ಮಡಿಕೇರಿ: ದೇವಾಲಯದ ಆವರಣದಲ್ಲಿ ಸಮಾಧಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises

ಮಡಿಕೇರಿ – ವಿರಾಜಪೇಟೆ ತಾಲೂಕಿನ ಮಾಲ್ದಾರೆ ಹತ್ತಿರದ ಮತ್ತೂರಿನ ಪ್ರಸಿದ್ಧ ಶ್ರೀ ಸಿದ್ಧೇಶ್ವರ ದೇವಾಲಯದ ಆವರಣದಲ್ಲಿ ಜುಲೈ ೨೬ ರಂದು ಅಕ್ರಮವಾಗಿ ಸಮಾಧಿಯೊಂದನ್ನು ನಿರ್ಮಿಸಲಾಗಿದೆ. ‘ಹಿಂದೂ ಸುರಕ್ಷಾ ಸಮಿತಿ’ಯು ಈ ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಈ ಪ್ರಕರಣದಲ್ಲಿ ಸಮಿತಿಯು ಪ್ರತಿಭಟನೆಗೆ ಕರೆ ನೀಡಿದೆ. ಈ ಸಮಾಧಿಯಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಮಿತಿಯು ಆರೋಪಿಸಿದ್ದು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್‌ನ ಆಡಳಿತವಿರುವುದರಿಂದಲೇ ಧರ್ಮಾಂಧ ಮುಸ್ಲಿಮರು ಇಂತಹ ಕೆಲಸ ಮಾಡಲು ಧೈರ್ಯ ಮಾಡುತ್ತಾರೆ. ಹಿಂದೂಗಳಿಗೆ ಇದು ನಾಚಿಕೆಗೇಡಿನ ವಿಷಯ !