ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡಿಟ್ಟುಕೊಳ್ಳಿ !
ಆಪತ್ಕಾಲದ ದೃಷ್ಟಿಯಿಂದ ಮಾನಸಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ ಕೆಲವು ಸಮಸ್ಯೆಗಳ ಸಂದರ್ಭದಲ್ಲಿ ಮನಸ್ಸಿಗೆ ಸ್ವಯಂಸೂಚನೆ ಕೊಡಬೇಕು
ಸ್ವಯಂಸೂಚನೆಗಳ ಬಗ್ಗೆ ಸವಿಸ್ತಾರ ವಿವರಣೆಯನ್ನು ಸನಾತನ ಗ್ರಂಥ ‘ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ ನಿರ್ಮೂಲನೆ ಇದರಲ್ಲಿ ಕೊಡಲಾಗಿದೆ. ಗಲಭೆ, ಭೂಕಂಪ, ಮಹಾಯುದ್ಧ ಮುಂತಾದವುಗಳ ಸಮಯದಲ್ಲಿ ಉದ್ಭವಿಸುವ ಸ್ಥಿತಿಯನ್ನು ಎದುರಿಸಲು ಭಯವೆನಿಸುತ್ತಿದ್ದಲ್ಲಿ ಸಂಬಂಧಿತ ಪ್ರಸಂಗಗಳ ಅಭ್ಯಾಸ ಮಾಡಲು ಸ್ವಯಂಸೂಚನೆ ನೀಡಬೇಕು ! ‘ಆಪತ್ಕಾಲದಲ್ಲಿನ ಯಾವುದಾದರೊಂದು ಪ್ರಸಂಗದಲ್ಲಿ ಏನೂ ಮಾಡುವುದು ನಮ್ಮ ಕೈಯಲ್ಲಿ ಇಲ್ಲದಿರುವಾಗ, ಆ ಕಠಿಣ ಪ್ರಸಂಗದೆಡೆಗೆ ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದು ಅಥವಾ ಸಾಕ್ಷೀಭಾವದಿಂದ ನೋಡಲು ಬರಬೇಕು ಮತ್ತು ಪರಿಸ್ಥಿತಿಯನ್ನು ಆನಂದದಿಂದ ಸ್ವೀಕರಿಸಲು ಬರಬೇಕು, ಎಂದು ಸ್ವಯಂಸೂಚನೆ ನೀಡಬೇಕು ! ಕಡಿಮೆ ಅಥವಾ ಹೆಚ್ಚು ಅವಧಿಗಾಗಿ ಕುಟುಂಬದವರ ಅಗಲಿಕೆಯನ್ನು ಸಹಿಸುವ ಸಿದ್ಧತೆಯನ್ನಿಟ್ಟುಕೊಳ್ಳಬೇಕು !
ಆಪತ್ಕಾಲದ ದೃಷ್ಟಿಯಿಂದ ಕೌಟುಂಬಿಕ ಸ್ತರದಲ್ಲಿ ಮಾಡಬೇಕಾದ ತಯಾರಿ
ಕುಟುಂಬಕ್ಕಾಗಿ ಆವಶ್ಯಕವಿರುವ ಬಟ್ಟೆಗಳು, ವಸ್ತು ಮುಂತಾದವುಗಳನ್ನು ಸಂಗ್ರಹಿಸಿಡಬೇಕು ! : ಇದರಲ್ಲಿ ಬಟ್ಟೆಗಳು, ಹಾಸಿಗೆ-ಹೊದಿಕೆ, ಸೂಜಿ-ದಾರ, ಚಪ್ಪಲಿಗಳು, ಸಾಬೂನು, ದಂತಮಂಜನ, ಛತ್ರಿಗಳು, ಕಡ್ಡಿಪೆಟ್ಟಿಗೆಗಳು, ಮೇಣದ ಬತ್ತಿಗಳು, ‘ಬಲ್ಬ್, ಗಡ್ಡ ಮಾಡುವ ಸಾಮಾನು, ಆಧ್ಯಾತ್ಮಿಕ ಉಪಾಯಗಳಿಗಾಗಿ ಸಾತ್ತ್ವಿಕ ಉತ್ಪಾದನೆಗಳು (ಉದಾ. ಅತ್ತರ, ಕರ್ಪೂರ, ಊದುಬತ್ತಿ) ಮುಂತಾದವುಗಳ ಸಮಾವೇಶವಿರಬೇಕು. – ಪರಾತ್ಪರ ಗುರು ಡಾ. ಆಠವಲೆ (ಆಧಾರ : ಸನಾತನದ ಮುಂಬರುವ ಗ್ರಂಥ ‘ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವಸಿದ್ಧತೆ)