ಅಮರನಾಥ ಯಾತ್ರೆ ಜೂನ್ ೨೩ ರಿಂದ ಆರಂಭ

ಶ್ರೀನಗರ : ಹಿಂದೂಗಳ ಪ್ರಸಿದ್ಧ ಅಮರನಾಥ ಯಾತ್ರೆ ಜೂನ್ ೨೩ ರಿಂದ ಆರಂಭವಾಗುತ್ತಿದೆ. ಯಾತ್ರೆಗೆ ಮುಂಚಿತವಾಗಿ, ಅಂದರೆ ಜೇಷ್ಠ ಹುಣ್ಣಿಮೆಯಂದು ಆಗುವ ಮೊದಲ ಪೂಜೆಯು ಈ ವರ್ಷ ಜಮ್ಮುವಿನ ‘ಶ್ರೀ ಅಮರನಾಥ ಶ್ರೈನ್ ಬೋರ್ಡ್’ನ ಕಚೇರಿ ಆವರಣದಲ್ಲಿ ಅಥವಾ ಚಂದನ್‌ಬಾಡಿಯಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಈ ಪೂಜೆ ದಕ್ಷಿಣ ಕಾಶ್ಮೀರದ ಚಂದನ್‌ಬಡಿಯಲ್ಲಿ ನಡೆಯುತ್ತಿತ್ತು. ಈ ವರ್ಷ ಕೇವಲ ೧೫ ದಿನಗಳ ವರೆಗೆ ಯಾತ್ರೆ ನಡೆಯಲಿದೆ ಎಂದು ಹೇಳಲಾಗಿದೆ.