ಜೂನ್ ೨೧ ರಂದು ಅಂತಾರಾಷ್ಟ್ರೀಯ ಯೋಗದಿನವಿದೆ. ಆ ನಿಮಿತ್ತ...
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಬಯೋ-ವೆಲ್ ಜಿ.ಡಿ.ವಿ. (Bio-well GDV) ಉಪಕರಣದ ಮೂಲಕ ನಡೆಸಿದ ವೈಜ್ಞಾನಿಕ ಪರೀಕ್ಷೆ

‘ಸೂರ್ಯನಮಸ್ಕಾರದಿಂದ ವ್ಯಕ್ತಿಯ ಕುಂಡಲಿನಿ ಚಕ್ರಗಳು ಕಾರ್ಯನಿರತ ಮತ್ತು ಸಮತೋಲಿತವಾಗುತ್ತವೆ ಎಂದು ಯೋಗಶಾಸ್ತ್ರ (ಹಠಯೋಗ ಮತ್ತು ಪಾತಂಜಲ ಯೋಗ), ಹಾಗೆಯೇ ಆಯುರ್ವೇದದಲ್ಲಿ ಹೇಳಲಾಗಿದೆ. ಸೂರ್ಯನಮಸ್ಕಾರ ಮಾಡುವಾಗ ಬೆನ್ನುಮೂಳೆಯ ಮೇಲಿನ ಮತ್ತು ಕೆಳಗಿನ ದಿಕ್ಕಿನ ಚಲನೆಗಳಿಂದಾಗಿ, ಬೆನ್ನುಮೂಳೆಯ ತಳಭಾಗದಲ್ಲಿರುವ ಮೂಲಾಧಾರಚಕ್ರದಲ್ಲಿ ಸುಪ್ತವಾಗಿರುವ ಕುಂಡಲಿನಿ ಶಕ್ತಿಯು ಜಾಗೃತಗೊಂಡು, ಅದು ಸುಷುಮ್ನಾ ನಾಡಿಯ ಮೂಲಕ ಮೇಲಿನ ದಿಕ್ಕಿಗೆ ಚಲಿಸಲು ಸಹಾಯವಾಗುತ್ತದೆ. ಸೂರ್ಯನಮಸ್ಕಾರದ ಅಡಿಯಲ್ಲಿ ಬರುವ ೧೨ ಆಸನಗಳನ್ನು ಮಾಡುವಾಗ ಸೂರ್ಯನ ೧೨ ಹೆಸರುಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಈ ಪ್ರಕ್ರಿಯೆಯು ಇನ್ನಷ್ಟು ಆಳವಾಗಿ ಮತ್ತು ತೀವ್ರವಾಗಿ ಆಗುತ್ತದೆ.

ಜೂನ್ ೨೧ ಈ ದಿನವನ್ನು ಜಗತ್ತಿನಾದ್ಯಂತ ‘ಅಂತಾರಾಷ್ಟ್ರೀಯ ಯೋಗ ದಿನ ಎಂದು ಆಚರಿಸಲಾಗುತ್ತದೆ. ಈ ನಿಮಿತ್ತ ವ್ಯಕ್ತಿಯ ಕುಂಡಲಿನಿಚಕ್ರಗಳ ಮೇಲೆ ಸೂರ್ಯನಮಸ್ಕಾರದಿಂದಾಗುವ ಪರಿಣಾಮದ ಕುರಿತು ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ. ‘ಸೂರ್ಯ ನಮಸ್ಕಾರದಿಂದ ಸಾಧಕನ ಕುಂಡಲಿನಿ ಚಕ್ರಗಳ ಮೇಲೆ ಏನು ಪರಿಣಾಮವಾಯಿತು ?, ಎಂಬುದರ ಕುರಿತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಅಭ್ಯಾಸ ನಡೆಸಲಾಯಿತು. ಇದಕ್ಕಾಗಿ ೩೧.೧೨.೨೦೨೫ ರಂದು ‘ಬಯೋ-ವೆಲ್ ಜಿ.ಡಿ.ವಿ. (ಟಿಪ್ಪಣಿ ೧) ವೈಜ್ಞಾನಿಕ ಉಪಕರಣದ ಮೂಲಕ ಡಾ. ಭಿಕಾಜಿ ಭೋಸಲೆ (ವಯಸ್ಸು ೭೦ ವರ್ಷ) ಇವರಿಂದ ‘ಸೂರ್ಯನಮಸ್ಕಾರ ಮಾಡುವ ಮುನ್ನ ಮತ್ತು ಸಂಬಂಧಿತ ಮಂತ್ರೋಚ್ಚಾರಗಳೊಂದಿಗೆ ೧೨ ಸೂರ್ಯನಮಸ್ಕಾರಗಳನ್ನು ಮಾಡಿದ ನಂತರ ಮಾಪನದ ದಾಖಲೆಗಳನ್ನು ತೆಗೆದುಕೊಳ್ಳಲಾಯಿತು. ಈ ಉಪಕರಣದ ಮೂಲಕ ವ್ಯಕ್ತಿಯ ಕುಂಡಲಿನಿಚಕ್ರಗಳ ಸ್ಥಿತಿಯನ್ನು ಅಭ್ಯಾಸ ಮಾಡಬಹುದು.
