ಪಾಕಿಸ್ತಾನದಲ್ಲಿ ಭಯೋತ್ಪಾದಕ ರಿಯಾಜ್ ಭಟ್ಕಳನನ್ನು ಹತ್ಯೆಗೈದ ಹಿಂದೂ ಗೂಂಡಾಗಳು!

ಮಾಜಿ ಪೊಲೀಸ್ ಅಧಿಕಾರಿ ರಾಜೇಶ್ ಪಾಂಡೆ ಅವರ ‘ಅಂತಹೀನ’ ಪುಸ್ತಕದಲ್ಲಿ ಗೂಂಡಾ ಬಬ್ಲು ಶ್ರೀವಾಸ್ತವನ ಉಲ್ಲೇಖದೊಂದಿಗೆ ದಾವೆ

ನವದೆಹಲಿ – ಭಾರತೀಯ ಪೊಲೀಸ್ ಸೇವೆಯ (ಇಂಡಿಯನ್ ಪೊಲೀಸ್ ಸರ್ವಿಸ್) ಮಾಜಿ ಅಧಿಕಾರಿ ರಾಜೇಶ ಪಾಂಡೆ ಅವರ ‘ಅಂತಹೀನ’ ಎಂಬ ಪುಸ್ತಕದಲ್ಲಿ ಗೂಂಡಾ ಬಬ್ಲೂ ಶ್ರೀವಾಸ್ತವನ ಉಲ್ಲೇಖ ನೀಡಿ, ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ರಿಯಾಜ್ ಭಟ್ಕಳನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ದಾವೆ ಮಾಡಲಾಗಿದೆ. ತನ್ನದೇ ಜನರ ಮೂಲಕ ಈ ಹತ್ಯೆಯನ್ನು ಮಾಡಿಸಿರುವುದಾಗಿ ಬಬ್ಲೂ ಶ್ರೀವಾಸ್ತವ ಹೇಳಿದ್ದಾನೆ. ರಾಜೇಶ್ ಪಾಂಡೆ ಅವರು ಬರೇಲಿ (ಉತ್ತರ ಪ್ರದೇಶ)ಯಲ್ಲಿ ಪೊಲೀಸ್ ಮಹಾನಿರೀಕ್ಷಕರಾಗಿದ್ದಾಗ, ಬಬ್ಲೂ ಬರೇಲಿ ಜೈಲಿನಲ್ಲಿದ್ದನು. ಆ ಸಮಯದಲ್ಲಿ ರಾಜೇಶ್ ಪಾಂಡೆ ಅವರು ಆತನನ್ನು ವಿಚಾರಣೆ ನಡೆಸಿದಾಗ ಈ ಮಾಹಿತಿಯನ್ನು ನೀಡಿದ್ದನು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

೨೦೦೩ ರಿಂದ ೨೦೦೮ ರ ಅವಧಿಯಲ್ಲಿ ಇಂಡಿಯನ್ ಮುಜಾಹಿದೀನ್ ದೇಶಾದ್ಯಂತ ಹಲವೆಡೆ ಬಾಂಬ್ ಸ್ಫೋಟಗಳನ್ನು ನಡೆಸಿತ್ತು. ಈ ಸ್ಫೋಟಗಳಿಗೆ ಸಂಬಂಧಿಸಿದ ಎಲ್ಲಾ ಆಪರಾಧಗಳಲ್ಲಿ ಹಲವಾರು ಭಯೋತ್ಪಾದಕರನ್ನು ಬಂಧಿಸಲಾಯಿತು; ಆದರೆ ಈ ಸ್ಫೋಟಗಳ ಮುಖ್ಯ ಸೂತ್ರಧಾರರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ್ ನೇಪಾಳದ ಮಾರ್ಗವಾಗಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದರು. ಅವರೇ ಈ ಉಗ್ರ ಸಂಘಟನೆಗೆ ‘ಇಂಡಿಯನ್ ಮುಜಾಹಿದೀನ್’ ಎಂದು ಹೆಸರಿಟ್ಟಿದ್ದರು.

