ಆಂಧ್ರಪ್ರದೇಶದ ಆಡಳಿತಾರೂಢ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ಸಂಸದ ರಘು ರಾಮಕೃಷ್ಣ ರಾಜು ಅವರಿಂದ ಗುಟ್ಟು ರಟ್ಟು !
- ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಇವರು ಸ್ವತಃ ಕಟ್ಟರವಾದಿ ಕ್ರೈಸ್ತರಿದ್ದಾರೆ, ಆದ್ದರಿಂದ ರಾಜ್ಯದಲ್ಲಿ ಕ್ರೈಸ್ತರ ನಿಜವಾದ ಜನಸಂಖ್ಯೆ ಎಷ್ಟು ? ಮತ್ತು ಅದು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ?, ಇದು ತಿಳಿಯುವುದು ಕಷ್ಟವಿದೆ !
- ಕ್ರೈಸ್ತರಿಂದ ಬಲವಂತವಾಗಿ, ಆಮಿಶ ತೋರಿಸಿ ಇತ್ಯಾದಿ ಮಾರ್ಗಗಳಿಂದ ಮಾಡಲಾಗುತ್ತಿರುವ ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಹಿಂದೂಗಳು ಧರ್ಮಶಿಕ್ಷಣವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಧರ್ಮಾಭಿಮಾನವನ್ನು ಹೆಚ್ಚಿಸಿಕೊಂಡರೇ, ಮಾತ್ರ ಹಿಂದುತ್ವನಿಷ್ಠರು ಈ ಅನ್ಯಾಯದ ವಿರುದ್ಧ ನ್ಯಾಯಯುತ ಮಾರ್ಗದಿಂದ ಧ್ವನಿ ಎತ್ತುವುದು ಅಗತ್ಯವಿದೆ !
- ಇದು ಹೀಗೆ ಮುಂದುವರಿದರೆ, ಹಿಂದೂಗಳ ಬಹುಸಂಖ್ಯಾತವಿರುವ ಈ ದೇಶದಲ್ಲಿ ಶೀಘ್ರದಲ್ಲೇ ಅಲ್ಪಸಂಖ್ಯಾತರಾಗುತ್ತಾರೆ ! ಹೀಗೆ ಆಗಬಾರದೆಂದರೆ ಹಿಂದೂ ರಾಷ್ಟ್ರದ ಅಗತ್ಯವಿದೆ !
ಅಮರಾವತಿ (ಆಂಧ್ರಪ್ರದೇಶ) – ಸರ್ಕಾರದ ಅಂಕಿಅಂಶಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಕ್ರೈಸ್ತರ ಜನಸಂಖ್ಯೆಯು ಕೇವಲ ಶೇ.೨.೫ ರಷ್ಟು ಮಾತ್ರ ಇದ್ದರೂ, ವಾಸ್ತವದಲ್ಲಿ ಇದು ಶೇಕಡಾ ೨೫ ರಷ್ಟಿದೆ, ಎಂಬ ಗೌಪ್ಯಸ್ಪೋಟವನ್ನು ರಾಜ್ಯದ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಸದ ರಘು ರಾಮಕೃಷ್ಣ ರಾಜು ಅವರು ಮಾಡಿದರು. ಅವರು ‘ಟೈಮ್ಸ್ ನೌ’ ಎಂಬ ಆಂಗ್ಲ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದರು. ಈ ಹಿಂದೆ ಅವರು ‘ಒಂದು ವೇಳೆ ಮಿಷನರಿಗಳು ಹಣದ ಬಲದಿಂದ ಹಿಂದೂಗಳ ಮತಾಂತರವನ್ನು ಮಾಡುತ್ತಿದ್ದಲ್ಲಿ, ನಾನೇನು ಮಾಡಲಿ’, ಎಂಬ ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದರು, ಈಗ ಅವರು ಮೇಲಿನ ಮಾಹಿತಿಯನ್ನು ನೀಡಿದ್ದಾರೆ.