ಬಯೋ-ವೆಲ್ ಜಿ.ಡಿ.ವಿ. (Bio-well GDV) ಈ ಉಪಕರಣದ ಮಾಹಿತಿ
ರಷ್ಯಾದ ಡಾ. ಕಾನ್ಸಟಂಟಿನ್ ಕೊರೊಟ್ಕೋವ್ ಇವರ ಮುಂದಾಳತ್ವದಲ್ಲಿ ಸಂಶೋಧಕರು ‘ಗ್ಯಾಸ್ ಡಿಸ್ಚಾರ್ಜ್ ವಿಸುವ ಲೈಸೇಶನ್ ತಂತ್ರಜ್ಞಾನದ ಆಧಾರದಿಂದ ‘ಬಯೋ-ವೆಲ್ ಎಂಬ ಉಪಕರಣವನ್ನು ತಯಾರಿಸಿದ್ದಾರೆ. ವ್ಯಕ್ತಿಯ ಊರ್ಜೆಯನ್ನು ಪರೀಕ್ಷಿಸಲು ಉಪಯುಕ್ತವಾದ ಒಂದು ಕ್ಯಾಮೆರಾ ಮತ್ತು ಗಣಕ ಯಂತ್ರ (ಕಂಪ್ಯೂಟರ್) ತಂತ್ರಾಂಶವನ್ನು ಇದರಲ್ಲಿ ಬಳಸಲಾಗಿದೆ.
ಈ ಉಪಕರಣದ ಮೂಲಕ ಪರೀಕ್ಷೆಯನ್ನು ಮಾಡುವಾಗ ವ್ಯಕ್ತಿಯ ಕೈಯ ಪ್ರತಿಯೊಂದು ಬೆರಳಿಗೆ ಒಂದು ಸೆಕೆಂಡಿಗಿಂತಲೂ ಕಡಿಮೆ ಅವಧಿಗೆ ನೋವಿಲ್ಲದ ಹಗುರವಾದ ವಿದ್ಯುತ್ ಶಾಕ್ ನೀಡಲಾಗುತ್ತದೆ. ಇದರಿಂದ ವ್ಯಕ್ತಿಯ ಚರ್ಮದಿಂದ ‘ಫೋಟಾನ್ ಮತ್ತು ‘ಎಲೆಕ್ಟ್ರಾನ್ ಎಂಬ ಅತಿಸೂಕ್ಷ್ಮ ಕಣಗಳ ಪ್ರಕ್ಷೇಪಣೆಗೆ ಚಾಲನೆ ಸಿಗುತ್ತದೆ. ಪ್ರತಿಯೊಂದು ಬೆರಳಿನಿಂದ ಹೊರಹೊಮ್ಮುವ ‘ಫೋಟಾನ್ ಕಣಗಳ ಪ್ರಕ್ಷೇಪಣೆಯ ಛಾಯಾಚಿತ್ರಗಳನ್ನು ‘ಬಯೋ-ವೆಲ್ ಜಿ.ಡಿ.ವಿ. ಉಪಕರಣದ ಕ್ಯಾಮೆರಾದಿಂದ ಸೆರೆ ಹಿಡಿಯಲಾಗುತ್ತದೆ ಮತ್ತು ಅದರ ಆಧಾರದಲ್ಲಿ ಕಂಪ್ಯೂಟರ್ ತಂತ್ರಾಂಶದ ಸಹಾಯದಿಂದ ವ್ಯಕ್ತಿಯ ಊರ್ಜಾಕ್ಷೇತ್ರ ಮತ್ತು ಅವರ ಕುಂಡಲಿನಿಚಕ್ರಗಳ ಮಾಹಿತಿ ಸಿಗುತ್ತದೆ. |
