೧. ಪೂ.ರಮಾನಂದ ಗೌಡರವರ ಮಾರ್ಗದರ್ಶನದ ಸಮಯದಲ್ಲಿ ಗಮನಕ್ಕೆ ಬಂದಂತಹ ಗುಣವೈಶಿಷ್ಟ್ಯಗಳು
ಅ. ‘ಪೂ. ರಮಾನಂದ ಅಣ್ಣನವರಿಗೆ ಸಾಧಕರ ಸಾಧನೆಯಾಗಬೇಕು, ಎಂಬ ತೀವ್ರ ತಳಮಳವಿದೆ. ಅವರು ಸಾಧಕರಿಗೆ ‘ಸಾಧನೆಯಲ್ಲಿ ಎದುರಾಗುವ ಅಡಚಣೆಗಳನ್ನು ಹೇಗೆ ನಿವಾರಿಸಬೇಕು ?, ಎಂದು ಹಂತಹಂತವಾಗಿ ಚಿಕ್ಕ ಮಕ್ಕಳಿಗೆ ಹೇಳುವಂತೆ ತಿಳಿಸಿ ಹೇಳುತ್ತಿದ್ದರು. ‘ತಂದೆತಾಯಂದಿರೂ ಇಷ್ಟು ಪ್ರೀತಿಯಿಂದ ಹೇಳಿರಲಿಕ್ಕಿಲ್ಲ ಅಥವಾ ಮಾಡಿಸಿರಲಿಕ್ಕಿಲ್ಲ, ಎಂದು ನನಗೆ ಅನಿಸಿತು.
ಆ. ‘ಪರಿವಾರ, ವಾಸ್ತು, ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸಾಧನೆ, ಈ ಎಲ್ಲ ವಿಷಯಗಳಲ್ಲಿ ಹೇಗೆ ಪ್ರಯತ್ನಿಸಬೇಕು ? ಮತ್ತು ಈ ಪ್ರಯತ್ನಗಳನ್ನು ಮಾಡಿದ ಬಳಿಕ ಆಗುವ ಲಾಭಗಳು, ಈ ವಿಷಯದಲ್ಲಿ ಅವರು ಸಾಧಕರ ಮನಸ್ಸು ಮುಟ್ಟುವ ರೀತಿಯಲ್ಲಿ ಹೇಳುತ್ತಿದ್ದರು.
ಇ. ಪೂ. ರಮಾನಂದ ಅಣ್ಣನವರು ‘ಗುರುದೇವರಿಗೆ ಪ್ರತಿಯೊಂದು ಕೃತಿಯ ಶ್ರೇಯಸ್ಸನ್ನು ಹೇಗೆ ಅರ್ಪಿಸಬೇಕು ?, ಎಂಬ ಬಗ್ಗೆ ಭಾವಪೂರ್ಣವಾಗಿ ಹೇಳುತ್ತಿದ್ದರು. ಆಗ ನಮ್ಮೆಲ್ಲ ಸಾಧಕರ ಮನಸ್ಸಿನಲ್ಲಿ ಪರಾತ್ಪರ ಗುರುದೇವರ ಬಗ್ಗೆ ‘ಇಂತಹ ಸಂತರನ್ನು ನಮಗೆ ನೀಡಿದ್ದಾರೆ, ಎಂದು ಕೃತಜ್ಞತೆಯೆನಿಸುತ್ತಿತ್ತು.
ಈ. ‘ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ, ಅದು ಸಾಧನೆಗೆ ಪೂರಕವಾಗಿರುತ್ತದೆ, ಎಂದು ಪೂ. ರಮಾನಂದ ಅಣ್ಣನವರು ಉದಾಹರಣೆಯೊಂದಿಗೆ ಹೇಳಿದ್ದರಿಂದ ಎಲ್ಲ ಸಾಧಕರಿಗೆ ಸಾಧನೆ ಮಾಡಲು ಸ್ಫೂರ್ತಿ ಸಿಗುತ್ತಿತ್ತು.
