ಭಾರತದ ಮಾನವೀಯತೆ !

ಭಾರತವು ಕೊರೋನಾ ರೋಗಾಣುವಿನ ಸೋಂಕು ತಡೆಯಲು ಮಾಡುತ್ತಿರುವ ಪ್ರಯತ್ನಗಳಿಗೆ ಜಾಗತಿಕ ಮಟ್ಟದಲ್ಲಿ ಶ್ಲಾಘಿಸಲಾಗುತ್ತಿದೆ.  ಕೆಲವು ದಿನಗಳ ಹಿಂದೆ ಸ್ವಿಡ್ಜರ್‌ಲ್ಯಾಂಡ್‌ನ ಆಲ್ಫ್ಸ ಪರ್ವತಗಳ ತಪ್ಪಲಿನ ೧೪ ಸಾವಿರ ಅಡಿ ಎತ್ತರದ ಪರ್ವತದ ಮೇಲೆ ಲೇಝರ್ ಕಿರಣಗಳ ಮುಖಾಂತರ ಭಾರತದ ನಕಾಶೆಯನ್ನು ತ್ರಿವರ್ಣದಲ್ಲಿ ತೋರಿಸಿ ಭಾರತಕ್ಕೆ ವಿಶಿಷ್ಟ ರೀತಿಯಲ್ಲಿ ಗೌರವವಂದನೆಯನ್ನು ಸಲ್ಲಿಸಿತು. ಭಾರತ ದೇಶದಲ್ಲಿ ಕೊರೋನಾದ ಸೋಂಕು ತಡೆಯಲು ಪ್ರಯತ್ನಿಸುವುದರೊಂದಿಗೆ ಜಗತ್ತಿನ ಅನೇಕ ದೇಶಗಳಿಗೆ ಔಷಧಿಗಳನ್ನೂ ಪೂರೈಸುತ್ತಿದೆ. ಭಾರತವು ಹೈಡ್ರೋಕ್ಸಿಕ್ಲೊರೊಕ್ವೀನ್ ಔಷಧವನ್ನು ಜಗತ್ತಿನ ೧೩ ದೇಶಗಳಿಗೆ ಪೂರೈಕೆ ಮಾಡಿದೆ. ಅಮೇರಿಕಾ, ಬ್ರಾಝಿಲ್, ಇಸ್ರೈಲ್ ಈ ದೇಶಗಳು ಸಂಕಷ್ಟದ ಕಾಲದಲ್ಲಿ ಭಾರತವು ಮಾಡಿರುವ ಸಹಾಯಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿವೆ. ಅಮೇರಿಕಾ, ಇಂಗ್ಲೆಂಡ್‌ನಿಂದ ಯುಗಾಂಡಾದ ವರೆಗಿನ ೫೫ ದೇಶಗಳಿಗೆ ಭಾರತವು ಈ ಔಷಧಿಯನ್ನು ಪೂರೈಸಲಿದೆ. ಭಾರತವು ಹೈಡ್ರೋಕ್ಸಿಕ್ಲೊರೊಕ್ವೀನ್ ಉತ್ಪಾದಿಸುವ ಎಲ್ಲಕ್ಕಿಂತ ಅತಿದೊಡ್ಡ ಉತ್ಪಾದಕ ದೇಶವಾಗಿದೆ ಹಾಗೂ ಪ್ರತಿವರ್ಷ ೫ ಕೋಟಿ ರೂಪಾಯಿಗಳಷ್ಟು ಔಷಧಿಗಳನ್ನು ರಫ್ತು ಮಾಡುತ್ತದೆ. ಜಗತ್ತಿನಲ್ಲಿ  ಹೈಡ್ರೋಕ್ಸಿಕ್ಲೊರೊಕ್ವೀನ್ ಉತ್ಪಾದಿಸುವವರಲ್ಲಿ ಭಾರತವು ಶೇ. ೭೦ ರಷ್ಟು ಪಾಲು ಹೊಂದಿದೆ.

