ಛಾಯಾಚಿತ್ರಕಾರರು ತೆಗೆದ ಪರಾತ್ಪರ ಗುರು ಡಾ. ಆಠವಲೆ ಇವರ ವಿವಿಧ ಛಾಯಾಚಿತ್ರಗಳು

ಈ ನಿಮ್ಮ ದುರ್ಲಭ ದರುಶನ ಆಗುವುದು ಸಾಧಕರ ಜೀವನ ಪಾವನ
ಬ್ರಹ್ಮಾನಂದ ಪರವಸುಖದಂ ಕೇವಲಂ ಜ್ಞಾನಮೂರ್ತಿಮ್ (ಅರ್ಥ : ಬ್ರಹ್ಮಾನಂದ ಸ್ವರೂಪ, ಪರಮ ಸುಖದಾಯಿ ಮತ್ತು ಜ್ಞಾನದ ಮೂರ್ತಿ ಸ್ವರೂಪ)
ಸಾಧಕರು ಇರಲಿ ಸತತ ಗುರುಸ್ಮರಣೆಯಲ್ಲಿ ಸಾಧಕರನ್ನು ಇರಿಸಿ ಸದಾ ನಿಮ್ಮ ಶ್ರೀಚರಣಗಳಲ್ಲಿ

 

ಸಾಧಕರ ಮೇಲಿರಲಿ ನಿಮ್ಮ ಕೃಪಾದೃಷ್ಟಿ ಸಾಧಕರಿಂದ ನೀವೇ ಮಾಡಿಸಿಕೊಳ್ಳಿ ವ್ಯಷ್ಟಿ-ಸಮಷ್ಟಿ (ಸಾಧನೆ)
ನಿಮ್ಮ ರೂಪದಲ್ಲಿ ಶ್ರೀವಿಷ್ಣು ಧರೆಯಲ್ಲಿ ಅವತರಿಸಿದರು ನಿಮ್ಮನ್ನು ಗುರುವಾಗಿ ಪಡೆದ ನಾವು ಸಾಧಕರು ಧನ್ಯರು

‘ಸಾಮಾನ್ಯವಾಗಿರುವ ಮತ್ತು ಉಚ್ಚ ವಿಚಾರಸರಣಿ ಇರುವ ಪರಾತ್ಪರ ಗುರು ಡಾ. ಆಠವಲೆ ಇವರು ಯಾವಾಗಲೂ ಶಿಷ್ಯಭಾವದಲ್ಲೇ ಇರುತ್ತಾರೆ. ಗುರುಪದವಿಯಲ್ಲಿರುವಾಗಲೂ ಅವರು ಎಂದಿಗೂ ವಿವಿಧ ವೇಷಭೂಷಣಗಳಲ್ಲಿ ಅಥವಾ ವಿಶಿಷ್ಟ ಸ್ಥಿತಿಯಲ್ಲಿ (ಪೋಸ್)ನಲ್ಲಿ ತಮ್ಮ ಛಾಯಾಚಿತ್ರಗಳನ್ನು ತೆಗೆಯಲಿಲ್ಲ. ೨೦೦೯ ರಲ್ಲಿ ಪ.ಪೂ. ಶಾಮರಾವ್ ಮಹಾರಾಜ (ಕೆರ್ಲೆ, ಕೊಲ್ಹಾಪುರ ಜಿಲ್ಲೆ) ಇವರ ಪುಣೆಯ ಶಿಷ್ಯ ಮತ್ತು ಛಾಯಾಚಿತ್ರಕಾರರಾದ ಮಾರುತಿ ಶಿಂದೆ ಇವರು ಪರಾತ್ಪರ ಗುರು ಡಾಕ್ಟರರಿಗೆ ಅವರ ವಿವಿಧ ವೇಷಭೂಷಗಳಲ್ಲಿನ ಛಾಯಾಚಿತ್ರವನ್ನು ತೆಗೆಯಲು ವಿನಂತಿಸಿದ್ದರು. ಆಗ ಶಿಂದೆಯಲ್ಲಿನ ಭಾವದಿಂದ ಪರೇಚ್ಛೆಯೆಂದು ಪರಾತ್ಪರ ಗುರು ಡಾಕ್ಟರರು ಪ್ರಥಮಬಾರಿಗೆ ವಿವಿಧ ಪ್ರಕಾರದ ತಮ್ಮ ಛಾಯಾಚಿತ್ರಗಳನ್ನು ತೆಗೆಯಲು ಅವಕಾಶ ನೀಡಿದರು. ಅದರಲ್ಲಿನ ಕೆಲವು ಛಾಯಾಚಿತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.

ನಿಮ್ಮ ರೂಪ ತುಂಬಲಿ ನನ್ನ ಕಣ್ಗಳಲ್ಲಿ | ನನ್ನ ಮನಸ್ಸು ಅರ್ಪಣೆಯಾಗಲಿ ನಿಮ್ಮ ಚರಣಗಳಲ್ಲಿ ||