ಸಾಧಕರಿಗೆ ಸೂಚನೆ

ಸದ್ಯ ‘ಕೊರೊನಾದಿಂದ ಭಾರತದಾದ್ಯಂತ ಸಂಚಾರ ನಿಷೇಧವಿರುವುದರಿಂದ ಎಪ್ರಿಲ್ ೨೦೨೦ ರಿಂದ ಕುಂಡಲಿನಿ ಚಕ್ರಗಳ ಮೇಲೆ ಹಚ್ಚಲು ‘ನಿರ್ಗುಣ ಈ ನಾಮಜಪದ ಪಟ್ಟಿಯನ್ನು ವೈಯಕ್ತಿಕ ಸ್ತರದಲ್ಲಿ ಸಿದ್ಧಪಡಿಸಿಕೊಳ್ಳಿರಿ !

೧.೪.೨೦೨೦ ರಿಂದ ೩೦.೬.೨೦೨೦ ಈ ಕಾಲಾವಧಿಯಲ್ಲಿ ಸಹಸ್ರಾರ ಮತ್ತು ವಿಶುದ್ಧ ಚಕ್ರದ ಮೇಲೆ ‘ನಿರ್ಗುಣ ಈ ನಾಮಜಪದ ಪಟ್ಟಿಯನ್ನು ಹಚ್ಚಬೇಕಾಗಿದೆ. ಸದ್ಯ ದೇಶಾದ್ಯಂತ ‘ಕೊರೋನಾ ರೋಗಾಣುವಿನ ಸೋಂಕು ತಗಲಬಾರದು ಎಂದು ಸಂಚಾರ ನಿಷೇಧವಿದ್ದು ಮುಂದಿನ ಕೆಲವು ದಿನಗಳ ವರೆಗೆ ಅದು ಮುಂದುವರಿಯಲಿದೆ. ಆದುದರಿಂದ ‘ನಿರ್ಗುಣ ಈ ನಾಮಜಪದ ಪಟ್ಟಿಯನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ‘ಈ ಕಾಲಾವಧಿಯಲ್ಲಿ ಸಾಧಕರು ಆಧ್ಯಾತ್ಮಿಕ ಉಪಾಯಗಳಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಮುಂದಿನ ಅಂಶಗಳನ್ನು ಗಮನಿಸಬೇಕು.

೧. ‘ನಿರ್ಗುಣ ಈ ನಾಮಜಪದ ಹಳೆಯ (ಮೊದಲು ಮುದ್ರಿಸಿದ) : ಆದರೆ ಹಾಳಾಗದಿರುವ ನಾಮಪಟ್ಟಿಗಳು ಇದ್ದರೆ ಅವುಗಳನ್ನು ಉಪಯೋಗಿಸಬೇಕು.

೨. ಮನೆಯಲ್ಲಿ ಗಣಕಯಂತ್ರದ ‘ಪ್ರಿಂಟರ್ ಇದ್ದರೆ, ಅದರಿಂದ ‘ನಿರ್ಗುಣ ಈ ನಾಮಜಪದ ಪ್ರತಿಯನ್ನು ಮುದ್ರಿಸಿಕೊಳ್ಳಬಹುದು. ಇದರ ‘ಆರ್ಟ್‌ವರ್ಕ್ ಎಂದಿನಂತೆ ಗಣಕಯಂತ್ರದ ವಿಳಾಸದಲ್ಲಿ ಲಭ್ಯವಿದೆ.

೩. ನಾಮಪಟ್ಟಿ ಲಭ್ಯವಿಲ್ಲದಿದ್ದಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಅಥವಾ ಭಾವವಿರುವ; ಆದರೆ ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕರು ತಮ್ಮ ಆಶ್ರಮದಲ್ಲಿ ಅಥವಾ ಮನೆಯಲ್ಲಿದ್ದರೆ, ಅವರ ಹಸ್ತಾಕ್ಷರದಲ್ಲಿ ‘ನಿರ್ಗುಣ ಈ ನಾಮಜಪವನ್ನು ಕಾಗದದ ಮೇಲೆ ಬರೆಯಿಸಿಕೊಳ್ಳಬೇಕು.

೪. ಮೇಲಿನ ಮೂರು ಪರ್ಯಾಯಗಳನ್ನು ಮಾಡಲು ಸಾಧ್ಯವಿಲ್ಲ ದಿದ್ದರೆ, ಭಾವಪೂರ್ಣ ಪ್ರಾರ್ಥನೆಯನ್ನು ಮಾಡಿ ಸಾಧಕರು ತಾವೇ ಸ್ವತಃ ‘ನಿರ್ಗುಣ ಈ ನಾಮಜಪವನ್ನು ಕಾಗದದ ಮೇಲೆ ಬರೆಯಬೇಕು. ನಾಮಜಪವನ್ನು ಬರೆದಿರುವ ಕಾಗದವನ್ನು ಪ್ಲಾಸ್ಟಿಕಿನ ಚಿಕ್ಕ ಚೀಲದಲ್ಲಿ ಹಾಕಿ ಆ ಉಪಾಯಪಟ್ಟಿಯನ್ನು ಉಪಯೋಗಿಸಬೇಕು. ‘ಆಪತ್ಕಾಲದಲ್ಲಿ ನೀಡಿರುವ ಆಧ್ಯಾತ್ಮಿಕ ಉಪಾಯವನ್ನು ಮಾಡುವುದು ಮಹತ್ವದ್ದಾಗಿದೆ, ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮೇಲೆ ತಿಳಿಸಿರುವ ಯಾವುದಾದರೊಂದು ಪರ್ಯಾಯವನ್ನು ಆಯ್ಕೆ ಮಾಡಿಕೊಂಡು ಉಪಾಯಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು.

ಸಾಧಕರೇ, ಆಪತ್ಕಾಲದ ಸಂಜೀವನಿಯಾಗಿರುವ ಆಧ್ಯಾತ್ಮಿಕ ಉಪಾಯವನ್ನು ಗಾಂಭೀರ್ಯದಿಂದ ಮಾಡಿ ಗುರುಗಳ ಕೃಪೆಯನ್ನು ಸಂಪಾದಿಸಿರಿ !