ಪ್ರಸ್ತುತ ವಿವಿಧ ವಿಪತ್ತುಗಳಿಂದಾಗಿ ಮಾನವನು ದಿಕ್ಕೆಟ್ಟಿದ್ದಾನೆ. ಇಂತಹ ಈ ಘೋರ ಆಪತ್ಕಾಲದಲ್ಲಿ ವಿಜ್ಞಾನವಲ್ಲ ಬದಲಾಗಿ ಸಾಧನೆಯಿಂದಲೇ ಅವನಿಗೆ ಸುಖ ಮತ್ತು ಶಾಂತಿ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಾಧನೆಯ ಕುರಿತಾದ ‘ಆನ್‌ಲೈನ್ ಸತ್ಸಂಗದ ಆಯೋಜನೆ ಮಾಡಲಾಗುತ್ತಿದೆ. ಇತ್ತೀಚೆಗೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಜಾಗತಿಕ ಸಂಕಟಗಳು : ಧರ್ಮದ ಕುರಿತು ದೃಷ್ಟಿಕೋನ ಮತ್ತು ಉಪಾಯ ಇದರ ಬಗ್ಗೆ ಮಾರ್ಗದರ್ಶನ ಮಾಡಿದರು. ಅವರು ಮಾಡಿದ ಮಾರ್ಗದರ್ಶನದ ಆಯ್ದ ಭಾಗವನ್ನು ಇಲ್ಲಿ ಕ್ರಮಶಃ ಮುದ್ರಿಸುತ್ತಿದ್ದೇವೆ,
ಆಪತ್ಕಾಲದ ಅರ್ಥವೇನು ? ಆಪತ್ತು ಅಂದರೆ ಏನು ?
ಆಪತ್ + ಕಾಲ = ಆಪತ್ಕಾಲ.
ಸಂಸ್ಕೃತದಲ್ಲಿ ‘ಆಪತ್ ಎಂದರೆ ಸಂಕಟ. ಆದುದರಿಂದ ಆಪತ್ಕಾಲ ಅಂದರೆ ಸಂಕಟಕಾಲವಾಗಿದೆ.
ಇದನ್ನು ಆಪತ್ತು ಎಂದೂ ಹೇಳಬಹುದು. ಆಂಗ್ಲದಲ್ಲಿ ಆಪತ್ತನ್ನು ‘Disaster’ ಎಂದು ಹೇಳಿದರೆ ಫ್ರೆಂಚ್ ಭಾಷೆಯಲ್ಲಿ ‘Desastre’ ಎಂದು ಹೇಳುತ್ತಾರೆ. ಇವೆರಡೂ ಶಬ್ದಗಳು ‘Des’ ಹಾಗೂ ‘Astre’ ಇಂದ ಆಗಿವೆ. ಇದರ ಅರ್ಥ ‘ಕೆಟ್ಟ ನಕ್ಷತ್ರ (ಕೆಟ್ಟ ಗ್ರಹದಶೆ) ಎಂದಾಗಿದೆ. ಆಪತ್ತು ಸಮತೋಲನ ತಪ್ಪಿಸುತ್ತದೆ. ಆಪತ್ತುಗಳು ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ನಿರ್ಮಾಣವಾಗುತ್ತವೆ. ಆಪತ್ತುಗಳು ನೈಸರ್ಗಿಕ ಅಥವಾ ಮಾನವ ನಿರ್ಮಿತ ಕಾರಣಗಳ ಪರಿಣಾಮವಾಗಿವೆ, ಆಪತ್ತು ಪ್ರಾಣ ಹಾಗೂ ಆಸ್ತಿಪಾಸ್ತಿಗಳ ಹಾನಿಯಾಗಿ ಸಾಮಾನ್ಯ ಜೀವನವು ಎಷ್ಟರ ಮಟ್ಟಿಗೆ ಅಸ್ತವ್ಯಸ್ತವಾಗುತ್ತದೆ ಅಂದರೆ ಅದನ್ನು ಎದುರಿಸಲು ಇರುವ ಎಲ್ಲ ಸಾಮಾಜಿಕ ಹಾಗೂ ಆರ್ಥಿಕ ಸಂರಕ್ಷಣೆಯ ಕಾರ್ಯವಿಧಾನಗಳೂ ಸಾಕಾಗುವುದಿಲ್ಲ. – ಪೂ. ರಮಾನಂದ ಗೌಡ (ಮುಂದುವರಿಯುವುದು)