ಉ. ‘ಒಂದೊಂದು ಕ್ಷಣವೂ ಬಹಳ ಅಮೂಲ್ಯವಾಗಿದೆ. ಅದನ್ನು ಸಾಧನೆಗಾಗಿ ಉಪಯೋಗಿಸಿದರೆ ಒಂದೊಂದು ಗಂಟೆಯಲ್ಲಿ ೪೨ ಗಂಟೆಗಳಷ್ಟು ಸಾಧನೆಯಾಗುತ್ತದೆ, ಈ ವಿಷಯದಲ್ಲಿ ಪೂ. ರಮಾನಂದ ಅಣ್ಣನವರು ಅತ್ಯಂತ ಉತ್ಕೃಷ್ಟ ರೀತಿಯಲ್ಲಿ ವಿಶ್ಲೇಷಣೆ ಮಾಡಿದರು.
ಊ. ಅವರು ‘ಶ್ರದ್ಧೆ, ಭಾವ, ತಳಮಳ ಇವುಗಳಿಗೆ ಇರುವ ಮಹತ್ವ ಮತ್ತು ಅವುಗಳನ್ನು ವೃದ್ಧಿಗೊಳಿಸಲು ಹೇಗೆ ಪ್ರಯತ್ನಿಸಬೇಕು ?, ಎನ್ನುವುದನ್ನು ಸಾಧಕರ ಉದಾಹರಣೆಯೊಂದಿಗೆ ತಿಳಿಸಿ ಹೇಳಿ ಸಾಧಕರನ್ನು ಪ್ರೋತ್ಸಾಹಿಸುತ್ತಿದ್ದರು.
ಎ. ‘ವಾತಾವರಣ ಸಾತ್ತ್ವಿಕವಿದ್ದರೆ ಸಾಧನೆಯೂ ಉತ್ತಮವಾಗಿ ಆಗುತ್ತದೆ. ಇದಕ್ಕಾಗಿ ವಾಸ್ತು, ಪರಿಸರ ಇತ್ಯಾದಿ ಎಲ್ಲವೂ ಚೈತನ್ಯಮಯಗೊಳಿಸುವ ಮಹತ್ವ ಮತ್ತು ಅದಕ್ಕಾಗಿ ಮಾಡಬೇಕಾದ ಪ್ರಯತ್ನ, ಎಂಬ ವಿಷಯದಲ್ಲಿ ಅವರು ತಿಳಿಸಿ ಹೇಳುತ್ತಿದ್ದರು.
೨. ಪೂ. ರಮಾನಂದ ಗೌಡರವರ ಮಾರ್ಗದರ್ಶನದ ಸಮಯದಲ್ಲಿ ಗಮನಕ್ಕೆ ಬಂದ ಅಂಶಗಳು ಮತ್ತು ಅನುಭೂತಿ !
೨ ಅ. ಪೂ. ರಮಾನಂದ ಅಣ್ಣನವರ ಸಂತ-ಸನ್ಮಾನ ಸಮಾರಂಭದ ಧ್ವನಿಚಿತ್ರಮುದ್ರಿಕೆಯನ್ನು ನೋಡುತ್ತಿರುವಾಗ ಸಾಧಕಿಗೆ ‘೨-೩ ದಿನಗಳಿಂದ ಸಮಷ್ಟಿ ವಿಷಯದಲ್ಲಿ ಬರುತ್ತಿದ್ದ ವಿಚಾರವನ್ನು ಈಶ್ವರನೇ ಸೂಚಿಸಿದ್ದಾನೆ, ಎಂದು ಅರಿವಾಗುವುದು : ‘ಪೂ ರಮಾನಂದ ಅಣ್ಣನವರು ಮಾರ್ಗದರ್ಶನ ಮಾಡುವ ಮೊದಲು ಸಾಧಕರಿಗೆ ‘ಪೂ. ರಮಾನಂದ ಅಣ್ಣನವರ ಸಂತ-ಸನ್ಮಾನ ಸಮಾರಂಭದ ಧ್ವನಿಚಿತ್ರಮುದ್ರಿಕೆಯನ್ನು (ವೀಡಿಯೋ ಸಿ.ಡಿ) ತೋರಿಸಲಾಯಿತು. ಆ ಸಮಾರಂಭದಲ್ಲಿ ಪೂ. ಅಣ್ಣನವರು ‘ಗುರುಗಳ ಕಾರಣದಿಂದಲೇ ಎಲ್ಲವೂ ನಡೆದಿದೆ, ಎಂಬ ಭಾವದಿಂದ ಮಾತನಾಡುತ್ತಿದ್ದರು. ಆಗ ನನಗೆ ‘ಈ ಮಾರ್ಗದರ್ಶನದ ಮೊದಲು ೨-೩ ದಿನಗಳಿಂದ ನನ್ನ ಮನಸ್ಸಿನಲ್ಲಿ ‘ಸಮಾಜದಲ್ಲಿರುವ ಎಲ್ಲರಿಗೂ ಸಾಧನೆ ಮತ್ತು ಆಪತ್ಕಾಲದ ವಿಷಯದಲ್ಲಿ ಹೇಳಬೇಕು. ನಾವು ಸಮಷ್ಟಿಗಾಗಿ ಏನಾದರೂ ಬಹಳ ಮಾಡಬೇಕು, ಎನ್ನುವ ವಿಚಾರ ತೀವ್ರವಾಗಿ ಬರುತ್ತಿತ್ತು. ‘ಯಾವ ವಿಷಯವನ್ನು ಹೇಳುವುದು ? ಹೇಗೆ ಹೇಳುವುದು ? ಏನು ಮಾಡಬೇಕು ?, ಎಂದು ಯಾರೋ ನನಗೆ ತಿಳಿಸುತ್ತಿದ್ದಾರೆ, ಎಂದು ನನಗೆ ಅನಿಸುತ್ತಿತ್ತು. ‘ಅದು ನನ್ನ ವಿಚಾರಗಳಾಗಿರಲಿಲ್ಲ, ಅದು ಕೇವಲ ಈಶ್ವರನ ವಿಶ್ವಮನಸ್ಸಿನ ವಿಚಾರ ಪೃಥ್ವಿಯ ಹತ್ತಿರ ಬಂದಿದ್ದರಿಂದ ನನಗೆ ಆ ರೀತಿ ಅನಿಸುತ್ತಿತ್ತು ಮತ್ತು ಪೂ. ಅಣ್ಣನವರ ಮಾಧ್ಯಮದಿಂದ ‘ಅದು ಈಶ್ವರನ ವಿಚಾರವೇ ಆಗಿದೆ, ಎಂದು ಮತ್ತೊಮ್ಮೆ ಪರಾತ್ಪರ ಗುರುದೇವರು ನನಗೆ ತೋರಿಸಿಕೊಟ್ಟರು. (ಬಹುತೇಕ ಆ ಸಮಯದಲ್ಲಿ ಪೂ. ಅಣ್ಣನವರು ಮಾರ್ಗದರ್ಶನಕ್ಕಾಗಿ ಪೂರ್ವಸಿದ್ಧತೆಯನ್ನು ಮಾಡುತ್ತಿದ್ದುದರಿಂದ ‘ನನಗೆ ಸಮಷ್ಟಿಗಾಗಿ ಏನಾದರೂ ಮಾಡಬೇಕು, ಎನ್ನುವ ವಿಚಾರ ನನ್ನ ಮನಸ್ಸಿನಲ್ಲಿ ಬಂದಿದೆಯೆಂದು ಅರಿವಾಯಿತು.)
೨ ಆ. ‘ಪೂ. ರಮಾನಂದ ಅಣ್ಣನವರ ಸಂತ-ಸನ್ಮಾನ ಸಮಾರಂಭದ ಧ್ವನಿಚಿತ್ರಮುದ್ರಿಕೆಯನ್ನು ಮೊದಲ ಸಲ ನೋಡುತ್ತಿದ್ದೇನೆ, ಎಂದೆನಿಸುವುದು : ನಾನು ಈ ಧ್ವನಿಚಿತ್ರ-ಮುದ್ರಿಕೆಯನ್ನು ಈ ಮೊದಲೂ ೨-೩ ಸಲ ನೋಡಿದ್ದೇನೆ; ಆದರೆ ಈ ಸಲ ‘ನಾನು ಧ್ವನಿಚಿತ್ರ ಮುದ್ರಿಕೆಯನ್ನು ಮೊದಲ ಸಲ ನೋಡುತ್ತಿದ್ದೇನೆ, ಎಂದು ನನಗೆ ಅನಿಸುತ್ತಿತ್ತು. ‘ಪರಾತ್ಪರ ಗುರುದೇವರು ಕೂಡ ನಮ್ಮೆಲ್ಲ ಸಾಧಕರೊಂದಿಗೆ ಧ್ವನಿಚಿತ್ರ-ಮುದ್ರಿಕೆಯನ್ನು ನೋಡುತ್ತಿದ್ದಾರೆ, ಎನ್ನುವ ಭಾವ ನನ್ನ ಮನಸ್ಸಿನಲ್ಲಿ ಉಮ್ಮಳಿಸಿ ಬರುತ್ತಿತ್ತು ಮತ್ತು ‘ಪರಾತ್ಪರ ಗುರುದೇವರು ನನ್ನ ಭಾವಜಾಗೃತಿಯನ್ನು ಮಾಡಿಸಿ ಕೊಳ್ಳುತ್ತಿದ್ದಾರೆ, ಎಂದೂ ನನಗೆ ಅನಿಸುತ್ತಿತ್ತು.
