ಸಾಧಕರು ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ಮಹತ್ವದ ಸೂಚನೆ

ಕಿವಿಯಲ್ಲಿ ಸತತವಾಗಿ ‘ಇಯರ್‌ಫೋನ್ ಹಾಕಿಕೊಂಡು ಕೇಳುವುದರಿಂದ ಶ್ರವಣ ಶಕ್ತಿ ಕಡಿಮೆಯಾಗುವುದರಿಂದ ಅದನ್ನು ತಡೆಗಟ್ಟಿರಿ !

೧. ‘ಇಯರ್‌ಫೋನನ್ನು ಅತಿಯಾಗಿ ಉಪಯೋಗಿಸುವುದರಿಂದ ಆಗುವ ಹಾನಿಗಳು

ಇತ್ತೀಚೆಗೆ ಬಹಳಷ್ಟು ಜನರು ಗಂಟೆಗಟ್ಟಲೆ ಕಿವಿಯಲ್ಲಿ ‘ಇಯರ್‌ಫೋನ್ ಹಾಕಿಕೊಂಡು ಏನಾದರೂ ಕೇಳುತ್ತಿರುತ್ತಾರೆ. ಸತತವಾಗಿ ಕಿವಿಯಲ್ಲಿ ‘ಇಯರ್‌ಫೋನ್ ಹಾಕಿಕೊಂಡು ಕೇಳುವುದರಿಂದ ಕಿವಿಯ ಶ್ರವಣ ತಮಟೆಯ ಮೇಲೆ ಧ್ವನಿ ಲಹರಿಗಳು ಬಹಳ ಸಮೀಪದಿಂದ ಅಪ್ಪಳಿಸುತ್ತವೆ. ಇದರಿಂದ ‘ಶ್ರವಣ ಶಕ್ತಿ ಬಹಳ ಬೇಗ ಕಡಿಮೆಯಾಗುತ್ತದೆ ಎಂದು ವೈದ್ಯಕೀಯ ಅಧ್ಯಯನದಿಂದ ಗಮನಕ್ಕೆ ಬಂದಿದೆ.

೨. ‘ಇಯರ್‌ಫೋನ್ ನ ವಿಧಗಳು

೨ ಅ. ಕಿವಿಗಳಿಗೆ ಹೆಚ್ಚು  ಅಪಾಯವನ್ನುಂಟು ಮಾಡುವ ‘ಇನ್ ಇಯರ್ ಎಂಬ ‘ಇಯರ್‌ಫೋನ್ ! : ‘ಇನ್ ಇಯರ್ ಈ ರೀತಿಯ ‘ಇಯರ್‌ಫೋನ್ ಕಿವಿಯ ಆಳದ ವರೆಗೆ ಹೋಗುತ್ತದೆ. ಇದರಿಂದ ಅದನ್ನು ಅನೇಕ ಗಂಟೆಗಳ ಕಾಲ ಹಾಕಿಕೊಳ್ಳುವುದರಿಂದ ಕಿವಿಯ ಒಳಗೆ ಗಾಳಿಯಾಡುವುದಿಲ್ಲ. ಇದರ ಪರಿಣಾಮದಿಂದ ಕಿವಿಯು ತುರಿಸುವುದು, ಸೋಂಕು ಆಗುವುದು, ಕಿವಿಯ ತಮಟೆಗೆ ಅಪಾಯವಾಗುವುದು ಇತ್ಯಾದಿ ತೊಂದರೆಗಳಾಗುವ ಸಾಧ್ಯತೆಯಿದೆ. ಈ ‘ಇಯರ್‌ಫೋನ್ ಒಂದು ಸಲಕ್ಕೆ ೨೦ ನಿಮಿಷಗಳಿಗಿಂತ ಹೆಚ್ಚು ಸಮಯ ಉಪಯೋಗಿಸಬಾರದು ಮತ್ತು ನಂತರ ಸಾಕಷ್ಟು ಕಾಲಾವಧಿಯ ಬಳಿಕ ಉಪಯೋಗಿಸಬೇಕು.

೨ ಆ. ‘ಇಯರ್‌ಮಫ್ ಹೆಡ್‌ಫೋನ್ : ‘ಇಯರ್ ಮಫ್ ಇರುವ ಹೆಡ್‌ಫೋನ್ ಕಿವಿಯ ಹೊರಗಡೆಯಿರುತ್ತದೆ. ಈ ಹೆಡ್‌ಫೋನ್ ನೇರವಾಗಿ ಕಿವಿಯ ಸಂಪರ್ಕಕ್ಕೆ ಬರುವುದಿಲ್ಲ. ಆದ್ದರಿಂದ ಅದನ್ನು ಉಪಯೋಗಿಸುವುದು ಒಂದು ಹಂತದವರೆಗೆ ಯೋಗ್ಯವಾಗಿದೆ. ಆದರೆ ಅದನ್ನು ಕೂಡ ನಿರಂತರವಾಗಿ ೨ ಗಂಟೆಗಿಂತ ಹೆಚ್ಚು ಕಾಲಾವಧಿಗಾಗಿ ಉಪಯೋಗಿಸಬಾರದು.

೩. ‘ಇಯರ್‌ಫೋನ್ ಬದಲು ಸ್ಪೀಕರ್ ಅಥವಾ ಮೊಬೈಲ್‌ನಿಂದ ಕೇಳುವುದು, ಹೆಚ್ಚು ಯೋಗ್ಯ

ಹೆಚ್ಚು ಕಾಲ ‘ಇಯರ್‌ಫೋನ್ ಉಪಯೋಗಿಸುವವರು ‘ಹೆಡ್‌ಫೋನ್ ಉಪಯೋಗಿಸುವುದು ಸೂಕ್ತವಾಗಿದೆ. ಇದರಿಂದ ಅವರಿಗೆ ಸ್ವಲ್ಪ ಮಟ್ಟಿಗೆ ಕಡಿಮೆ ತೊಂದರೆಯಾಗಬಹುದು. ‘ಇಯರ್ ಫೋನ್ ಅಥವಾ ‘ಹೆಡ್‌ಫೋನ್ ಉಪಯೋಗಿಸದೇ ಧ್ವನಿವರ್ಧಕ (ಸ್ಪೀಕರ್), ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮುಖಾಂತರ ನೇರವಾಗಿ ಧ್ವನಿ ಕೇಳುವುದು ಎಲ್ಲಕ್ಕಿಂತ ಸೂಕ್ತವಾದ ಪರ್ಯಾಯವಾಗಿದೆ. ಹೀಗೆ ಕೇಳುವಾಗ ‘ಅಕ್ಕಪಕ್ಕದಲ್ಲಿರುವ ವ್ಯಕ್ತಿಗಳಿಗೆ ತೊಂದರೆಯಾಗುತ್ತಿಲ್ಲ ಎಂಬ ಎಚ್ಚರಿಕೆಯನ್ನು ವಹಿಸಬೇಕು.

೪. ಸೋಂಕನ್ನು ತಡೆಯುವ ದೃಷ್ಟಿಯಿಂದ ಇನ್ನೊಬ್ಬರು ಉಪಯೋಗಿಸಿದ ‘ಇಯರ್‌ಫೋನ್ ಅಥವಾ ‘ಹೆಡ್‌ಫೋನನ್ನು ಉಪಯೋಗಿಸಬಾರದು.