‘ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ಅವರ ವೀಡಿಯೊ ತಪ್ಪಾಗಿ ತೆಗೆದುಹಾಕಲಾಯಿತಂತೆ !’ : Meta on PM Modi Video

‘ಮೆಟಾ’ದಿಂದ ಕ್ಷಮಾಪಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಖಾತೆಯಲ್ಲಿದ್ದ ಮಹತ್ವದ ವೀಡಿಯೊ ಒಂದನ್ನು ಜುಲೈ ೨೮ ರ ಮುಂಜಾನೆ ತೆಗೆದುಹಾಕಿದ ಪ್ರಕರಣದಲ್ಲಿ, ಫೇಸ್‌ಬುಕ್ ಅನ್ನು ನಿರ್ವಹಿಸುವ ‘ಮೆಟಾ’ ಸಂಸ್ಥೆಯು ಕ್ಷಮಾಪಣೆ ಕೇಳಿದೆ. ಈ ವೀಡಿಯೊವನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ಹೇಳಿದ ‘ಮೆಟಾ’, ಅದನ್ನು ಮರುಪ್ರಸಾರ ಮಾಡಿದೆ.

ಜುಲೈ ೨೩ ರಂದು ಪ್ರಕಟವಾದ ಈ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದರು. ಆ ನಂತರ ಮೆಟಾ ಜುಲೈ ೨೮ ರಂದು ಅದನ್ನು ಹಠಾತ್ತಾಗಿ ತೆಗೆದುಹಾಕಿತು. ಆರಂಭದಲ್ಲಿ ‘ಕಾನೂನುಬದ್ಧ ವಿನಂತಿಯ ಕಾರಣದಿಂದ ವೀಡಿಯೊ ಬ್ಲಾಕ್ ಮಾಡಲಾಗಿದೆ’ ಎಂಬ ಸಂದೇಶ ಕಾಣಿಸಿಕೊಂಡಿದ್ದರಿಂದ ವಿವಾದ ಸೃಷ್ಟಿಯಾಗಿತ್ತು; ಆದರೆ ಯಾವುದೇ ಕಾನೂನುಬದ್ಧ ವಿನಂತಿಯಲ್ಲ, ಬದಲಿಗೆ ಇದು ತಾತ್ಕಾಲಿಕ ತಾಂತ್ರಿಕ ದೋಷದ ಪರಿಣಾಮ ಎಂದು ‘ಮೆಟಾ’ ಸ್ಪಷ್ಟಪಡಿಸಿದೆ. ಈ ಕುರಿತು ಬಿಜೆಪಿಯು ಟೀಕಿಸಿದೆ.

ಸಂಪಾದಕೀಯ ನಿಲುವು

ಈ ಹಿಂದೆಯೂ ಹಲವು ಬಾರಿ ‘ಮೆಟಾ’ದ ಭಾರತದ್ವೇಷ ಬಹಿರಂಗವಾಗಿದೆ. ಇಂತಹ ಸಂಸ್ಥೆಯ ಮೇಲೆ ಚೀನಾದಂತೆ ಭಾರತದಲ್ಲೂ ನಿಷೇಧ ಹೇರಬೇಕು !