ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರಿಗಿರುವ ಗುರುಕಾರ್ಯದ ಧ್ಯಾಸ !

ಕು. ತೇಜಲ್ ಪಾತ್ರೀಕರ್

೧. ಕರ್ನಾಟಕದಲ್ಲಿ ವೇಗವಾಗಿ ಹೆಚ್ಚುತ್ತಿರುವ ಗುರುಕಾರ್ಯ

‘ಸನಾತನದ ಸಂತ ಪೂ. ರಮಾನಂದ ಗೌಡರವರಿಗೆ ಕರ್ನಾಟಕ ರಾಜ್ಯದಲ್ಲಿ ಧರ್ಮ ಪ್ರಚಾರ ಸೇವೆಯ ಜವಾಬ್ದಾರಿ ಇದೆ. ಅವರಲ್ಲಿ ‘ಪರಾತ್ಪರ ಗುರು ಡಾಕ್ಟರರ ಬಗ್ಗೆ ಇರುವ ಭಾವ ಹಾಗೂ ಅವರ ಭಾವದಂತೆ ಸಮಷ್ಟಿ ಕಾರ್ಯದ ಉತ್ಕೃಷ್ಟ ಜೊತೆ ಈ ಅವರ ಗುಣವು ನನಗೆ ಪ್ರಮುಖವಾಗಿ ಗಮನಕ್ಕೆ ಬಂದಿತು. ಆದ್ದರಿಂದಲೇ ಕರ್ನಾಟಕ ರಾಜ್ಯದಲ್ಲಿನ ಗುರುಕಾರ್ಯವು ಬೇರೆ ರಾಜ್ಯಗಳಿಗೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಗಮನಕ್ಕೆ ಬರುತ್ತದೆ.

೨. ಸಂಗೀತ ಪ್ರವಾಸಕ್ಕೆಂದು ಬರುವ ಆಯೋಜನೆ ಇರುವ ಬಗ್ಗೆ ಪೂ. ರಮಾನಂದ ಗೌಡರವರಿಗೆ ತಿಳಿಸಿದಾಗ ಅವರು ಅಲ್ಲಿನ ಜವಾಬ್ದಾರ ಸಾಧಕರಿಗೆ ಸಂಗೀತ ಕಲಾವಿದರ ಪಟ್ಟಿ ಮಾಡಲು ಹೇಳುವುದು

ಪೂ. ರಮಾನಂದ ಅಣ್ಣನವರಿಗೆ ಇರುವ ಸಮಷ್ಟಿಯ ತಳಮಳದ ಉದಾಹರಣೆಯೆಂದರೆ ನಾವು ಸಂಗೀತ ಪ್ರವಾಸಕ್ಕೆಂದು ಕರ್ನಾಟಕಕ್ಕೆ ಬರುತ್ತಿದ್ದೇವೆ ಎಂದು ತಿಳಿದ ತಕ್ಷಣ ಅವರು ಕರ್ನಾಟಕ ರಾಜ್ಯದಲ್ಲಿ ಜವಾಬ್ದಾರ ಸಾಧಕರಿಗೆ ತಮ್ಮ ಪರಿಸರದಲ್ಲಿರುವ ಸಂಗೀತ ಕಲಾವಿದರ ಪಟ್ಟಿಯನ್ನು ತಯಾರಿಸಿಡಲು ಹೇಳಿದರು. ಪೂ. ಅಣ್ಣಾರವರು ನಮ್ಮ ಜೊತೆಗೆ ಓರ್ವ ಸಾಧಕರ ಯೋಜನೆ ಮಾಡಿಕೊಟ್ಟರು. ಆ ಸಾಧಕರು ಸತತ ಕಲಾವಿದರ ಸಂಪರ್ಕದಲ್ಲಿರುತ್ತಿದ್ದರು. ಈ ಎಲ್ಲ ಆಯೋಜನೆಯನ್ನು ಪೂ. ಅಣ್ಣನವರು ನಾವು ಅಲ್ಲಿಗೆ ಹೋಗುವ ಮೊದಲೇ ಮಾಡಿಟ್ಟಿದ್ದರು. ಈ ವಿಷಯವು ಪರಾತ್ಪರ ಗುರು ಡಾ. ಆಠವಲೆಯವರಿಗೆ ತಿಳಿಸಿದಾಗ ಅವರು ಪೂ. ಅಣ್ಣಾರವರನ್ನು ಹೊಗಳಿದರು ಹಾಗೂ “ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೂ. ಅಣ್ಣನವರ ನೇತೃತ್ವದಿಂದ ಗುರುಕಾರ್ಯವು ಹೇಗೆ ಹೆಚ್ಚುತ್ತಿದೆ, ಎಂಬುದು ಗಮನಕ್ಕೆ ಬರುತ್ತಿದೆಯಲ್ಲವೇ ! ಎಂದು ಹೇಳಿದರು. – ಕು. ತೇಜಲ ಪಾತ್ರೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೫.೧.೨೦೨೦)