ಚೋಟಾ ರಾಜನ್ ಕೂಡ ದಾವೆ ಮಾಡಿದ್ದನು

೬ ನವೆಂಬರ್ ೨೦೧೫ ರಂದು ಗೂಂಡಾ ಚೋಟಾ ರಾಜನ್ ಬಂಧನಕ್ಕೊಳಗಾಗುವ ಮುನ್ನ, ಪಾಕಿಸ್ತಾನದಲ್ಲಿ ರಿಯಾಜ್ ಭಟ್ಕಳನನ್ನು ತನ್ನ ಜನರೇ ಕೊಂದಿದ್ದಾರೆ ಎಂದು ಆತನೂ ಹೇಳಿಕೆ ನೀಡಿದ್ದನು. ಪುಸ್ತಕದಲ್ಲಿ ರಾಜೇಶ ಪಾಂಡೆ ಅವರು ಬರೆದಿರುವಂತೆ, ೧೯೯೩ ರ ಮುಂಬಯಿ ಬಾಂಬ್ ಸ್ಫೋಟದ ನಂತರ ಅಪರಾಧ ಜಗತ್ತಿನಲ್ಲಿ ಹಿಂದೂ-ಮುಸ್ಲಿಂ ಎಂಬ ಆಧಾರದ ಮೇಲೆ ೨ ಬಣಗಳಾದವು. ಭಯೋತ್ಪಾದಕ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಐ.ಎಸ್.ಐ. (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ನಿಯಂತ್ರಣದಲ್ಲಿದ್ದನು ಮತ್ತು ಅವನ ವಿರೋಧಿ ಹಿಂದೂ ಬಣದಲ್ಲಿದ್ದ ಚೋಟಾ ರಾಜನ್, ಸುಭಾಷ್ ಠಾಕೂರ್, ಬಬ್ಲೂ ಶ್ರೀವಾಸ್ತವ, ಪಿ.ಪಿ. ಪಾಂಡೆ ಉರ್ಫ್ ಬಂಟಿ ಪಾಂಡೆ ಭಾರತೀಯ ಜೈಲುಗಳಲ್ಲಿದ್ದರು. ಹಳೆಯ ಪ್ರಕರಣಗಳಲ್ಲಿ ಇವರೆಲ್ಲರಿಗೂ ಶಿಕ್ಷೆಯಾಗಿದ್ದು, ಇಂದಿಗೂ ಅವರೆಲ್ಲರೂ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಭಾರತೀಯ ಸಂಸ್ಥೆಗಳಿಗೆ ಸಹಾಯ ಮಾಡಿದ್ದಾಗಿ ಗೂಂಡಾಗಳ ದಾವೆ

೧. ರಾಜೇಶ ಪಾಂಡೆ ಅವರ ಪ್ರಕಾರ, ೨೦೧೫ ರಲ್ಲಿ ಚೋಟಾ ರಾಜನ್ ತಿಹಾರ್ ಜೈಲಿಗೆ ಬಂದ ನಂತರ, ಇವರೆಲ್ಲರೂ ಜೈಲಿನಲ್ಲಿದ್ದಾಗಲೇ ಪರಸ್ಪರ ಸಂಪರ್ಕ ಸಾಧಿಸಿದರು. ಉಳಿದವರೆಲ್ಲರೂ ಬಬ್ಲೂ ಶ್ರೀವಾಸ್ತವನಿಗೆ, ‘ಆತ ತನ್ನ ಒಬ್ಬನ ಬಲದಿಂದಲೇ ನೇಪಾಳದಲ್ಲಿದ್ದ ದಾವೂದ್‌ ನ ಸಂಪೂರ್ಣ ಜಾಲವನ್ನು ಧ್ವಂಸಗೊಳಿಸಿದ್ದಕ್ಕಾಗಿ’ ಅಭಿನಂದಿಸಿದರು. (ದಾವೂದ್‌ ನೊಂದಿಗೆ ಸಂಬಂಧ ಹೊಂದಿದ್ದ ನೇಪಾಳಿ ಸಂಸದ ಮಿರ್ಜಾ ದಿಲಶಾದ ಬೇಗ್ ಹತ್ಯೆಯ ಸಂಚಿನಲ್ಲೂ ಬಬ್ಲೂ ಶ್ರೀವಾಸ್ತವನ ಕೈವಾಡವಿತ್ತು ಎಂದು ಹೇಳಲಾಗುತ್ತದೆ).

೨. ದಾವೂದ್ ಜೊತೆ ಪಾಕಿಸ್ತಾನಕ್ಕೆ ಪಲಾಯನ ಮಾಡಿರುವ ಜನರನ್ನು ಸಹ ಮುಗಿಸುವುದು ಅಗತ್ಯವಾಗಿದೆ, ಇದಕ್ಕಾಗಿ ನಾವೆಲ್ಲರೂ ಒಂದಾಗಬೇಕು ಎಂದು ಬಬ್ಲೂ ಉಳಿದವರಿಗೆ ತಿಳಿಸಿದ್ದನು.

