ಸಾಧಕರಿಗೆ ಮಹತ್ವದ ಸೂಚನೆ

ಆಪತ್ಕಾಲದ ಪರಿಸ್ಥಿತಿಯಲ್ಲಿ ಸನಾತನದ ಸಾತ್ತ್ವಿಕ ಉತ್ಪಾದನೆಗಳು ಇಲ್ಲದಿದ್ದರೆ ಮಾನಸ ಉಪಾಯಗಳನ್ನು ಮಾಡಿ ಚೈತನ್ಯವನ್ನು ಪಡೆಯಿರಿ !

‘ಬಿರುಗಾಳಿ, ಭೂಕುಸಿತ, ಭೂಕಂಪ, ನೆರೆಹಾವಳಿ, ಸಂಚಾರ ನಿಷೇಧದಂತಹ ಆಪತ್ಕಾಲದ ಪರಿಸ್ಥಿತಿಗಳು ಯಾವುದೇ ಕ್ಷಣದಲ್ಲಿ ಉದ್ಭವಿಸಬಹುದು. ಇಂತಹ ಸ್ಥಿತಿಯಲ್ಲಿ ಅತ್ತರ್, ಕರ್ಪೂರ, ಊದುಬತ್ತಿ, ಗೋಮೂತ್ರ ಇತ್ಯಾದಿ ಸನಾತನದ ಸಾತ್ತ್ವಿಕ ಉತ್ಪಾದನೆಗಳು ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಸಾಧಕರು ಮುಂದಿನಂತೆ ಮಾನಸ-ಉಪಾಯಗಳನ್ನು ಮಾಡಬಹುದು.

ಮಾನಸ-ಉಪಾಯ ಮಾಡುವ ಮಹತ್ವ !

ಆಪತ್ಕಾಲದ ಪರಿಸ್ಥಿತಿಯಲ್ಲಿ ಉಪಾಯಗಳ ಸಾಮಗ್ರಿಗಳು ಇಲ್ಲದಿದ್ದಲ್ಲಿ ಮಾನಸ-ಉಪಾಯವನ್ನು ಮಾಡುವುದು ಸಹಜ ಸಾಧ್ಯವಿದೆ. ಈ ಉಪಾಯಗಳನ್ನು ಭಾವಪೂರ್ಣವಾಗಿ ಮಾಡಿದರೆ, ಪ್ರತ್ಯಕ್ಷ ಉಪಾಯ ಮಾಡುವುದರಿಂದ ಎಷ್ಟು ಲಾಭವಾಗುವುದೋ, ಅಷ್ಟೇ ಲಾಭವಾಗುತ್ತದೆ.

ಅತ್ತರ, ಕರ್ಪೂರ ಮತ್ತು ಊದುಬತ್ತಿ ಇವುಗಳಿಂದ ಮಾನಸ-ಉಪಾಯ ಹೇಗೆ ಮಾಡಬೇಕು ?

ಅತ್ತರ, ಕರ್ಪೂರ, ಊದುಬತ್ತಿ ಇತ್ಯಾದಿಗಳು ಇರುವಾಗ ಅವುಗಳಿಂದ ಸಾಧಕರು ಹೇಗೆ ಉಪಾಯವನ್ನು ಮಾಡುತ್ತಾರೆಯೋ, ಅದೇ ರೀತಿಯಲ್ಲಿ ಉಪಾಯಗಳನ್ನು ಉತ್ಪಾದನೆಗಳು ಇಲ್ಲದಿರುವಾಗಲೂ ಮಾಡಲು ಸಾಧ್ಯವಿದೆ. ‘ನಾವು ಉಪಾಯವನ್ನು ಮಾಡುವಾಗ ಯಾವ ಕೃತಿಯನ್ನು ಮಾಡುತ್ತೇವೆಯೋ, ಅವುಗಳನ್ನು ಈಗಲೂ ಮಾಡುತ್ತಿದ್ದೇವೆ, ಎಂಬ ಭಾವವನ್ನು ಇಟ್ಟುಕೊಂಡು ಮಾನಸ ರೀತಿಯಲ್ಲಿ ಉಪಾಯಗಳನ್ನು ಮಾಡಬೇಕು. ಮಾನಸ ರೀತಿಯಲ್ಲಿ ತಮ್ಮ ಮೇಲಿನ ಆವರಣವನ್ನು ತೆಗೆಯಬೇಕು.

ವಾಸ್ತುಶುದ್ಧಿಯನ್ನು ಹೇಗೆ ಮಾಡಬೇಕು ?

ಮನೆಯಲ್ಲಿ ಗೋಮೂತ್ರ ಇಲ್ಲದಿದ್ದರೆ ವಾಸ್ತುಶುದ್ಧಿಗಾಗಿ ಮುಂದಿನ ಉಪಾಯವನ್ನು ಮಾಡಬಹುದು. ಒಂದು ಲೋಟದಲ್ಲಿ ಸ್ವಲ್ಪ ನೀರನ್ನು ತೆಗೆದುಕೊಳ್ಳಬೇಕು. ಅದರ ಮೇಲೆ ಬಲಗೈಯನ್ನಿಟ್ಟು ಸದ್ಯ ಸಮಷ್ಟಿ ಸ್ತರದ ತೊಂದರೆಯನ್ನು ದೂರಗೊಳಿಸುವ ‘ನಿರ್ಗುಣ ಈ ನಾಮಜಪವನ್ನು ೧೦ ನಿಮಿಷ ಮಾಡಬೇಕು. ನಾಮಜಪದಿಂದ ಚೈತನ್ಯಮಯವಾಗಿರುವ ನೀರನ್ನು ಸಿಂಪಡಿಸಿ ವಾಸ್ತುಶುದ್ಧಿಯನ್ನು ಮಾಡಬಹುದು. ಮನೆಯಲ್ಲಿ ಮಾಸಿಕ ಸರದಿ ಇರುವ ಮಹಿಳೆಯಿದ್ದರೆ ಅಥವಾ ಯಾವುದೇ ವ್ಯಕ್ತಿಗೆ ಸೂತಕವಿದ್ದರೆ ಈ ಉಪಾಯವನ್ನು ಸ್ವತಃ ಮಾಡದೇ ಇತರ ಸಾಧಕರು ಮಾಡಬೇಕು.

ಸಾಧಕರೇ, ‘ಮಾನಸ-ಉಪಾಯವನ್ನು ಭಾವಪೂರ್ಣವಾಗಿ ಮಾಡಿದರೆ, ಪ್ರತ್ಯಕ್ಷ ಉಪಾಯಗಳಂತೆಯೇ ಅವುಗಳಿಂದ ಲಾಭವಾಗಲಿದೆ, ಎಂಬ ಶ್ರದ್ಧೆಯನ್ನಿಟ್ಟು ಉಪಾಯಗಳನ್ನು ಮಾಡಿರಿ ! – (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೯.೪.೨೦೨೦)