ಭಾರತ ಯಾವಾಗ ವಿಶ್ವಗುರು ಆಗುವುದು

ಭಾರತ ಮೇ ಅವತಾರೀ ಹೋಗಾ, ಜೋ ಅತಿ ವಿಸ್ಮಯಕಾರೀ ಹೋಗಾ | ಜ್ಞಾನೀ ಔರ ವಿಜ್ಞಾನೀ ಹೋಗಾ, ವೋ ಅದ್ಭುತ ಸೇನಾನೀ ಹೋಗಾ |

(ಅರ್ಥ : ಭಾರತದಲ್ಲಿ ಅವತಾರ ತಾಳುವನು, ಆತ ಅತಿ ವಿಸ್ಮಯಕಾರಿಯಿರುವನು | ಜ್ಞಾನಿ ಹಾಗೂ ವಿಜ್ಞಾನಿಯಿರುವನು, ಅವನು ಅದ್ಭುತ ಸೈನಿಕನಾಗಿರುವನು |)

ಜೀತೇ ಜೀ ಕಯೀ ಬಾರ ಮರೇಗಾ, ಛದ್ಮ ವೇಶ ಮೇಂ ಜೋ ವಿಚರೇಗಾ | ದೇಶ ಬಚಾನೇ ಕೇ ಲಿಯೆ ಹೋಗಾ ಆವ್ಹಾನ, ಯುಗ ಪರಿವರ್ತನ ಕೇ ಲಿಯೆ ಚಲೇ ಪ್ರಬಲ ತೂಫಾನ |

(ಅರ್ಥ : ಜೀವಿಸುವಾಗಲೇ ಅನೇಕ ಬಾರಿ ಸಾಯುವನು, ಯಾವನು ಛದ್ಮ ವೇಶದಲ್ಲಿ ಸಂಚರಿಸುವನು | ದೇಶವನ್ನು ರಕ್ಷಿಸಲು ಎದುರಾಗುವುದು ಸವಾಲುಗಳು, ಯುಗ ಪರಿವರ್ತನೆಗಾಗಿ ಬೀಸುವುದು ತೀವ್ರ ಬಿರುಗಾಳಿ |)

ತೀನೋಂ ಓರ ಸೇ ಹೋಗಾ ಹಮಲಾ, ದೇಶ ಕೇ ಅಂದರ ದ್ರೋಹೀ ಘಪಲಾ | ಸಭೀ ತರಫ ಕೋಹರಾಮ ಮಚೇಗಾ, ಕೈಸೇ ಹಿಂದೂಸ್ತಾನ ಬಚೇಗಾ

(ಅರ್ಥ : ಮೂರು ಕಡೆಗಳಿಂದಲೂ ಆಗುವುದು ಆಕ್ರಮಣ, ದೇಶದೊಳಗೆ ದ್ರೋಹಿಗಳ ಸಂಚು | ಎಲ್ಲ ಕಡೆಗೆ ಹಾಹಾಕಾರವೇಳುವುದು, ಹೇಗೆ ರಕ್ಷಿಸಲ್ಪಡುವುದು ಹಿಂದೂಸ್ತಾನ |)

ನೇತಾ ಮಂತ್ರೀ ಔರ ಅಧಿಕಾರಿ, ಜಾನ ಬಚಾನಾ ಹೋಗಾ ಭಾರಿ | ಛೋಡ ಮೈದಾನ ಸಬ ಭಾಗೇಂಗೇ, ಸಬ ಅಪನೇ-ಅಪನೇ ಘರ ದುಬಕೇಂಗೆ|

(ಅರ್ಥ : ನೇತಾರ, ಮಂತ್ರಿ ಹಾಗೂ ಅಧಿಕಾರಿಗಳಿಗೆ ಜೀವ ಉಳಿಸಲು ಕಠಿಣವಾಗುವುದು | ಮೈದಾನವನ್ನು ಬಿಟ್ಟು ಎಲ್ಲರೂ ಪಲಾಯನ ಗೈಯ್ಯುವರು, ಎಲ್ಲರೂ ತಮ್ಮ-ತಮ್ಮ ಮನೆಗಳಲ್ಲಿ ಅಡಗಿಕೊಳ್ಳುವರು )

ಜಿನ-ಜಿನ ಭಾರತ ಮಾತ ಸತಾಯಿ, ಜಿಸನೇ ಉಸಕೀ ಕರೀ ಲುಟಾಯಿ ಢೂಂಢ-ಢೂಂಢ ಕರ ಬದಲಾ ಲೇಗಾ, ಸಬ ಹಿಸಾಬ ಚುಕತಾ ಕರ ದೇಗಾ | ಚೀನ ಅರಬ ಕೀ ಧುರೀ ಬನೇಗಿ, ವಿಧ್ವಂಸಕ ತಾಕತ ಉಭರೇಗೀ, ಘಾಟೇ ಮೇಂ ಹೋಂಗೇ ಈಸಾಯಿ | ಇಟಲೀ ಮೇಂ ಕೋಹರಾಮ ಮಚೇಗಾ, ಲಂಡನ ಸಾಗರ ಮೇ ಡೂಬೇಗಾ |