೧. ‘ಬಯೋ-ವೆಲ್ ಜಿ.ಡಿ.ವಿ. ಉಪಕರಣದಿಂದ ದೊರೆತ ಚಿತ್ರದಲ್ಲಿನ ಸಪ್ತಚಕ್ರಗಳ ಆಕಾರ ಮತ್ತು ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಉಪಯುಕ್ತ ಸೂತ್ರಗಳು
೧ ಅ. ಚಕ್ರದ ಆಕಾರ : ‘ಬಯೋ-ವೆಲ್ ಜಿ.ಡಿ.ವಿ. ಉಪಕರಣದ ಮೂಲಕ ದೊರೆತ ಕಂಪ್ಯೂಟರ್ ಚಿತ್ರದಲ್ಲಿ ಯಾವುದೇ ಒಂದು ಚಕ್ರದ ಆಕಾರವು ಸಮರ್ಪಕವಾಗಿರುವುದು ಎಂದರೆ, ಆ ಚಕ್ರಕ್ಕೆ ಸಂಬಂಧಿಸಿದ ಅವಯವಗಳಿಗೆ ಆ ಚಕ್ರದಿಂದ ಯೋಗ್ಯ ಪ್ರಮಾಣದಲ್ಲಿ ಸೂಕ್ಷ್ಮ ಊರ್ಜೆಯು ಪೂರೈಕೆ ಆಗುತ್ತಿದೆ ಎಂದರ್ಥವಾಗುತ್ತದೆ.
೧ ಆ. ಚಕ್ರದ ಸ್ಥಿತಿ : ‘ಬಯೋ-ವೆಲ್ ಜಿ.ಡಿ.ವಿ. ಉಪಕರಣದಿಂದ ದೊರೆತ ಚಿತ್ರದಲ್ಲಿ ಚಕ್ರವು ಮಧ್ಯರೇಖೆಯ ಮೇಲೆ ಅಥವಾ ಅದರ ಹತ್ತಿರ ಇರುವುದು ಎಂದರೆ ಚಕ್ರದ ಸ್ಥಿತಿಯು ಸರಿಯಾಗಿದೆ ಎಂದರ್ಥವಾಗುತ್ತದೆ.
೧ ಇ. ಚಕ್ರಗಳ ಕಾರ್ಯ : ಸಾಮಾನ್ಯವಾಗಿ ಮೂಲಾಧಾರ, ಸ್ವಾಧಿಷ್ಠಾನ ಮತ್ತು ಮಣಿಪುರ ಈ ಕೆಳಗಿನ ೩ ಚಕ್ರಗಳು ವ್ಯಕ್ತಿಗೆ ಶಾರೀರಿಕ ಕಾರ್ಯಗಳಿಗಾಗಿ ಬೇಕಾಗುವ ಸೂಕ್ಷ್ಮ ಊರ್ಜೆಯನ್ನು ಪೂರೈಸುತ್ತವೆ; ಮತ್ತು ಅನಾಹತ, ವಿಶುದ್ಧ, ಆಜ್ಞಾ ಮತ್ತು ಸಹಸ್ರಾರ ಈ ಮೇಲಿನ ೪ ಚಕ್ರಗಳು ವ್ಯಕ್ತಿಗೆ ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ
ಕಾರ್ಯಗಳಿಗೆ ಬೇಕಾಗುವ ಸೂಕ್ಷ್ಮ ಊರ್ಜೆಯನ್ನು ಪೂರೈಸುತ್ತವೆ.
