ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ದೇವಸ್ಥಾನ ಧ್ವಂಸ : Bangladesh Temple Attack

ವಿರೋಧಿಸಿದ ಹಿಂದೂಗಳ ಮೇಲೆ ದಾಳಿ : 4 ಜನರಿಗೆ ಗಾಯ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಫೇನಿಯ ಫುಲಗಾಜಿ ಸದರ ಪ್ರದೇಶದ ವಣಿಕಪಾಡಾದಲ್ಲಿರುವ ಡೋಲ್ ದೇವಸ್ಥಾನವನ್ನು ಮುಸಲ್ಮಾನರು ಧ್ವಂಸಗೊಳಿಸಿದರು. ಇದನ್ನು ವಿರೋಧಿಸಿದ ಹಿಂದೂಗಳ ಮೇಲೆ ದಾಳಿ ಮಾಡಲಾಯಿತು. ಈ ಘಟನೆಯಲ್ಲಿ ಕನಿಷ್ಠ 4 ಹಿಂದೂಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಫುಲಗಾಜಿ ಮಾರುಕಟ್ಟೆಯ ‘ಶಿಲ್ಪಿ ಜ್ಯುವೆಲರ್ಸ್’ ಮಾಲೀಕ ಸಂಜೀವ್ ವಣಿಕ್ (ವಯಸ್ಸು 50 ವರ್ಷ) ಅವರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಫೇನಿ ಸದರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ಶಿಲ್ಪಿ ಚೌಧರಿ (ವಯಸ್ಸು 70 ವರ್ಷ), ರತ್ನಾ ವಣಿಕ (ವಯಸ್ಸು 48 ವರ್ಷ) ಮತ್ತು ಅಪೂರ್ವ ವಣಿಕ (ವಯಸ್ಸು 10 ವರ್ಷ) ಇವರೂ ಸಹ ಗಾಯಗೊಂಡಿದ್ದಾರೆ. ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವಿದೆ.

ಹಿಂದೂ ಬಾಂಧವರ ಮೇಲೆ ಮುಸಲ್ಮಾನರಿಂದ ದಾಳಿ

ಬಾಂಗ್ಲಾದೇಶದ ಚಿತ್ತಗಾಂವ್ ತಾಲೂಕಿನಲ್ಲಿ ರಾತ್ರಿ ಸಹಾಯಕ ಶಿಕ್ಷಕ ರಿಂಕು ಚಂದ್ರ ದಾಸ್ ಮತ್ತು ಅವರ ಕಿರಿಯ ಸಹೋದರನ ಮೇಲೆ ಮುಸಲ್ಮಾನರು ಹಠಾತ್ ದಾಳಿ ಮಾಡಿದರು. ಇದರಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯಲ್ಲಿ ಭಾಗಿಯಾದವರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ. ಈ ದಾಳಿಗೆ ಕಾರಣ ತಿಳಿದುಬಂದಿಲ್ಲ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಹಿಂದೂಗಳಿಗೆ ಯಾರೂ ರಕ್ಷಕರಿಲ್ಲದ ಕಾರಣ ಅವರ ವಂಶಸಂಹಾರ ಅನಿವಾರ್ಯವಾಗಿರುವಂತಹ ಪರಿಸ್ಥಿತಿ ಇದೆ. ಇದು ಜಗತ್ತಿನಾದ್ಯಂತ ಇರುವ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