(ಅರ್ಥ: ಯಾರ‍್ಯಾರು ಭಾರತ ಮಾತೆಯನ್ನು ಪೀಡಿಸಿದರೋ, ಯಾರು ಅವಳನ್ನು ಲೂಟಿ ಮಾಡಿದರೋ | ಹೆಕ್ಕಿ ಹೆಕ್ಕಿ ಸೇಡು ತೀರಿಸಿಕೊಳ್ಳುವನು, ಎಲ್ಲ ಲೆಕ್ಕಾಚಾರವನ್ನು ತೀರಿಸುವನು | ಚೀನಾ ಅರಬಗಳಲ್ಲಿ ಹೊಗೆಯಾಡುವವು, ಇಬ್ಬರು ಸೇರಿ ವಿಧ್ವಂಸ ಮಾಡುವುವು, ಕ್ರೈಸ್ತಕ್ಕೆ ನಷ್ಟವಾಗುವುದು | ಇಟಲಿಯಲ್ಲಿ ಹಾಹಾಕಾರವೇಳುವುದು, ಲಂಡನ್ ಸಾಗರದಲ್ಲಿ ಮುಳುಗುವುದು !)

ಯುದ್ಧ ತೀಸರಾ ಪ್ರಲಯಂಕಾರಿ, ಜೋ ಹೋಗಾ ಭಾರಿ ಸಂಹಾರಿ, ಭಾರತ ಹೋಗಾ ವಿಶ್ವ ಕಾ ನೇತಾ | ದುನಿಯಾ ಕಾ ಕಾರ್ಯಾಲಯ ಹೋಗಾ, ಭಾರತ ಮೇಂ ನ್ಯಾಯಾಲಯ ಹೋಗಾ |

(ಅರ್ಥ : ಮೂರನೆಯ ಯುದ್ಧವು ಪ್ರಲಯಕಾರಿಯಾಗುವುದು, ಅದು ಆಗುವುದು ಅತೀ ಸಂಹಾರಕಾರಿ, ಭಾರತವು ಆಗುವುದು ವಿಶ್ವದ ನಾಯಕ | ಜಗತ್ತಿನ ಕಾರ್ಯಾಲಯವಾಗುವುದು, ಭಾರತದಲ್ಲಿ ನ್ಯಾಯಾಲಯವಾಗುವುದು |)

ತಬ ಸತಯುಗ ದರ್ಶನ ಆಯೇಗಾ, ಸಂತ ರಾಜ ಸುಖ ಬರಸಾಯೇಗಾ | ಸಹಸ್ರ ವರ್ಷ ತಕ ಸತಯುಗ ಲಾಗೆ, ವಿಶ್ವ ಗುರು ಭಾರತ ಬನ ಜಾಗೆ |

(ಅರ್ಥ : ಆಗ ಸತ್ ಯುಗದ ದರ್ಶನವಾಗುವುದು, ಸಂತರು ರಾಜರು ಸುಖವನ್ನು ಸುರಿಸುವರು | ಸಾವಿರಾರು ವರ್ಷಗಳ ಕಾಲ ಸತ್ಯಯುಗವು ನಡೆಯುವುದು, ಭಾರತವು ವಿಶ್ವಗುರುವೆಂದು ವಿಜೃಂಭಿಸುವುದು |)

ಆಧಾರ : ಸಂತ ರವಿದಾಸಜೀಯವರ ಗ್ರಂಥ ಧರ್ಮಪ್ರಚಾರಕ : ಶ್ರೀ. ವಿಜಯ ಅನಂತ ಆಠವಲೆ

ಹಿಂದೂ ಧರ್ಮದ ಸಂಬಂಧಿಸಿದಂತೆ ಪ್ರಜ್ಞಾವಂತರಲ್ಲಿ ಮನವಿ !

‘ವೈದಿಕತೆ, ಹಿಂದುತ್ವ, ಅಧಿಕಾರದಲ್ಲಿನ ಯಾವುದನ್ನೂ ತ್ಯಜಿಸದೆ ಇಂದಿನ ಪರಿಸ್ಥಿತಿಯೊಂದಿಗೆ ಅದನ್ನು ಹೇಗೆ ಹೊಂದಾಣಿಕೆ ಮಾಡಬಹುದು, ಸಮನ್ವಯ ಹೇಗೆ ಸಾಧಿಸಬಹುದು, ಎಂಬುದರ ಚಿಂತನೆಯನ್ನು ಮಾಡಿ ನಮ್ಮ ಪ್ರಜ್ಞಾವಂತರು  ಮಾರ್ಗ ತೆಗೆಯುವುದು ಆವಶ್ಯಕವಿದೆ. – ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಜೂನ ೨೦೦೮)