ಭಾರತಕ್ಕೂ ತಲೆನೋವು

ನವ ದೆಹಲಿ – ಅಮೆರಿಕವು ಚೀನಾಗೆ ‘ಅಪರೂಪದ ಭೂಮಿಯ ಖನಿಜಗಳು’, ಅಂದರೆ ದುರ್ಲಭ ಖನಿಜಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವಂತೆ ವಿನಂತಿಸಿತ್ತು. ಆದಾಗ್ಯೂ ಚೀನಾವು ಜಪಾನ್ ಗೆ ಈ ಖನಿಜಗಳಿಂದ ತಯಾರಿಸಿದ ಉತ್ಪನ್ನಗಳ ರಫ್ತಿನ ಮೇಲಿರುವ ನಿಷೇಧವನ್ನು ಮತ್ತಷ್ಟು ಕಠಿಣಗೊಳಿಸಿದೆ. ಇದರಿಂದಾಗಿ ಜಪಾನ್ ಗೆ ಆಗುತ್ತಿದ್ದ ಈ ಚೀನೀ ರಫ್ತಿನಲ್ಲಿ ಶೇಕಡಾ ೮೦ ರಷ್ಟು ಕುಸಿತ ಕಂಡುಬಂದಿದೆ ಎಂದು ವರದಿಯಾಗಿದೆ. ತೈವಾನ್ ವಿಷಯವಾಗಿ ಈ ಇಬ್ಬರು ಏಷ್ಯಾದ ಬಲಿಷ್ಠ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯು ಜನವರಿಯಲ್ಲಿ ಹೆಚ್ಚಾಗಿತ್ತು. ಈ ಕಾರಣದಿಂದಾಗಿ ಚೀನಾದ ವಾಣಿಜ್ಯ ಸಚಿವಾಲಯವು ಜಪಾನಿನ ಸೈನಿಕ ಬಳಕೆಯ ಇಂತಹ ಖನಿಜ ಉತ್ಪನ್ನಗಳ ರಫ್ತಿನ ಮೇಲೆ ಅಧಿಕೃತವಾಗಿ ನಿಷೇಧ ಹೇರಿತ್ತು. ಜೂನ್ 9 ರಂದು ಚೀನಾವು ಈ ನಿಷೇಧವನ್ನು ಪುನರುಚ್ಚರಿಸಿದೆ.
ಭಾರತದ ಅಭದ್ರತೆ!
ಈ ನಿರ್ಬಂಧಗಳಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಪೂರೈಕೆ ಸರಪಳಿಯಲ್ಲಿನ ಒಂದು ದೊಡ್ಡ ದುರ್ಬಲತೆಯನ್ನು ಬಹಿರಂಗಪಡಿಸಿದೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಮತ್ತು ಭಾರತದಂತಹ ದೇಶಗಳ ಬಳಿ ಅಪರೂಪದ ಖನಿಜಗಳ ನಿಕ್ಷೇಪಗಳಿದ್ದರೂ ಸಹ, ಅವುಗಳನ್ನು ಸಂಸ್ಕರಿಸುವ (ಪ್ರೊಸೆಸಿಂಗ್ ಮಾಡುವ) ಬರೋಬ್ಬರಿ ಶೇಕಡಾ 90 ರಷ್ಟು ಸಾಮರ್ಥ್ಯವು ಕೇವಲ ಚೀನಾದಲ್ಲಿಯೇ ಕೇಂದ್ರೀಕೃತವಾಗಿದೆ.
ಈ ‘ದುರ್ಲಭ ಖನಿಜಗಳು’ ಏಕೆ ಮಹತ್ವದ್ದಾಗಿವೆ?
ಅಪರೂಪದ ಖನಿಜಗಳು ಎಂಬುದು 17 ಖನಿಜಗಳ ಒಂದು ಗುಂಪಾಗಿದೆ. ಇದು ಡ್ರೋನ್, ಟರ್ಬೈನ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳಲ್ಲಿನ ‘ಯಟ್ರಿಯಮ್’ ಎಂಬ ಮೂಲಧಾತುವನ್ನು ಸೆಮಿಕಂಡಕ್ಟರ್, ಜೆಟ್ ಇಂಜಿನ್ ಲೇಪನಗಳು, ಲೇಸರ್, ರಾಡಾರ್ ವ್ಯವಸ್ಥೆ ಮತ್ತು ವೈದ್ಯಕೀಯ ಇಮೇಜಿಂಗ್ ಉಪಕರಣಗಳಲ್ಲಿ ಬಳಸಲಾಗುತ್ತದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು