪಾರಿಕ ವಸ್ತುಗಳನ್ನು ಉಪಯೋಗಿಸುವ ಅಭ್ಯಾಸ ಈಗಿನಿಂದಲೇ ಮಾಡಿಕೊಳ್ಳಬೇಕು
ಅ. ಯಾಂತ್ರಿಕ ಕಡುಗೋಲಿನಿಂದ ಮಜ್ಜಿಗೆ ಕಡೆಯುವಂತಹ ಕೃತಿಗಳನ್ನು ಕಡಿಮೆ ಮಾಡಿ ಸರಳ ಕಡುಗೋಲಿನಿಂದ ಮಜ್ಜಿಗೆಯನ್ನು ಕಡೆಯಬೇಕು.
ಆ. ‘ಮಿಕ್ಸರ್ ಬದಲು ಚಟ್ನಿಯನ್ನು ಅರೆಯಲು ಅರೆಯುವ ಕಲ್ಲು ಮತ್ತು ನೆಲಗಡಲೆಯ ಪುಡಿ ಮಾಡಲು ಒರಳುಕಲ್ಲನ್ನು ಉಪಯೋಗಿಸಬೇಕು.
ಇ. ಇತರ ಪಾರಂಪಾರಿಕ ವಸ್ತು (ಉದಾ. ಹಿಟ್ಟು ಬೀಸಲು ಕಲ್ಲು, ಕುಟ್ಟಲು ಒರಳು ಮತ್ತು ಒನಕೆ) ಉಪಯೋಗಿಸುವ ಅಭ್ಯಾಸ ಮಾಡಬೇಕು.
(ಆಧಾರ : ಸನಾತನದ ಮುಂಬರುವ ಗ್ರಂಥ ‘ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವಸಿದ್ಧತೆ)