ಕರ್ನಾಟಕದ ಲೋಕಾಯುಕ್ತರ ದಾಳಿಯಲ್ಲಿ ಬಹಿರಂಗಗೊಂಡ ಬ್ರಹ್ಮರಾಕ್ಷಸರೂಪಿ ಭ್ರಷ್ಟಾಚಾರ !

ಕರ್ನಾಟಕ ರಾಜ್ಯದಲ್ಲಿನ ಲೋಕಾಯುಕ್ತರು ೧೭.೧೧.೧೯೯೯ ರಿಂದ ೧೩.೩.೨೦೦೦ ಈ ೪ ತಿಂಗಳುಗಳಲ್ಲಿನ ದಾಳಿಗಳಲ್ಲಿ ೧೦ ವಿವಿಧ ಹಗರಣಗಳಲ್ಲಿ ಭ್ರಷ್ಟಾಚಾರಿಗಳು ೧೫ ರಿಂದ ೨೦ ಕೋಟಿ ರೂಪಾಯಿ ನುಂಗಿರುವುದನ್ನು ಬಹಿರಂಗಪಡಿಸಿದ್ದಾರೆ. ಇಷ್ಟು ದೊಡ್ಡ ಭ್ರಷ್ಟಾಚಾರವಾಗಿದ್ದರೂ, ಆ ಎಲ್ಲ ಪ್ರಕರಣಗಳಲ್ಲಿ ಮುಂದೆ ಏನು ಕ್ರಮವನ್ನು ತೆಗೆದುಕೊಳ್ಳಲಾಯಿತು ? ಎಂಬುದು ಜನರಿಗೆ ಎಂದಿಗೂ ತಿಳಿಯುವುದೇ ಇಲ್ಲ. ಜನರೂ ಸಮಯ ಕಳೆದಂತೆ ಇದನ್ನು ಮರೆಯುತ್ತಾರೆ ಮತ್ತು ಭ್ರಷ್ಟಾಚಾರಿಗಳಿಗೆ ಪುನಃ ಮೇಯಲು ಅವಕಾಶ ಸಿಗುತ್ತದೆ. ಒಂದು ರಾಜ್ಯದಲ್ಲಿನ ೪ ತಿಂಗಳುಗಳಲ್ಲಿನ ಈ ಪ್ರಕರಣಗಳನ್ನು ನೋಡಿದರೆ ದೇಶದಲ್ಲಿನ ಭ್ರಷ್ಟಾಚಾರವು ಎಷ್ಟು ಭಯಾನಕ ಸ್ವರೂಪವನ್ನು ತಾಳಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಇದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆ ಎಷ್ಟಿದೆ ಎಂಬುದೂ ಗಮನಕ್ಕೆ ಬರುತ್ತದೆ.

೧. ಕರ್ನಾಟಕದ ಲೋಕಾಯುಕ್ತರು ಮಾಡಿದ ದಾಳಿಗಳು

೧ ಅ. ೧೯೯೯ ರ ಸಪ್ಟೆಂಬರ್‌ನಲ್ಲಿ ಬೆಂಗಳೂರಿನ ಯಲಹಂಕ ಡೇರಿಯ ನಿರ್ದೇಶಕರಾದ ಡಾ. ನಾರಾಯಣರವರ ಮನೆಯ ಮೇಲೆ ದಾಳಿ ನಡೆಸಿ, ೨ ಕೋಟಿ ರೂಪಾಯಿಗಳ ಅಕ್ರಮ ಸಂಪತ್ತನ್ನು ಸರಕಾರ ವಶಪಡಿಸಿಕೊಂಡಿತು.

೧ ಆ. ಅದೇ ವರ್ಷ ಡಿಸೆಂಬರ್‌ನಲ್ಲಿ ಕಲಬುರ್ಗಿ ಜಿಲ್ಲೆಯ ಸೇಂಡ ತಾಲೂಕಿನ ಒಬ್ಬ ಅಬಕಾರಿ ನಿರೀಕ್ಷಕರ ಮನೆಯಿಂದ ೧ ಕೋಟಿ ರೂಪಾಯಿಗಳಿಗಿಂತ ಅಧಿಕ ಅಕ್ರಮ ಸಂಪತ್ತನ್ನು ಸರಕಾರ ವಶಪಡಿಸಿಕೊಂಡಿತು.

೧ ಇ. ಜನವರಿ ೨೦೦೦ ರಲ್ಲಿ ಲೋಕಾಯುಕ್ತರು ೪ ದಾಳಿಗಳನ್ನು ಮಾಡಿದರು. ಅವುಗಳ ವಿವರ ಮುಂದಿನಂತಿದೆ.

೧ ಇ.೧. ೬.೧.೨೦೦೦ ರಂದು ಬೆಂಗಳೂರಿನ ದಕ್ಷಿಣ ವಿಭಾಗದ ಕಂದಾಯ ನಿರೀಕ್ಷಕ (ರೆವಿನ್ಯು ಇನ್ಸಪೆಕ್ಟರ್) ರಾಮರೆಡ್ಡಿಯವರ ಮನೆಯಿಂದ ಒಂದೂಕಾಲು ಕೋಟಿ ರೂಪಾಯಿಗಳಿಗಿಂತ ಅಧಿಕ ಅನಧಿಕೃತ ಸಂಪತ್ತನ್ನು ಸರಕಾರ ವಶಪಡಿಸಿಕೊಂಡಿತು.

೧ ಇ ೨.  ೭.೧.೨೦೦೦ ರಂದು ಲೋಕಾಯುಕ್ತ ಪೊಲೀಸರು ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಐ.ಆರ್. ಪೆರುಮಾಳ (ಐ.ಎ.ಎಸ್ ಅಧಿಕಾರಿ) ಇವರ ಮನೆಯ ಮೇಲೆ ದಾಳಿ ನಡೆಸಿ ೧ ಕೋಟಿ ರೂಪಾಯಿಗಳಿಗಿಂತ ಅಧಿಕ ಸಂಪತ್ತನ್ನು ಸರ್ಕಾರ ವಶಪಡಿಸಿಕೊಂಡಿತು.

೧ ಇ ೩. ಇದೇ ದಿನ ಕಾರವಾರ ಜಿಲ್ಲೆಯ ಲೆಕ್ಕಪತ್ರ ಅಧಿಕಾರಿ ಶಾಂತಿಕುಮಾರಿಯವರು ಮಾಡಿರುವ ೧ ಕೋಟಿ ೪೮ ಲಕ್ಷ ರೂಪಾಯಿಗಳ ಭ್ರಷ್ಟಾಚಾರವನ್ನು ಬಹಿರಂಗ ಪಡಿಸಲಾಯಿತು.

೧ ಇ ೪. ೨೫.೧.೨೦೦೦ ರಂದು ಅಬಕಾರಿ(ಎಕ್ಸಾಯಿಜ್) ಇಲಾಖೆಯ ಮೈಸೂರು ವಿಭಾಗದ ಜಂಟಿ ಕಾರ್ಯದರ್ಶಿ (ಜಾಂಯಿಟ್ ಸೆಕ್ರೆಟರಿ) ವೀರಪ್ಪಾ ಇವರ ಮನೆಯ ಮೇಲೆ ದಾಳಿ ನಡೆಸಿ ಒಟ್ಟು ಮೂರುವರೆ ಕೋಟಿ ರೂಪಾಯಿಗಳ ಅಕ್ರಮ ಸಂಪತ್ತನ್ನು ಜಪ್ತಿಮಾಡಲಾಯಿತು.

ಈ ಮೂರುವರೆ ಕೋಟಿ ರೂಪಾಯಿಗಳ ಹಗರಣದ ವಿವರ ಮುಂದಿನಂತಿದೆ.

ಅ.  ಬೆಂಗಳೂರು-ಮೈಸೂರು ಮಹಾನಗರಗಳಲ್ಲಿ ೫ ಗಗನಚುಂಬಿ ಕಟ್ಟಡಗಳು ಮತ್ತು ಇತರ ಎರಡು ನಗರಗಳಲ್ಲಿ ೨ ನಿವಾಸಸ್ಥಾಗಳು

ಆ. ಕಡಲೂರು ಗ್ರಾಮದ ಹತ್ತಿರ ೫ ಬೋರವೆಲ್ ಮತ್ತು ಡಾಂಬರದ ರಸ್ತೆಯಿರುವ ೩೫ ಎಕರೆ ಕೃಷಿ ಭೂಮಿ.