ಭಾರತದಿಂದ ಜಗತ್ತಿಗೆ ಸಹಾಯ

ಕೊರೋನಾದ ಸಂಕಷ್ಟ ಕಾಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಗತ್ತಿನ ಅನೇಕ ದೇಶಗಳನ್ನು ಸಂಪರ್ಕಿಸಿದರು ಮತ್ತು ಈ ಹೋರಾಟದಲ್ಲಿ ಅವರೊಂದಿಗೆ ಇರುವುದಾಗಿ ತಿಳಿಸಿದರು. ಮಾರ್ಚನಲ್ಲಿ ಪ್ರಧಾನಮಂತ್ರಿ ಮೋದಿಯವರು ದಕ್ಷಿಣ ಏಶಿಯಾ ಪ್ರಾದೇಶಿಕ ಸಹಕಾರ ಸಂಘಟನೆ (ಸಾರ್ಕ್) ದೇಶಗಳಿಗಾಗಿ ಕೊರೋನಾ ರೋಗಾಣುವಿನ ಸಂಕಟದ ವಿರುದ್ಧ  ಹೋರಾಡಲು ನಿಧಿಯ ಘೋಷಣೆ ಮಾಡಿದರು ಮತ್ತು ೧೦ ಲಕ್ಷ ಡಾಲರ್ ನೀಡುವುದಾಗಿ ಘೋಷಿಸಿದರು. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವನ್ನು ಬಹಿರಂಗವಾಗಿ ಸಮರ್ಥಿಸುವ ತುರ್ಕಿಸ್ತಾನ ಮತ್ತು ಮಲೇಶಿಯಾ ದೇಶಗಳೂ ಭಾರತಕ್ಕೆ ಈ ಔಷಧಿಯನ್ನು ಕಳುಹಿಸುವಂತೆ ಮನವಿ ಮಾಡಿವೆ. ಎರಡೂ ದೇಶಗಳೊಂದಿಗೆ ಭಾರತದ ರಾಜಕೀಯ ಸಂಬಂಧವು ಕೆಲವು ಸಮಯದಿಂದ ಹದಗೆಟ್ಟಿದೆ. ಇನ್ನು ಮುಂದೆ ಎರಡೂ ದೇಶಗಳು ಪಾಕಿಸ್ತಾನದ ಪರ ವಹಿಸಿಕೊಳ್ಳದಿರಬಹುದು; ಆದರೆ ಮಾನವತೆಯ ದೃಷ್ಟಿಯಿಂದ ಭಾರತವು ಅವರಿಗೆ ಸಹಾಯ ಮಾಡಿದೆ. ಭಾರತದ ಈ ಪ್ರಯತ್ನದಿಂದ ಜಗತ್ತಿನಲ್ಲಿ ಭಾರತದ ಸ್ಥಾನವೂ ಸುದೃಢವಾಗುತ್ತಿದೆ. ಜಗತ್ತಿನಲ್ಲಿ ಚೀನಾ ಅಧಿಕ ವೆಂಟಿಲೇಟರ್ ಮತ್ತು ‘ಪಿ.ಪಿ.ಇ. ಕಿಟ್ಸ್ ತಯಾರಿಸುತ್ತದೆ, ಆದರೆ ಭಾರತವು ಅತ್ಯಧಿಕ ಪ್ರಮಾಣದಲ್ಲಿ ಅತಿ ಕಡಿಮೆ ಬೆಲೆಯ ‘ಜೆನೆರಿಕ್ ಔಷಧಿಗಳನ್ನು ತಯಾರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಅತ್ಯಧಿಕ ಕಡಿಮೆ ಬೆಲೆಯ ಔಷಧಿಗಳನ್ನು ತಯಾರಿಸಿ ಅದನ್ನು ಜಗತ್ತಿಗೆ ರಫ್ತು ಮಾಡಿದೆ. ಇದರಿಂದ ಜಗತ್ತಿನಾದ್ಯಂತ ಅತಿ ಕಡಿಮೆ ವೆಚ್ಚದಲ್ಲಿ ಜನರಿಗೆ ಚಿಕಿತ್ಸೆಯಾಗುತ್ತಿದೆ. ಭಾರತವು ಯಾವಾಗಲೂ ಅವಶ್ಯಕತೆಯಿರುವವರಿಗೆ ಸಹಾಯ ಮಾಡುತ್ತಲೇ ಬಂದಿದೆ. ಎಚ್.ಐ.ವಿ.ಯಂತಹ ರೋಗದ ವಿರುದ್ಧ ಆಫ್ರಿಕಾ ದೇಶಕ್ಕೆ ಔಷಧಿಯನ್ನು ಕಳುಹಿಸಿ ಲಕ್ಷಾಂತರ ಜನರ ಜೀವವನ್ನು ಭಾರತವು ರಕ್ಷಿಸಿದೆ. ಭಾರತವು ಹಣ ಗಳಿಸಲು ಅಲ್ಲ, ಜಗತ್ತಿಗೆ ಸಹಾಯವಾಗುವ ದೃಷ್ಟಿಯಿಂದ ಕಾರ್ಯವನ್ನು ಮಾಡುತ್ತಿದೆಯೆಂದು ಈಗ ಜಗತ್ತಿಗೆ ಅರಿವಾಗುತ್ತಿದೆ.