೩. ನೇಪಾಳದಲ್ಲಿನ ಜಾಲವನ್ನು ಮುಗಿಸುವಾಗ ಪಾಕಿಸ್ತಾನಕ್ಕೆ ಓಡಿಹೋಗಿದ್ದವರನ್ನು ಪಾಕಿಸ್ತಾನದಲ್ಲಿಯೇ ತಾನು ಕೊಂದಿರುವುದಾಗಿ ಬಬ್ಲೂ ಶ್ರೀವಾಸ್ತವ ಮುಂದೆ ಹೇಳಿದ್ದಾನೆ. ಇವರಲ್ಲಿ ಮಹಮ್ಮದ್ ಶಾರೀಕ್ ಉರ್ಫ್  ಚೋಟಾ ದಾವೂದ್, ಸಗೀರ್ ಅಹ್ಮದ್, ರಿಯಾಜ್ ಭಟ್ಕಳ್, ಅನ್ವರ್ ಖಾನ್ ಸೇರಿದಂತೆ ಹಲವು ಪ್ರಮುಖ ಉಗ್ರರು ಸೇರಿದ್ದಾರೆ.

೪. ‘ಇಂದಿಗೂ ಮೌಲಾನಾ ಮಸೂದ್ ಅಜರ್, ಸೈಯದ್ ಸಲಾವುದ್ದೀನ್, ತಲ್ಹಾ ಹಫೀಜ್ ಸಯೀದ್, ಝಕಿ ಉರ್ ರೆಹಮಾನ್ ಲಖ್ವಿ, ಸರಬ್ಜಿತ ಸಿಂಗ್‌ ನನ್ನು ಕೊಂದ ಅಮೀರ್ ಸರ್ಫರಾಜ್ ತಾಂಬಾ ಮುಂತಾದವರೆಲ್ಲರೂ ಪಾಕಿಸ್ತಾನದಲ್ಲಿ ಕುಳಿತು ತಮ್ಮ ಜಾಲವನ್ನು ನಡೆಸುತ್ತಿದ್ದಾರೆ. ಎಲ್ಲಿಯವರೆಗೆ ದಾವೂದ್ ಮುಗಿಯುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಸೇಡು ಪೂರ್ಣಗೊಳ್ಳುವುದಿಲ್ಲ; ಏಕೆಂದರೆ ಅವನು ದೇಶದ ವಿರುದ್ಧ ಕೆಲಸ ಮಾಡುತ್ತಾ ಬಂದಿದ್ದಾನೆ ಮತ್ತು ಐ.ಎಸ್.ಐ. ಪ್ರಚೋದನೆಯಿಂದ ಭಾರತಕ್ಕೆ ದೊಡ್ಡ ನಷ್ಟವನ್ನು ಉಂಟುಮಾಡಿದ್ದಾನೆ. ಆದ್ದರಿಂದ ನಾವೆಲ್ಲರೂ ಒಂದಾಗಿ ಸರಕಾರದ ಸಂಸ್ಥೆಗಳಿಗೆ ಸಹಾಯ ಮಾಡಬೇಕು’, ಎಂದು ಬಬ್ಲೂ ಶ್ರೀವಾಸ್ತವ ಜೈಲಿನಲ್ಲಿದ್ದ ಎಲ್ಲರಿಗೂ ಹೇಳಿದ್ದನು.

೫. ಪುಸ್ತಕದ ಪ್ರಕಾರ ಎಲ್ಲಾ ಗೂಂಡಾಗಳು ಈ ವಿಷಯಕ್ಕೆ ಒಪ್ಪಿಗೆ ಸೂಚಿಸಿದರು; ಏಕೆಂದರೆ ಅವರ ಮುಂದೆ ಬೇರೆ ಯಾವುದೇ ಪರ್ಯಾಯವಿರಲಿಲ್ಲ. ಜೈಲಿನಿಂದ ಬಿಡುಗಡೆಯಾಗುವ ಯಾವುದೇ ಸಾಧ್ಯತೆಗಳಿರಲಿಲ್ಲ ಮತ್ತು ಜೈಲಿನಲ್ಲಿ ಅವರಿಗೆ ಸಣ್ಣ-ಪುಟ್ಟ ಸೌಲಭ್ಯಗಳೂ ಬೇಕಾಗಿದ್ದವು.

೬. ಸರಕಾರದ ಸಂಸ್ಥೆಗಳಿಗೆ ಸಹಾಯ ಮಾಡುವ ಬದಲಾಗಿ ಸ್ಥಳೀಯ ಆಡಳಿತದಿಂದ ಉತ್ತಮ ಆಹಾರ, ಬ್ಯಾರೆಕ್‌ ನಲ್ಲಿ ಪ್ರತ್ಯೇಕವಾಗಿ ವಾಸಿಸುವುದು, ಟಿವಿ ನೋಡುವುದು ಮತ್ತು ವೈದ್ಯರಿಂದ ಚಿಕಿತ್ಸೆ ಪಡೆಯುವಂತಹ ಉತ್ತಮ ಸೌಲಭ್ಯಗಳು ಅವರಿಗೆ ದೊರೆಯಬಹುದಾಗಿತ್ತು.