೧ ಈ. ವ್ಯಕ್ತಿಯ ಎಡಬದಿ ಮತ್ತು ಬಲಬದಿ ಇವುಗಳ ಕಾರ್ಯ : ಯೋಗಶಾಸ್ತ್ರಕ್ಕನುಸಾರ ವ್ಯಕ್ತಿಯ ಎಡಭಾಗದಲ್ಲಿ ಇಡಾ ಅಥವಾ ಚಂದ್ರನಾಡಿ ಮತ್ತು ಬಲಭಾಗದಲ್ಲಿ ಪಿಂಗಲಾ ಅಥವಾ ಸೂರ್ಯನಾಡಿ ಇರುತ್ತದೆ. ಚಂದ್ರನಾಡಿಯು ಶೀತಲವಾಗಿದ್ದರೆ, ಸೂರ್ಯನಾಡಿಯು ಪ್ರಖರವಾಗಿರುತ್ತದೆ. ವ್ಯಕ್ತಿಯ ಎಡಭಾಗವು ಸೂಕ್ಷ್ಮದಲ್ಲಿನ ಕಾರ್ಯಗಳಿಗೆ ಮತ್ತು ಬಲಭಾಗವು ಸ್ಥೂಲದಲ್ಲಿನ ಕಾರ್ಯಗಳಿಗೆ ಪೂರಕವಾಗಿರುತ್ತದೆ.
೧ ಎ. ಚಕ್ರವು ಮಧ್ಯರೇಖೆಯ ಎಡಕ್ಕೆ ಅಥವಾ ಬಲಕ್ಕೆ ಇರುವುದು : ‘ಬಯೋ-ವೆಲ್ ಜಿ.ಡಿ.ವಿ. ಉಪಕರಣದಿಂದ ದೊರೆತ ಚಿತ್ರದಲ್ಲಿ ಯಾವುದಾದರೂ ಚಕ್ರವು ಮಧ್ಯರೇಖೆಯ ಎಡಭಾಗದಲ್ಲಿದ್ದರೆ, ಆ ಚಕ್ರವು ಅಕಾರ್ಯನಿರತ (ನಿರ್ಗುಣ ಸ್ಥಿತಿಯಲ್ಲಿ) ಇರುವುದು ಅಥವಾ ಅಂತರ್ಮುಖತೆ ಬಂದಿರುವುದು ಎಂದರ್ಥವಾಗುತ್ತದೆ. ಹಾಗೆಯೇ ಯಾವುದಾದರೂ ಚಕ್ರವು ಮಧ್ಯರೇಖೆಯ ಬಲ ಭಾಗದಲ್ಲಿದ್ದರೆ, ಆ ಚಕ್ರವು ಕಾರ್ಯನಿರತ (ಸಗುಣ ಸ್ಥಿತಿಯಲ್ಲಿ) ಇರುವುದು ಅಥವಾ ಬಹಿರ್ಮುಖತೆ ಬಂದಿರುವುದು ಎಂದರ್ಥವಾಗುತ್ತದೆ.
೨. ‘ಸಾಧಕನು ಸೂರ್ಯನಮಸ್ಕಾರ ಮಾಡುವುದು, ಇದರಿಂದ ಅವನ ಪ್ರತಿಯೊಂದು ಚಕ್ರದ ಮೇಲಾದ ಪರಿಣಾಮಗಳ ತುಲನಾತ್ಮಕ ಅಭ್ಯಾಸ
ಈ ಪ್ರಯೋಗದಲ್ಲಿ ‘ಸಾಧಕನ ಕುಂಡಲಿನಿಚಕ್ರಗಳ ಸ್ಥಿತಿ ಹೇಗಿತ್ತು ? ಎಂಬುದು ತಿಳಿಯಲು, ಸೂರ್ಯನಮಸ್ಕಾರ ಮಾಡುವ ಮುನ್ನ ಮತ್ತು ೧೨ ಸೂರ್ಯನಮಸ್ಕಾರಗಳನ್ನು ಮಾಡಿದ ನಂತರ ‘ಬಯೋ-ವೆಲ್ ಜಿ.ಡಿ.ವಿ. ಉಪಕರಣದ ಛಾಯಾಗ್ರಾಹಕದಿಂದ (ಕ್ಯಾಮೆರಾ) ಸೆರೆಹಿಡಿಯಲಾದ ಗಣಕೀಕೃತ (ಕಂಪ್ಯೂಟರ್) ಚಿತ್ರಗಳು ಈ ಕೆಳಗಿನಂತಿವೆ.

ಈ ಚಿತ್ರಗಳಲ್ಲಿ ‘ಮೇಲಿಂದ ಕೆಳಗೆ ಈ ಕ್ರಮದಲ್ಲಿ ೧. ಸಹಸ್ರಾರ, ೨. ಆಜ್ಞಾ, ೩. ವಿಶುದ್ಧ, ೪. ಅನಾಹತ, ೫. ಮಣಿಪುರ,
೬. ಸ್ವಾಧಿಷ್ಠಾನ ಮತ್ತು ೭. ಮೂಲಾಧಾರ ಚಕ್ರಗಳನ್ನು ತೋರಿಸಲಾಗಿದೆ.
