ಜಪಾನ್‌ನಲ್ಲಿ ೭.೧ ರಿಕ್ಟರ್ ಮಾಪಕ ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ : Japan Earthquake

ಟೋಕಿಯೋ (ಜಪಾನ್) – ಜಪಾನ್‌ನ ದಕ್ಷಿಣ ಭಾಗದ ಕ್ಯೂಶೂ ದ್ವೀಪದಲ್ಲಿರುವ ಕುಮಾಮೊಟೊ ಪ್ರದೇಶದಲ್ಲಿ ಜುಲೈ ೨೮ ರಂದು ೭.೧ ರಿಕ್ಟರ್ ಮಾಪಕ ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದ ನಂತರ ಜಪಾನ್ ಹವಾಮಾನ ವಿಭಾಗವು ಸುನಾಮಿ ಎಚ್ಚರಿಕೆ ನೀಡಿದೆ. ಈ ಭೂಕಂಪದ ಕೇಂದ್ರಬಿಂದು ಕುಮಾಮೊಟೊದ ಕರಾವಳಿ ಭಾಗದಿಂದ ೧೦ ಕಿಲೋಮೀಟರ್ ಆಳದಲ್ಲಿತ್ತು. ಸದ್ಯಕ್ಕೆ ದೊಡ್ಡ ಮಟ್ಟದ ಜೀವಹಾನಿ ಅಥವಾ ಆರ್ಥಿಕ ಹಾನಿ ಆದ ವರದಿಯಿಲ್ಲ. ಸ್ಥಳೀಯ ಆಡಳಿತವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ ಮತ್ತು ನಾಗರಿಕರಿಗೆ ಅಧಿಕೃತ ಸೂಚನೆಗಳನ್ನು ಪಾಲಿಸಲು ಹೇಳಲಾಗಿದೆ.