ಭಾರತದ ಅಪಮಾನ

ಕೊರೋನಾ ರೋಗಾಣುವಿನ ಸೋಂಕು ಜಗತ್ತಿನಾದ್ಯಂತ ಹರಡುತ್ತಿರುವಾಗ ವಿದೇಶದ ಒಬ್ಬ ವಿಚಾರವಂತರು ‘ಭಾರತವು ಈ ರೋಗಾಣುವನ್ನು ಹೇಗೆ ಎದುರಿಸುತ್ತದೆ, ಎನ್ನುವುದನ್ನು ನನಗೆ ನೋಡಬೇಕಾಗಿದೆ ಎಂದು ವ್ಯಂಗ್ಯವಾಡಿದ್ದರು. ‘ಬಿ.ಬಿ.ಸಿಯು ಭಾರತದ ಉಪಾಯಯೋಜನೆಗಳ ಬಗ್ಗೆ ವಿಡಂಬನಾತ್ಮಕ ವ್ಯಂಗ್ಯಚಿತ್ರವನ್ನು ತೋರಿಸಿ ಭಾರತದ ಅಪಮಾನ ಮಾಡಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಭಾರತವು ತನ್ನಲ್ಲಿ ಉಪಲಬ್ಧವಿರುವ ಸಾಧನಸಾಮಗ್ರಿಗಳು ಮತ್ತು ಯೋಗ್ಯ ನಿರ್ಣಯವನ್ನು ತೆಗೆದುಕೊಂಡು ಸಾಕಷ್ಟು ಪ್ರಮಾಣದಲ್ಲಿ ಕೊರೋನಾ ಮೇಲೆ ನಿಯಂತ್ರಣವನ್ನು ಸಾಧಿಸಿದೆ. ಆದರೆ ಒಂದು ದುರ್ಘಟನೆ ಎನ್ನಿರಿ ಅಥವಾ ಷಡ್ಯಂತ್ರ ಎನ್ನಿರಿ, ತಬಲಿಗೀ ಜಮಾತದ ಕಾರ್ಯಕ್ರಮ ಜರುಗಿತು ಮತ್ತು ದೇಶಾದ್ಯಂತ ಅತಿವೇಗವಾಗಿ ಕೊರೋನಾ ಸೋಂಕು ಹರಡಿತು. ಎಲ್ಲಿ ಈ ರೋಗದ ಹೆಸರೂ ಇರಲಿಲ್ಲವೋ, ಆ ರಾಜ್ಯಗಳಲ್ಲಿ ಪೀಡಿತರ ಸಂಖ್ಯೆ ಅನೇಕ ಪಟ್ಟುಗಳಷ್ಟು ಹೆಚ್ಚಾಯಿತು. ಆದಾಗ್ಯೂ ಈ ಸೋಂಕು ಹಿಡಿತದಲ್ಲಿ ತರಲು ಸರಕಾರವು  ಹೋರಾಡುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸಹಿತ ಅನೇಕ ದೇಶಗಳು ಭಾರತಕ್ಕೆ ಹೊಗಳಿಕೆಯ ಸುರಿಮಳೆಯನ್ನು ಸುರಿಸಿವೆ. ಇದು ಭಾರತವನ್ನು ಹೀಯಾಳಿಸುವವರಿಗೆ ಕಣ್ಣುಗಳಲ್ಲಿ ಅಂಜನವನ್ನು ಹಾಕಿಕೊಂಡು ಸರಿಯಾಗಿ ತೆರೆದು ನೋಡುವಂತಾಗಿದೆ. ಇಷ್ಟೇ ಏಕೆ ಭಾರತದ ವಿರುದ್ಧ ಭಯೋತ್ಪಾದಕತೆಯ ಒಂದಂಶದ ಕಾರ್ಯಕ್ರಮವನ್ನು ಜಾರಿಗೊಳಿಸುವ ಪಾಕಿಸ್ತಾನವೂ ಭಿಕ್ಷೆಯ ಪಾತ್ರೆಯನ್ನು ಹಿಡಿದುಕೊಂಡು ಭಾರತದೆಡೆಗೆ ಔಷಧದ ಸಹಾಯವನ್ನು ಬೇಡುತ್ತಿದೆ.