೩. ನಡೆಸಿದ ಸಂಶೋಧನಾತ್ಮಕ ಅಭ್ಯಾಸದಿಂದ ಸಾರ ರೂಪದಲ್ಲಿ ಮಂಡಿಸಲಾದ ಅಂಶಗಳು ಮತ್ತು ಅವುಗಳ ಆಧ್ಯಾತ್ಮಿಕ ವಿಶ್ಲೇಷಣೆ

೧. ಸಪ್ತಚಕ್ರಗಳು
೧ ಅ. ಸಹಸ್ರಾರ ಕಾರ್ಯನಿರತ ಮತ್ತು ಚಿಕ್ಕ ಆಕಾರ ನಿಷ್ಕ್ರೀಯ ಆದರೆ ಮಧ್ಯರೇಖೆಯ ಹತ್ತಿರವಿತ್ತು ಮತ್ತು ಆಕಾರ ಸ್ವಲ್ಪ ಹೆಚ್ಚಾಯಿತು
೧ ಆ. ಆಜ್ಞಾ ನಿಷ್ಕ್ರೀಯ ಮತ್ತು ಆಕಾರವು ಹೆಚ್ಚಾಯಿತು
೧ ಇ. ವಿಶುದ್ಧ ಮಧ್ಯರೇಖೆಯ ಹತ್ತಿರ ಮತ್ತು ಸಾಮಾನ್ಯ ಆಕಾರ ನಿಷ್ಕ್ರೀಯವಾಯಿತು ಮತ್ತು ಆಕಾರವು ಕಡಿಮೆಯಾಯಿತು
೧ ಈ. ಅನಾಹತ ಕಾರ್ಯನಿರತ ಮತ್ತು ಸಣ್ಣ ಆಕಾರ ನಿಷ್ಕ್ರೀಯವಾಯಿತು ಮತ್ತು ಆಕಾರವು ಹೆಚ್ಚಾಯಿತು
೧ ಉ. ಮಣಿಪುರ ಮಧ್ಯರೇಖೆಯ ಹತ್ತಿರ ಮತ್ತು ಚಿಕ್ಕ ಆಕಾರ ಮಧ್ಯರೇಖೆಯ ಹತ್ತಿರವಿದ್ದದ್ದು ಮಧ್ಯರೇಖೆಯ ಮೇಲೆ ಬಂದಿತು ಮತ್ತು ಆಕಾರವು ಹೆಚ್ಚಾಯಿತು
೧ ಊ. ಸ್ವಾಧಿಷ್ಠಾನ ಅತ್ಯಂತ ಕಾರ್ಯನಿರತ ಮತ್ತು ಚಿಕ್ಕ ಆಕಾರ ಮಧ್ಯರೇಖೆಯ ಮೇಲೆ ಬಂದಿತು ಮತ್ತು ಆಕಾರವು ಹೆಚ್ಚಾಯಿತು
೧ ಎ. ಮೂಲಾಧಾರ ಕಾರ್ಯನಿರತ ಮತ್ತು ಚಿಕ್ಕ ಆಕಾರ ಕಾರ್ಯನಿರತವಾಗಿಯೇ ಉಳಿಯಿತು; ಆದರೆ ಮಧ್ಯರೇಖೆಯ ಹತ್ತಿರ ಬಂದಿತು ಮತ್ತು ಆಕಾರವು ಹೆಚ್ಚಾಯಿತು
೨. ಚಕ್ರಗಳ ಸ್ಥಿತಿ
೨ ಅ. ಮಧ್ಯರೇಖೆಯ ಮೇಲೆ ಅಥವಾ ಮಧ್ಯರೇಖೆಯ ಹತ್ತಿರವಿರುವ/ಬಂದಿರುವ ಚಕ್ರಗಳು ವಿಶುದ್ಧ ಮತ್ತು ಮಣಿಪುರ ಸಹಸ್ರಾರ, ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ
೨ ಆ. ಮಧ್ಯರೇಖೆಯ ಬಲಭಾಗದಲ್ಲಿದ್ದ / ಬಂದಿರುವ, ಅಂದರೆ ಕಾರ್ಯನಿರತವಾಗಿರುವ / ಚಕ್ರಗಳು ಸಹಸ್ರಾರ, ಆಜ್ಞಾ, ಅನಾಹತ, ಸ್ವಾಧಿಷ್ಠಾನ ಮತ್ತು ಮೂಲಾಧಾರ –
೨ ಇ. ಮಧ್ಯರೇಖೆಯ ಎಡಭಾಗದಲ್ಲಿದ್ದ / ಬಂದಿರುವ, ಅಂದರೆ ಅಕಾರ್ಯನಿರತವಾಗಿರುವ ಚಕ್ರಗಳು – ಆಜ್ಞಾ, ವಿಶುದ್ಧ, ಅನಾಹತ