ಇ. ಇತರ ಬೇರೆ ಎರಡು ಸ್ಥಳಗಳಲ್ಲಿ ೯ ಮತ್ತು ೨೦ ಎಕರೆ ಕೃಷಿ ಭೂಮಿ (ತೋಟ)

ಈ.  ೪ ಕಿ.ಗ್ರಾಂ. ಬಂಗಾರ, ೪ ಚತುಷ್ಚಕ್ರ ವಾಹನಗಳು(ಕಾರುಗಳು)

೧ ಈ.  ೨೦೦೦ ನೆಯ ಇಸವಿಯ ಫೆಬ್ರವರಿ ತಿಂಗಳಲ್ಲಿ ಬೆಂಗಳೂರು ಮಹಾನಗರಪಾಲಿಕೆಯ ೩ ಜನ ಅಧಿಕಾರಿಗಳ ಮನೆ ಮತ್ತು ಕಾರ್ಯಾಲಯಗಳ ಮೇಲೆ ಒಂದೇ ಸಮಯದಲ್ಲಿ ದಾಳಿ ನಡೆಸಿ ೩ ಕೋಟಿ ರೂಪಾಯಿ ಬೆಲೆಬಾಳುವ ಚರ ಮತ್ತು ಸ್ಥಿರ ಸಂಪತ್ತನ್ನು ಸರಕಾರ ವಶಪಡಿಸಿಕೊಂಡಿತು.

೧ ಉ.  ಮಾರ್ಚ್ ೨೦೦೦ ರಲ್ಲಿ ಮುಂದಿನ ೨ ಸ್ಥಳಗಳಲ್ಲಿ ದಾಳಿ ನಡೆಸಿತು

೧ ಉ ೧. ೧೦.೩.೨೦೦೦ ರಂದು ಬೆಂಗಳೂರು-ಜಯನಗರದ ಉಪನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕೃಷ್ಣಪ್ಪಾ ಇವರ ಮನೆ ಮತ್ತು ಕಾರ್ಯಾಲಯದ ಮೇಲೆ ದಾಳಿ ನಡೆಸಿ ಅಂದಾಜು ೧ ಕೋಟಿ ರೂಪಾಯಿಗಳಿಗಿಂತ ಅಧಿಕ ಸಂಪತ್ತನ್ನು ಬಹಿರಂಗ ಪಡಿಸಲಾಯಿತು.

೧ ಉ ೨. ೧೩.೩.೨೦೦೦ ರಂದು ಸರ್ಕಾರಿ ಕಾರ್ಖಾನೆ ‘ಮೈಸೂರು ಲ್ಯಾಂಪ್ಸನ ಪ್ರಧಾನ ವ್ಯವಸ್ಥಾಪಕ ದೀಪಕ ಮಾಥುರ ಇವರ ಮನೆಯ ಮೇಲೆ ದಾಳಿನಡೆಸಿ ಒಂದೂವರೆ ಕೋಟಿ ರೂಪಾಯಿಗಳ ಸಂಪತ್ತನ್ನು ಕಂಡು ಹಿಡಿಯಲಾಯಿತು.

ಈ ಭ್ರಷ್ಟಾಚಾರದ ಚರ-ಸ್ಥಿರ ಸಂಪತ್ತಿನ ವಿವರಣೆ ಮುಂದಿನಂತಿದೆ.

ಅ. ವಿಮಾನ ನಿಲ್ದಾಣ ಮಾರ್ಗದಲ್ಲಿ ೧೫ ಲಕ್ಷ ರೂಪಾಯಿ ಬೆಲೆಯ ಖಾಲಿ ಜಮೀನು (ಫ್ಯ್ಲಾಟ್)

ಆ. ಕೋರಮಂಗಲದ ಅರ್ಬನ್ ಕೋರ್ಟಿನಲ್ಲಿ ಖಾಲಿ ಜಮೀನು

ಇ. ಕೋಣನಕುಂಟೆಯಲ್ಲಿ ಒಂದು ಭವ್ಯ ನಿವಾಸಸ್ಥಾನ

ಈ. ಎಚ್.ಎನ್.ಆರ್. ಉಪನಗರದಲ್ಲಿ ಎರಡು ಮನೆಗಳು

ಉ. ಲಕ್ಷ್ಮಣಪುರಿ (ಉತ್ತರಪ್ರದೇಶ), ಹಿಂದೂಪೂರ(ಆಂಧ್ರಪ್ರದೇಶ) ಮತ್ತು ದೆಹಲಿಯಲ್ಲಿ ನಿವಾಸಸ್ಥಾನಗಳು

ಊ. ೨೪ ಲಕ್ಷ ರೂಪಾಯಿ ನಗದು, ೧೦ ಸಾವಿರ ಅಮೇರಿಕನ್ ಡಾಲರ್ಸ, ೮ ಲಕ್ಷ ರೂಪಾಯಿಗಳ ಇಂದಿರಾ ವಿಕಾಸಪತ್ರ ಇತ್ಯಾದಿ.

೨. ದಾಳಿ ನಡೆಸಿರುವ ಸುದ್ದಿಗಳು ದಿನಪತ್ರಿಕೆಗಳಲ್ಲಿ ಬರುತ್ತಿರುತ್ತವೆ; ಆದರೆ ತದನಂತರ ಮುಂದೆ ಏನಾಯಿತು ಎನ್ನುವುದು ತಿಳಿಯದ ಕಾರಣ ಭ್ರಷ್ಟಾಚಾರವು ಹಾಗೆಯೇ ಮುಂದುವರಿಯುತ್ತಿರುತ್ತದೆ

ಈ ದಾಳಿಯ ಸುದ್ದಿ ಬಹಿರಂಗಗೊಂಡು ಒಮ್ಮೆ ದಿನಪತ್ರಿಕೆಯಲ್ಲಿ ಮುದ್ರಿಸಲ್ಪಟ್ಟರೆ ಮುಗಿಯಿತು. ನಂತರ ಆ ಸುದ್ದಿಯ ವಿಷಯದಲ್ಲಿ ಮುಂದೇನಾಯಿತು? ಎನ್ನುವ ಸುದ್ದಿಯು ಪ್ರಕಟಗೊಳ್ಳುವುದೇ ಇಲ್ಲ. ಇದರಿಂದ ಈ ಸೊಕ್ಕಿರುವ ಗೂಳಿಗಳು ಸುರಕ್ಷಿತವಾಗಿ ಸರಕಾರದ ಹುಲ್ಲನ್ನು ಮೇಯುತ್ತಲೇ ಇರುತ್ತವೆ.

೩. ಭ್ರಷ್ಟಾಚಾರದ ಪ್ರತ್ಯಕ್ಷ ಪುರಾವೆ ಇಲ್ಲ ಎಂಬ ಕಾರಣವನ್ನು ಹೇಳಿದಾಗ, ತಮಿಳುನಾಡು ಸರಕಾರದ ಮಂತ್ರಿಗಳಿಗೆ ಅಕ್ರಮ ಸಂಪತ್ತು ಸಂಗ್ರಹಿಸಿರುವ ಬಗ್ಗೆ ನ್ಯಾಯಾಲಯವು ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಿತು

ಕೋಟ್ಯವಧಿ ಲೆಕ್ಕವಿಲ್ಲದ ಸಂಪತ್ತನ್ನು ಸಂಗ್ರಹಿಸಿರುವ ವಿಷಯವು ‘ಕಣ್ಣೆದುರಿಗೆ ಇರುವಾಗಲೂ ಈ ಅಧಿಕಾರಿಯ ಮೇಲೆ ಭ್ರಷ್ಟಾಚಾರದ ಪ್ರತ್ಯಕ್ಷ ಪುರಾವೆಯಿಲ್ಲದ ಕಾರಣ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ತಮಿಳುನಾಡು ಸರಕಾರದ ಮಾಜಿ ಪ್ರವಾಸೋದ್ಯಮ ಖಾತೆಯ ಮಂತ್ರಿ ನೂರಜಮಿಲ ಮತ್ತು ಅವರ ಪತ್ನಿ ೩೩.೭೨ ಲಕ್ಷ ಲೆಕ್ಕವಿಲ್ಲದ ಸಂಪತ್ತನ್ನು ಒಟ್ಟು ಮಾಡಿದ್ದರಿಂದ ಪ್ರತ್ಯೇಕವಾಗಿ ೧ ವರ್ಷ ಕಠಿಣ ಶಿಕ್ಷೆ ಮತ್ತು ೧೦ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿರುವ ತೀರ್ಪಿನ ವಿಚಾರವನ್ನು ಮಾಡಬಹುದಾಗಿದೆ. ಈ ಸಂಪತ್ತು ಜನರು ಅವರಿಗೆ ಪ್ರೀತಿಯಿಂದ ನೀಡಿರುವುದಾಗಿ ಅವರು ನೂರಾರು ದಾಖಲೆಗಳನ್ನು ಸಲ್ಲಿಸಿದರೂ, ನ್ಯಾಯಾಲಯವು ಅದನ್ನು ಒಪ್ಪದೇ ತಿರಸ್ಕರಿಸಿತು.

೪. ಭ್ರಷ್ಟಾಚಾರವನ್ನು ಬುಡದಿಂದಲೇ ಕಿತ್ತೆಸೆಯಲು ಭ್ರಷ್ಟ ಮೇರುಮಣಿಗಳನ್ನು ಕೇವಲ ಅಮಾನತ್ತುಗೊಳಿಸಿ ಅಲ್ಲಿಗೇ ಬಿಡಬಾರದು, ಅವರ ಸಂಪತ್ತನ್ನು ಬಹಿರಂಗವಾಗಿ ಹರಾಜು ಮಾಡಬೇಕು ಮತ್ತು ಅವರ ಮೇಲೆ ಕಠಿಣ ಕ್ರಮವನ್ನು ಜರುಗಿಸಿ ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವಂತೆ ಮಾಡಬೇಕು.

ವರ್ಷಾನುವರ್ಷ ಭ್ರಷ್ಟಾಚಾರವನ್ನು ಮಾಡುತ್ತಾ ಯುಕ್ತಿ-ಪ್ರಯುಕ್ತಿಗಳಿಂದ ಅದನ್ನು ಜೀರ್ಣಿಸಿಕೊಂಡು ಅಪಾರ ಸಂಪತ್ತನ್ನು ಸಂಗ್ರಹಿಸುವ ಭ್ರಷ್ಟಾಚಾರದ ಈ ಮೇರುಮಣಿಗಳನ್ನು ಕೇವಲ ತಾತ್ಕಾಲಿಕವಾಗಿ ಅಮಾನತ್ತುಗೊಳಿಸಿ ಅಲ್ಲಿಗೆ ಬಿಡದೇ, ಅವರ ಸಂಪತ್ತನ್ನು ಬಹಿರಂಗವಾಗಿ ಹರಾಜು ಮಾಡಬೇಕು. ಅವರ ಮೇಲೆ ಕಠಿಣ ಕ್ರಮವನ್ನು ಜರುಗಿಸಿ ಅವರಿಗೆ ಸೂಕ್ತ ಪ್ರಾಯಶ್ಚಿತ್ತವನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಮಾಡಬೇಕು.  ಭ್ರಷ್ಟಾಚಾರಿಗಳನ್ನು ಶಿಕ್ಷಿಸಲು ಕಠೋರ ಕ್ರಮ ಜರುಗಿಸಲು ಹಿಂದೆ-ಮುಂದೆ ನೋಡಿದರೆ, ಭ್ರಷ್ಟಾಚಾರಿಗಳ ನಿರ್ಮೂಲನೆ ಹೇಗೆ ಮತ್ತು ಯಾವಾಗ ಆಗುವುದು ? (ಆಧಾರ: ‘ಸುರಾಜ್ಯ ಪಥ ೧.೫.೨೦೦೦)