ಭಾರತವನ್ನು ಅಸಹಿಷ್ಣು ಎನ್ನುವುದು ಖಂಡನೀಯ !

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೇರಿಕಾದ ಕೆಲವು ಸಂಘಟನೆಗಳು ಮತ್ತು ವಿಶ್ವ ಸಂಸ್ಥೆಯು ಭಾರತವನ್ನು ‘ಮತಾಂಧತೆಯನ್ನು ತಡೆಗಟ್ಟುವಂತೆ ಕರೆ ನೀಡುತ್ತಿವೆ. ‘ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂ ಸಮಾಜವು ಮತಾಂಧವಾಗಿದ್ದು, ಅವರು ಅಲ್ಪಸಂಖ್ಯಾತರಾಗಿರುವ ಇತರ ಧರ್ಮೀಯರಿಗೆ ತೊಂದರೆ ಕೊಡುತ್ತಿದೆ, ಎನ್ನುವ ಚಿತ್ರಣವನ್ನು ಬಿಂಬಿಸಲಾಗುತ್ತಿದೆ. ವಿಶೇಷವಾಗಿ ಅಮೇರಿಕಾದ  ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಇಂತಹ ದಿಕ್ಕು ತಪ್ಪಿಸುವ ಸುಳ್ಳು ಮಾಹಿತಿಗಳ ಆಧಾರದಲ್ಲಿ ವರದಿಯನ್ನು ಸಿದ್ಧಪಡಿಸುವಲ್ಲಿ ಮುಂಚೂಣಿಯಲ್ಲಿರುತ್ತದೆ. ತಬಲಿಗೀ ಪ್ರಕರಣದಲ್ಲಿಯೂ ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ಈ ಕಾರಣದಿಂದ ‘ಇಸ್ಲಾಮೋಫೋಬಿಯಾ ನಿರ್ಮಾಣ ಮಾಡುತ್ತಿರುವುದಾಗಿ ಹೇಳುತ್ತಾ ಭಾರತವನ್ನು ಟೀಕಿಸಿದವು. ಭಾರತದಲ್ಲಿರುವ ಹಿಂದೂ ಸಮಾಜವು ಪ್ರಾಚೀನ ಕಾಲದಿಂದಲೂ ಸಹಿಷ್ಣುವಿಕೆಯ ಪರಿಚಯವನ್ನು ನೀಡಿದೆ. ಜಗತ್ತಿನಲ್ಲಿ ಜ್ಯೂಗಳಿಗೆ ಯಾರೂ ಆಶ್ರಯ ನೀಡದಿರುವಾಗ ಭಾರತವು ಅವರಿಗೆ ಆಶ್ರಯವನ್ನು ನೀಡಿದೆ. ಹಾಗೆಯೇ ಇರಾನ್‌ನಿಂದ ಮತಾಂಧರು ಪಾರ್ಸಿಗಳ ವಂಶವಿಚ್ಛೇದಗೊಳಿಸಿ ಅವರನ್ನು ಅವರದೇ ದೇಶದಿಂದ ಹೊರದೂಡಿದಾಗಲೂ ಭಾರತವು ಆಶ್ರಯವನ್ನು ನೀಡಿತ್ತು. ಹೀಗಿರುವಾಗಲೂ ಭಾರತದಲ್ಲಿ ಹಿಂದೂಗಳನ್ನೇ ಮತಾಂಧರು ಎಂದು ನಿರ್ಧರಿಸುವುದೇ ಮೂಲದಲ್ಲಿ ಅಸಹಿಷ್ಣುವಿಕೆಯಾಗಿದೆ.