೩. ಚಕ್ರಗಳ ಆಕಾರ ಹೆಚ್ಚಾಗುವುದು/ಕಡಿಮೆಯಾಗುವುದು
೩ ಅ. ಶಕ್ತಿ ದೊರೆತು ಆಕಾರ ಹೆಚ್ಚಾದ ಚಕ್ರಗಳು – ಸಹಸ್ರಾರ, ಆಜ್ಞಾ, ಅನಾಹತ, ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ
೩ ಆ. ತೊಂದರೆದಾಯಕ ಶಕ್ತಿ ದೂರವಾಗಿ ಆಕಾರ ಕಡಿಮೆಯಾದ ಚಕ್ರ – ವಿಶುದ್ಧ
೪. ಅಂತರ್ಮುಖತೆಯನ್ನು ದರ್ಶಿಸುವ ಚಕ್ರಗಳು – ಆಜ್ಞಾ, ವಿಶುದ್ಧ ಮತ್ತು ಅನಾಹತ
೫. ಈಶ್ವರೀಯ ಚೈತನ್ಯವನ್ನು ಗ್ರಹಿಸಲು ಪೂರಕವಾಗಿರುವ / ಆಗಿರುವ ಚಕ್ರಗಳು ವಿಶುದ್ಧ ಮತ್ತು ಮಣಿಪುರ ಸಹಸ್ರಾರ, ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ
೩ ಅ. ೧೨ ಸೂರ್ಯನಮಸ್ಕಾರಗಳನ್ನು ಹಾಕಿದ ನಂತರ ಸಾಧಕನ ಕುಂಡಲಿನಿ ಚಕ್ರಗಳಲ್ಲಿ ಆದ ಬದಲಾವಣೆಗಳು
೩ ಅ ೧. ಆರು ಚಕ್ರಗಳ ಆಕಾರ ಹೆಚ್ಚಾಗುವುದು : ಸಾಧಕರ ಮಂತ್ರೋಚ್ಚಾರಣೆಗಳೊಂದಿಗೆ ೧೨ ಸೂರ್ಯನಮಸ್ಕಾರಗಳನ್ನು ಹಾಕಿದ್ದರಿಂದ ಎಲ್ಲಾ ಚಕ್ರಗಳಿಗೆ ಶಕ್ತಿ ದೊರೆಯಿತು. ಇದರ ಪರಿಣಾಮವಾಗಿ ಅವರ ಸಹಸ್ರಾರ, ಆಜ್ಞಾ, ಅನಾಹತ, ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ ಎಂಬ ೬ ಚಕ್ರಗಳ ಆಕಾರವು ಹೆಚ್ಚಾಯಿತು. ಸಾಧಕರ ದೈಹಿಕ ಕಾರ್ಯಗಳಿಗೆ ಸಂಬಂಧಿಸಿದ ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ ಈ ಮೂರೂ ಚಕ್ರಗಳಿಗೆ, ಹಾಗೆಯೇ ‘ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಎಂಬ ಉನ್ನತ ಕಾರ್ಯಗಳಿಗೆ ಸಂಬಂಧಿಸಿದ ಮೇಲಿನ ೪ ಚಕ್ರಗಳ ಪೈಕಿ ೩ ಚಕ್ರಗಳಿಗೆ ಶಕ್ತಿ ದೊರೆತಿರುವುದರಿಂದ, ಈಗ ಅವರ ಈ ಕಾರ್ಯಗಳು ಇನ್ನು ಉತ್ತಮವಾಗಿ ನಡೆಯಲು ಸಾಧ್ಯವಾಗುತ್ತದೆ. ಇದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ ಸ್ಥಿತಿಯಾಗಿದೆ.
