ಬಂಗಾಲದ ಮುಖ್ಯಮಂತ್ರಿ ಶುಭೆಂದು ಅಧಿಕಾರಿಯವರ ಘೋಷಣೆ

ಕೊಲಕಾತಾ (ಬಂಗಾಳ) – ಶುಭೇಂದು ಅಧಿಕಾರಿ ಅವರ ಸರಕಾರ ಕೊಲಕಾತಾದ ‘ಸುಹ್ರಾವರ್ದಿ ಅವೆನ್ಯೂ’ ರಸ್ತೆಯ ಹೆಸರನ್ನು ಬದಲಾಯಿಸಿ ಗೋಪಾಲ್ ಮುಖರ್ಜಿ ಅಲಿಯಾಸ್ ಗೋಪಾಲ್ ಪಾಠಾ ಎಂದು ಇಟ್ಟಿದೆ. ಸುಹ್ರಾವರ್ದಿ ವಿಭಜನೆಯ ಸಮಯದಲ್ಲಿ ‘ಮುಸ್ಲಿಂ ಲೀಗ್’ನ ಪ್ರಮುಖ ನಾಯಕ ಮತ್ತು ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಲೀಗ್‌ನ ‘ಡೈರೆಕ್ಟ್ ಆಕ್ಷನ್’ ಹಿಂಸಾತ್ಮಕ ಚಳುವಳಿಯಲ್ಲಿ ಆತನೇ ಪ್ರಮುಖ ಪಾತ್ರ ವಹಿಸಿದ್ದನು. ಇದರಲ್ಲಿ ಸಾವಿರಾರು ಹಿಂದೂಗಳನ್ನು ಹತ್ಯೆ ಮಾಡಲಾಯಿತು ಮತ್ತು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಯಿತು. ಇದಕ್ಕಾಗಿ ಅವನನ್ನು ‘ಬಂಗಾಳದ ಕಸಾಯಿ’ ಎಂದು ಕರೆಯಲಾಗುತ್ತಿತ್ತು.
ಈಗ ಸಮಯ ಬಂದಿದೆ, ಬಂಗಾಳವು ತನ್ನ ನಿಜವಾದ ನಾಯಕರನ್ನು ಸ್ಮರಿಸಿಕೊಳ್ಳಬೇಕು! – ಮುಖ್ಯಮಂತ್ರಿ ಶುಭೇಂದು ಅಧಿಕಾರಿ
ಮುಖ್ಯಮಂತ್ರಿ ಅಧಿಕಾರಿ ಅವರು, ದಶಕಗಳಿಂದ ನಮ್ಮ ನಗರದ ಮುಖ್ಯ ರಸ್ತೆಯೊಂದಕ್ಕೆ ತನ್ನ ರಾಜಕೀಯ ಲಾಭಕ್ಕಾಗಿ ರಾಜ್ಯದ ಅಧಿಕಾರವನ್ನು ಆಯುಧವಾಗಿ ದುರುಪಯೋಗಪಡಿಸಿಕೊಂಡ ಮತ್ತು ನಿರಪರಾಧಿ ನಾಗರಿಕರ ಹತ್ಯಾಕಾಂಡಕ್ಕೆ ಸಂಚು ರೂಪಿಸಿದ ವ್ಯಕ್ತಿಯ ಹೆಸರಿಡಲಾಗಿತ್ತು. ಈಗ ಇದರ ಹೆಸರನ್ನು ಬದಲಾಯಿಸಿ ಗೋಪಾಲ್ ಮುಖರ್ಜಿ ಅವರ ಹೆಸರನ್ನು ಇಡಲಾಗುತ್ತಿದೆ. ಅವರು ಧೈರ್ಯಶಾಲಿ ವ್ಯಕ್ತಿಯಾಗಿದ್ದು, ಸಾವಿರಾರು ನಿರಪರಾಧಿಗಳ ಪ್ರಾಣ ಉಳಿಸಲು ರಕ್ಷಕನಾಗಿ ಮುನ್ನಡೆದಿದ್ದರು. ಹೀಗೆ ಒಬ್ಬ ನಿಜವಾದ ರಕ್ಷಕನನ್ನು ಗೌರವಿಸುವ ಮೂಲಕ ಐತಿಹಾಸಿಕ ನ್ಯಾಯವನ್ನು ಮರುಸ್ಥಾಪಿಸಲಾಗುವುದು. ಬಂಗಾಳವು ತನ್ನ ನಿಜವಾದ ನಾಯಕರನ್ನು ಸ್ಮರಿಸಲು, ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತು ಅವರನ್ನು ಗೌರವಿಸಲು ಇದು ಸಕಾಲ ಎಂದು ಅವರು ಹೇಳಿದರು.
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗ್ರಾಹಕನಿಗೆ 40 ಸಾವಿರ ರೂಪಾಯಿ ಪರಿಹಾರ ನೀಡಿ! – ‘ಗ್ರಾಹಕ ವಿವಾದಗಳ ಪರಿಹಾರ ಆಯೋಗ’ದಿಂದ ಅಂಚೆ ಕಚೇರಿಗೆ ಆದೇಶ : Postal Parcel Stolen
ಶ್ರೀರಾಮ ಮಂದಿರ ದೇಣಿಗೆ ಪ್ರಕರಣ; ಕೇಂದ್ರ, ಯುಪಿಗೆ ಸುಪ್ರೀಂ ನೋಟಿಸ್ : Ram Mandir Donation Case
ಒಬ್ಬ ನಿಜವಾದ ಹಿಂದೂ ಎಲ್ಲರಿಗೂ ಸಮಾನವಾಗಿ ನಡೆಸಿಕೊಳ್ಳುತ್ತಾನೆ ! : Annamalai