೨ ಇ. ‘ಸಂಪೂರ್ಣ ಸಮಯ ಮಾರ್ಗದರ್ಶನವನ್ನು ಕೇಳಲು ಸಾಧ್ಯವಾಗುವುದೋ ಅಥವಾ ಇಲ್ಲವೋ ?, ಎಂದು ನನಗೆ ಅನಿಸುವುದು, ಆದರೆ ಮಾರ್ಗದರ್ಶನ ಪ್ರಾರಂಭವಾದ ಬಳಿಕ ಸಮಯದ ಪರಿವೇ ಇಲ್ಲದಿರುವುದು : ಪೂ. ಅಣ್ಣನವರ ಮಾರ್ಗದರ್ಶನ ಪ್ರಾರಂಭವಾಗುವ ಮೊದಲು ನನ್ನ ಮನಸ್ಸಿನಲ್ಲಿ ‘೩ ಗಂಟೆಗಳ ಕಾಲ ಮಾರ್ಗದರ್ಶನವನ್ನು ಹೇಗೆ ಕೇಳುವುದು ? ಅಷ್ಟು ಸಮಯ ಹೇಗೆ ಕುಳಿತುಕೊಳ್ಳುವುದು ?, ಎಂಬ ವಿಚಾರದೊಂದಿಗೆ ಸೇವೆಯ ವಿಚಾರವೂ ಬರುತ್ತಿತ್ತು: ಆದರೆ ಮಾರ್ಗದರ್ಶನ ಪ್ರಾರಂಭವಾದ ಬಳಿಕ ನನಗೆ ಸಮಯದ ಪರಿವೇ ಇರಲಿಲ್ಲ. ಪೂ. ಅಣ್ಣನವರ ಮಾರ್ಗದರ್ಶನ ಮುಗಿದ ಬಳಿಕವೇ ನನಗೆ ನನ್ನ ಅರಿವು ಆಯಿತು. ನಾನು ಮೊದಲ ಬಾರಿಗೆ ಈ ರೀತಿ ಅನುಭವಿಸಿದೆನು. (ನಿಜವಾಗಿ ಹೇಳಬೇಕೆಂದರೆ, ಮಂಗಳೂರಿನಲ್ಲಿ ಬಹಳ ಸೆಕೆಯಿರುವುದರಿಂದ ನನಗೆ ಒಂದೇ ಸ್ಥಳದಲ್ಲಿ ಬಹಳ ಸಮಯ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ)
‘ಸಂತರು ಅಥವಾ ಗುರುಗಳು ಈಶ್ವರನ ನಡೆದಾಡುವ- ಮಾತನಾಡುವ ರೂಪವಾಗಿದ್ದಾರೆ, ಎಂದು ನನಗೆ ಪ್ರತಿಯೊಂದು ಕ್ಷಣವೂ ಅನುಭೂತಿಯಾಗುತ್ತಿತ್ತು. ‘ನಮಗೆ ಇಂತಹ ಸಂತರನ್ನು ನೀಡಿದ್ದಾರೆ, ಇದಕ್ಕಾಗಿ ಪರಾತ್ಪರ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ !
– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು ಸೇವಾಕೇಂದ್ರ, ಕರ್ನಾಟಕ. (೧೮.೪.೨೦೨೦)