೩ ಅ ೨. ವಿಶುದ್ಧ ಚಕ್ರದ ಆಕಾರ ಕಡಿಮೆಯಾಗುವುದು : ಸಾಧಕರು ಸೂರ್ಯನ ಹನ್ನೆರಡು ಹೆಸರುಗಳನ್ನು ಉಚ್ಚರಿಸುತ್ತಾ ೧೨ ಸೂರ್ಯನಮಸ್ಕಾರಗಳನ್ನು ಹಾಕಿದ್ದರು. ಅವರು ಈ ೧೨ ಮಂತ್ರಗಳನ್ನು ವೈಖರಿಯಿಂದ, ಅಂದರೆ ಬಾಯಿಯಿಂದ ಉಚ್ಚರಿಸಿದುದರಿಂದ ಮತ್ತು ಬಾಯಿಯು ವಿಶುದ್ಧ ಚಕ್ರಕ್ಕೆ ಸಂಬಂಧಿಸಿರುವುದರಿಂದ, ಆ ಚಕ್ರದ ಮೇಲೆ ಅತೀ ಹೆಚ್ಚು ಆಧ್ಯಾತ್ಮಿಕ ಉಪಾಯಗಳು ಆದವು. ಇದರ ಪರಿಣಾಮವಾಗಿ ಆ ಚಕ್ರದಲ್ಲಿದ್ದ ತೊಂದರೆದಾಯಕ ಶಕ್ತಿಯು ಕಡಿಮೆಯಾಯಿತು. ಆದ್ದರಿಂದ ಆ ಚಕ್ರದ ಆಕಾರವು ಸ್ವಲ್ಪ ಕಡಿಮೆಯಾಯಿತು. ಹಾಗೆಯೇ ಆ ಚಕ್ರವು ಅಕಾರ್ಯನಿರತವಾಯಿತು. ಇದು ಕೂಡ ಆಧ್ಯಾತ್ಮಿಕ ದೃಷ್ಟಿಯಿಂದ ಉತ್ತಮ ಸ್ಥಿತಿಯಾಗಿದೆ.
೩ ಅ ೩. ನಾಲ್ಕು ಚಕ್ರಗಳು ಈಶ್ವರೀಯ ತತ್ತ್ವವನ್ನು ಗ್ರಹಿಸಲು ಮಧ್ಯರೇಖೆಯ ಹತ್ತಿರ ಅಥವಾ ಮಧ್ಯರೇಖೆಯ ಮೇಲೆ ಬರುವುದು : ಸೂರ್ಯನಮಸ್ಕಾರ ಹಾಕಿದ ನಂತರ ಸಾಧಕನ ಸಹಸ್ರಾರ, ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ ಈ ೪ ಚಕ್ರಗಳು ಮಧ್ಯರೇಖೆಯ ಹತ್ತಿರ ಬಂದವು. ಅವುಗಳ ಪೈಕಿ ಮಣಿಪುರ ಮತ್ತು ಸ್ವಾಧಿಷ್ಠಾನ ಚಕ್ರಗಳು ನೇರವಾಗಿ ಮಧ್ಯರೇಖೆಯ ಮೇಲೆಯೇ ಬಂದವು. ಮಧ್ಯರೇಖೆ ಎಂದರೆ ಕುಂಡಲಿನಿ ಶಕ್ತಿಯ ಸುಷುಮ್ನಾ ನಾಡಿ. ಚಕ್ರಗಳು ಈ ನಾಡಿಯ ಹತ್ತಿರ ಬಂದಾಗ, ಅವು ಈಶ್ವರೀಯ ತತ್ತ್ವವನ್ನು ಗ್ರಹಿಸಲು ಪೂರಕವಾಗುತ್ತವೆ. ಆಧ್ಯಾತ್ಮಿಕ ದೃಷ್ಟಿಯಿಂದ ಇದು ಉತ್ತಮ ಸ್ಥಿತಿಯಾಗಿದೆ.