ಹಿಂದುಳಿದ ವರ್ಗದ ಹಿಂದೂಗಳು ಮತಾಂತರವಾಗುತ್ತಾರೆ; ಆದರೆ ನೊಂದಣಿ ಮಾಡುವುದಿಲ್ಲ !
ಈ ರೀತಿಯಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಸಂಭವಿಸುತ್ತಿರಬಹುದು. ಇದರರ್ಥ ದೇಶದಲ್ಲಿ ಶೇ. ೨.೫ ರಷ್ಟು ಕ್ರೈಸ್ತರಿದ್ದರೂ, ವಾಸ್ತವದಲ್ಲಿ ಅವರ ಸಂಖ್ಯೆ ಹೆಚ್ಚು ಇರಬಹುದು ! ಇದರ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು !
ಈ ಚಿತ್ರಣವನ್ನು ಬದಲಾಯಿಸಲು ಹಿಂದೂ ಪರ ಸಂಘಟನೆಗಳು ನ್ಯಾಯಸಮ್ಮತ ಮಾರ್ಗದಿಮದ ಪ್ರಯತ್ನ ಮಾಡುವುದು ಅಗತ್ಯವಿದೆ !
ರಾಜು ತಮ್ಮ ಮಾತನ್ನು ಮುಂದುವರಿಸುತ್ತ, ‘ನನಗೆ ಗೊತ್ತಿಲ್ಲ, ಇದು ಒಳ್ಳೆಯದು ಅಥವಾ ಕೆಟ್ಟದು; ಆದರೆ ನಾನು ನೀಡುತ್ತಿರುವ ಮಾಹಿತಿಯು ಅಂಕಿಅಂಶಗಳ ಪ್ರಕಾರ ಇದೆ. ಆಂಧ್ರಪ್ರದೇಶದ ಕೆಲವರು ಹಿಂದುಳಿದ ವರ್ಗದವರು ಇದ್ದಾರೆ ಅವರು ಮೀಸಲಾತಿ ಮತ್ತು ಇತರ ಸರ್ಕಾರಿ ಸೌಲಭ್ಯಗಳ ಲಾಭವನ್ನು ಪಡೆಯುತ್ತಿದ್ದಾರೆ. ಒಂದುವೇಳೆ ಅವರು ಕ್ರೈಸ್ತಧರ್ಮ ಸ್ವೀಕರಿಸಿದರೆ, ಅವರಿಗೆ ಈ ಸೌಲಭ್ಯಗಳು ಸಿಗುವುದು ನಿಲ್ಲುತ್ತದೆ. ಇದಕ್ಕಾಗಿಯೇ ಜನರು ಕ್ರೈಸ್ತ ಧರ್ಮ ಸ್ವೀಕಾರ ಮಾಡುತ್ತಾರೆ; ಆದರೆ ಅದನ್ನು ನೋಂದಣಿ ಮಾಡುವುದಿಲ್ಲ. ಇವರಿಂದಾಗಿಯೇ ರಾಜ್ಯದಲ್ಲಿ ಕ್ರೈಸ್ತರ ಜನಸಂಖ್ಯೆಯ ಶೇಕಡಾ ೨೫ ರಷ್ಟಿದೆ.’ ಎಂದು ಹೇಳಿದರು
ಜೊತೆಗೆ ರಾಜುರವರು ಸಂವಿಧಾನದ ೨೫ (೧) ನೇ ವಿಧಿಯನ್ನು ಉಲ್ಲೇಖಿಸಿದ್ದಾರೆ, ಅದೇರೀತಿ “ನಾನು ಕ್ರೈಸ್ತ ಧರ್ಮದ ವಿರುದ್ಧ ಇಲ್ಲ. ನಾನು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತೇನೆ’, ಎಂದೂ ಅವರು ಸ್ಪಷ್ಟಪಡಿಸಿದರು.