ಸಂಪೂರ್ಣ ಜಗತ್ತು ಭಾರತದೆಡೆಗೆ ಒಂದು ದೊಡ್ಡ ಮಾರುಕಟ್ಟೆಯೆಂದು ನೋಡುತ್ತದೆ. ಜಗತ್ತಿನ ಜನಸಂಖ್ಯೆಯಲ್ಲಿ ಭಾರತವು ಎರಡನೇಯ ಸ್ಥಾನದಲ್ಲಿದೆ. ಭಾರತದ ಬಡತನ, ಮಧ್ಯಮವರ್ಗೀಯ, ಉಚ್ಚ ಮಧ್ಯಮವರ್ಗೀಯರು, ಶ್ರೀಮಂತರು, ಅತಿ ಶ್ರೀಮಂತರು ಹೀಗೆ ವಿವಿಧ ಉತ್ಪನ್ನಗಳ ಗುಂಪು ಅಸ್ತಿತ್ವದಲ್ಲಿದೆ. ಇದರಿಂದ ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದದೇ ಇರುವ ದೇಶಗಳು ತಮ್ಮ ಉತ್ಪಾದನೆಗಳನ್ನು ಮಾರಾಟ ಮಾಡಲು ಮತ್ತು ಲಾಭವನ್ನುಗಳಿಸಲು ಭಾರತ ಒಂದು ಒಳ್ಳೆಯ ಮಾಧ್ಯಮವೆನಿಸುತ್ತದೆ. ಭಾರತವೂ ಮುಕ್ತ ಮಾರುಕಟ್ಟೆಯೆಂದು ಇತರರಿಗೆ ಇಲ್ಲಿ ಉತ್ಪಾದನೆಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಪಕ್ಕದ ದೇಶ ಚೀನಾದ ಅನೇಕ ಸಂಚಾರವಾಣಿ ಕೈಗಾರಿಕೆಗಳು (ಮೊಬೈಲ್ ಕಂಪನಿಗಳು ) ಭಾರತದಲ್ಲಿ ಬಂದು ಯಥೇಚ್ಛವಾಗಿ ಹಣವನ್ನುಗಳಿಸುತ್ತಿವೆ. ಹೀಗಿರುವಾಗಲೂ ಚೀನಾ ಗಡಿವಿವಾದದಿಂದ ಹಿಡಿದು ಅನೇಕ ವಿಷಯಗಳಲ್ಲಿ ಭಾರತವನ್ನು ವಕ್ರದೃಷ್ಟಿಯಿಂದ ನೋಡುತ್ತಿದೆ. ಪಾಕಿಸ್ತಾನ ವಿನಾಕಾರಣ ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರದ ಪ್ರಶ್ನೆಯನ್ನು ಎತ್ತುತ್ತಿದೆ. ಈ ವಿಷಯದಲ್ಲಿ ನಿಜ ಹೇಳಬೇಕೆಂದರೆ ಅಂತರರಾಷ್ಟ್ರೀಯ ಸಮುದಾಯವು ಮಾನವತೆಯನ್ನು ತೋರಿಸುತ್ತಾ, ಭಾರತವನ್ನು ಸಮರ್ಥಿಸುವ ಮತ್ತು ಭಾರತವು ಮಾಡಿರುವ ಉಪಕಾರಗಳನ್ನು ತೀರಿಸಲು ಪ್ರಯತ್ನಿಸಬೇಕು. ಇದೇ ಸತ್ಯವಾದ ಮಾತಾಗಿದೆ ಎಂಬುದನ್ನು ಮನಗಾಣಬೇಕಿದೆ !