೩ ಅ ೪. ಮೂರು ಚಕ್ರಗಳು ನಿಷ್ಕ್ರಿಯವಾಗುವುದು : ಸೂರ್ಯ ನಮಸ್ಕಾರ ಹಾಕಿದ ನಂತರ ಸಾಧಕನ ಆಜ್ಞಾ, ವಿಶುದ್ಧ ಮತ್ತು ಅನಾಹತ ಚಕ್ರಗಳು ನಿಷ್ಕ್ರಿಯವಾದವು. ಅವುಗಳ ಪೈಕಿ ಆಜ್ಞಾ ಮತ್ತು ಅನಾಹತ ಚಕ್ರಗಳು ಸೂರ್ಯನಮಸ್ಕಾರ ಮಾಡುವ ಮುನ್ನ ಕಾರ್ಯನಿರತವಾಗಿದ್ದವು, ಆದರೆ ವಿಶುದ್ಧಚಕ್ರವು ಮಧ್ಯ ರೇಖೆಯ ಹತ್ತಿರ ಇತ್ತು; ಆದರೆ ಕಾರ್ಯನಿರತತೆಯ ದಿಕ್ಕಿನಲ್ಲಿತ್ತು. ಸೂರ್ಯನಮಸ್ಕಾರದಿಂದ ಶಕ್ತಿ ದೊರೆತರೂ ಚಕ್ರಗಳು ನಿಷ್ಕ್ರಿಯವಾದವು ಎಂದರೆ ಅವು ಅಂತರ್ಮುಖಿಯಾದವು ಎಂದರ್ಥ. ಇದು ಆಧ್ಯಾತ್ಮಿಕ ದೃಷ್ಟಿಯಿಂದ ಉತ್ತಮ ಸ್ಥಿತಿಯಾಗಿದೆ; ಏಕೆಂದರೆ ಅಂತರ್ಮುಖತೆಯು ಸಾಧನೆಯಲ್ಲಿ ಮನೋಲಯಕ್ಕೆ ಪೂರಕವಾಗಿರುತ್ತದೆ.
೪. ನಿಷ್ಕರ್ಷ

ಸೂರ್ಯನಮಸ್ಕಾರ ಹಾಕುವುದರಿಂದ ದೈಹಿಕ ಕಾರ್ಯಗಳಿಗೆ ಸಂಬಂಧಿಸಿದ ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ, ಹಾಗೆಯೇ ಉನ್ನತ ಕಾರ್ಯಗಳಿಗೆ ಸಂಬಂಧಿಸಿದ ಸಹಸ್ರಾರ, ಆಜ್ಞಾ ಮತ್ತು ಅನಾಹತ ಚಕ್ರಗಳ ಆಕಾರವು ಹೆಚ್ಚಾಯಿತು. ಹಾಗೆಯೇ ಸಾಧಕನ ೪ ಚಕ್ರಗಳು ಈಶ್ವರೀಯ ತತ್ತ್ವವನ್ನು ಗ್ರಹಿಸಲು ಪೂರಕವಾದವು ಮತ್ತು ೩ ಚಕ್ರಗಳು ಅಂತರ್ಮುಖಿಯಾದವು. ವೈಖರಿಯಿಂದ ಮಂತ್ರೋಚ್ಚಾರಣೆ ಮಾಡುತ್ತಾ ಸೂರ್ಯನಮಸ್ಕಾರ ಮಾಡಿದ್ದರಿಂದ ವಿಶುದ್ಧಚಕ್ರದ ಮೇಲೆ ಅತ್ಯಧಿಕ ಆಧ್ಯಾತ್ಮಿಕ ಉಪಾಯವಾಗಿ ಆ ಚಕ್ರದ ಆಕಾರವು ಕಡಿಮೆಯಾಯಿತು. ಇದು ಬಹುದೊಡ್ಡ ಪರಿಣಾಮವಾಗಿದೆ.
ಈ ಪ್ರಯೋಗದಿಂದ ‘ಸೂರ್ಯನಮಸ್ಕಾರಗಳನ್ನು ಹಾಕುವುದು ವ್ಯಕ್ತಿಯ ಜೀವನದ ಎಲ್ಲಾ ಆಯಾಮಗಳಿಗೂ ಲಾಭದಾಯಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
– ಡಾ. (ಸೌ.) ನಂದಿನಿ ದುರ್ಗೇಶ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧.೬.೨೦೨೬)


ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ
ಗಾಂಧಿವಾದದ ಮುಖವಾಡ ಕಳಚಿದ ಭಾರತ !
ಹಣವೇ ಸರ್ವಸ್ವವಾಗಿದೆಯೇ ?
Muslims Oppose Yoga Day : ‘ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಯೋಗ ದಿನ ಏತಕ್ಕೆ ?’